ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಹಿಯೆಂಬ ಕುಟ್ಟಿಮದ ದಿಗ್ಭಿತ್ತಿಯ ಮೇಲೆ ಮುಚ್ಚಿದ ಅಂಡಕಟಾಹ ? ಅಜನ ತತ್ತಿಯೊಳಗಣ ಪಶುಜೀವರೆಲ್ಲಾ ನೆರೆದು ಕರ್ಮವೆಂಬುದೊಂದೆ ಬಟ್ಟಲೊಳಗೆ ಮೋಹ ಮದ ರಾಗ ವಿಷಾದ ತಾಪ ಶಾಪ ವೈಚಿಂತ್ಯವೆಂಬ ಏಳು ಮಲಂಗಳನೊಂದಾಗಿ ಕಲಸಿ ತಿನ್ನುತ್ತ ಮೂರು ಮಲಂಗಳ ಬೇರೆ ಬೇರೆ ಅರಿಯುತ್ತ ವಿಷಯವೆಂಬ ರಸವ ಕುಡಿದು ಅಜ್ಞಾನವೆಂಬುದೊಂದೆ ಹಾಸಿಕೆಯಲ್ಲಿ ಮಲಗಿ ಮೂರ್ಛೆ ತಿಳಿಯದಿಪ್ಪುದ ಕಂಡು ನಾಚಿತ್ತಯ್ಯಾ ಎನ್ನ ಮನ. ನಿಮ್ಮ ಅಂತರಂಗವೆಂಬ ಚಿದಂಬರದಲ್ಲಿ ನಿಃಶೂನ್ಯವಾಗಿರಿಸೆನ್ನ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಮಾಯೆಯೆಂದೇನೊ ಮದವಳಿದಂಗೆ ? ಕಾಯವೆಂದೇನೊ ಕಳವಳವಳಿದಂಗೆ ? ಜೀವವೆಂದೇನೊ ಪ್ರಕೃತಿಯಳಿದಂಗೆ ? ಭಾವವೆಂದೇನೊ ಭ್ರಮೆಯಳಿದಂಗೆ ? ಅರಿವೆಂದೇನೋ ಮರಹಳಿದಂಗೆ ? ತಾನೆಂದೇನೊ ಇದಿರಳಿದಂಗೆ ? ಸೌರಾಷ್ಟ್ರ ಸೋಮೇಶ್ವರಾ, ತಾನು ತಾನಾದ ಶರಣಂಗೆ ನೀನೆಂದೇನೊ.
--------------
ಆದಯ್ಯ
ಮಾಯೆಯಿಂದಾದ ಸಂಸಾರದಡವಿಯೊಳಗೆ ತಿರಿಗಿ ತಿರಿಗಿ ಘಾಸಿಯಾಗಿ, ಈಷಣತ್ರಯವೆಂಬ ಮೋಹಿನಿಯ ಕೈವಶವಾಗಿ, ಅರಿಗಳೊಡನೆ ಪುದುವಾಳಾಗಿ, ಆಶೆಯಾಮಿಷ ತಾಮಸಂಗಳಿಂದ ನೊಂದು, ತಾಪತ್ರಯಗಳಿಂದ ಬೆಂದು, ಸಂಸಾರ ಸರ್ವಮುಖವಾಗಿ ನುಂಗಿ ಉಗುಳುತ್ತಿರಲೆಂತಕ್ಕೆ ನಿಮ್ಮ ನೆನಹೆಂಬ ಕಿಚ್ಚು ಭವಾರಣ್ಯವ ಸುಡಲು, ಕರ್ಮದ ಕೈಬೆಂದು ಮಾಯಾಪಾಶವುರಿದು, ಮಲ ನಿರ್ಮಲವಾಗಿ, ಬಿಂದು ಭುವನವ ಹೊದ್ದದೆ, ತೀರೋಧಾನ ನಿರೋಧಾನವೆಯ್ದಿ, ನಿಮ್ಮಲ್ಲಿ ಅಚ್ಚೊತ್ತಿದಂತಿರಿಸಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಮುತ್ತು ನೀರೊಳಗೆ ಹುಟ್ಟಿ ಮರಳಿ ನೀರಾಗದಂತೆ, ತಿಳಿಯ ಕಾಸಿದ ತುಪ್ಪ ಕ್ಷೀರವಾಗದಂತೆ, ತೊಟ್ಟುಬಿಟ್ಟ ಹಣ್ಣು ಹೂಮಿಡಿಯಾಗದಂತೆ, ಸಂಸಾರದಲ್ಲಿ ಹುಟ್ಟಿ ಅದ ಹೊದ್ದದೆ, ಸ್ವಯಂಪ್ರಕಾಶ ಲಿಂಗದ ಬೆಳಗಿನಲ್ಲಿ ಬೆಳೆದು, ತಲ್ಲೀಯವಾಗಿರ್ದರಯ್ಯಾ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು.
--------------
ಆದಯ್ಯ
ಮನವೆ ಮಹ, ತನುವೆ ಪೃಥ್ವಿ, ಇನಿತಾವ ಎಡೆಯಲ್ಲಿ ಆತ್ಮನಿಹುದೋ ? ಸಾಗರದ ಹಾಗಲ್ಲ ಮೇಘದ ಪರ್ಯಾಯವಲ್ಲ ನೀನರಿಯದ ತೆರನಲ್ಲ ಆದ ಹಿರಿದುಮಾಡಿ ಒರೆಯಲೇಕಯ್ಯಾ ? ನಿಃಕಳಂಕಶಾಂತಮಲ್ಲಿಕಾರ್ಜುನ ದೇವರಿಲ್ಲವೆಂಬವಂಗೆ ಆತ್ಮನಿಂದೇನು ? ಸೌರಾಷ್ಟ್ರ ಸೋಮೇಶ್ವರಾ, ಮಾತಿಂಗೆ ಮರುಳಾದವರುಂಟೆ ?
--------------
ಆದಯ್ಯ
ಮಧ್ಯನಿರಾಳದಲ್ಲಿ ನಿಂದು, ಊಧ್ರ್ವ ನಿರಾಳವನೆಯ್ದಿದಲ್ಲಿ, ಕಾಣಲಾಯಿತ್ತು ಒಂದು ಪುತ್ಥಳಿ. ಮೂರು ಬೆಳಗಿನ ಮಧ್ಯದಲ್ಲಿ ಬೇರೊಂದು ಬೆಳಗು ಮೀರಿ ತೋರುತ್ತಿದೆ ಈ ಪುತ್ಥಳಿ. ವಜ್ರದ ಮೈದೊಡಗೆಯ ತೊಟ್ಟು ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಅವಿರಳವಾಯಿತ್ತು.
--------------
ಆದಯ್ಯ
ಮನಮುಕ್ತನಾದ ಶರಣ ತಾನೆ ಲಿಂಗವಾಗಿ ಪ್ರಾಣ ಮುಕ್ತನು ನೋಡಯ್ಯಾ. ಪ್ರಸಾದಸನ್ನಹಿತವಾಗಿ ಕಾಯಮುಕ್ತನು. ಅದೆಂತೆಂದಡೆ: ಸ್ವಲಿಂಗೀ ಪ್ರಾಣಮುಕ್ತಸ್ಯಾತ್ ಮನೋಮುಕ್ತಸ್ತು ಜಂಗಮಃ ಪ್ರಸಾದೀ ಕಾಯಮುಕ್ತಶ್ಚ ತ್ರಿವಿಧಸ್ತತ್ವನಿಶ್ಚಯಃ ಎಂದುದಾಗಿ, ಇಂತೀ ತ್ರಿವಿಧಮುಕ್ತನಾಗಿ ನಿರ್ಮಲ ನಿರ್ಮಾಯ ಸತ್ಯಜ್ಞಾನಾನಂದಭರಿತ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
--------------
ಆದಯ್ಯ
ಮರವೆ ಅರಿವಿನ ಮರೆಗೊಂಡು ತಲೆದೋರಿ ಅರಿವೆಂದೆನಿಸಿತ್ತು. ಅರಿವು ಮರವೆಯ ಮರೆಗೊಂಡು ತಲೆದೋ? ಮರಹೆಂದೆನಿಸಿತ್ತು. ಅರಿವು ಮರವೆಗಳಿಂದರಿತರಿವು ನಿಜವಪ್ಪುದೆ ? ಅದು ಹುಸಿ, ಅದೆಂತೆಂದಡೆ: `ಪ್ರಾಣನಿಲಾಚೇಷ್ಟಮನೋಗಲಿತ್ವಂ ಮನೋಗಲಿತ್ವಾತ್ಕರಣಂ ಪ್ರಕೃತ್ಯಾ' ಪ್ರಕೃತಿಯಿಂದಂ ಮರೆವರಿವು ತೋರ್ಕುಂ, ಮರೆವರಿವಿನಿಂ ಅನಿತ್ಯಂ. ಇದು ಕಾರಣ, ಅರಿವಿನ ಮರಹಿನ ಸಂಚಲದಿಂದರಿಹಿಸಿಕೊಂಡರಿವು ತಾನರಿವಲ್ಲ. ಅರಿಯದ ಮರೆಯದ ಮರವರಿವಿಂಗೆ ತೆರಹಿಲ್ಲದ ಬಚ್ಚಬರಿಯರಿವೆ ತಾನಾಗಿ. ಅರಿವೆಂಬ ಕುರುಹುಗೆಟ್ಟ ಪರಮಸ್ವಯಂಭು ನೀನೆ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಮರ್ಕಟ ದರ್ಪಣವ ಹಿಡಿದು ನೋಡಿ ತನ್ನ ಪ್ರತಿಬಿಂಬವ ಕಂಡು ದರ್ಪಣವ ಮರ್ಕಟವೆಂದು ಬಗೆದೇಡಿಸಲನುಗೆಯ್ವಂತೆ, ಮನೋವಿಕಾರದಿಂ ಪ್ರಕೃತಿವಿಡಿದು ಚರಿಸುತಿರ್ಪ ಮತ್ರ್ಯದ ಮನುಜರು ಪ್ರಕೃತಿ ನಿಃಕಂಪನವಾದ ಪರಮಾನುಭಾವಿಗಳಪ್ಪ ಪರಮಲಿಂಗೈಕ್ಯರ ಅನುವನರಿಯದೆ, ಬಾಯಿಗೆ ಬಂದಂತೆ ಒಂದೊಂದ ನುಡಿವ ಮಂದಮತಿಗಳಪ್ಪ ಸಂದೇಹಿಗಳು ನಿಮ್ಮನೂ ತಮ್ಮನೂ ತಾವೆತ್ತ ಬಲ್ಲರಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಮಂಡೆ ಬೋಳಾದಡೇನೊ ! ಹುಟ್ಟು ಬೋಳಾಗದನ್ನಕ್ಕರ, ತನು ನಿರ್ವಾಣವಾದಡೇನೊ ! ಆಸೆ ನಿರ್ವಾಣವಾಗದನ್ನಕ್ಕರ, ಇಂದ್ರಿಯ ನಿಗ್ರಹಿಯಾದಡೇನೊ ! ಷಟ್ಸ್ಥಲಾನುಗ್ರಹವಾಗದನ್ನಕ್ಕರ, ಸೌರಾಷ್ಟ್ರ ಸೋಮೇಶ್ವರಲಿಂಗವು ಬರಿದೆ ಒಲಿವನೆ ?
--------------
ಆದಯ್ಯ
ಮುಖದಲ್ಲಿ ರುದ್ರನಿಪ್ಪನಯ್ಯಾ, ನಾಭಿಯಲ್ಲಿ ವಿಷ್ಣುವಿಪ್ಪನಯ್ಯಾ, ಮೂಲದಲ್ಲಿ ಬ್ರಹ್ಮನಿಪ್ಪನಯ್ಯಾ, ಕೇಸರದಲ್ಲಿ ದೇವರ್ಕಳೆಲ್ಲಾ ಇಪ್ಪರಯ್ಯಾ. ಇಂತು ಪುಣ್ಯವೆ ಪುಂಜವಾಗಿ ಸೌರಾಷ್ಟ್ರ ಸೋಮೇಶ್ವರನ ಬರಿಸುವ ರುದ್ರಾಕ್ಷಿಯಂ ಧರಿಸಿರಿಯ್ಯಾ ಭಕ್ತರಪ್ಪವರು.
