ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತಿಯಾಚಾರದ ಪಥವಿಡಿದು ನಲಿನಲಿದುಲಿದಡೂ ಲಿಂಗಸಾಹಿತ್ಯವಿಲ್ಲ. ಮನವೆ ಲಿಂಗದಲ್ಲಿ ನೆಲೆಗೊಳಿಸುವೆನೆಂದು ಧ್ಯಾನಮೌನದಲ್ಲಿ ನಿಂತಡೂ ಲಿಂಗಸಾಹಿತ್ಯವಿಲ್ಲ. ಸರ್ವಪ್ರಪಂಚುಗಳು ವಾಯುವಿಂದ ತೋರುತ್ತಿರಲು ಆ ಪ್ರಪಂಚನಳಿದು ಲಿಂಗವನೊಡೆವೆರಸುವೆನೆಂದು ಶ್ವಾಸ ನಿಃಶ್ವಾಸಂಗಳ ಪಿಡಿದು ನಿಲಿಸಿದರೂ ಲಿಂಗಸಾಹಿತ್ಯವಿಲ್ಲ. ಸದ್ಭಕ್ತಿವೆತ್ತು ಭಾವಪ್ರಸಂಗದಿಂ ಕಂಗಳಂ ಕಳೆದು ಜಿಹ್ವೆಯಂ ಕೊಯಿದು ಶಿರವನರಿದು, ಹಸ್ತವನುತ್ತರಿಸಿತ್ತಡೂ ಲಿಂಗಸಾಹಿತ್ಯವಿಲ್ಲ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂಬ ಅಷ್ಟಾಂಗಯೋಗ ಘಟ್ಟಿಗೊಂಡು, ಪ್ರಾಣ ಮನ ಪವನ ಹುರಿಗೂಡಿ, ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯವೆಂಬ ಷಡಾಧಾರದ ಬಳಿವಿಡಿದು, ನೆತ್ತಿಯಿಂದುತ್ತರಕ್ಕೆ ಉಚ್ಚಳಿಸಿ ಹಾಯಿದು, ನಡುನೆತ್ತಿ ತೂತಾದಡೂ ಲಿಂಗಸಾಹಿತ್ಯವಿಲ್ಲ. ಸತ್ಯ, ಸಮತೆ, ಸಮಾಧಾನ, ಸದ್ಭಾವ, ಸವಿರಕ್ತಿಯಿಂದತ್ಯಾನಂದ ತೋರುತ್ತಿರಲು ಅದು ನೆಲೆಗೊಂಡು ನಿಲ್ಲದಾಗಿ ಹೇಳದೆ ಬಂದು ಕೇಳದೆ ಹೋಯಿತ್ತು. ಸೌರಾಷ್ಟ್ರ ಸೋಮೇಶ್ವರನ ನಿಜವನರಿಯದೆ ಅನುಭವವ ಮಾಡಿ ಫಲವೇನಯ್ಯಾ ?
--------------
ಆದಯ್ಯ
ಭಕ್ತನೊಂದು ಕುಲ, ಭವಿಯೊಂದು ಕುಲವೆಂದೆಂಬರು. ಭಕ್ತಂಗೆ ಕುಲಛಲಂಗಳುಂಟೆ ? ಭಕ್ತಂಗೆ ಯಾಚಕತ್ವವುಂಟೆ ? ಭಕ್ತಂಗೆ ಆಶಾಪಾಶಂಗಳುಂಟೆ ? ಭಕ್ತಂಗೆ ಶೋಕ ಮೋಹ ಭಯ ಲಜ್ಜೆ ಸೇವೆ ರೋಷ ಹರುಷ ಆದ್ಥಿವ್ಯಾದ್ಥಿ ಆಶೆ ಆಮಿಷ ತಾಮಸಂಗಳುಂಟೆ ? ಇಲ್ಲವಾಗಿ, ಇದಕ್ಕೆ ಶ್ರುತಿ: ಯಾಚಕೋ ಲೋಭರಹಿತಃ ಆಶಾಪಾಶಾದಿವರ್ಜಿತಃ ಶೋಕಮೋಹಭಯತ್ಯಾಗೀ ಮದ್ಭಕ್ತಶ್ಚ ಪ್ರಕೀರ್ತಿತಃ ಸೇವಕೋ ರೋಷಹµõ್ರ್ಞ ಚ ಆಶಾಯಾಮಿಷತಾಮ¸õ್ಞ ಆದ್ಥಿವ್ಯಾದ್ಥಿ ಗತೋ ದೂರಂ ಮದ್ಭಕ್ತಶ್ಚ ಪ್ರಕೀರ್ತಿತಃ ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರನ ಸಹಜಭಕ್ತಿ ಅಪೂರ್ವವಯ್ಯಾ.
