ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚಿಪ್ಪಿನೊಳಗಣ ಮುತ್ತಿನಂತೆ, ಕಲ್ಲೊಳಗಣ ವಜ್ರದಂತೆ, ನಿರೊಳಗಣ ಪ್ರತಿಬಿಂಬದಂತೆ, ಕ್ಷೀರದೊಳಗಣ ಘೃತದಂತೆ, ಬೀಜದೊಳಗಣ ವೃಕ್ಷದಂತೆ, ಅಗ್ನಿಯೊಳಗಣ ಪ್ರಕಾಶದಂತೆ, ಭಾವದೊಳಗಣ ನಿರ್ಭಾವದಂತೆ ನಿಮ್ಮ ಶರಣ ಸಂಬಂಧವು ಝೇಂಕಾರ ನಿಜಲಿಂಗಪ್ರಭುವೆ. || 307 ||
--------------
ಜಕ್ಕಣಯ್ಯ
ಚಿತ್ಪ್ರಕಾಶಲಿಂಗದಲ್ಲಿ ಚಿದಾನಂದವಾದ ಶರಣನು ಅನಂತಕೋಟಿ ಬ್ರಹ್ಮರ, ಅನಂತ ಕೋಟಿ ವಿಷ್ಣುಗಳ, ಅನಂತಕೋಟಿ ರುದ್ರರ ಗರ್ಭೀಕರಿಸಿಕೊಂಡು ನಿಶ್ಚಿಂತ ನಿರಾಕುಳವೆಂಬ ಸಿಂಹಾಸನದಲ್ಲಿ ನಿಂದು ಪರಕೆ ಪರವನೈದಿದನಯ್ಯಾ, ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಚಿದ್ರೂಪ ಚಿದಾನಂದ ನಿರಾಮಯ ನಿಶ್ಚಂತ ನಿರಾಕುಳ ನಿರ್ಭರಿತವಾದ ಶರಣನು, ನಿತ್ಯನಿರಾಳದಲ್ಲಿ ನಿಂದು, ನನ್ನನೂ ಅರಿಯದೆ, ನಿನ್ನನೂ ಅರಿಯದೆ, ತಾನು ತಾನೆಂಬುದನರಿಯದೆ ಅತ್ತತ್ತ ನಿರಾಮಯನೆನಿಸಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಚಿದ್ರೂಪ ಚಿದಾನಂದದಲ್ಲಿ ಮಹಾಘನ ನಿರಾಕುಳ ನಿರಂಜನ ನಿರ್ಭರಿತ ನಿರವಯಲಿಂಗ ತಾನು ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಚಿತ್ತಸುಖದಲ್ಲಿ ಪರಿಣಾಮವನೈದಿ ಅಘಟಿತವಾದ ಭೇದವ ನೀವೇ ಬಲ್ಲಿರಿ ನೋಡಯ್ಯ! ಅಂತಪ್ಪ ಪರಮಸ್ವರೂಪದಲ್ಲಿ ತಾನುತಾನಾಗಿರ್ದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಚಿತ್ಪ್ರಕಾಶವಾದ ಲಿಂಗದಲ್ಲಿ ಚಿನ್ಮಯವಾದ ಶರಣನು ಅನಂತಕೋಟಿಬ್ರಹ್ಮಾಂಡಗಳ ಗರ್ಭೀಕರಿಸಿಕೊಂಡು ತಾನುತಾನಾಗಿರ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