ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶುದ್ಧ ಮಿಶ್ರ ಸಂಕೀರ್ಣ ಪೂರ್ವ ಮಾರ್ಗಶೈವಂಗಳಲ್ಲಿ ಕರ್ಮಭಕ್ತಿಯಲ್ಲದೆ ನಿರ್ಮಳಸದ್ಭಕ್ತಿಯೆಲ್ಲಿಯದೊ ? ಒಮ್ಮೆ ಧರಿಸಿ ಒಮ್ಮೆ ಇರಿಸಿ, ಶುಚಿಯಾದೆನೆಂದು ಅಶುಚಿಯಾದೆನೆಂದು ಭವಿಯಾಗುತ್ತೊಮ್ಮೆ, ಭಕ್ತನಾಗುತ್ತೊಮ್ಮೆ ಒಪ್ಪಚ್ಚಿ ಹೊಲೆ, ಒಪ್ಪಚ್ಚಿ ಕುಲವೆಂದು ತೆರನರಿಯದಿಪ್ಪ ಬರಿಯ ಶುದ್ಧಶೈವವಂ ಬಿಟ್ಟು, ಬ್ರಹ್ಮ ವಿಷ್ಣು ರುದ್ರ ಮಾಹೇಶ್ವರರು ಒಂದೆಂದು ನುಡಿವ ದುಃಕರ್ಮ ಮಿಶ್ರವಂ ಬಿಟ್ಟು, ಹರನೆ ಹಿರಿಯನೆಂದು ಕಿರಿಯರೆಲ್ಲಾ ದೇವರೆಂದು ನುಡಿದು ಕಂಡ ಕಂಡವರ್ಗೆ ಹೊಡೆಗೆಡವ ವೇಶಿಯ ಸುತನಂತೆ ಸಂಕೀರ್ಣಕ್ಕೊಳಗಾದ ಸಂಕೀರ್ಣಶೈವಮಂ ನೋಡದೆ, ದೂರದಿಂ ನಮಿಸಿ ಅರ್ಪಿಸಿ ಶೇಷವರುಣಕರ್ತನಲ್ಲವೆಂದು ದೂರಸ್ತನಹ ಪೂರ್ವಶೈವಮಂ ತೊಲಗಿ, ಅಂಗದಲನವರತ ಲಿಂಗಮಂ ಧರಿಸಿರ್ದು ದೇಹೇಂದ್ರಿಯ ಮನಃ ಪ್ರಾಣ ಜ್ಞಾನ ಭಾವ ಒಮ್ಮುಖಮಂ ಮಾಡಿ, ಸದ್ಗುರುಕಾರುಣ್ಯಮಂ ಪಡೆದು, ಲಿಂಗವೇ ಪತಿ, ಗುರುವೆ ತಂದೆ, ಜಂಗಮವೇ ಲಿಂಗವೆಂದರಿದು, ದ್ರವ್ಯವೆಂಬುದು ಭೂತರೂಪು, ಪ್ರಸಾದವೆಂಬುದು ಲಿಂಗರೂಪವೆಂದು ತಿಳಿದು, ಲಿಂಗದ ಪಾದೋದಕವೇ ಲಿಂಗಕ್ಕೆ ಮಜ್ಜನವಾಗಿ ಲಿಂಗದ ಪ್ರಸಾದವೇ ಲಿಂಗಕ್ಕೆ ಆರೋಗಣೆಯಾಗಿ ಲಿಂಗದಿಂದ ನೋಡುತ್ತ ಕೇಳುತ್ತ ರುಚಿಸುತ್ತ ಮುಟ್ಟುತ್ತ ವಾಸಿಸುತ್ತ ಕೊಡುತ್ತ ಆನಂದಿಸುತ್ತ ಅಹಂ ಮಮತೆಗೆಟ್ಟು ಸಂದು ಸಂಶಯವರಿತು ಹಿಂದು ಮುಂದ ಹಾರದಿಪ್ಪುದೆ ವೀರಶೈವ. ಅದೆಂತೆಂದಡೆ: ಪಿತಾ ಗುರುಃ ಪತಿರ್ಲಿಂಗಂ, ಸ್ವಲಿಂಗಂ ಜಂಗಮಪ್ರಭುಃ ತಸ್ಮಾತ್ಸರ್ವಪ್ರಯತ್ನೇನ ತಸ್ಯೈವಾರಾಧನಂ ಕ ರು ಸ ಏವ ಸ್ಯಾತ್ಪ್ರಸಾದಸ್ತೇ ಭಕ್ತಿವಿತ್ತಸಮರ್ಪಿತಃ ತತ್ಪ್ರಸಾದಸ್ತು ಭೋಕ್ತವ್ಯಃ ಭಕ್ತೋವಿಗತಕಲ್ಮಷಃ ಎಂದುದಾಗಿ, ಇಂತಲ್ಲದಿರ್ದುದೆ ಇತರ ಶೈವ ಕಾಣಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಶ್ರೀಗುರುಸೋಂಕಿದ ಶಿಷ್ಯ ತಾನಾ ಗುರುವಾಗದೆ ಮಾಣನು. ಅದೆಂತೆಂದಡೆ: ಜ್ಯೋತಿಯಿಂದಾದ ಜ್ಯೋತಿಯಂತೆ ಭ್ರಮರನಿಂದ ಕೀಟ ಭ್ರಮರನಾದಂತೆ ಶಿಷ್ಯನು ಗುರುವಿ[ಗೆ] ಭೇದವಾಗಿರನು. ಇಂತಪ್ಪ ಶಿಷ್ಯನು ಸದ್ಗುರುವಿನ ಮೂರ್ತಿಯ ಧ್ಯಾನಿಸಿ, ಗುರುಪದವ ಪೂಜಿಸಿ, ಗುರುವಾಕ್ಯವೇ ಮಂತ್ರವೆಂದು ನಂಬಿ, ಗುರುವಿನ ಕೃಪೆಯೇ ಮುಕ್ತಿಯೆಂದು ಅರಿದಿಪ್ಪನು. ಅದೆಂತೆಂದಡೆ: ಧ್ಯಾನಮೂಲಂ ಗುರೋರ್ಮೂರ್ತಿಃ ಪೂಜಾಮೂಲಂ ಗುರೋಃ ಪದಂ ಮಂತ್ರಮೂಲಂ ಗುರೋರ್ವಾಕ್ಯಂ ಮುಕ್ತಿಮೂಲಂ ಗುರೋಃ ಕೃಪಾ ಇಂತೆಂದುದಾಗಿ, ಗುರುವಿನ ಕರುಣದಿಂದ ಷಟ್‍ತ್ರಿಂಶತ್ತತ್ವಂಗಳ ಸ್ವರೂಪವನರಿತು ತತ್ವಾತೀತವಾದ ಪರವಸ್ತು ವಾಙ್ಮನಾತೀತವಾಗಿ ತನ್ನ ಭಾವಾಬ್ಥೀಷ್ಟಲಿಂಗದ ನೆನಹು ಸೋಂಕುಗಳಿಂದಭ ಸೌರಾಷ್ಟ್ರ ಸೋಮೇಶ್ವರಲಿಂಗವಪ್ಪುದು ತಪ್ಪದಯ್ಯಾ.
--------------
ಆದಯ್ಯ
ಶಿವಪಥವನರಿದು, ಲಿಂಗನಿಷ್ಠೆಯಿಂದೇಕೋಭಾವ ಬಲಿದು, ಕರಿಗೊಂಡು, ಘನವೇದ್ಯವಾಗಿ ನಿಂದು, ನಿಜವ ನೆಮ್ಮಿ, ಸಚ್ಚಿದಾನಂದಸುಖಮಯನಾಗಿ, ಮಾಯೆ ಕೆಟ್ಟು, ಮರವೆ ಬಿಟ್ಟು, ಮರಣವಳಿಯಬೇಕು. ಇದಲ್ಲದೆ ಬಿಂದುವಿಂದಾದ ತ್ರಿಬದ್ಧಕ್ರಿಯೆ ಎಂದರಿಯದೆ ಬಾಹ್ಯಕ್ರೀಯೊಳೊಂದಿದಡೆ, ಸುರಪ, ಹರಿ, ವಿರಿಂಚಿಗಳಾದಡೂ ಮಾಯೆ ಕೆಡದು, ಮರವೆ ಬಿಡದು. ಮೃತ್ಯುವಗಿದು ಕಾಲನ ಬಾಯಿಗೆ ಕೆಡಹದೆ ಮಾಣದಯ್ಯಾ. ಇದ ಬಲ್ಲೆನಾಗಿ ನಾನೊಲ್ಲೆ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಶ್ರೀಗುರು ಕರುಣದಿಂದ ಜ್ಞಾನಮೂರುತಿ ಗುರುವನರಿತ ಬಳಿಕ ಆ ಗುರುವಿನಲ್ಲಿಯೇ ತದುಗತ ತಲ್ಲೀಯವಾದ. ಮತ್ತೇನನೂ ಅರಿಯಲಿಲ್ಲ, ಮತ್ತೊಂದ ಮರೆಯಲಿಲ್ಲ. ಅರಿಯಲು ಮರೆಯಲು ತೆರಹಿಲ್ಲದ ಗುರುವನರಿಯಲಿಲ್ಲವಾಗಿ ಸೌರಾಷ್ಟ್ರ ಸೋಮೇಶ್ವರಲಿಂಗವ ನೆನೆಯಲಿಲ್ಲ.
--------------
ಆದಯ್ಯ
ಶಬ್ದಶಾಸ್ತ್ರ ಶ್ರುತಿಸ್ಮೃತಿಗೆ ವಾಙ್ಮ[ಹ]ವೊ ? ಮಹವೊ ? ಬಲ್ಲಡೆ ನೀವು ಹೇಳಿರೆ. ಸೌರಾಷ್ಟ್ರ ಸೋಮೇಶ್ವರಲಿಂಗವೆಂಬುದು ಕಲ್ಪನೆಯಿಂ ಕಾಣ್ಬುದು ಕನಸೊ ? ನನಸೊ ? ಬಲ್ಲಡೆ ನೀವು ಹೇಳಿರೆ. ಸೌರಾಷ್ಟ್ರ ಸೋಮೇಶ್ವರ ಲಿಂಗವೆಂಬುದು ಸ್ವಯವೊ ? ಪರವೊ ? ಬಲ್ಲಡೆ ನೀವು ಹೇಳಿರೆ.