--------------
ಆದಯ್ಯ
ಭ್ರಮರ ಸೋಂಕಿದ ಕೀಟ ಭ್ರಮರನಾಗದೆ, ಮರಳಿ ಕೀಟನಪ್ಪುದೆ ? `ಭ್ರಮದ್‍ಭ್ರಮರಚಿಂತಾಯಾಂ ಕೀಟೋಡಿ ಪಿ ಭ್ರಮರಾಯತೇ ಎಂದುದಾಗಿ. ಅಗ್ನಿ ಸೋಂಕಿದ ಕಾಷ್ಠ ಅಗ್ನಿಯಾಗದೆ, ಮರಳಿ ಕಾಷ್ಠವಪ್ಪುದೆ ? ಭುವನ ಸೋಂಕಿದ ಕರಕ ಭುವನವಾಗದೆ, ಮರಳಿ ಕರಕವಪ್ಪುದೆ ? ಸೌರಾಷ್ಟ್ರ ಸೋಮೇಶ್ವರಲಿಂಗ ಸೋಂಕಿದ ಶರಣರು ಲಿಂಗವಾಗದೆ ಮರಳಿ ಮನುಜರಪ್ಪರೆ ? `ಯಥಾಲಿಂಗಂ ತಥಾ ಶರಣಃಱ ಎಂದುದಾಗಿ.
--------------
ಆದಯ್ಯ
ಭಾವ ದುರ್ಭಾವ ಅಳಿದು, ಸ್ವಭಾವಿಯಾದ ಸದ್ಭಾವಿಗೆ ಅಂಗದಲ್ಲಿ ಆಯತ, ಪ್ರಾಣದಲ್ಲಿ ಸ್ವಾಯತ. ಉಭಯವೈಕ್ಯವಾದಲ್ಲಿ ನಿರ್ಭಾವಿ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
--------------
ಆದಯ್ಯ
ಭವಿಯೊಂದು ಕುಲ ಭಕ್ತನೊಂದು ಕುಲವೆಂಬ ಭಂಗದ ಮಾತ ಕೇಳಲಾಗದು. ಅದೇನು ಕಾರಣವೆಂದಡೆ, ಭವಿಭಕ್ತಂಗೆ ಸಂಬಂಧ ಉಂಟಾದ ಕಾರಣ. ಇದಕ್ಕೆ ಶ್ರುತಿ: ಭಕ್ತಾನಾಂ ಭವಿಸಂಪರ್ಕೋ ಭವೀನಾಂ ಭಕ್ತಸಂಶ್ರಯಃ ಭವಿಭಕ್ತಾವುಭೌದೇವೀ ಮದ್ಭಕ್ತೌ ಚ ಪ್ರಕೀರ್ತಿತೌ ಇಂತೆಂದುದಾಗಿ, ಶಿವಪ್ರಸಾದ ಭವಿಗೆ, ಭವಿಯ ಪ್ರಸಾದ ಭಕ್ತಂಗೆ. ಇದು ಕಾರಣ ಸೌರಾಷ್ಟ್ರ ಸೋಮೇಶ್ವರನಲ್ಲಿ ಭಕ್ತರಾದಡೆ ಭವಿಯಾಗಿರಬೇಕಯ್ಯಾ.
