ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಘಟವ ಮಾಡಿದ ಕುಲಲಾನು ಆ ಘಟದೊಳಿಪ್ಪುದಿಲ್ಲವೆಂತಂತೆ, ಬೆಳಸ ಬಿತ್ತಿದವನು ಆ ಬೆಳೆಯೊಳಿಪ್ಪುದಿಲ್ಲವೆಂತಂತೆ, ರಥವ ಮಾಡಿದ ರಥಿಕ ತಾ ಆ ರಥದೊಳಿಪ್ಪುದಿಲ್ಲವೆಂತಂತೆ, ಸರ್ವವನಾಡಿಸುವ ಶರ್ವನು ಯಂತ್ರ ಯಂತ್ರಿಯಂತಿರ್ಪನಾಗಿ ಸರ್ವರೂ ಶಿವನೆಂಬ ಅಜ್ಞಾನಿಗಳ ಮೆಚ್ಚುವನೆ ನಮ್ಮ ಸೌರಾಷ್ಟ್ರ ಸೋಮೇಶ್ವರ.
--------------
ಆದಯ್ಯ
ಘೋರಘೋರವಪ್ಪ ಮುಖ್ಯನರಕ ಒಂದು ಕೋಟಿ. ಅದರ ಕೆಳಗಣ ಪ್ರಧಾನನರಕ ಹದಿನೈದು ಕೋಟಿ. ಅವರ ಕೆಳಗಣ ನಾಯಕನರಕ ಇಪ್ಪತ್ತೆಂಟು ಕೋಟಿ. ಅವರ ಕೆಳಗಣ ಪರಿವಾರನರಕ ಅನಂತಕೋಟಿ. ಇದರೊಳಗಣ ಕುಂಭಿಯ ಪಾತಕ ನಾಲ್ವತ್ತೆಂಟು ಸಾವಿರಗಾವುದು ವಿಸ್ತೀರ್ಣ. ವೈತಾರಣಿಯೆಂಬತ್ತಾರು ಸಾವಿರಗಾವುದ, ಕಟ್ಟಕಡೆ[ಯೆ]ಕ್ಕಲನರಕಕ್ಕೆ ಎಂದೂ ಪರಿಹಾರವಿಲ್ಲ. ಹೊಕ್ಕವರು ಹೊರವಡಲಿಲ್ಲದ ನಿತ್ಯನರಕ, ಇಂತಪ್ಪ ಘೋರಮಾಲೆಯ ಖಂಡಿಸುವಡೆ ಪಂಚಾಕ್ಷರಿಯಲ್ಲದಿಲ್ಲ ಕಾಣಿರಣ್ಣಾ! ಪಾಪವ ಪರಿಹರಿಸುವೊಡೆ ಪಂಚಾವರಣನಪ್ಪ ಪಂಚಮುಖವೆ ಪಂಚಾಕ್ಷರವೆಂದರಿದು ಪಂಚಾಕ್ಷರವ ಜಪಿಸಿರಣ್ಣಾ. ಮತ್ತಿಲ್ಲ ಮತ್ತಿಲ್ಲ ಸೌರಾಷ್ಟ್ರ ಸೋಮೇಶ್ವರಲಿಂಗವ ಮೊರೆಹೊಕ್ಕು ಸುಖಿಯಾಗಿರಣ್ಣಾ.
--------------
ಆದಯ್ಯ
ಘಟಜಲ ಬಾಹ್ಯಾಗ್ನಿಯ ಉಷ್ಣ ಸೋಂಕಿ ಉಷ್ಣೋದಕವಾದಂತೆ, ತಿಲಕುಸುಮಸಂಗದಿಂದ ಕುಸುಮಸಾರ ತಿಲಸಾರಕ್ಕೆ ವೇಧೀಸಿದಂತೆ. ಅಂಗಲಿಂಗಸಂಗದಿಂದ ಪ್ರಾಣಲಿಂಗ ವೇದ್ಯವಾಯಿತ್ತು ನೋಡಾ. ಇಷ್ಟಪ್ರಾಣ ಸಮರಸಾದ್ವೈತವಾದುದೆ ತೃಪ್ತಿ. ಇದು ಕಾರಣ ಸಗುಣಕ್ಕೆ ಸಗುಣಬ್ರಹ್ಮವಾಗಿ, ಎನ್ನಂಗ ಪ್ರಾಣ ಮನ ಭಾವ ಕರಣಂಗಳೊಳಹೊರಗೆ ತೆರಹಿಲ್ಲದಿದ್ದೆಯಲ್ಲಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಘನಲಿಂಗದಲ್ಲಿ ಮನ ನಟ್ಟು, ಭಾವ ಬೆರಸಿ, ಉನ್ಮಿಷ ನಿಮಿಷಂಗಳಡಗಿ ತನು ಬೆರಗುವಟ್ಟು, ನಿಂದ ಸುಖದ ಮುದ್ರೆಯ ಮುದ್ರಿಸಿದ ಬೆಡಗಿನ ಭೇದ, ಸೌರಾಷ್ಟ್ರ ಸೋಮೇಶ್ವರಾ ನೀನೆ ಅಯ್ಯಾ.
