ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉಪ್ಪು ಅಪ್ಪು ಕೂಡಿದಂತೆ, ಉರಿ ಕರ್ಪುರ ಕೂಡಿದಂತೆ, ಮಾರುತ ಪರಿಮಳವ ಕೂಡಿದಂತೆ, ಆಕಾಶ ಬಯಲ ಕೂಡಿದಂತೆ, ತಾನು ತಾನಾದುದ ತಾನೇ ಕೂಡಿದಂತೆ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಉರಿಯೊಳಗಣ ಪ್ರಕಾಶದಂತೆ ಮೊಗ್ಗೆಯೊಳಗಣ ಪರಿಮಳದಂತೆ ಕ್ಷೀರದೊಳಗಣ ಘೃತದಂತೆ ಭಾವದೊಳಗಣ ನಿರ್ಭಾವದಂತೆ ಶಬ್ದದೊಳಗಣ ನಿಶ್ಶಬ್ದದಂತೆ ಝೇಂಕಾರ ನಿಜಲಿಂಗಪ್ರಭುವೆ ನಿಮ್ಮ ಶರಣನ ಅನಾದಿಯ ಅರಿವು.
--------------
ಜಕ್ಕಣಯ್ಯ
ಉದಯಕಾಲದಲ್ಲಿ ಒಬ್ಬ ಮದಲಿಂಗನು ಹಸೆಯ ಜಗುಲಿಯ ಮೇಲೆ ಕುಳಿತು ಐವರು ಸತಿಯರ ಕೂಡಿಕೊಂಡು, ಚಂದ್ರಸೂರ್ಯಾದಿಗಳ ಬೆಳಗನೊಳಕೊಂಡು, ಪರಕೆ ಪರವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಉರಿಯ ಮೇಲೆ ಹರಿವ ಹಾವ ಕಂಡೆನಯ್ಯ. ಗಾರುಡಿಗನು ಜಗವನೆಲ್ಲಾ ಜರೆದು ನಾಗಸ್ವರದ ನಾದವ ಮಾಡಿ, ಆ ಹಾವ ಹಿಡಿದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಉತ್ತಮಜ್ಞಾನದಿಂದ ಪರಮಾನಂದಲಿಂಗವ ನೋಡಿ, ಆ ಲಿಂಗದೊಳಗೆ ಅನಂತಕೋಟಿ ಕಿರಣಂಗಳು ಅಡಗಿಪ್ಪವು ನೋಡಾ. ಆ ಲಿಂಗದಲ್ಲಿ ಕೂಡಿ ಪರಿಪೂರ್ಣವಾದ ಮಹಾಶರಣರ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಉಸಿರು ಉನ್ಮನಿಗೆ ಸಿಲ್ಕಿದ ಬಳಿಕ ಪರಿಮಳದ ಹಂಗಿನ್ನ್ಯಾತಕಯ್ಯ? ಶಬ್ದ ನಿಃಶಬ್ದವಾದ ಬಳಿಕ ಅನುಭಾವದ ಹಂಗಿನ್ನ್ಯಾತಕಯ್ಯ? ಭಾವ ನಿರ್ಭಾವವಾದ ಬಳಿಕ ಲೋಕದ ಹಂಗಿನ್ನ್ಯಾತಕಯ್ಯ? ಇದು ಕಾರಣ, ಇಂತೀ ತ್ರಿವಿಧ ಭೇದವನರಿತು ಇರಬಲ್ಲಡೆ ಆತನೇ ಭಾವಲಿಂಗಸಂಬಂಧಿ ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಉಚ್ಫ್ವಾಸ ನಿಶ್ವಾಸಂಗಳ ಬ್ರಹ್ಮರಂಧ್ರದ ತನುಮನದ ಕೊನೆಯಲ್ಲಿ ಹಿಡಿದು ಸಾಸಿರದಳಕಮಲವಂ ಪೊಕ್ಕು ನಿಃಪ್ರಿಯವೆನಿಸಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಉಲುವಡಗಿದ ಮರದ ಮೇಲೆ ಒಬ್ಬ ಸತಿಯಳು ನಿಂದು ಫಲವ ಮಾರುತಿಪ್ಪಳು ನೋಡಾ ! ಆ ಫಲವ ಕೊಳ್ಳಹೋಗದ ಮುನ್ನ, ಆತನ ನುಂಗಿ ತನ್ನ ಸುಳುವ ತಾನೇ ತೋರುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಉಲುಹುವಡಗಿದ ವೃಕ್ಷದ ಮೇಲೆ ಫಲಗಳಿಪ್ಪುದ ಕಂಡೆನಯ್ಯ. ಆ ಫಲಗಳ ಸ್ವೀಕರಿಸಬಲ್ಲಡೆ ಆತನೆ ನಿರ್ಮುಕ್ತ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಉಲುಹು ಅಡಗಿದ ವೃಕ್ಷದಲ್ಲಿ ಫಲವಾದ ಹಣ್ಣ ಸವಿದು ಮೇಲುಗಿರಿಯ ಶಿವಾಲಯವ ಪೊಕ್ಕು, ಚಿದ್ಬಿಂದುಕಳಾಸ್ವರೂಪನಾಗಿ, ಬರಿಯ ಬಯಲಿಂಗೆÀ ಹೋಗಿ ಬರಿದಾದರು ನೋಡಾ ಝೇಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಉರೊಳಗಣ ಸೂಳೆಯು ಮೇರುವೆಯೊಳಗಣ ಪುರುಷನ ಕರೆದು ಬೇರೊಂದು ಮನೆಗೆ ಹೋಗಿ ನಿರ್ವಯಲಾದರು ನೋಡಾ ಝೇಂಕಾರ ನಿಜಲಿಂಗಪ್ರಭುವೆ
--------------
ಜಕ್ಕಣಯ್ಯ