ಅಥವಾ
(15) (4) (0) (2) (1) (0) (0) (0) (1) (2) (0) (3) (0) (0) ಅಂ (3) ಅಃ (3) (15) (0) (0) (1) (0) (0) (0) (3) (0) (0) (0) (0) (0) (0) (0) (9) (0) (2) (0) (13) (2) (0) (9) (0) (18) (0) (1) (0) (0) (1) (1) (0) (4) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಸೆಯನಳಿದು, ರೋಷವ ನಿಲಿಸಿ, ಜಗದ ಪಾಶವ ಹರಿದು, ಈಶ್ವರನೆನಿಸಿಕೊಂಬ ಶರಣರ ಜಗದ ಹೇಸಿಗಳೆತ್ತಬಲ್ಲರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಆಧಾರವ ಬಲಿಯೆ ಬೇಗೆವರಿಯಿತ್ತು; ಕಿಚ್ಚು ಆವರಿಸಿ ಊರ್ದ್ವಕ್ಕೇರಿತ್ತು. ಸಾಸಿರದಳದ ಅಮೃತದ ಕೊಡ ಕಾಯಿತ್ತು. ಕಾಯ್ದ ಅಮೃತ ಉಕ್ಕಿ ತೊಟ್ಟಿಕ್ಕೆ, ಅಮೃತವನುಂಡು ಹಸಿವು ಕೆಟ್ಟಿತ್ತು; ತೃಷೆಯಡಗಿತ್ತು ನಿದ್ರೆಯರತಿತ್ತು; ಅಂಗಗುಣವಳಿಯಿತ್ತು ಲಿಂಗಗುಣ ನಿಂದಿತ್ತು ಸಂಗಸುಖ ಹಿಂಗಿತ್ತು. ಅಂಗಲಿಂಗವೆಂಬ ಉಭಯವಳಿದು, ಮಂಗಳ ಮಹಾಬೆಳಗಿನಲ್ಲಿಯೇ ಓಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಆಸೆಯುಳ್ಳನ್ನಕ್ಕ ರೋಷ ಬಿಡದು; ಕಾಮವುಳ್ಳನ್ನಕ್ಕ ಕಳವಳ ಬಿಡದು; ಕಾಯಗುಣವುಳ್ಳನ್ನಕ್ಕ ಜೀವನ ಬುದ್ಧಿ ಬಿಡದು; ಭಾವವುಳ್ಳನ್ನಕ್ಕ ಬಯಕೆ ಸವೆಯದು; ನಡೆಯುಳ್ಳನ್ನಕ್ಕ ನುಡಿಗೆಡದು. ಇವೆಲ್ಲವು ಮುಂದಾಗಿದ್ದು ಹಿಂದನರಿದೆನೆಂಬ ಸಂದೇಹಿಗಳಿರಾ, ನೀವು ಕೇಳಿರೋ. ನಮ್ಮ ಶರಣರು ಹಿಂದ ಹೇಗೆ ಅರಿದರೆಂದಡೆ; ಆಸೆಯನಳಿದರು, ರೋಷವ ಹಿಂಗಿದರು, ಕಾಮನ ಸುಟ್ಟರು, ಕಳವಳವ ಹಿಂಗಿದರು, ಕಾಯಗುಣವಳಿದರು, ಜೀವನ ಬುದ್ಧಿಯ ಹಿಂಗಿದರು, ಭಾವವ ಬಯಲುಮಾಡಿದರು, ಬಯಕೆಯ ಸವೆದರು. ಹಿಂದನರಿದು ಮುಂದೆ ಲಿಂಗವೆ ಗೂಡಾದ ಶರಣರ ಈ ಸಂದೇಹಿಗಳೆತ್ತ ಬಲ್ಲರು, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಆಗದಾಗದು ಮತ್ರ್ಯದ ಮನುಜರಿಗೆ ಶಿವಸುಖ ! ಕಾಳುವಿಷಯದಲ್ಲಿ ಬಿದ್ದು ನುಡಿವುತ್ತ ಮರವೆ, ನಡೆವುತ್ತ ಮರವೆ, ಮೆಟ್ಟುತ್ತ ಮರವೆ, ಕೇಳುತ್ತ ಮರವೆ, ನೋಡುತ್ತ ಮರವೆ. ಇಂತು ಮರಹಿನೊಳಗಿದ್ದು ಅರುಹ ಕಂಡೆಹೆವೆಂಬ ಅಣ್ಣಗಳಿರಾ, ನೀವು ಕೇಳಿರೊ. ನಮ್ಮ ಶರಣರ ನಡೆ ಎಂತೆಂದಡೆ; ಐದು ಗುಣವನೆ ಅಳಿದು, ಐದು ಹಿಡಿದು, ನುಡಿವುತ್ತ ಲಿಂಗವಾಗಿ ನುಡಿವರು; ನಡೆವುತ್ತ ಲಿಂಗವಾಗಿ ನಡೆವರು; ಮುಟ್ಟುತ್ತ ಲಿಂಗವಾಗಿ ಮುಟ್ಟುವರು; ಕೇಳುತ್ತ ಲಿಂಗವಾಗಿ ಕೇಳುವರು; ನೋಡುತ್ತ ಲಿಂಗವಾಗಿ ನೋಡುವರು; ಸರ್ವಾಂಗವು ಲಿಂಗವಾಗಿ ಅಂಗಲಿಂಗವೆಂಬ ಉಭಯವಳಿದು, ಮಂಗಳದ ಮಹಾಬೆಳಗಿನಲ್ಲಿ ಲಿಂಗವೆ ಗೂಡಾಗಿದ್ದ ಕಾರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