ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕರ್ಮವೆಂಬ ಕತ್ತಲೆಯಲ್ಲಿ ಒಬ್ಬ ಮಾನವನು ವರ್ಮಗೆಟ್ಟು ಬಿದ್ದಿರುವುದ ಕಂಡೆನಯ್ಯ. ಧರ್ಮವೆಂಬ ಗುರುವು ನಿರ್ಮಳವೆಂಬ ಚಬಕ ಹಾಕಲು, ಕರ್ಮವೆಂಬ ಕತ್ತಲೆ ಹರಿದು, ವರ್ಮವೆಂಬ ದಾರಿಯನೇರಿ, ಧರ್ಮವೆಂಬ ಗುರುವ ಕೂಡಿ ನಿರವಯವೆಂಬ ಕರಸ್ಥಲದಲ್ಲಿ ನಿಂದಿರುವ ಬೆಡಗ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಯ ನನ್ನದೆಂದು ನಚ್ಚಬೇಡಿರೋ, ಜೀವ ನನ್ನದೆಂದು ನಚ್ಚಬೇಡಿರೋ. ಕಾಯ ಜೀವವೆಂಬ ಪ್ರಕೃತಿಯನಳಿದು, ಶಿವಯೋಗದಲ್ಲಿ ನಿಂದು, ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕತ್ತಲೆ ಮನೆಯೊಳಗೆ ಜ್ಯೋತಿಯ ಮುಟ್ಟಿಸಿದರೆ ಕತ್ತಲೆ ಹರಿದು ಬೆಳಗಾಯಿತ್ತು ನೋಡಾ. ಸುಜ್ಞಾನದಿಂದ ಅಜ್ಞಾನವಳಿದು ಅತ್ತತ್ತಲೆ ನಿರಂಜನಲಿಂಗದೊಳು ನಿರ್ವಿಕಾರನಾಗಿರ್ದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಡಾರಣ್ಯದೊಳಗೆ ಒಬ್ಬ ಸೂಳೆ ಕರೆದು ಐವರಿಗೆ ಒತ್ತೆಯಕೊಡುವುದ ಕಂಡೆನಯ್ಯ ! ಊರೊಳಗಣ ಗೊಲ್ಲತಿ ಐವರ ಒಪ್ಪಿಸಿಕೊಟ್ಟು ಸೂಳೆ ಗೊಲ್ಲತಿ ಒಂದಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕತ್ತಲೆಮನೆಯೊಳಗೆ ಒಬ್ಬ ಸೂಳೆ ನಾಲ್ವರ ಕೂಡಿಕೊಂಡು ಹತ್ತೆಂಟು ಕೇರಿಗಳಲ್ಲಿ ಸುಳಿದಾಡುತಿರ್ಪಳು ನೋಡಾ. ಮೇಲಣ ದಾರಿಯಲ್ಲಿ ಒಬ್ಬ ಕುಂಟಣಗಿತ್ತಿಯು ಬಂದು ಆ ಸೂಳೆಯ ಕೈವಿಡಿಯಲು, ಹತ್ತೆಂಟು ಕೇರಿಗಳು ಅಳಿದುಹೋದವು ನೋಡಾ. ನಾಲ್ವರು ಬಿಟ್ಟು ಹೋದರು ನೋಡಾ. ಆ ಸೂಳೆಯ ಕೂಡಿಕೊಂಡು ಒಂಬತ್ತು ಬಾಗಿಲ ಮುಂದೆ ನಿಂದು ಪರಕೆ ಪರವಾದ ಲಿಂಗವನಾಚರಿಸುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕರ್ಮದ ವಾಸನೆಗಳ ಹರಿದು, ಶಿವಧರ್ಮದಲ್ಲಿ ನಿಂದು ಪರಮಾನಂದಪ್ರಭೆಯಲಿ ಕೂಡಿ ನಿರಾಳ ನಿರ್ಭರಿತನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಲಿಲ್ಲದ ಪುರುಷನು ಕೈಯಿಲ್ಲದ ನಾರಿಯ ಸಂಗವ ಮಾಡುತಿರ್ಪನು ನೋಡಾ. ಆ ಕಾಲಿಲ್ಲದ ಪುರುಷನ, ಕೈಯಿಲ್ಲದ ನಾರಿಯ, ಅವರಿಬ್ಬರನು