--------------
ಆದಯ್ಯ
ಶುಕ್ಲಕಶೋಣಿತದಿಂದ ತನು ಮನ ಜನಿಸಿತ್ತು. ತನು ಮನದಿಂದ ನಡೆ ನುಡಿ ಜನಿಸಿತ್ತು. ನಡೆ ನುಡಿಯಿಂದ ಅಹಂಕಾರ ಮಮಕಾರ ಜನಿಸಿತ್ತು. ಇವರ ದೆಸೆಯಿಂದ ರಸ, ಗಂಧ, ರೂಪು, ಶಬ್ದ, ಸ್ಪರ್ಶನ ಜನಿಸಿತ್ತು. ಇವಕ್ಕಾಶ್ರಯವಾಗಿ ಮನವೊಂದಿದ್ದಿತಲ್ಲದೆ ಆ ಮನವು ಮಹದಲ್ಲಿ ಲಯವಾದಲ್ಲಿ ಆತ್ಮನಾವೆಡೆಯಲ್ಲಿದ್ದಿತ್ತೊ ? ಷಡುವರ್ಣದೊಳಗಲ್ಲ ನಡೆ ನುಡಿ ಚೈತನ್ಯವಲ್ಲ. ಹಿಡಿತಕ್ಕೆ ಬರಲಿಲ್ಲ ಇನ್ನೆಂತಿಪ್ಪುದೊ ? ದರ್ಪಣದ ಪ್ರತಿಬಿಂಬಕ್ಕೊಂದು ಚೇಷ್ಟೆಯುಂಟೆ ? ನೆಳಲಿಗೊಂದು ಹರಿದಾಟವುಂಟೆ ? ನಿಃಕಳಂಕ ಶಾಂತಮಲ್ಲಿಕಾರ್ಜುನಯ್ಯಾ, ಮನದ ನೆನಹೇ ಆತ್ಮನಲ್ಲದೆ ಬೇರಾತ್ಮನಿಲ್ಲ ಕಾಣಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಶಿವತತ್ವದ ಮೂಲಾಧಾರದ ಜ್ಞಾನಶಕ್ತಿಯೆ ಚಿದ್ವಿಭೂತಿ. ಈ ಚಿದ್ವಿಭೂತಿ ಎನ್ನಂತರಂಗದಲ್ಲಿ ಲೇಪವಾಗಿ ತೊಳತೊಳಗಿ ಬೆಳಗುವ ಬೆಳಗಿನಲ್ಲಿಯೇ ಆನು ನಿಮ್ಮ ಕಂಡು ಬದುಕಿದೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಶಿವಯೋಗಿಗೆ ಕರ್ಮವಿಲ್ಲ, ಶಿವಶರಣರ ಪಥ ಲಿಂಗಾಧೀನ. ಮತ್ತಾ ಲಿಂಗವಶನಾಗಿ ಆಯತ ಸ್ವಾಯತದಲ್ಲಿ ಲಿಂಗಮಯವಾಗಿಪ್ಪ ಶಿವಜ್ಞಾನಿಗಳಿಗೆ ಕರ್ಮವೆಡೆವೋಗಲೆಡೆಯಿಲ್ಲ. ಹಿಂದಣ ಕರ್ಮ ಜ್ಞಾನಾಗ್ನಿಯಿಂದ ಉರಿದು ಭಸ್ಮವಾಯಿತ್ತು. ಮುಂದಣ ಕರ್ಮ ನಿಂದೆವಂದಕರಲ್ಲಿ ಅಳಿಯಿತ್ತು, ಇಂದಿನ ಕರ್ಮ ನಿಸ್ಸಂದೇಹದಲ್ಲಿ ಕೆಟ್ಟಿತ್ತು. ``ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್‍ಕುರುತೇ ಮಮಱಱ ಎಂದುದಾಗಿ, ಸೌರಾಷ್ಟ್ರ ಸೋಮೇಶ್ವರನ ಶರಣರು ನಿಃಕರ್ಮಿಗಳಾಗಿ ಲಿಂಗಸುಖಿಗಳು.
--------------
ಆದಯ್ಯ
ಶ್ರದ್ಧೆ, ನೈಷೆ*, ಅವಧಾನ, ಅನುಭಾವ, ಆನಂದ, ಸಮರಸವೆಂಬ ಆರು ವಿಧದ ಭಕ್ತಿಯ ಆಯಾಯ ಲಿಂಗಂಗಳೊಳೊಂದಿಸಿ ಶ್ರವಣ ಕೀರ್ತನ ಸ್ಮರಣ ಪಾದಸೇವನ ಪೂಜನ ವಂದನ ದಾಸ್ಯ ಸಖ್ಯ ಆತ್ಮನಿವೇದನವೆಂಬ ನವವಿಧದ ಭಕ್ತಿರಸದಲ್ಲಿ ಮುಳುಗಿಪ್ಪನು. ಅದೆಂತೆಂದಡೆ: ಶ್ರವಣಂ ಕೀರ್ತನಂ ಶಂಭೋಃ ಸ್ಮರಣಂ ಪಾದಸೇವನಂ ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮನಿವೇದನಂ ಎಂದುದಾಗಿ, ಇಂತಪ್ಪ ಭಕ್ತಿ ಇಲ್ಲದಡೆ ಸೌರಾಷ್ಟ್ರ ಸೋಮೇಶ್ವರನೆಂತೊಲಿವನಯ್ಯಾ.
--------------
ಆದಯ್ಯ
ಶ್ರೀಗುರುವಿನ ಶ್ರೀಚರಣದಲ್ಲಿ ಅರುವತ್ತೆಂಟು ತೀರ್ಥಗಳು ನೆಲೆಸಿಪ್ಪವಾಗಿ ಎಲ್ಲಾ ತೀರ್ಥಗಳಿಗೆಯೂ ಗುರುಪಾದತೀರ್ಥವೆ ಅಧಿಕ ನೋಡಾ. ಗುರುಕರುಣದಿಂದ ದೀಯತೇ ಎಂಬ ಸುಜ್ಞಾನವ ಹಡದು ಗುರುಪಾದೋದಕದಿಂದ ಕ್ಷೀಯತೇ ಎಂದು ಮಲತ್ರಯವ ಕ್ಷಯವ ಮಾಡುವುದು. ಶೋಷಣಂ ಪಾಪಪಂಕಸ್ಯ ದೀಪನಂ ಜ್ಞಾನ ತೇಜಸಃ ಗುರುಪಾದೋದಕಂ ಪೀತ್ವಾ ಭವೇತ್ ಸಂಸಾರನಾಶನಂ ಇಂತೆಂದುದಾಗಿ, ಗುರುಕರುಣಾಮೃತರಸಪಾದೋದಕದಲ್ಲಿ ಸುಜ್ಞಾನಾನಂದ ರಸಮಯನಾಗಿ ಬೆರಸಿ ಬೇರಿಲ್ಲದಿರ್ದೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಶಿವಭಾವದಿಂದ ಆತ್ಮ ಹುಟ್ಟಿ, ಶಿವ ತಾನೆಂಬ ಉಭಯವನಲಂಕರಿಸಿದನಾಗಿ ಆತ್ಮಂಗೆ ಭಾವನೆಂಬ ಹೆಸರಾಯಿತ್ತು. ಆತ್ಮ ಬಂದು ಆಕಾಶವ ಕೂಡಿದಲ್ಲಿ ಜ್ಞಾನವೆಂಬ ಹೆಸರಾಯಿತ್ತು. ಆತ್ಮ ಬಂದು ವಾಯುವ ಕೂಡಿದಲ್ಲಿ ಅಹಂಕಾರವೆಂಬ ಹೆಸರಾಯಿತ್ತು. ಆತ್ಮ ಬಂದು ಅಪ್ಪುವ ಕೂಡಿದಲ್ಲಿ ಬುದ್ಧಿಯೆಂಬ ಹೆಸರಾಯಿತ್ತು. ಆತ್ಮ ಬಂದು ಪೃಥ್ವಿಯ ಕೂಡಿದಲ್ಲಿ ಚಿತ್ತೆಂಬ ಹೆಸರಾಯಿತ್ತು. ಚಿತ್ತು ಆಚಾರಲಿಂಗವ ಧರಿಸಿಪ್ಪುದು. ಬುದ್ಧಿ ಗುರುಲಿಂಗವ ಧರಿಸಿಪ್ಪುದು. ಅಹಂಕಾರ ಶಿವಲಿಂಗವ ಧರಿಸಿಪ್ಪುದು ಮನಸ್ಸು ಜಂಗಮಲಿಂಗವ ಧರಿಸಿಪ್ಪುದು. ಜ್ಞಾನ ಪ್ರಸಾದಲಿಂಗವ ಧರಿಸಿಪ್ಪುದು. ಭಾವ ಮಹಾಲಿಂಗವ ಧರಿಸಿಪ್ಪುದು. ಸೌರಾಷ್ಟ್ರ ಸೋಮೇಶ್ವರಲಿಂಗ ತಾನು ತಾನಾಗಿರಬೇಕು.
--------------
ಆದಯ್ಯ
ಶುಕ್ಲಶೋಣಿತದಲ್ಲಿ ಬಲಿದ ಕರುಳು ಕತ್ತಲೆಯಲ್ಲಿ ಬೆಳೆದು, ಮೂತ್ರನಾಳದಲ್ಲಿಳಿದು, ಕರ್ಮವೆ ಕರ್ತುವಾಗಿ, ಕಪಟವೆ ಆಶ್ರಯವಾಗಿ, ಕೇವಲಜ್ಞಾನಶೂನ್ಯವಾಗಿ, ಬರಿಯ ಮಾತ ಬಣ್ಣಿಸಿ, ಬಯಲ ಮಾತ ಕೊಟ್ಟು, ಬಸುರ ಮಾತ ತೆಗೆದು ಜಿಹ್ವೆ ಗುಹ್ಯಂಗಳ ಹೊರೆವ ಚೋರವಿದ್ಯಕ್ಕೆ ನಿಜ ಸಾಧ್ಯವಪ್ಪುದೆ ?ಅದು ಹುಸಿ. ಅದೆಂತೆಂದಡೆ: ಕರ್ಮಕಾಪಟ್ಯಮಾಶ್ರಿತ್ಯ ನಿರ್ಮಲಜ್ಞಾನವರ್ಜಿತಾಃ ವಾಗ್ಬ್ರಹ್ಮಣಿ ಪ್ರವರ್ತಂತೇ ಶಿಶ್ನೋದರಪರಾಯಣಾಃ ಇಂತೆಂದುದಾಗಿ, ತ್ರಿಡಂಬಿಂದೊಡಲ ಹೊರೆದು ಕುಟಿಲ ತಮಗಿಲ್ಲೆಂಬ ಡಂಭಕರನೇನೆಂಬೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಶಬ್ದಶಾಸ್ತ್ರ ತರ್ಕಾಗಮಂಗಳ ಹೇಳಿ ಕೇಳಿ, ಕಲಿತುಲಿದವರೆಲ್ಲಾ ವಿದ್ಯಾಗೂಡಾದರಲ್ಲದೆ, ಲಿಂಗಗೂಡಾದುದಿಲ್ಲ ನೋಡಯ್ಯಾ. ಕಲಿಕಲಿತು ಉಲಿವ ಅಭ್ಯಾಸದ ಮಾತಿಂಗೆ ಮರುಳಪ್ಪರೆ ನಮ್ಮ ಶಿವಶರಣರು. ಆದಿ ಅನಾದಿಗಭೇದ್ಯವಾದ ನಿಜವ ಭೇದಿಸಲರಿತು ಮನ ಘನದಲ್ಲಿ ನಿವಾಸಿಯಾಗಬೇಕು. ಮನ ಘನದಲ್ಲಿ ನಿವಾಸಿಯಾಗದೆ ಸೌರಾಷ್ಟ್ರ ಸೋಮೇಶ್ವರಲಿಂಗವ ಬಲ್ಲೆನೆಂದು ನುಡಿವ ಬರಿ ಮಾತಿನ ಬಾಯ ಬಣ್ಣದ ಸೊಲ್ಲು, ಸಲ್ಲದೆ ಹೋಯಿತ್ತು.
