ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗೋದಕ ಪಾದೋದಕ ಪ್ರಸಾದೋದಕವಾದ ತ್ರಿವಿಧೋದಕದಲ್ಲಿ ಲಿಂಗೋದಕದಿಂದ ಸಂಚಿತಕರ್ಮವಿಲ್ಲ. ಪಾದೋದಕದಿಂದ ಪ್ರಾರಬ್ಧಕರ್ಮವಿಲ್ಲ. ಪ್ರಸಾದೋದಕದಿಂದ ಆಗಾಮಿಕರ್ಮವಿಲ್ಲ. ಇಂತೀ ತ್ರಿವಿಧೋದಕದಿಂದ ಬ್ರಹ್ಮಹತ್ಯ ಭ್ರೂಣಹತ್ಯ ಪಾಪಪಂಕಪ್ರಕ್ಷಾಲನವಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಲಯಭೋಗಾಧಿಕಾರವನುಳ್ಳ ಪರಶಿವನು ತಾನೆ ತತ್ವಪ್ರಭಾವಮೂರ್ತಿಯೆನಿಸಿನದಫವ್ಯಯ ಅಪ್ರಮಾಣ ಅಸಾಧ್ಯ ನಿಷ್ಕಲತತ್ವವೆ ಪಂಚಸಂಜ್ಞೆಯಿಂದಿಪ್ಪುದು, ಅದೆಂತೆಂದಡೆ: ಜಗತ್‍ಸೃಷ್ಟಿಗಾದಿ, ಅಷ್ಟತನುಗಳಿಗಾದಿ, ತ್ರಿಮೂರ್ತಿಗಳಿಗಾದಿ, ಷಟ್ತ್ರಿಂಶತತ್ವಕ್ಕಾದಿ, ಈಶ್ವರ ಸದಾಶಿವಗಾದಿಯಾಗಿಪ್ಪ, ಮೇಲಣ ಪರತತ್ವವೆ ಪರ ಅನಂತಕೋಟಿ ಬ್ರಹ್ಮಾಂಡಗಳೊಳಗೆಡವಿಡದೆ ಚರಾಚರವೆನಿಸುವ ಪ್ರಾಣಿಗಳೊಳಗೆ ಸೂಕ್ಷ್ಮವಾಗಿ, ವಟವೃಕ್ಷದೊಳಡಗಿಪ್ಪ ಬೀಜದಂತೆ ಗೂಢವಾಗಿ, ಆರಿಗೂ ಹಡೆಯಬಾರದೆ ವಿಶ್ವಕ್ಕೆ ಕಾರಣವಾಗಿಹುದೆ ಗೂಢ. ತನ್ನೊಳಗೆ ಶಿವಶಕ್ತಿಗಳ ಶರೀರ ಘಟಿಸಿ ಚರಾಚರಂಗಳು ಸ್ತ್ರೀಪುಂನನಪುಂಫಸಕವೆಂಬ ಮುದ್ರೆಯಿಂದ ಬಹುನಾಮಂಗಳಿಂದ ತನ್ನೊಳಗಿಪ್ಪ ಕಾರಣ ಶರೀರಸ್ಥ. ತನ್ನೊಳಗಿಹ ಮಾಯೆಯಿಂದ ಜಗತ್‍ಸೃಷ್ಟಿ ಮೊದಲಾದ ಸಕಲಪ್ರಪಂಚ ತೋರಿ ಆ ಪ್ರಪಂಚಿಂಗೆ ತಾನೆ ಭೂಮಿಯಾಗಿ ಎಲ್ಲವ ತನ್ನೊಳಗಿಂಬಿಟ್ಟು ತಾನೆನ್ನದ ಅಭಿನ್ನದಿಂದಹುದೆ ಲಿಂಗಕ್ಷೇತ್ರ. ಈಶ್ವರ ಸದಾಶಿವರು ಮೊದಲಾದ ಅನಂತದೇವಾತ್ಮಮೂರ್ತಿಗಳ ಜನನಂಗಳಾದಿಯಿಂದತ್ತತ್ತಲಿಪ್ಪುದೆ ಅನಾದಿ. ಇಂತಪ್ಪ ಪಂಚಸಂಜ್ಞೆಯನುಳ್ಳ ಲಿಂಗವನರಿತ ಲಿಂಗೈಕ್ಯಂಗೆ ನಮೋ ನಮೋ ಎಂಬೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಲಿಂಗವೇ ಪ್ರಾಣವಾಗಿ ಪ್ರಾಣಲಿಂಗವೆಂಬ ಪ್ರಪಂಚನರಿಯನಯ್ಯಾ ! ಘನವೇ ಮನದಲ್ಲಿ ವೇಧಿಸಿ, ಮನ ಲಿಂಗಲೀಯವಾಗಿ ನೆನಹಿನ ಸಂಕಲ್ಪ ಕ್ರೀ ನಿಃಷ್ಪತ್ತಿಯಾಗೆ, ಅಂಗಲಿಂಗವೆಂಬ ಭಾವ ಬಗೆಗೆಟ್ಟು, ಲಿಂಗವೇ ಸರ್ವಾಂಗಮುಖವಾದ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣನ ಸ್ವತಂತ್ರತೆಯ ಗತಿಯ ನೋಡಾ.
--------------
ಆದಯ್ಯ
ಲಿಂಗಶರಣನ ಪಂಚೇಂದಿಂ್ರಯಂಗಳು ಲಿಂಗಮುಖವಾಗಿ ನಿಂದು, ಮನಸಹಿತ ಪಂಚವಿಷಯಂಗಳಖಿಲಸುಖಂಗಳ ಲಿಂಗಾರ್ಪಿತದಿಂದ ಚರಿಸುತ್ತ ಬೇರೆ ಮತ್ತೊಂದು ದೆಸೆ ಇಲ್ಲದೆ ನಿಂದಿಹವು, ಸೌರಾಷ್ಟ್ರ ಸೋಮೇಶ್ವರಲಿಂಗ ನಿವಾಸಿಯಾದ ಶರಣಂಗೆ.
--------------
ಆದಯ್ಯ
ಲಿಂಗದ ಸಂಗದಲ್ಲಿಪ್ಪ ಅಂಗ ಹಿಂಗದೆ ಅಂಗಜನ ಸರಳಿಂಗೆ ಭಂಗವಾಗದ ಅಭಂಗಂಗೆ ಗಂಗೆ ಗೋದಾವರಿ ತುಂಗಭದ್ರೆಯ ಸಂಗಮದ ಸಂಗದ ಆಲಿಂಗನದ ಹಂಗು ಸಂಘಟಿಸಲುಂಟೆ ? ಸಂಗ ನಿಸ್ಸಂಗವೆಂಬುಭಯ ಸಂಗವಳಿದ ನಿರಂಗ ನಿರುಪಾಧಿಕ ನಿರಂಜನ ನಿರಾಶ್ರಯ ನಿರ್ಮಳ ನಿಃಕಲ ನಿಶ್ಚಲ ನಿರವಯ ನಿರ್ಭಿನ್ನ ನಿರುಪಮ್ಯ ನಿರ್ವಿಕಲ್ಪ ನಿರಹಂಕಾರ ನಿರಪೇಕ್ಷ ನಿರವಸ್ಥ ನಿರ್ಮೋಹಿ ನಿರ್ಮಾಯ ನಿರಾವರಣ ನಿರಾಲಂಬ ನಿತ್ಯನಿರಾಳ ನಿಃಪ್ರಿಯ ನೀನೆ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಲಿಂಗಪ್ರಸಾದ ತನಗಾಗಬೇಕೆಂಬ ಪ್ರಸಾದಿ ಶಬ್ದ ಸ್ಪರ್ಶ ರೂಪು ರಸ ಗಂಧಂಗಳ ತನ್ನ ತನುಕರಣಂಗಳ ಮುಟ್ಟಲೀಯದೆ, ಅಂಗ ಮುಂದಾಗಿ ಮನ ಹಿಂದಾಗಿ ಅಂಗಭಾವವಳಿದು ಅರ್ಪಿಸಿಕೊಳಬಲ್ಲಡೆ ಪ್ರಸಾದಿ. ಆ ಪ್ರಸಾದಿಯ ಪರಮಪರಿಣಾಮವೆ ಪ್ರಸಾದ. ಎಂತೆಂದಡೆ: `¸õ್ಞಖ್ಯಾಶ್ಶತಗುಣಾಧಿಕಂ ಯತ್ಪ್ರಸಾದೀ ಚ ಪ್ರೋಚ್ಯತೇ' ಎಂದುದಾಗಿ, ಇದೇ ಆದಿಪ್ರಸಾದವಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