ಕಪ್ಪೆ ನುಂಗಿ ಕೂಗುತಿದೆ ನೋಡಾ. ಆ ಕೂಗಿನ ಶಬ್ದವ ಕೇಳಿ, ತ್ರಿಲೋಕದಿಂದ ಎದ್ದ ಸರ್ಪನ ಇರುವೆ ನುಂಗಿತ್ತು ನೋಡಾ, ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕರ್ಮದ ಗುಣವನಳಿದು ಅಸಮಾಯಲಿಂಗದೊಳು ಕೂಡಿ ಸೀಮೆಯ ದಾಂಟಿ ನಿಸ್ಸೀಮನಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಯದ ಗುಣಗಳನಳಿದು, ಮಾಯದ ಬಲೆಗೆ ಸಿಲ್ಕದೆ. ಮನೋಭಾವದೊಳು ಕೂಡಿ, ಆತ್ಮನೆಂಬ ಬೆಳಗಿನೊಳು ನಿಂದು ಬಯಲಿಂಗೆ ಬಯಲು ಇದೆಯೆಂದು ಆಚರಿಸುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಟ್ಟಕಡೆಯಲೊಂದು ಬಟ್ಟಬಯಲ ಮನೆಯ ಕಂಡೆನಯ್ಯ. ಆ ಮನೆಯ ತುಟ್ಟತುದಿಯಲೊಂದು ಘಟ್ಟಿಲಿಂಗವ ಕಂಡೆನಯ್ಯ. ಆ ಲಿಂಗದ ಕುಕ್ಷಿಯೊಳಗೆ ಅನಂತಕೋಟಿ ಬ್ರಹ್ಮಾಂಡಂಗಳು ಅಡಗಿಪ್ಪವು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಣ್ಣಮೇಲೆ ಕಣ್ಣು ಹುಟ್ಟಿ ಕಂಡೆನಯ್ಯ ಒಂದು ಲಿಂಗವ, ಆ ಲಿಂಗದಲ್ಲಿ ಒಬ್ಬ ಸತಿಯಳು ಇರ್ಪಳು ನೋಡಾ. ಆ ಸತಿಯಳ ಅಂಗದಲ್ಲಿ ಒಬ್ಬ ಬಾಲಕ ಹುಟ್ಟಿ, ನಾಲ್ಕು ದೇಶವನೊಂದುಮಾಡಿ ಬಯಲಿಂಗೆ ಬಯಲು, ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಲಕರ್ಮಿಗಳಿಗೆ ಸಿಲ್ಕದೆ ಲಿಂಗಾಂಗಸಮರಸವನರಿತು ಪರಮಾನಂದದೊಳು ಕೂಡಿ ಪರಿಪೂರ್ಣವಾದ ಮಹಾಮಹಿಮನ ಕಂಡು ನಿಶ್ಚಿಂತ ನಿರಾವಾಸಿಯಾದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಯವೆಂಬ ಹುತ್ತಿನಲ್ಲಿ ಮಾಯವೆಂಬ ಸರ್ಪನು ಮನೆಯ ಮಾಡಿಕೊಂಡು ತ್ರಿಜಗವನೆಲ್ಲ ನುಂಗಿಕೊಂಡಿರ್ಪುದು ನೋಡಾ. ಕಡೆಯ ಬಾಗಿಲಲ್ಲಿ ಗಾರುಡಿಗ ನಿಂದು ನಾಗಸ್ವರದ ನಾದವ ಮಾಡಲು ಆ ನಾಗಸ್ವರದ ನಾದವ ಕೇಳಿ ತ್ರಿಲೋಕದಿಂದ ಎದ್ದ ಸರ್ಪನ ತಲೆಯ ಮೇಲೆ ರತ್ನವಿಪ್ಪುದು ನೋಡಾ. ಆ ರತ್ನವ ಕಣ್ಣು ಇಲ್ಲದವ ಕಂಡು, ಕೈಯಿಲ್ಲದವ ತಕ್ಕೊಂಡು ಮಣ್ಣು ಇಲ್ಲದ ಹಾಳಿನಲ್ಲಿ ಇಟ್ಟು, ಆ ರತ್ನವು ಮಹಾಲಿಂಗಕ್ಕೆ ಸಂದಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಡುವ ಕರಣಂಗಳೇ ಮಕ್ಕಳು, ಬೇಡುವ ಮನವೇ ಭ್ರಾಂತಿ. ಕಾಡುವ ಕರಣಂಗಳಿಗೆ ಸಿಲ್ಕದೆ, ಬೇಡುವ ಭ್ರಾಂತಿಗೆ ಸಿಲ್ಕದೆ ತ್ರಿಕೂಟದಲ್ಲಿಪ್ಪ ಲಿಂಗವ ನೋಡಿ ಭ್ರಮಿಸುವ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಯವಿಲ್ಲದ ಹೆಂಗೂಸು ಬಸುರಿಲ್ಲದ ಮಗನ ಹಡೆದು ಅಂಗನೆಯರ ಆರು ಮಂದಿಯ ಕರೆದು ಲಿಂಗವೆಂಬ ತೊಟ್ಟಿಲೊಳಗೆ ಆ ಮಗನ ಮಲಗಿಸಿ ಜೋಗುಳಮಂ ಪಾಡುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಳವಳಿಸುವ ಕರಣಂಗಳಿಗೆ ಮುಖಗೊಡದೆ ಒಳಹೊರಗೆ ಪರಿಪೂರ್ಣವಾದ ಜ್ಞಾನವನರಿತು ಪರಕೆಪರವಾದ ಲಿಂಗವನಾಚರಿಸಿ, ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳೆಂಬ ಅರಿಷಡ್ವರ್ಗಂಗಳ ಗುರುನಿರೂಪಣದಿಂದ ಹರಿಯಲೊದ್ದು ಪರವಾಸಿನಿಯೆಂಬ ಸತಿಯಳ ಸಂಗವ ಮಾಡಿ ನಿರ್ವಿಕಲ್ಪ ನಿತ್ಯಾತ್ಮಕನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕತ್ತಲೆ ಕವಿದ ಮಾನವರಿಗೆ ಜ್ಞಾನದ ಪ್ರಭೆಯುಂಟೇನಯ್ಯ ? ಅಂಗವ ಮರೆದು ನಿಂದವರಿಗೆ ಆವ ಚಿಂತೆ ಉಂಟೇನಯ್ಯ ? ಒಳಹೊರಗೆ ಪರಿಪೂರ್ಣವಾದ ಶರಣಂಗೆ ಆವ ಭ್ರಾಂತಿ ಉಂಟೇನಯ್ಯ ? ಇದು ಕಾರಣ, ತನ್ನ ನಿಲವ ತಾನೇ ತಿಳಿಯಬಲ್ಲಾತನೆ ಪರಮಜ್ಞಾನಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಣ್ಣು ಇಲ್ಲದವ ಕಂಡನಯ್ಯ ಒಂದು ಲಿಂಗವ. ಆ ಲಿಂಗಕ್ಕೆ ತಲೆ ಒಂದು, ಮುಖ ಮೂರು, ಆರು ಹಸ್ತ, ಮೂವತ್ತಾರು ಪಾದಂಗಳು. ಐವತ್ತೆರಡು ಎಸಳಿನ ಶಿವಾಲಯದೊಳಗೆ ಪೂಜೆಗೊಂಬ ಲಿಂಗವನು ಏಕೋಮನೋಹರನೆಂಬ ಪೂಜಾರಿಯು ಕಂಡು ನವರತ್ನ ತೊಂಡಲಂಗಳ ಕಟ್ಟಿ ಆ ಲಿಂಗಾರ್ಚನೆಯ ಮಾಡುತಿರ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕೊಂಬಿನ ತುದಿಯ ಮೇಲೆ ಎಂಟಾನೆ ಹುಟ್ಟಿದುದ ಕಂಡೆನಯ್ಯ. ಅವಕ್ಕೆ ಏಳು ಬೀದಿ, ಆರು ಕೇರಿ, ಐದು ಮನೆಗಳಲ್ಲಿ ಬೈಯುವ ನಾರಿಯ ಕಂಡೆನಯ್ಯ. ಆ ನಾರಿಯ ಹಿಡಿದು ಕೊಂದಲ್ಲದೆ ನಿಃಕಲಪರಬ್ರಹ್ಮಲಿಂಗವು ಕಾಣಿಸದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕುಲಛಲಕ್ಕೆ ಹೋರಿ ಆಡುವರೆಲ್ಲ ಶಿವಭಕ್ತರೆ ? ಶಿವಭಕ್ತರಲ್ಲ ; ಅವರು ಕುಲದ ಪಾತಕರು. ಅವರಿಂಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕ-ಪ್ರಸಾದವಿಲ್ಲ, ವಿಭೂತಿ-ರುದ್ರಾಕ್ಷಿಯಿಲ್ಲ, ಓಂ ನಮಃ ಶಿವಾಯವೆಂಬ ಮಂತ್ರವಿಲ್ಲ. ಇಂತೀ ಕುಲ ಛಲಂಗಳ ಬಿಟ್ಟು, ನಿರ್ಮಲಸ್ವರೂಪನಾಗಿ, ಗುರುಕಾರುಣ್ಯದಿಂದ ಜ್ಞಾನಸಂಬಂಧಿಯಾಗಿ, ಅಷ್ಟಾವರಣವನಾಚರಿಸಬಲ್ಲಾತನೆ ಭಕ್ತನೆಂಬೆನಯ್ಯ,ಮಹೇಶ್ವರನೆಂಬೆನಯ್ಯ, ಪ್ರಸಾದಿಯೆಂಬೆನಯ್ಯ, ಪ್ರಾಣಲಿಂಗಿಯೆಂಬೆನಯ್ಯ, ಶರಣನೆಂಬೆನಯ್ಯ, ಐಕ್ಯನೆಂಬೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಯವಿಲ್ಲದ ಹಂಸನು ಗೂಡನಿಕ್ಕುವದ ಕಂಡೆನಯ್ಯ. ಅದು ಹೇಗೆಂದಡೆ: ಅದಕ್ಕೆ ಬುಡ ಒಂದು, ಕೊನೆ ಮೂರು, ಆರು ಕಡ್ಡಿಯ ಹೂಡಿ, ನಾದಬ್ರಹ್ಮವೆಂಬ ಕಟ್ಟ ಕಟ್ಟಿ, ಒಂಬತ್ತು ಯಜ್ಞದ ಗೂಡಿನೊಳಗೆ ಇಪ್ಪ ಹಂಸನ ಒಬ್ಬ ಸತಿಯಳು ಕಂಡು ಬೇಂಟೆಗಾರಂಗೆ ಹೇಳಲೊಡನೆ, ಆ ಬೇಂಟೆಕಾರ ಗದೆಯ ತಕ್ಕೊಂಡು ಇಡಲೊಡನೆ, ಸ್ವರ್ಗ ಮತ್ರ್ಯ ಪಾತಾಳವನೊಡೆದು ಆಕಾಶ ನಿರಾಕಾಶವೆಂಬ ನಿರ್ಬಯಲಲ್ಲಿ ಬಿತ್ತು ನೋಡಾ! ಆ ಬೇಂಟೆಕಾರ, ಆ ಗುರಿಯನೆತ್ತಲು ಆ ಕಾಯವಿಲ್ಲದ ಹಂಸ ಆ ಗದೆಯ ಕಚ್ಚಿತ್ತು ನೋಡಾ! ಇದೇನು ವಿಚಿತ್ರವೆಂದು ಬೆರಗಾಗುತಿರ್ದನಯ್ಯ ಝೇಂಕಾರ ನಿಜಲಿಂಗಪ್ರಭುವೆ ನಿಮ್ಮ ಶರಣನು.
--------------
ಜಕ್ಕಣಯ್ಯ
ಕೊಂಬೆಕೊಂಬೆಗೆ ಹಾರುವ ಕೋಡಗನ ತಲೆಯ ಮೇಲೆ ರತ್ನವಿರ್ಪುದು ನೋಡಾ. ಆ ಕೊಂಬೆಗಳ ಮುರಿದು, ಕೋಡಗನ ಕೊಂದು ಆ ರತ್ನವ ತಕ್ಕೊಂಡಲ್ಲದೆ ಲಿಂಗವ ಕಾಣಬಾರದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕೂಗುವ ಕೋಗಿಲೆಯ ಒಡಲಲ್ಲಿ ಇಪ್ಪತ್ತೈದು ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೊಬ್ಬ ಪೂಜಕ ನಿಂದು ಆರಾರ ಲಿಂಗಾರ್ಚನೆಯ ಮಾಡಿ ನಿರ್ವಿಕಾರನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕರ್ಮದ ಕಂಡಣಿಯ ಹರಿದು, ನಿರ್ಮಲಂಗವ ಪೊಕ್ಕು, ಧರ್ಮದ ಮಾರ್ಗದೊಳು ನಿಂದು, ಪರಿಪೂರ್ಣಲಿಂಗವನಾಚರಿಸಿ, ಪರಕೆಪರವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ

ಇನ್ನಷ್ಟು ...