ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಕ್ಷವ ನೋಡಿದರೇನಯ್ಯ? ಲಕ್ಷವ ಹೇಳಿದರೇನಯ್ಯ? ಲಕ್ಷವ ಕೇಳಿದರೇನಯ್ಯ? ಲಕ್ಷವ ಮಾಡಿದರೇನಯ್ಯ? ಲಕ್ಷ ನಿರ್ಲಕ್ಷ ತಾನಾದ ಮೇಲೆ ಸಾಕ್ಷಾತ ವಸ್ತುಮಯ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಲೋಕ ಲೌಕಿಕದ ರಂಜನೆಗಳಿಲ್ಲದ ನಿರಂಜನಲಿಂಗದಲ್ಲಿ ಸನ್ಮತನಾಗಿ ಇರಬಲ್ಲ ಮಹಾತ್ಮಂಗೆ, ಇಹಲೋಕವೆಂದಡೇನಯ್ಯ? ಪರಲೋಕವೆಂದಡೇನಯ್ಯ? ಅಲ್ಲಿದ್ದಂಥ ಅಪರಂಪರ ಮಹಾಮಹಿಮ ನಿತ್ಯ ನಿರಾಕುಳ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಲೋಕ ಲೌಕಿಕಂಗಳಿಲ್ಲದಂದು, ಕುಲ ಛಲಂಗಳಿಲ್ಲದಂದು, ಹಮ್ಮು ಬಿಮ್ಮುಗಳಿಲ್ಲದಂದು, ದೇಹ ನಿರ್ದೇಹಗಳಿಲ್ಲದಂದು, ಪ್ರಾಣ ನಿಃಪ್ರಾಣಂಗಳಿಲ್ಲದಂದು, ಇವೇನೇನೂ ಇಲ್ಲದಂದು, ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಲಿಂಗವೇ ತಾನಾಗಿ, ತಾನೇ ಲಿಂಗವಾಗಿ, ಹಿಂಗದೆ ಪ್ರಣಮಪಂಚಾಕ್ಷರಿಯ ಜಪಿಸಿ, ಮಂಗಳ ಪ್ರಭೆಯಲ್ಲಿ ಕೂಡಿ, ನಿಃಸಂಗಿ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಲಕ್ಷವ ನೋಡಿದರೇನಯ್ಯ? ಲಕ್ಷವ ಹೇಳಿದರೇನಯ್ಯ? ಲಕ್ಷವ ಕೇಳಿದರೇನಯ್ಯ? ಮೋಕ್ಷಾರ್ಥ ಉಂಟೇನಯ್ಯ? ಸಾಕ್ಷಾತ್ ಶಿವಜ್ಞಾನವಾದ ಶರಣನು ತಾನೇ ಮೋಕ್ಷಾರ್ಥ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಲಿಂಗದ ನೆನಹಿನಿಂದ ಮಂಗಳಪ್ರಭೆಯ ನೋಡಿ, ಸಂಗಸಂಯೋಗದಲ್ಲಿ ನಿಂದು, ನಿರಂಗವಾದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಲಿಂಗಸೌಖ್ಯದಲ್ಲಿ ಪರಿಪೂರ್ಣವಾದ ಶರಣನ ಅಂತರಂಗದಲ್ಲಿ ಕಾಮಮೋಹಾದಿಗಳುಂಟೇನಯ್ಯ? ಭ್ರಾಂತಿಸೂತಕ ಉಂಟೇನಯ್ಯ? ಹಮ್ಮು ಬಿಮ್ಮುಗಳುಂಟೇನಯ್ಯ ? ತಾಮಸ ತಮಂಧಗಳುಂಟೇನಯ್ಯ ? ಇಂತಿವಕ್ಕೆ ಸಿಲ್ಕದೆ ನಿತ್ಯನಿರಾಳಲಿಂಗದಲ್ಲಿ ಸುಖಿಯಾಗಿರ್ದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