ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದೇಶಕ್ಕೆ ಹೋಗುವ ಮಾರ್ಗದಲ್ಲಿ ಒಬ್ಬ ಭಾಷೆಗಳ್ಳ ಕುಳಿತು ಕಂಡಕಂಡವರ ಹಾಸ್ಯ ಮಾಡುತಿಪ್ಪ ನೋಡಾ. ಇದು ಕಾರಣ ಹೆತ್ತ ತಾಯ ಶಿಶುವು ನುಂಗಿ ಆ ಭಾಷೆಗಳ್ಳನ ಕೊಂದು, ದೇಶಕ್ಕೆ ಹೋದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ದ್ವೈತ ಅದ್ವೈತಾನಂದದಲ್ಲಿ ಚಿದ್ರೂಪ ಚಿದಾನಂದಲಿಂಗವ ಕೂಡಿ ಪರಿಪೂರ್ಣವಾದ ಶರಣಂಗೆ ನಮೋ ನಮೋ ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ದೇವರ ನಿರೂಪದಿಂದ ದೇವಿಯ ಸಂಗವ ಮಾಡಿ ಸದಮಲ ಬೆಳಗಿನೊಳು ನಿಂದು, ದೇವಿ ದೇವ ಅನಾದಿ ಪ್ರಸಿದ್ಧನ ಆಚರಿಸುತಿಪ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ದೇವರ ನಿರೂಪದಿಂದ ಎನ್ನಂತರಂಗದಲ್ಲಿ ಶಿವಾತ್ಮಜ್ಞಾನ ಉಕ್ಕಿ, ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನ ಕೂಡಿ ನಿಷ್ಕಲಪರಬ್ರಹ್ಮಲಿಂಗವನಾಚರಿಸಿ ನಿರ್ಮುಕ್ತನಾದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ದೇಶದ ಮುಂದೆ ನಿರ್ದೇಶವ ಕಂಡೆನಯ್ಯ. ಆ ನಿರ್ದೇಶನದ ಮುಂದೆ ಒಬ್ಬ ಮರುಳ ನಿಂದು, ಸತ್ತುಚಿತ್ತಾನಂದನಿತ್ಯಪರಿಪೂರ್ಣವೆಂಬ ಐದಂಗವನಂಗೀಕರಿಸಿಕೊಂಡು, ಪರಿಪೂರ್ಣವೆಂಬ ಆಶ್ರಮಕ್ಕೆ ಹೋಗಿ, ತಾನು ತಾನಾಗಿಪ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ದೇಶದ ಮೇಲೆ ಒಂದು ಪರಿಪರಿಯ ಬಣ್ಣದ ಪಕ್ಷಿಯ ಕಂಡೆನಯ್ಯ. ಆ ಪಕ್ಷಿ ಬ್ರಹ್ಮ ವಿಷ್ಣು ರುದ್ರಾದಿಗಳ ನುಂಗಿತ್ತು ನೋಡಾ! ಇದು ಕಾರಣ, ನಿಮ್ಮ ಶಿವಶರಣರು ಆ ಮಾಯೆಯ ಹಿಡಿದು ತಿಂದು ತೇಗಿದರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ದಶನಾದಗಳು ಇಲ್ಲದಂದು, ಸುನಾದಗಳು ನೆಲೆಗೊಳ್ಳದಂದು, ಝೇಂಕಾರವು ಮೊನೆದೋರದಂದು, ಅತ್ತತ್ತಲೆ ನಿಶ್ಚಿಂತ ನಿರಾಕುಳನಾಗಿದ್ದನಯ್ಯ. ತನ್ನ ನೆನವಿನ ಮಂತ್ರದಲ್ಲಿ ಓಂಕಾರನೆಂಬ ಮೂರ್ತಿಯಾದನಯ್ಯ. ಆ ಓಂಕಾರನೆಂಬ ಮೂರ್ತಿಂಗೆ ಚಿಚ್ಫಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಪರಶಿವನಾದ. ಆ ಪರಮಶಿವಂಗೆ ಪರಾಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಸದಾಶಿವನಾದ, ಆ ಸದಾಶಿವಂಗೆ ಜ್ಞಾನಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಈಶ್ವರನಾದ, ಆ ಈಶ್ವರಂಗೆ ಇಚ್ಫಾಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ರುದ್ರನಾದ, ಆ ರುದ್ರಂಗೆ ಕ್ರಿಯಾಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ವಿಷ್ಣುವಾದ, ಆ ವಿಷ್ಣುವಿಂಗೆ ಲಕ್ಷ್ಮಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಬ್ರಹ್ಮನಾದ, ಆ ಬ್ರಹ್ಮಂಗೆ ಸರಸ್ವತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ನರಲೋಕಾದಿ ಲೋಕಂಗಳು ಆದವು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ದೇಗುಲದೊಳಗೆ ಒಬ್ಬ ಗಂಡಂಗೆ ಐವರು ಹೆಂಡರಾಗಿಪ್ಪರು ನೋಡಾ. ಕಂಡ ಕಂಡ ದಾರಿಯನಳಿದು ಮಂಡೆ ಬೋಳ ಮಾಡಿ ಹೆಂಡರು ಆ ಗಂಡನ ಕೂಡಿದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ದೇಹವೆಂಬ ದೇಗುಲದೊಳಗೆ ಒಬ್ಬ ಸತಿಯಳು ನಿಂದಿರುವುದ ಕಂಡೆನಯ್ಯ. ಆ ಸತಿಯಳ ಸಂಗದಿಂದ ಅಂಗಲಿಂಗಸಂಬಂಧವ ಗರ್ಭೀಕರಿಸಿಕೊಂಡು ನಿರಂಜನದೇಶಕೆ ಹೋಗಿ ನಿಃಪ್ರಿಯವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ದೇಹವೆಂಬ ದೇಗುಲದೊಳಗೆ ಇಪ್ಪತ್ತೈದು ಶಿವಾಲಯವಿಪ್ಪುವು ನೋಡಾ. ಆ ಶಿವಾಲಯದೊಳಗೊಬ್ಬ ಪೂಜಕನು ತ್ರಿಕೂಟದಲ್ಲಿ ನಿಂದು ಪರಂಜ್ಯೋತಿಯೆಂಬ ಲಿಂಗವ ಕೂಡಿ ಪರಿಪೂರ್ಣವಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ದೇಗುಲದೊಳಗಿರುವ ದೇವರ ಕಂಡೆನಯ್ಯ. ಆ ದೇವಿ ದೇವರ ಸಂಗದಿಂ ಮಹಾಮಧುರಸ ತೊಟ್ಟಿಡುವುದ ಕಂಡೆನಯ್ಯ. ಆ ಮಧುರಸವನುಂಡು, ಪರಿಪೂರ್ಣಜ್ಞಾನಿಯಾಗಿ, ನಿಶ್ಚಿಂತ ನಿರಾಕುಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ದೇಗುಲದೊಳಗಣ ಲಿಂಗಕ್ಕೆ ಒಂಬತ್ತು ಶಿಖರ, ಆರು ಬಾಗಿಲು, ಮೂರು ಮಂಟಪವು, ಮನೋಹರನೆಂಬ ಪೂಜಾರಿ, ನವರತ್ನವ ತೊಂಡಲಂಗಳ ಕಟ್ಟಿ, ಗೋಪ್ಯದಿಂದ ಲಿಂಗಾರ್ಚನೆಯ ಮಾಡೆ, ಅಂಗವಿಲ್ಲದಾಕಿ ಮಂಗಳಾರ್ತಿಯ ತಂದು ಓಂ ನಮಃಶಿವಾಯವೆಂದು ಬೆಳಗುತಿರ್ಪಳಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ದೇಗುಲದೊಳಗೊಂದು ಲಿಂಗವಿಪ್ಪುದು ನೋಡಾ. ಆ ಲಿಂಗದಲ್ಲಿ ಒಬ್ಬ ಚಿದಂಗನೆಯ ಕಂಡೆನಯ್ಯ. ಆ ಚಿದಂಗನೆಯು ಐವರ ಕೂಡಿಕೊಂಡು ಆ ಲಿಂಗಾರ್ಚನೆಯ ಮಾಡುತಿರ್ಪಳು ನೋಡಾ ಝೇಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