ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹುಸಿಯಿಂದ ಶಿವನ ಮುಕುಟವ ಕಂಡೆನೆಂದು ಹುಸಿಯಂ ನುಡಿದು ಬ್ರಹ್ಮ ಭ್ರಷ್ಟನಾದ. ಮುಳ್ಳಿನಲ್ಲಿ ತೊನಚಿಯನಿದು ಜೀವಹಿಂಸೆಯ ಮಾಡಿದ ಮಾಂಡವ್ಯ ಶೂಲಕ್ಕೆ ಗುರಿಯಾದ. ಸೋಮಸುತನ ಮಗ ಶೂದ್ರಕವೀರಂಗೆ ಕಳವು ಹೊದ್ದಿ, ಶಿರಹರಿದು ಕಾಂಚಿಯಾಲದಲ್ಲಿ ಮೆರಯಿತ್ತು. ಅಕ್ಷಿಪಾದನಸ್ತ್ರೀ ಅಹಲ್ಯಾದೇವಿಗೆ ಅಳುಪಿದ ಶಕ್ರನ ಅಂಗ ಅನಂಗಮುದ್ರೆಯಾಯಿತ್ತು. ಕಾಂಕ್ಷೆ ಮಾಡಿದ ನಾಗಾರ್ಜುನ ಚಕ್ರದಲ್ಲಿ ಹತವಾದ. ಇಂತಿವರನಂತರು ಕೆಟ್ಟರು ನೋಡಯ್ಯಾ. ಸೌರಾಷ್ಟ್ರ ಸೋಮೇಶ್ವರನ ಶರಣರು ದೋಷವಿರಹಿತರಾಗಿ ಸ್ವರ್ಗ ಅಪವರ್ಗವ ಮೀರಿ ಲಿಂಗದಲ್ಲಿ ಐಕ್ಯರಾದರು.
--------------
ಆದಯ್ಯ
ಹದಿನಾರಂಗುಲದುದ್ದ ಸರ್ಪನ ವಿಷ ಕೆಟ್ಟು ಎರಡು ಕಾಲನಾಕಾಶದಲೂರಿ ನಿಂದಿತ್ತು. ಬಹುಮುಖದ ಪಕ್ಷಿ ಏಕಮುಖವಾಗಿ ಚಂಚುಪುಟದಲ್ಲಿರ್ದ ರತ್ನಪಕ್ಷಿಯ ನುಂಗಿ ರತ್ನ ಕೆಟ್ಟಿತ್ತು. ಸೌರಾಷ್ಟ್ರ ಸೋಮೇಶ್ವರನಲ್ಲಿ ಅರಸುವ ಬನ್ನಿರೆ, ಸುಜ್ಞಾನಭರಿತರು.
--------------
ಆದಯ್ಯ
ಹಿಂದಣ ಭವವನೊರಸಿ, ಮುಂದಣ ಜನನಕರ್ಮವ ಸಂಹರಿಸಿ ಮಲ ಮಾಯೆಯ ಶಿಕ್ಷಿಸಿ, ಎನ್ನ ರಕ್ಷಿಸಿದಿರಯ್ಯಾ ಗುರುವೆ. ಕಬ್ಬುನದ ಗಿರಿಯ ಪರುಷರಸ ಸೋಂಕಿದಂತೆ ಸೌರಾಷ್ಟ್ರ ಸೋಮೇಶ್ವರನೆಂಬ ಗುರು ಸೋಂಕಲು ಎನ್ನ ಅವಗುಣಂಗಳರತು ಹೋದವು.
--------------
ಆದಯ್ಯ
ಹುಟ್ಟುವುದೇ ಬಂಧ, ಸಾವುದೇ ಮೋಕ್ಷ ಎಂಬ ಅರೆಮರುಳುಗಳನೇನೆಂಬೆನಯ್ಯಾ. ಸಾವ ಹುಟ್ಟುವ ಬಂಧದಲ್ಲಿ ಮೋಕ್ಷ ಉಂಟೇ ? ಸಂಚಿತ ಪ್ರಾರಬ್ಧ ಆಗಾಮಿ ಸವೆದು ಅಷ್ಟಭೋಗಂಗಳು ತೀರಿ, ಹುಟ್ಟುಹೊಂದು ಬಿಟ್ಟುದೇ ಮೋಕ್ಷ. ಅಂತಪ್ಪ ಮೋಕ್ಷ ಸಿದ್ಧಿಯಪ್ಪಡೆ ಸೌರಾಷ್ಟ್ರ ಸೋಮೇಶ್ವರಲಿಂಗವ ಕೈವಿಡಿದಲ್ಲದಾಗದು.
