ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಏಕೋತ್ತರದಲ್ಲಿ ಎಚ್ಚತ್ತಡೇನಯ್ಯಾ, ಏಕೋದೇವನ ನೆನಹು ನೆಲೆಗೊಳ್ಳದನ್ನಕ್ಕ? ಅನುಭಾವದಲ್ಲಿ ಅಭ್ಯಾಸಿಯಾದಡೇನಯ್ಯಾ, ಸ್ವಯಾನುಭಾವ ಸನ್ನಹಿತವಾಗದನ್ನಕ್ಕ? ತತ್ವಾರ್ಥಿಯಾದಡೇನಯ್ಯಾ, ಮಿಥ್ಯಾರ್ಥವ ದಾಂಟದನ್ನಕ್ಕ? ಅರಿವನರಿತಡೇನಯ್ಯಾ, ಚಿದಹಂ ಎಂಬ ಮರವೆ ಸೋಂಕುವ ತೆರನ ತಿಳಿಯದನ್ನಕ್ಕ? ಸೌರಾಷ್ಟ್ರ ಸೋಮೇಶ್ವರಾ ಎಂದಡೇನಯ್ಯಾ ನಿಂದ ಭೇದವ ಭೇದಿಸದನ್ನಕ್ಕ?
--------------
ಆದಯ್ಯ
ಏಕಮುಖದ ರುದ್ರಾಕ್ಷಿಯೊಂದನೆ ಶಿಖಿಯಲ್ಲಿ ಧರಿಸುವುದಯ್ಯಾ. ದ್ವಿತ್ರಿದ್ವಾದಶ ಮುಖದ ಮೂರು ಮಣಿಯ ಮೂಧ್ರ್ನಿಯಲ್ಲಿ ಧರಿಸುವುದಯ್ಯಾ. ಏಕಾದಶಮುಖದ ಮೂವತ್ತಾರು ಮಣಿಯ ಶಿರವ ಬಳಸಿ ಧರಿಸುವುದಯ್ಯಾ. ಐದು ಏಳು ಹತ್ತುಮುಖದ ರುದ್ರಾಕ್ಷಿಯ ಒಂದೊಂದು ದ್ವಿಕರ್ಣದಲ್ಲಿ ಧರಿಸುವುದಯ್ಯಾ. ಷಡಾಷ್ಟಮುಖದ ದ್ವಾತ್ರಿಂಶತ್ ರುದ್ರಾಕ್ಷಿಯ ಕಂಠದಲ್ಲಿ ಧರಿಸುವುದಯ್ಯಾ. ಚತುರ್ಮುಖದ ಪಂಚಾಶತ್ ರುದ್ರಾಕ್ಷಿಯ ಉರಮಾಲೆಯಾಗಿ ಧರಿಸುವುದಯ್ಯಾ. ತ್ರಿದಶಮುಖದ ದ್ವಾತ್ರಿಂಶ ರುದ್ರಾಕ್ಷಿಯ ದ್ವಿಬಾಹುಗಳಲ್ಲಿ ಧರಿಸುವುದಯ್ಯಾ. ನವಮುಖದ ಚತುರ್ವಿಂಶ ರುದ್ರಾಕ್ಷಿಯ ದ್ವಿಮಣಿಬಂಧದಲ್ಲಿ ಧರಿಸುವುದಯ್ಯಾ. ಚತುರ್ದಶಮುಖದ ರುದ್ರಾಕ್ಷಿಯ ಅಷ್ಟೋತ್ತರಶತವ ಉಪವೀತದಂತೆ ಧರಿಸುವುದಯ್ಯಾ. ಇಂತರಿದು ಧರಿಸಿದ ಶಿವಮಾಹೇಶ್ವರನ ಹೆಜ್ಜೆಹೆಜ್ಜೆಗೆ ಅಶ್ವಮೇಧಯಾಗದ ಫಲ ತಪ್ಪದಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಏಳು ನೆಲೆಯ ಕರುಮಾಡದುಪ್ಪರಿಗೆಯೊಳಗೆ, ಒಂದೆ ಮುತ್ತಿನ ನೆಲೆಗಟ್ಟಿನ ಮೇಲೆ, ಭಿತ್ತಿ ಇಲ್ಲದ ರತ್ನದ ಹೊದಿಕೆಯ ಮೇಲಿಪ್ಪ ಕಳಸವ ಕಂಡವರಾರನೂ ಕಾಣೆ. ಸೌರಾಷ್ಟ್ರ ಸೋಮೇಶ್ವರಲಿಂಗವ ಹಿಡಿದು ನಿಲಲರಿಯದೇರಿದವರು ಜಾರಿ ಬಿದ್ದು ಸೂರೆವೋದರು ಕಾಲಂಗೆ.
--------------
ಆದಯ್ಯ
ಏಕಾಕಾರ ಲೋಕಾಕಾರ ನೀನಾಗಿ ತೋರ್ಪೆಯಯ್ಯಾ ಸದ್ಭಾವಿಗಳಿಗೆ. ಏಕಾಕಾರವೆ ಹುಸಿ, ಲೋಕಾಕಾರವೆ ದಿಟವಾಗಿ ತೋರ್ಪೆಯಯ್ಯಾ ಭಾವಭ್ರಮಿತರಿಗೆ. ಏಕಾಕಾರ ಲೋಕಾಕಾರ ಸರ್ವಾಕಾರವಾಗಿ ತೋರ್ಪೆಯಯ್ಯಾ ನಿರ್ಭಾವರಿಗೆ. ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ನಿಜದಾಕಾರ ನೀವಾಗಿರ್ಪಿರಯ್ಯಾ ಭಾವೈಕ್ಯವಾದ ಮಹಂತರಿಗೆ.
--------------
ಆದಯ್ಯ