--------------
ಆದಯ್ಯ
ಶಿವಭಕ್ತಿಯೆಂಬುದು ಯುಕ್ತಿಯ ಪರಿಯಂತಲ್ಲ, ಸಾಧಕದ ಪರಿಯಂತಲ್ಲ, ಮೂಗರು ಕಂಡ ಕನಸಿನಂತಿಪ್ಪುದು ಕಾಣಿರೆ.ಹೇಳಿ ಕೇಳಿ ಮಾಡುವುದು ಯುಕ್ತಿಭಕ್ತಿ. ಸಾಧಕಾಂಗದಿಂದ ಮಾಡುವುದು ಅಭ್ಯಾಸಭಕ್ತಿ. ಮನ ಕೂರ್ತು ಮಾಡುವುದು ಮುಕ್ತಿಭಕ್ತಿ. ಕೇಡಿಲ್ಲದೆ ಮಾಡುವುದು ನಿತ್ಯಭಕ್ತಿ. ಇದ್ದಂತಿದ್ದು ನಿಜವ ಅಪ್ಪುವುದು ನಿಜಭಕ್ತಿ. ಈ ನಿಜಭಕ್ತಿಯಲ್ಲಿ ಭರಿತರು ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು.
--------------
ಆದಯ್ಯ
ಶ್ರಮಿಸಿದುದೆ ಶ್ರಾದ್ಧ, ಪ್ರೇತವಾದುದೆ ಪ್ರೇದ್ಧ. ಇಂತೀ ಪ್ರೇದ್ಧವೆಂಬುದಿಲ್ಲವಾಗಿ ಶ್ರಾದ್ಧವೆಂಬುದಿಲ್ಲ. ಶ್ರಾದ್ಧ ಪ್ರೇದ್ಧಗಳೆಂಬುದಿಲ್ಲವಾಗಿ ತದ್ದಿನಂಗಳೆಂಬುದಿಲ್ಲ. ತದ್ದಿನಂಗಳೆಂಬುದಿಲ್ಲವಾಗಿ ಸಂಕಲ್ಪಭುಂಜನೆ ಇಲ್ಲ. ಅದೇನುಕಾರಣವೆಂದಡೆ, ಪ್ರಾಣಲಿಂಗಸಂಗದಿಂ ಲಿಂಗಪ್ರಾಣವಾಯಿತ್ತಾಗಿ, ಶಿವಪ್ರಸಾದಸೇವ್ಯದಿಂ ಪ್ರಸಾದಕಾಯವಾ[ಯಿ]ತ್ತಾಗಿ, ಇಂತಲ್ಲದೆ, ಅಂಗೋಪಜೀವಿಗಳು ತದ್ದಿನಂಗಳ ಮಾಡುವಲ್ಲಿ ``ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿಧದೇ ಪದಂ ಸಮೂಳ್ಹಮಸ್ಯ ಪಾಂಸುರೇಱಱ ಎಂಬ ಮನು ಮಂತ್ರದಿಂ ಸಂಕಲ್ಪಿಸಿಕೊಂಡು, ಸುರೆ ಮಾಂಸವ ಭುಂಜಿಸುವ ತದ್ದಿನವೆ ದೋಷದಿನ. ಇದಕ್ಕೆ ಶ್ರುತಿ: ತದ್ದಿನಂ ದಿನದೋಷೇಣ ಸುರಾಶೋಣಿತಮಾಂಸಯೋಃ ಅತಿಸಂಕಲ್ಪ್ಯ ಭುಂಜೀಯಾತ್ gõ್ಞರವಂ ನರಕಂ ವ್ರಜೇತ್ ಇಂತೆಂದುದಾಗಿ, ತದ್ದಿನ ಸೇವ್ಯ ರೌರವನರಕ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಶುದ್ಧಶೈವದ ನಿರ್ಧರವನರಿವ ಬುದ್ಧಿಯನನುಕರಿ[ಸೆ] ಆ ಶುದ್ಧಶೈವದ ಪರಿಯೆಂತೆಂದಡೆ: ಏಕಮೇವನದ್ವಿತೀಯಂ ಬ್ರಹ್ಮವೆಂಬು[ದ] ಶ್ರುತಿಪ್ರಮಾಣಿಂದರಿದು ಅಂತಪ್ಪ ಶಿವನಲ್ಲಿ ಏಕನಿಷೆ*ಯ ಪಡೆದು ಆ ಶಿವಂಗೆ ಅರ್ಚನೆ ಪೂಜನೆಯಂ ಮಾಡುವಲ್ಲಿ ದುರ್ಗಿ, ವಿನಾಯಕ, ಭೈರವ ಮೊದಲಾದ ಪರಿವಾರ ದೇವತೆಗಳನ್ನು ಏಕಪೀಠದಲ್ಲಿ ಪೂಜೆಯಂ ಮಾಡುವಾತನು ಅವಿವೇಕದ ಅಪರಾಧಿಯಲ್ಲದೆ ವಿವೇಕವನುಳ್ಳ ಶೈವಸಂಪನ್ನನಲ್ಲ. ಅದಕ್ಕೆ ದೃಷ್ಟಾಂತವೆಂತೆಂದಡೆ: ಅರಸು ಕುಳ್ಳಿರುವ ಸಿಂಹಾಸನದಲ್ಲಿ ಪ್ರಧಾನ ಮೊದಲಾದ ಪರಿವಾರ ಕುಳ್ಳಿರಬಹುದೆ ? ಬಾರದಾಗಿ, ಪರಿವಾರ ದೇವತೆಗಳಿಗೆ ಏಕ ಪೀಠ ಸಲ್ಲದು. ಮುನ್ನ ಅರುವತ್ತುಮೂವರು ಮೊದಲಾದ ಅಸಂಖ್ಯಾತರೆನಿಪ ಭಕ್ತರುಗಳು ಶುದ್ಧಶೈವ ವೀರಶೈವದಲ್ಲಿ ನಿಷೆ*ಯ ಆಚರಿಸುವಲ್ಲಿ ಏಕಲಿಂಗದಲ್ಲಿ ನಿಷೆ*, ಶಿವಭಕ್ತರಲ್ಲಿ ಪ್ರೇಮ, ಶಿವಲಾಂಛನವ ಧರಿಸಿಪ್ಪ ಜಂಗಮವನು ಶಿವನೆಂದು ಕಂಡು ಅವರಿಗೆ ತೃಪ್ತಿಪಡಿಸಿದವರಾಗಿ ಚತುರ್ವಿಧವನೆಯ್ದಿದರು. ಅದೆಂತೆಂದಡೆ: ವೃಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯ ಚ ಜಂಗಮಃ ಮಮ ತೃಪ್ತಿರುಮಾದೇವಿ ಜಂಗಮಸ್ಯಾನನಾದ್ಭವಃ ಅಸ್ಯಾರ್ಥ, ಮರಕ್ಕೆ ಬೇರು ಬಾಯಿ ಹೇಗೆಯಾಯಿತ್ತು ಹಾಂಗೆ ಲಿಂಗಕ್ಕೆ ಜಂಗಮವೆ ಬಾಯಿಯೆಂದು ಆವನಾನೊರ್ವನು ಜಂಗಮಕ್ಕೆ ತೃಪ್ತಿಪಡಿಸುತ್ತಂ ಇದ್ದಾನು, ನಾನು ತೃಪ್ತನು ಕಾಣಾ ಉಮಾದೇವಿ ಎಂದು ಶಿವನು ಹೇಳಿದನಾಗಿ ಮತ್ತಂ, ಶಿವಯೋಗಿಮುಖೇನೈವ ಸಾಕ್ಷಾದ್ಭುಂಕ್ತೇ ಸದಾಶಿವಃ ಶಿವಯೋಗಿಶರೀರಾನ್ತೇ ನಿತ್ಯಂ ಸನ್ನಿಹಿತಃ ಶಿವಃ ಆವನೊರ್ವ ಶಿವಯೋಗಿಗೆ ಆವನೊರ್ವ ಭಕ್ತನು ತೃಪ್ತಿ ಪಡಿಸುತ್ತಂ ಇದ್ದಾನು, ಅದೇ ಶಿವನ ತೃಪ್ತಿಯೆಂದು ಅರಿವುದು. ಅದು ಹೇಗೆಂದಡೆ: ಶಿವಯೋಗಿಯ ಹೃದಯಕಮಲಮಧ್ಯದಲ್ಲಿ ಶಿವನು ಆವಾಗಲೂ ತೊಲಗದಿಹನಾಗಿ, ಮತ್ತಾ ಶಿವಂಗೆ ಲಿಂಗ ಒಂದು ಮುಖ, ಜಂಗಮ ಒಂದು ಮುಖ. ಅದಕ್ಕೆ ಈಶ್ವರ ವಾಕ್ಯ: ಯಥಾ ಭೇರುಂಡಪಕ್ಷೀ ತು ದ್ವಿಮುಖಾತ್ ಪರಿಭುಂಜತೇ ತಥಾ ಭುಂಜಾಮಿ ದ್ವಿಮುಖಾಲ್ಲಿಂಗಜಂಗಮಯೋರಹಂ ಅಸ್ಯಾರ್ಥ, ಆವುದಾನೊಂದು ಭೇರುಂಡ ಪಕ್ಷಿ ಎರಡು ಮುಖದಲ್ಲಿ ಹಾರವ ಕೊಳಲು ಒಂದೇ ದೇಹಕ್ಕೆ ತೃಪ್ತಿಯಹ ಹಾಂಗೆ ಎನಗುಳ್ಳವು ಲಿಂಗ ಜಂಗಮವೆರಡು ಮುಖ. ಆ ಎರಡು ಮುಖಕ್ಕೆ ಆವನಾನೊರ್ವನು ನೈವೇದ್ಯವ ನೀಡುತ್ತಂ ಇದ್ದಾನು, ಅದು ಎನ್ನ ತೃಪ್ತಿಯೆಂದು ಶಿವನು ದೇವಿಯರಿಗೆ ಹೇಳಿದನಾಗಿ ಇಂತಪ್ಪ ಲಿಂಗಜಂಗಮವೆರಡು ಮುಖವೆ ಶಿವನ ತೃಪ್ತಿಗೆ ಕಾರಣವೆಂದರಿದು ಆಚರಿಸಿದರಾಗಿ ವೀರಶೈವಸಂಪನ್ನರುಮಪ್ಪ ಅರುವತ್ತುಮೂವರು ಅಸಂಖ್ಯಾತರು ಶಿವನಲ್ಲಿ ಚತುರ್ವಿಧ ಪದವಿಯನೆಯ್ದಿ ಸುಖಿಯಾದರು. ಇದೀಗ ಶುದ್ಧಶೈವದ ಮಾರ್ಗ. ಈ ಶೈವಸಂಪತ್ತನರಿದಾಚರಿಸಿದವರೆ ಮುಕ್ತರು ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಶಿಷ್ಟೋದನವ ಲಿಂಗಕ್ಕಿತ್ತು ಪ್ರಸಾದಭೋಗ ಮಾಡುವುದಯ್ಯಾ. ರಸಾಯನವ ಲಿಂಗಕ್ಕಿತ್ತು, ಪಾನೀಯ ಮಾಡಲಿತ್ತು, ಪ್ರಸಾದಪಾನೀಯ ಮಾಡುವುದಯ್ಯಾ, ಸುಗಂಧವ ಲಿಂಗಕ್ಕೆ ಘ್ರಾಣಿಸಲಿತ್ತು, ಪ್ರಸಾದಗಂಧವ ಘ್ರಾಣಿಸುವುದಯ್ಯಾ. ಇದಕ್ಕೆ ಶ್ರುತಿ: ರುದ್ರೇಣಾತ್ತಮಶ್ನಂತಿ ರುದ್ರೇಣ ಪೀತಂ ಪಿಬಂತಿ ರುದ್ರೇಣ ಘ್ರಾತಂ ಜಿಘ್ರಂತಿ ಇಂತೆಂದುದಾಗಿ, ಪಂಚೇಂದ್ರಿಯಮುಖದಲ್ಲಿ ಲಿಂಗಪ್ರಸಾದವಲ್ಲದೆ ಭೋಗಿಸ, ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
--------------
ಆದಯ್ಯ
ಶಿವಲಿಂಗಾರ್ಚನಾಕ್ರಿಯಾಶಕ್ತಿಗೆ ಅಭ್ಯಾಸದ ಯೋಗದ ರತಿ ಸರಿಯಲ್ಲ ನೋಡ, ಯೋಗದ ಬಲದಿಂದ ಸೇವಿಸುವ ಶ್ಲೇಷಾಮೃತವು ಶಿವಪ್ರಸಾದಾಮೃತಕೆ ಸರಿಯಲ್ಲ ನೋಡ, ಪ್ರಾಣನ ಬ್ರಹ್ಮರಂಧ್ರದಲ್ಲಿ ಬಿಡುವ ಯೋಗವು ಪ್ರಾಣಲಿಂಗೈಕ್ಯ ಸಂಬಂಧಸಂಯೋಗಕ್ಕೆ ಸರಿಯಲ್ಲ ನೋಡ. ಶಿವಾನುಭಾವಕ್ಕೆ ಯೋಗಕ್ಕೆ ಇನಖದ್ಯೋತದಂತರವು ನೋಡಯ್ಯ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಶ್ರೋತ್ರ, ತ್ವಕ್ಕು, ಚಕ್ಷು, ಜಿಹ್ವೆ, ಘ್ರಾಣವೆಂಬ ಪಂಚೇಂದ್ರಿಯಂಗಳಲ್ಲಿ ಪ್ರಸಾದಲಿಂಗ ಜಂಗಮಲಿಂಗ ಶಿವಲಿಂಗ ಗುರುಲಿಂಗ ಆಚಾರಲಿಂಗವೆಂಬ ಪಂಚಲಿಂಗಗಳು ತಮ್ಮ ತಮ್ಮ ಮುಖದೊಳು ನಿಂದು, ಸಕಲಭೋಗಂಗಳು ಲಿಂಗಭೋಗಂಗಳಾಗಿ ಸರ್ವೇಂದ್ರಿಯಂಗಳು ಲಿಂಗವಶವಾಗಿಪ್ಪರಯ್ಯಾ ¸õ್ಞರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು.
--------------
ಆದಯ್ಯ
ಶಿವಲಾಂಛನವ ಧರಿಸಿ, ಚರಲಿಂಗಮೂರ್ತಿಯಾದ ಬಳಿಕ ತ್ರಿಲೋಕಕ್ಕೆ ಕರ್ತುಭಾವದಿಂದಿರಬೇಕಲ್ಲದೆ ಅಶನದ ಅಪ್ಯಾಯನ ವಿಷಯಂಗಳಿಗೆ ಕಂಡಕಂಡವನರಫ ಕಂಡ ಕಂಡಲ್ಲಿ ಕರಕರದು ಕರಕರಿಸಿ ಕಾಂಚಾಣಕ್ಕೆ ಕೈನೀಡುವ ಕಷ್ಟವ ನೋಡಾ. ಉಪಾಧಿಯಿಂದೊಡಲ ಹೊರೆವ ಪರಿಯ ನೋಡಯ್ಯಾ. ಇಂತಿವೆಲ್ಲ ಭಂಗವೆಂದರಿತು ಅಭಂಗನಾಗಿರಬೇಕಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಶಿವತತ್ವ ಶಿವಜ್ಞಾನ ಶಿವೈಕ್ಯವಪ್ಪ ತ್ರಿವಿಧವನರಿಯಬಲ್ಲಡೆ ಅದು ವರ್ಮ, ಅದು ಸಂಬಂಧ. ಶಿವಾದಿ ಪೃಥ್ವಿಯಂತವಪ್ಪ ತತ್ವಾಧ್ವವನರಿತು ತತ್ವಜ್ಞಾನಿಯಾಗಬಲ್ಲಡೆ ಅದು ವರ್ಮ, ಅದು ಸಂಬಂಧ. ಬ್ರಹ್ಮಾನುಸಂಧಾನದಿಂದವಿನಾಭಾವವನೆಯ್ದಿ ಶಿವೈಕ್ಯವಾಗಬಲ್ಲಡೆ ¸õ್ಞರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಅದು ವರ್ಮ, ಅದು ಸಂಬಂಧ.