--------------
ಆದಯ್ಯ
ಹರಿಗೆ ಇಂದ್ರನೀಲಲಿಂಗ, ಬ್ರಹ್ಮಂಗೆ ಶೈಲಲಿಂಗ, ಶಕ್ರಂಗೆ ಮಣಿಮಯಲಿಂಗ, ಸೂರ್ಯಂಗೆ ತಾಮ್ರಲಿಂಗ, ಸೋಮಂಗೆ ಮೌಕ್ತಿಕಲಿಂಗ, ಕುಬೇರಂಗೆ ಹೇಮಲಿಂಗ, ನಾಗರ್ಕಳಿಗೆ ಪವಳದ ಲಿಂಗ, ಅಷ್ಟವಸುಗಳಿಗೆ ಕಂಚಿನ ಲಿಂಗ, ವರುಣಂಗೆ ರತ್ನದ ಲಿಂಗ, ನೈರುತ್ಯಂಗೆ ಪರುಷದ ಲಿಂಗ, ವಾಯವ್ಯಗೆ ಹಿತ್ತಾಳಿಯ ಲಿಂಗ, ಕಾಮಂಗೆ ಕುಸುಮ ಲಿಂಗ, ಋಷಿಗಳಿಗೆ ಪರ್ವತದ ಲಿಂಗ, ಅಸುರರಿಗೆ ಕಬ್ಬುನದ ಲಿಂಗ, ದಶರಥಗೆ ಸುವರ್ಣದ ಲಿಂಗ, ಅಶ್ವಿನಿಗೆ ಕರಪಾತ್ರೆಯ ಲಿಂಗ, ಅಂತಕಂಗೆ ಪರಿಪರಿಯ ಲಿಂಗ, ಗಾಯತ್ರಿಗೆ ಮರಕತದ ಲಿಂಗ, ಚಾಮುಂಡಿಗೆ ವಜ್ರದ ಲಿಂಗ, ಭೂದೇವಿಗೆ ಪಚ್ಚದ ಲಿಂಗ, ದುರ್ಗಿಗೆ ಕನಕದ ಲಿಂಗ, ಸಪ್ತಮಾತೃಕೆಯರಿಗೆ ಮಳಲ ಲಿಂಗ, ಇದೆಂತೆಂದಡೆ: ಇಂದ್ರನೀಲಮಯಂ ಲಿಂಗಂ ವಿಷ್ಣುಃ ಪೂಜಯತೇ ಸದಾ ವಿಷ್ಣುತ್ವಂ ಪ್ರಾಪ್ಯತೇ ತೇನ ಸಾದ್ಭುತೈಕಂ ಸನಾತನಂ ಬ್ರಹ್ಮಾ ಪೂಜಯತೇ ನಿತ್ಯಂ ಲಿಂಗಂ ಶೈಲಮಯಂ ಶುಭಂ ತಸ್ಯ ಸಂಪೂಜನಾದೇವ ಪ್ರಾಪ್ತಂ ಬ್ರಹ್ಮತ್ವಮುತ್ತಮಂ ಶಕ್ರೋ[s]ಪಿ ದೇವ ರಾಜೇಂದ್ರೋ ಲಿಂಗಂ ಮೃಣ್ಮಯಂ ಶುಭಂ ಭಕ್ತ್ಯಾ ಪೂಜಯತೇ ನಿತ್ಯಂ ತೇನ ಶಕ್ರತ್ವಮಾಪ್ನುಯಾತ್ ತಾಮ್ರಲಿಂಗಂ ಸದಾಕಾಲಂ ಭಕ್ತ್ಯಾ ದೇವೋ ದಿವಾಕರಃ ತ್ರಿಕಾಲಂ ಯಜತೇ ತೇನ ಪ್ರಾಪ್ತಂ ಸೂರ್ಯತ್ವಮುತ್ತಮಂ ಮುಕ್ತಾಫಲಮಯಂ ಲಿಂಗಂ ಸೋಮಃ ಪೂಜಯತೇ ಸದಾ ತೇನ ಸೋಮೇನ ಸಂಪ್ರಾಪ್ತಂ ಸೋಮತ್ವಂ ಸತತೋಜ್ವಲಂ ಲಿಂಗ ಹೇಮಮಯಂ ಕಾಂತಂ ಧನದೋ[s]ರ್ಚಯತೇ ಸದಾ ತೇನ ಸಾಧನತೋ ದೇವಃ ಧನದತ್ವಮವಾಪ್ತವಾನ್ ವಸವಃ ಕಾಂಸ್ಯಕಂ ಲಿಂಗಂ ಪೂಜ್ಯ ಕಾಮಾನವಾಪ್ನುಯಾತ್ ನಾಗಾಃ ಪ್ರವಾಳಜಂ ಲಿಂಗಂ ಪೂಜ್ಯ ರಾಜ್ಯಾನಿ ಲೇಬ್ಥಿರೇ ಲಿಂಗಂ ರತ್ನಮಯಂ ಚಾರು ವರುಣೋಡಿರ್ಚಯತೇ ಸದಾ ತೇನ ತದ್ವರುಣತ್ವಂ ಹಿ ಪ್ರಾಪ್ತಂ ಭದ್ರಸಮನ್ವಿತಂ ಲಿಂಗಮಧ್ಯೇ ಜಗತ್ಸರ್ವಂ ಸರ್ವಂ ಲಿಂಗೇ ಪ್ರತಿಷ್ಠಿತಂ ತಸ್ಮಾತ್ ಸಂಪೂಜಯೇಲ್ಲಿಂಗಂ ಯದಿ ಚೇತ್ಸಿದ್ಧಿಮಾತ್ಮನಃ ಐವಂ ದೇವಾಶ್ಚ ಗಂಧರ್ವಾ ಯಕ್ಷೋರಗರಾಕ್ಷಸಾಃ ಪೂಜಯಂತಿ ಸದಾಕಾಲಮೀಶಾನಂ ಸುರನಾಯಕಂ ಬ್ರಹ್ಮಾವಿಷ್ಣುಸ್ತಥಾ ಶಕ್ರೋ ಲೋಕಪಾಲಾಶ್ಚ ದೇವತಾಃ ಲಿಂಗಾರ್ಚನರತಾ ಹ್ಯೇತೇ ಮಾನುಷೇಷು ಚ ಕಾ ಕಥಾ ? ಇಂತೆಂದುದಾಗಿ ಸುರಪ ಹರಿ ವಿರಂಚಿ ಗಂಧರ್ವ ಯಕ್ಷ ರಾಕ್ಷಸ ಋಷಿ ದೇವತೆಗಳೆಲ್ಲರೂ ಲಿಂಗವ ಪೂಜಿಸಿ ಇಷ್ಟಕಾಮ್ಯಸಿದ್ಧಿಯ ಪಡೆದು ಭವಭಾರಿಗಳಾದರು. ಸೌರಾಷ್ಟ್ರ ಸೋಮೇಶ್ವರನ ಶರಣರು ಫಲಪದಂಗಳ ಮೀರಿ ಅರಿಕೆಯರತು ಬಯಕೆ ಬರತು ಹುಟ್ಟುಗೆಟ್ಟು ಭವಹಿಂಗಿ ಅಭಂಗರಾದರು
--------------
ಆದಯ್ಯ
ಹಿಡಿದ ವ್ರತವ ಬಿಡುವವನಲ್ಲ, ಲಿಂಗವಲ್ಲದನ್ಯವನೊಲ್ಲ, ಅನ್ಯದೈವಕ್ಕೆರಗ, ಮತ್ರ್ಯದ ಮನುಜರ ಮನ್ನಿಸ, ಪರಸತಿ ಪರದ್ರವ್ಯವ ಮುಟ್ಟ, ಕೊಟ್ಟಡೆ ಕೈಕೊಳ್ಳ, ಲಿಂಗನಿಷ್ಠಾಭಕ್ತಿಯ ಹಿಂಗ, ಕೊಲಬಾರದ ಅರಿಗಳ ಗೆಲುವ ಕಲಿ ತಾನಾಗಿ ಅದೆಂತೆಂದೊಡೆ: ಪರಸ್ತ್ರಿಯಂ ಪರಾರ್ಥಂ ಚ ವರ್ಜಯೇತ್ ಭಾವಶುದ್ಧಿಮಾನ್ ಲಿಂಗನಿಷ್ಠಾ ನಿಯುಕ್ತಾತ್ಮಾ ಮಾಹೇಶ್ವರ ಇತಿ ಸ್ಮೃತಃ ಎಂದುದಾಗಿ, ಜೀವಭಾವ ಹಿಂಗಿ, ಶಿವಭಾವದಿಂ ಜೀವಿಸಿಪ್ಪನಯ್ಯಾ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಮಾಹೇಶ್ವರನು.