--------------
ಆದಯ್ಯ
ಭಾನುಮಂಡಲವಂಜುವದೆ ಮಂಜು ಮುಸುಕಿದಡೆ ? ಕಾಲಾಗ್ನಿ ಅರಗಿನ ಬಾಣ [ತಾ]ಗೆ ಪ್ರಳಯವಪ್ಪುದೆ ? ರಣರಂಗಧೀರ ತೃಣಪುರುಷನೊಡನೆ ಹೆಣಗುವನೆ ಸಮರಕ್ಕೆ ? ಶಿವಜ್ಞಾನವಿಹೀನರ ಹೀನೋಕ್ತಿಯೊಡನೆ ಸೌರಾಷ್ಟ್ರ ಸೋಮೇಶ್ವರನ ಶರಣರು ಪ್ರತಿಪಾದ್ಯರುಂಟೆ ?
--------------
ಆದಯ್ಯ
ಭಾವದ ಮುಂದೆ ತೋರುವ ಜ್ಞಾನದ ಕುರುಹಿದೇನೋ ! ಒಳಗೆನ್ನದೆ ಹೊರಗೆನ್ನದೆ ತನ್ನ ತಾನಾಗಿ ನಿಂದಿತ್ತು. ಅದನರಿಯಲಿಲ್ಲಾಗಿ ಮರೆಯಲಿಲ್ಲ, ಮರೆಯಲಿಲ್ಲಾಗಿ ಅಗಲಲಿಲ್ಲ, ಅಗಲಲಿಲ್ಲಾಗಿ ಭಾವಕ್ಕೆ ತೆರಹಿಲ್ಲ, ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣಂಗೆ.
--------------
ಆದಯ್ಯ
ಭಾವಭೇದವಿಲ್ಲದೆ ಬೆರೆಸಿ, ಮರಳಿ ಹುಟ್ಟಿದ ಭಾವ ನಿರ್ಭಾವವಾಯಿತ್ತಯ್ಯಾ. ಮನದ ಮುಂದಣ ಘನತೇಜ ಸದ್ಭಾವವ ನುಂಗಿ ನಿರ್ಭಾವ ನಿಃಪತ್ತಿಯಾಗಿ ಸೌರಾಷ್ಟ್ರ ಸೋಮೇಶ್ವರಾ, ಲಿಂಗ ಎಂಬ ನಾಮ ನಿರ್ನಾಮವಾಯಿತ್ತು.
--------------
ಆದಯ್ಯ
ಭದ್ದನಲ್ಲ ಮುಕ್ತನಲ್ಲ, ಎರಡಿಲ್ಲವಾಗಿ ಸಹಜಭರಿತನಯ್ಯಾ. ಮನ ಭಾವ ಕರಣಂಗಳು ಲಿಂಗವ ಸೋಂಕಿ, ನೆನಹುಗೆಟ್ಟು, ಸಂದು ನಷ್ಟವಾದ ಅಚಲಲಿಂಗೈಕ್ಯಂಗೆ ಮತ್ತಾವಂಗವೂ ಇಲ್ಲ. ನಿರಂಜನ ನಿಃಪ್ರಾಣ ಶಿಖಿಕರ್ಪುರಯೋಗದಂತೆ ಸೌರಾಷ್ಟ್ರ ಸೋಮೇಶ್ವರನಲ್ಲಿ ಲಿಂಗೈಕ್ಯವು.
--------------
ಆದಯ್ಯ
ಭಕ್ತಿಯೆಂಬ ಸತಿಯಲ್ಲಿ ಜ್ಞಾನವೆಂಬ ಸುತ ಹುಟ್ಟಲು ಮಾಯೆಯೆಂಬ ವಾಯು ಮರಣವಾಗಲು ಶರಣ ಅರಿಕೆಗೆಟ್ಟ ನೋಡಾ. ಬೋಧಾಪ್ರಕಾಶಸ್ವರೂಪ ತನ್ನಲ್ಲೇ ತಾನು ತದ್ಗತ. ಸ್ಫಟಿಕದ ಘಟದಂತೆ ಒಳಹೊರಗೆಂಬುದಿಲ್ಲ. ಉಲುಹಡಗಿ ಶಬ್ದಮುಗ್ಧವಾದ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
--------------
ಆದಯ್ಯ