--------------
ಆದಯ್ಯ
ಘಟಾಕಾಶ ಮಠಾಕಾಶ ಬಿಂದ್ವಾಕಾಶ ಭಿನ್ನಾಕಾಶ ಮಹದಾಕಾಶ ನಿಜದಾಕಾಶ ಚೈತನ್ಯಾತ್ಮನಾತ್ಮಚೈತನ್ಯವೆಂದಡೆ ಒಂದೆಂದರಿತರಿತು ಮರೆ ಮಾಡಿ ಹುಸಿ ಎಂಬ ಪರಿಯ ನೋಡಾ. ಗರುಡಿ ಚೋರನಂತೆ ಘಟಾಕಾಶ ಘಟವಿದ್ದಲ್ಲಿ ಇದ್ದು, ಘಟವಳಿದಲ್ಲಿ ಘಟಾಕಾಶವಳಿಯದಂತೆ. ಮಠಾಕಾಶ ಮಠವಿದ್ದಲ್ಲಿ ಇದ್ದು, ಮಠ ಬಿಚ್ಚಿದಲ್ಲಿ ಮಠಾಕಾಶ ಬಿಚ್ಚದಂತೆ. ಬಿಂದ್ವಾಕಾಶ ಬಿಂದುವಿದ್ದಲ್ಲಿ ಇದ್ದು, ಬಿಂದು ನಷ್ಟವಾದಲ್ಲಿ ಬಿಂದ್ವಾಕಾಶ ನಷ್ಟವಾಗದಂತೆ. ಭೀನ್ನಾಕಾಶ ಪೃಥ್ವಿಯಿದ್ದಲ್ಲಿ ಇದ್ದು, ಪೃಥ್ವಿ ಭಿನ್ನವಾದಲ್ಲಿ ಭಿನ್ನಾಕಾಶ ಭಿನ್ನವಾಗದಂತೆ. ಮಹದಾಕಾಶವೇ ನಿಜದಾಕಾಶ. ಆ ನಿಜದಾಕಾಶವೇ ನಿರ್ಧರವಹ ಹಾಂಗೆ. ಇದೇ ಆತ್ಮನ ಮರ್ಮ ನೋಡಾ. ಆದಿ ಅನಾದಿ ಇಲ್ಲದಂದು, ನಾದಬಿಂದುಕಳೆ ಮೊಳದೋರದಂದು, ಇದು ಒಂದೆಂದರಿತು ಉಂಟಿಲ್ಲವೆಂಬ ಗೆಲ್ಲಸೋಲದ ಮಾತಿನ ಮಾಲೆಯ ತೊಡಿಗೆಯಳಿದಂದು ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಆನೆಂಬುದು ನೀನೆಂಬುದೊಂದೇ ಕಾಣಾ ಮಲ್ಲಿಕಾರ್ಜುನಾ.
--------------
ಆದಯ್ಯ
ಘನಕ್ಕೆ ಘನ ಮಹಾಘನ. ಆದಿಮಧ್ಯಾಂತರಹಿತವಾದ ನಿರಂಜನಕ್ಕೆ ಕುರುಹಿಲ್ಲ, ಕುರುಹಿಲ್ಲಾಗಿ ಮರಹಿಲ್ಲ, ತೆರಹಿಲ್ಲಾಗಿ ಮರಹಿಲ್ಲ, ಮರಹಿಲ್ಲಾಗಿ ಚಿದಖಂಡ ಚಿಲ್ಲಿಂಗ ಸೌರಾಷ್ಟ್ರ ಸೋಮೇಶ್ವರನು ನಿರಾಶ್ರಯನಾಗಿ, ಕೂಡಲಿಲ್ಲ ಅಗಲಲಿಲ್ಲದೆ ನಿಂದ, ಸಹಜ.
--------------
ಆದಯ್ಯ
ಘಟಾಕಾಶ ಮಹದಾಕಾಶದ ಪರಿಯಲ್ಲವೆಂಬಿರಿ. ಸಿಡಿಲು ಮಿಂಚು ಮಹದಾಕಾಶದಲ್ಲಿಯೇ ಲೀಯ. ನಡೆವುದು ನುಡಿವುದು ಘಟಕಾಶದಲ್ಲಿಯೇ ಲೀಯ. ಶಬ್ದ ನಿಶ್ಶಬ್ದವೆಂದೇನೋರಿ ಚೈತನ್ಯಾತ್ಮಕವೆಂದಡೂ ಆತ್ಮಚೈತನ್ಯವೆಂದಡೂ ನಾಮವೆಂದಡೆ ರೂಪು, ರೂಪೆಂದಡೆ ನಾಮ, ನಾಮ ಏಕಸ್ವರೂಪವೆಂದರಿಯದೆ ಕಂಗಳಯ್ಯಗಳು ಕಂಡೆವೆಂಬ ಕಳವಳದಂತೆ ಮರೆದೊರಗಿದವರು ಒರಗಿದಾಗ ಸುಖಿಸಿದೆವೆಂಬ ಮಾತಿನಂತೆ ಇಲ್ಲದುದನುಂಟೆಂದು ನೆನೆವನಂತೆ, ನಿಃಕಳಂಕ ಶಾಂತಮಲ್ಲಿಕಾರ್ಜುನದೇವಯ್ಯ ಕೇಳಿದ ಮಾತ್ರದಲ್ಲಿ ಮಗ್ನವಾದವರಂತೆ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