--------------
ಆದಯ್ಯ
ಹೊನ್ನು ಹೆಣ್ಣು ಮಣ್ಣು ನಿಮ್ಮ ಸೊಮ್ಮು. ತನುವೆನಗಿಲ್ಲ ತನುವಿನಲ್ಲಿ ನೀವೆಡೆಗೊಂಡಿಪ್ಪಿರಾಗಿ. ಮನವೆನಗಿಲ್ಲ ನೆನಹಿನ ಕೊನೆಯಲ್ಲಿ ಬೆಳಗುತಿರ್ಪಿರಾಗಿ. ಪ್ರಾಣವೆನಗಿಲ್ಲ ನೀವೇ ಪ್ರಾಣವಾಗಿಪ್ಪಿರಾಗಿ. ಆನೆಂಬ ಭಾವಕ್ಕೆ ತೆರಹಿಲ್ಲದೆ ನಿರಹಂಕಾರದಿಂ ಮಾಡುವ ನೀಡುವ ಸಂದಳಿದು ದಾಸೋಹದ ನಿರಹಂಕೃತಿ ನಿಷ್ಪತ್ತಿಯಾಗಿ [ಸ್ವಾ]ನುಭಾವದ ನಿಜಸುಖದಿಂದೆರಡರಿಯದಿರ್ಪರಯ್ಯಾ, ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು.
--------------
ಆದಯ್ಯ
ಹರಿಹರಬ್ರಹ್ಮಾದಿಗಳ ನುಂಗಿತ್ತು ಈ ಮಾಯೆ. ನವನಾಥಸಿದ್ಧರನಪಹರಿಸಿತ್ತು ಈ ಮಾಯೆ. ಅರುಹಿರಿಯರನಂಗಂಗೊಂಡಿತ್ತು ಈ ಮಾಯೆ. ನವಬ್ರಹ್ಮರನಾರಡಿಗೊಂಡಿತ್ತು ಈ ಮಾಯೆ. ಷಡುದರುಶನಂಗಳ ಶಂಕೆಗಿಕ್ಕಿ ಕಾಡಿತ್ತು ಈ ಮಾಯೆ. ಹೊನ್ನು ಹೆಣ್ಣು ಮಣ್ಣಾಗಿ ಮೂರು ಲೋಕಂಗಳನಣಲೊಳಗಿಕ್ಕಿ ಅಗಿಯಿತ್ತು ಈ ಮಾಯೆ. ಅಖಿಳ ಲೋಕಂಗಳನೊಳಗೊಂಡಿತ್ತು ಈ ಮಾಯೆ. ಒಂದನೊಳಕೊಂಡಿತ್ತೆ ? ಸರ್ವವನೊಳಕೊಂಡಿತ್ತು, ಸೌರಾಷ್ಟ್ರ ಸೋಮೇಶ್ವರಾ, ನಿನ್ನ ಮಾಯೆ.
--------------
ಆದಯ್ಯ
ಹಿಡಿಯದೆ, ಹಿಡಿದುದ ಬಿಡದೆ, ಬಿಟ್ಟುದನಾರೂ ಅರಿಯರಲ್ಲಾ ! ಒಡಲ ಹಮ್ಮು, ಜಾತ್ಯಾಭಿಮಾನವಡಗಿ ತೊಡದಿರ್ದ ಭಾವವನಾರೂ ಅರಿಯರಲ್ಲಾ ! ಭಾವ ಭಾವಿಸುತ ನಿರ್ಭಾವವಳವಟ್ಟ ಭೇದವನಾರೂ ಅರಿಯರಲ್ಲಾ ! ಸೌರಾಷ್ಟ್ರ ಸೋಮೇಶ್ವರಲಿಂಗದ ನಿಜನಿರ್ಣಯವನಾರೂ ಅರಿಯರಲ್ಲಾ !
--------------
ಆದಯ್ಯ
ಹಣ ಬಂಗಾರ ವಸ್ತ್ರ ಕಪ್ಪಡ ಬಟ್ಟೆಯಲ್ಲಿ ನೆಟ್ಟನೆ ಬಿದ್ದಿರಲು ಕಂಡು ಕಾತರಿಸಿ ಕೈಮುಟ್ಟಿ ಎತ್ತದ ಭಾಷೆ, ಕೊಟ್ಟಡೆ ಮುಟ್ಟದ ಭಾಷೆ, ರಧನ ಪರಸತಿಗೆ ಅಳುಪದ ಭಾಷೆ, ಇಂತಿದಕಳುಪಿದೆನಾದಡೆ ಸೌರಾಷ್ಟ್ರ ಸೋಮೇಶ್ವರಾ ನಿಮ್ಮಾಣೆ ನಿಮ್ಮ ಪ್ರಮಥರಾಣೆ.