--------------
ಆದಯ್ಯ
ಮೂರು ಪಂಚಭೂತದಿಂದ ಗಾರಪ್ಪುದು [ಬೇರೆ] ಮಾಡಿ, ಮೂರು ಕರ್ಮ ಮೂರು ತಾಪ ಮೂರು ಮಲಂಗಳ ಹಾರ ಹೊಯ್ದು, ಊರಿದ್ದ ಲಿಂಗವ ತಂದು, ಊರಿ ತೋರಿದನಯ್ಯಾ ಕರಸ್ಥಲದಲ್ಲಿ. ದೀಕ್ಷಾನ್ವಯವನನ್ವಯಿಸಿದ ಶ್ರೀಗುರು ಸೌರಾಷ್ಟ್ರ ಸೋಮೇಶ್ವರಾ, ನೀನೆನ್ನ ಉತ್ತಮಾಂಗದಲ್ಲಿ ನೆಲಸಿದೆಯಾಗಿ ಭವ ಹಿಂಗಿತ್ತು.
--------------
ಆದಯ್ಯ
ಮನದ ನಯನದಿಂದ ಕಂಡು ಕಾಯಭಾವ ಸ್ಪರ್ಶನ ಹಿಂಗಿ, ಲಿಂಗಸ್ಪರ್ಶನದ ಸಕೀಲವನರಿತು, ಪ್ರಾಣಸ್ಪರ್ಶನ ಪ್ರಸಾದಸೇವ್ಯ ನಿರುಪಮತೃಪ್ತಿ ತ್ರಿಪುಟಿಸಂಕಲ್ಪದ ಅರ್ಪಿತವ ಮೀರಿದಚ್ಚಪ್ರಸಾದಗ್ರಾಹಕ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
--------------
ಆದಯ್ಯ
ಮುನ್ನ ಮುನ್ನ ತಾನೆ ಸ್ವಯಂಭು. ಸೌರಾಷ್ಟ್ರವೆಂಬ ಅಂಗಕ್ಕೆ ಪ್ರಾಣವಾಗಿ, ಸೌರಾಷ್ಟ್ರ ಪತಿಯಾದ. ಪಂಚೇಂದ್ರಿಯಂಗಳೆಂಬ ಐಮುಖವಪ್ಪ ಹುಲಿಗೆರೆಯಲ್ಲಿ ನೆಲಸಿ ಹುಲಿಗೆರೆಯರಸನಾದ, ಸತ್ಯಸ್ವರೂಪನು ತಾನೆ ಆದ ಕಾರಣ ಸತ್ಯವೆಂಬ ಸೀಮೆಯಲ್ಲಿರ್ಪನಾಗಿ. ಇದಕ್ಕೆ ಶ್ರುತಿ: ತ್ವಂ ಸತ್ಯರೂಪಸ್ತವ ನಾಸ್ತಿ ಸತ್ಯಂ ತ್ವಂ ನಿತ್ಯರೂಪಸ್ತವ ನಾಸ್ತಿ ನಿತ್ಯಂ ತ್ವಂ ವಿಶ್ವರೂಪಸ್ತವ ನಾಸ್ತಿ ವಿಶ್ವಂ ತ್ವಂ ವಿಶ್ವದೇವಸ್ತವ ನಾಸ್ತಿ ದೇವಃ ಇಂತೆಂದುದಾಗಿ, ಸತ್ಯನೂ ನಿತ್ಯನೂ ಕರ್ತನೂ ದೇವನೂ ತಾನೆಯಾಗಿ ಸೌರಾಷ್ಟ್ರ ಸೋಮೇಶ್ವರನೆಲ್ಲೆಡೆಯಲೆಡೆದೆರಹಿಲ್ಲ.