--------------
ಆದಯ್ಯ
ಶುದ್ಧ ಕೇವಲಜ್ಞಾನಸ್ವರೂಪನಾದಾತ ನೀನಯ್ಯಾ. ಅಖಿಲ ಸ್ಥಾವರಜಂಗಮಂಗಳಲ್ಲಿ ಬೆರಸಿಯೂ ಬೆರಸದಿರ್ಪಾತ ನೀನಯ್ಯಾ. ಸಕಲ ನಿಃಕಲನಾದಾತ ನೀನಯ್ಯಾ. ಕೇವಲ ನಿಃಕಲದಂತೆ ನಿರಂಗನಾದಾತ ನೀನಯ್ಯಾ. ಭವದಾರಣ್ಯವ ತಂದಾತ ನೀನಯ್ಯಾ. ಭವರೋಗಕ್ಕೆ ಭೈಷಜ್ಯನಾದಾತ ನೀನಯ್ಯಾ. ಸಕಲ ಜಗಜ್ಜನದಾಧಾರಾಧೇಯ ಕರ್ತೃವಾದಾತ ನೀನಯ್ಯಾ. ಇದಕ್ಕೆ ಶ್ರುತಿ: ತ್ವಮಗ್ನೇದ್ಯುಭಿಸ್ತ್ವಮಾಶುಶುಕ್ಷಣಿಸ್ತ್ವಮದ್ಭ್ಯಸ್ತ್ವಮಶ್ಮನಸ್ಪರಿ ತ್ವಂ ವನೇಭ್ಯಸ್ತ್ವಮೋಷಧೀಭ್ಯಸ್ತ್ವಂ ನೃಣಾಂ ನೃಪತೇಜಾಯಸೇ ಶುಚಿಃ ಇಂತೆಂದುದಾಗಿ, ಪರಮನಿರ್ಮಲನಾದಾತ ನೀನೇ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಶ್ರೀಗುರುವಿನ ಕರುಣದಿಂದ ಪವಿತ್ರಗಾತ್ರನಾದೆ. ಅದೆಂತೆಂದಡೆ: ಪೂರ್ವಕರ್ಮದ ದುರ್ಲಿಖಿತವನೊರಸಿ ವಿಭೂತಿಯ ಪಟ್ಟವ ಕಟ್ಟಿದನಯ್ಯಾ ಶ್ರೀಗುರು. ಎನ್ನಂಗದಲ್ಲಿ ಶಿವಲಿಂಗವ ಹಿಂಗದಂತಿರಿಸಿ ಭೂತಕಾಯವ ಬಿಡಿಸಿ ಲಿಂಗತನುವ ಮಾಡಿದನಯ್ಯಾ ಶ್ರೀಗುರು. ಕರ್ಣದಲ್ಲಿ ಪ್ರಣವಪಂಚಾಕ್ಷರವನೊರೆದು, ಜಪಿಸ ಕಲಿಸಿ, ಮಂತ್ರರೂಪನ ಮಾಡಿದನಯ್ಯಾ ಶ್ರೀಗುರು. ಸಂಸಾರದ ಅಜ್ಞಾನಜಡವ ಕೆಡಿಸಿ ಶಿವಜ್ಞಾನಾನುಗ್ರಹವ ಮಾಡಿದ, ಆ ಶಿವಜ್ಞಾನವೆನ್ನ ಸರ್ವಕರ್ಮವನುರುಹಿತ್ತು. ಅದೆಂತೆಂದೊಡೆ: ಜ್ಞಾನಾಗ್ನಿಸ್ಸರ್ವಕರ್ಮಾಣಿ ಭಸ್ಮಸಾತ್ಕುರುತೇ[s]ರ್ಜುನ ಎಂದುದಾಗಿ, ಶ್ರೀಗುರುವಿನ ಪದಕಮಲದಲ್ಲಿ ಆನು ಭೃಂಗನಾಗಿದ್ದೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಶರೀರಧಾರಕನಾಗಿ ಇಂದ್ರಿಯಂಗಳಿಚ್ಛೆಯಲ್ಲಿ ಸುಳಿವನಲ್ಲ. ಲಿಂಗದಿಚ್ಛೆ ಎಂದಿಪ್ಪನಾಗಿ ಸಂಕಲ್ಪವಿಕಲ್ಪವ ಹೊದ್ದ. ನಿಸ್ಸಂದೇಹಿಯಾಗಿ ಸಕಲದೊಡಗೂಡಿರ್ದು ಮಾಯಾಪಾಶರಹಿತ. ಕರ್ಮದ ಕಟ್ಟ ಹರಿದಲ್ಲಿ ನಿರ್ಮುಕ್ತ. ಅಚ್ಚ ಸುಖಿ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
--------------
ಆದಯ್ಯ