ಅಥವಾ
(15) (4) (0) (2) (1) (0) (0) (0) (1) (2) (0) (3) (0) (0) ಅಂ (3) ಅಃ (3) (15) (0) (0) (1) (0) (0) (0) (3) (0) (0) (0) (0) (0) (0) (0) (9) (0) (2) (0) (13) (2) (0) (9) (0) (18) (0) (1) (0) (0) (1) (1) (0) (4) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಈ ಪರಂಜ್ಯೋತಿ ಪ್ರಕಾಶವಾದ ಬೆಳಗ ನೋಡಿ ನೋಟವ ಮರೆದೆ, ಕೂಡಿ ಕೂಟವ ಮರೆದೆ. ತಾನು ತಾನಾಗಿಪ್ಪ ಮಹಾಬೆಳಗಿನಲ್ಲಿ ನಾನು ಓಲಾಡಿ ಸುಖಿಯಾದೆನಯ್ಯಾ, ಚೆನ್ನಮಲ್ಲೇಶ್ವರನ ಕರುಣವಿಡಿದು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಈ ಮಹಾದೇವನ ಸ್ತೋತ್ರವ ಮಾಡುವುದಕ್ಕೆ ಜಿಹ್ವೆ ಮೆಟ್ಟದು. ಆ ಮಹಾದೇವನ ಸ್ತೋತ್ರವ ಕೇಳುವುದಕ್ಕೆ ಕರ್ಣಮೆಟ್ಟದು. ಮುಟ್ಟಿ ಪೂಜಿಸಿಹೆನೆಂದಡೆ ಹಸ್ತ ಮೆಟ್ಟದು. ನೋಡಿಹೆನೆಂದಡೆ ನೋಟಕ್ಕೆ ಅಗೋಚರ, ಅಪ್ರಮಾಣ. ಇಂತು ನಿಶ್ಚಿಂತ ನಿರಾಳ ಬಯಲದೇಹಿ ಎನ್ನಲ್ಲಿ ಅಚ್ಚೊತ್ತಿದಂತೆ ನಿಂದ ಕಾರಣದಿಂದ ಬಟ್ಟಬಯಲನೆ ಕಂಡೆ, ಮಹಾಬೆಳಗನೆ ಕೂಡಿದೆ. ಚಿತ್ತದಲ್ಲಿ ಚೆನ್ನಮಲ್ಲೇಶ್ವರನು ನೆಲೆಗೊಂಡ ಕಾರಣದಿಂದ ನಾನೆತ್ತ ಹೋದೆನೆಂದರಿಯೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