--------------
ಆದಯ್ಯ
ಮನೋವಾಕ್ಕಾಯದಲ್ಲಿ ಲಿಂಗವ ನಂಬಿ ನಚ್ಚಿ ಒಚ್ಚತವೋಗಿ, ಸಚ್ಚಿದಾನಂದದಿಂ ಪರವಶನಾಗಿ ಲಿಂಗದಂಗದೊಳು ತನ್ನಂಗ, ಲಿಂಗಭಾವದೊಳಗೆ ತನ್ನ ಮನ, ಪರಬಿಂದು ಪರನಾದದಲ್ಲಿ ವಾಕ್ಕು. ಇಂತು ತ್ರಿಕರಣಶುದ್ಧನಾಗಿ ಲಿಂಗವನಪ್ಪಿ ಒಪ್ಪವಳಿದು ಭಾವಭೇದವಿಲ್ಲದಿಪ್ಪಂತಿರಿಸಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಮಲಜಲವ ತೊಳೆಯಲುಂಟಲ್ಲದೆ, ನಿರ್ಮಲಜಲವ ತೊಳೆಯಲುಂಟೆ ? ತವರಾಜ ಹಗಿನಾಗಬಲ್ಲುದೆ ? ಮುತ್ತು ನೀರಾಗಬಲ್ಲುದೆ ? ಸಹಸ್ರನಯನ ಚತುರ್ಮುಖ ಅಧೋಕ್ಷಜ ರುದ್ರ ಪದವನತಿಗಳದು, ಭಾವ ಬ್ರಹ್ಮವಾದ ಆಕಾಯಚರಿತಂಗೆ ಪೂರ್ವಕ್ರಿಯಂಗಳುಂಟೆ ? ತನುಗುಣ ಮನಗುಣವಳಿದ ಲಿಂಗದೇಹಿ ನಿರ್ದೇಹಿ, ಅಪ್ರತಿಮ ನಿತ್ಯಜ್ಯೋತಿಯೊಳಗೆ ನಿಷ್ಪತ್ತಿಯಾದ, ¸õ್ಞರಾಷ್ಟ್ರ ಸೋಮೇಶ್ವರಲಿಂಗದೊಳಿಪ್ಪ ಅಪ್ರತಿಮ ಶರಣ.
--------------
ಆದಯ್ಯ
ಮಾತ ಕಲಿತು ಮಂಡೆಯ ಬೋಳಿಸಿ ವೇಷ ಭಾಷೆಗಳಿಂ ದೇಶ ಕೋಶ ಭವನಂಗಳ ತೊಳಲಿ ಬಳಲಿ ನಿಂದಡೇನಾಯಿತ್ತೊ, ಜಟಾಬಂಧದಿಂ ಗಡ್ಡದ ಹಿರಿಯರಪ್ಪೆ ಭೋ ! ನಾವೆಂದು ಬಿಂದು ಬೀಸರವಾಗದಿರ್ದಡೇನಾಯಿತ್ತೊ, ಹೆಚ್ಚು ಕುಂದು ಬಿಚ್ಚದನ್ನಕ್ಕ. ತಥ್ಯ_ಮಿಥ್ಯ ರಾಗ_ದ್ವೇಷ ಭಯ_ಮೋಹಂಗಳುಳ್ಳನ್ನಕ್ಕ ಸೌರಾಷ್ಟ್ರ ಸೋಮೇಶ್ವರಲಿಂಗ ಎಂತು ಸಾಧ್ಯವಪ್ಪುದಯ್ಯಾ.
--------------
ಆದಯ್ಯ
ಮನ ಸೋಂಕಿದ ಸುಖವನೊಂದು ಶ್ರುತಕ್ಕೆ ತಂದಡೆ ಅದು ಬಹುವಾರ್ತೆಯಾಯಿತ್ತು ನೋಡಾ, ಅಯ್ಯಾ. ತನುವಿನಲ್ಲಿ ಸೋಂಕಿದ ಸುಖವು ತನಗಲ್ಲದೆ ಇದಿರಿನ ದೃಕ್ಕಿಗೆ ದೃಶ್ಯವಪ್ಪುದೆ, ಅಯ್ಯಾ ? ತನ್ನಲ್ಲಿ ತಾನು ತದುಗತವಾದ ಶರಣನ ಇರವು ಉರಿವುಂಡ ಕರ್ಪುರದಂತೆ, ಬಿಸಿಲುಂಡ ಅರಿಸಿನದಂತೆ, ಕಬ್ಬುನ ಉಂಡ ಉದಕದಂತೆ, ಆರಿಗೂ ಭೇದಿಸಬಾರದು ಕೇಳಾ, ಅಯ್ಯಾ ? ಇದಕ್ಕೆ ಶ್ರುತಿ: ``ಅಗಣಿತಮಪ್ರಮೇಯಮತಕ್ರ್ಯ ನಿರುಪಾಧಿಕಂ ಅನಾಮಯನಿರಂಜನ್ಯಂ ಅತ್ಯತಿಷ*ದ್ದಶಾಂಗುಲಂ' ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರಾ, ಶರಣರ ಅಂತಿತೆನಬಾರದಯ್ಯಾ.
--------------
ಆದಯ್ಯ