--------------
ಆದಯ್ಯ
ಹಠಯೋಗ ಲಂಬಿಕಾಯೋಗ ಆತ್ಮಯೋಗ ಸಿದ್ಧಯೋಗ ಪಿಶಾಚಯೋಗ ಅಷ್ಟಾಂಗಯೋಗಂಗಳೆಂಬ ಷಡುವಿಧ ಕರ್ಮಯೋಗಂಗಳೊಳು ಶೋಷಣೆ, ದಾಹನೆ, ಪ್ಲಾವನೆ, ಚಾಲನೆ ಖಾಳಾಪಖಾಳಮಂ ಮಾಡಿ ತ್ರಿದೋಷಾದಿಗಳಂ ಪ್ರವರ್ತಿಸಲೀಯದೆ ಮಲಯುಗಮಂ ನೆಲೆಗೊಳ್ಳಲೀಯದೆ ಗಜಕರಣಂಗಳಿಂ ಪವನಧಾರಣೆಯಿಂ ಕಲ್ಪಯೋಗಂಗಳಿಂ ಮೂಲಿಕಾಬಂಧದಿಂ ಬಂಧಿಸಿ, ಘಟಮಂ ನಟಿಸುವುದು ಹಠಯೋಗ. ಪವನಾಭ್ಯಾಸಂಗಳಿಂದಭ್ಯಾಸಯೋಗ, ಕ್ರಮಕ್ರಮಂಗಳಿಂ ಜಿಹ್ವೆಯಂ ಬೆಳಸಿ ಹಠಸಮ್ಮಿಶ್ರದಿಂ ಷಡಾಧಾರದ ಪಶ್ಚಿಮಪಥವಿಡಿದು ಪ್ರಾಣಪವನನ ಮಸ್ತಕಕ್ಕೇರಿಸಿ ಜಿಹ್ವೆಯ ಸುಷುಮ್ನೆಯಲ್ಲಿಟ್ಟು ಸೋಮಪಾನಮಂ ಸೇವಿಸಿ ಸಪ್ತಸ್ಥಾನ ನವಚಕ್ರದಲ್ಲಿ ನಿಂದು ಮುಕ್ತ್ಯಂಬಿಕೆಯೊಡಗೂಡುನವುದು ಲಂಫಬಿಕಾಯೋಗ. ಆತ್ಮನಂ ಭೇದಿಸಿ ಪ್ರಾಣವಾಯು ನಾಡಿಗಳನರಿತು ಹಿಡಿವ ಭೇದಮಂ ತಿಳಿದು, ತೆಗೆವ ಬಿಗಿವ ಸಂಚಮಂ ಕಂಡು ಒಡ್ಡಿಯಾಣಬಂಧ ಜಾಳಾಂಧರಬಂಧ ಠಾಣಿಕಾಮುದ್ರೆ ಭ್ರೂಸಂಕೋಚ ಬ್ರಹ್ಮಸ್ಥಾನದುತ್ತರನಾಡಿಯಿಂದ ಆತ್ಮನನಾತ್ಮಲಿಂಗದಲ್ಲಿ ಸಂಯೋಗಮಾಡುವದಾತ್ಮಯೋಗ. ಅಂಜನಾಸಿದ್ಧಿ ಘುಟಿಕಾಸಿದ್ಧಿ ಶರೀರಸಿದ್ಧಿ ಪರಕಾಯಪ್ರವೇಶ ತ್ರಿಕಾಲಜ್ಞಾನ ದೂರಶ್ರವಣ ದೂರದೃಷ್ಟಿಯೊಳಗಾದ ಅಷ್ಟಮಹಾಸಿದ್ಧಿಯಂ ಪಡೆದು, ರಸಸಿದ್ಧಿ ಪಾಷಾಣಸಿದ್ಧಿ ಲೋಹಸಿದ್ಧಿ ವಯಸ್ತಂಭ ಸ್ವರವಂಚನೆ ಕಾಯವಂಚನೆ ವೇದಶಾಸ್ತ್ರಸಿದ್ಧಿ ಭರತಸಿದ್ಧಿ ಗಾಂಧರ್ವಸಿದ್ಧಿ ಕಿನ್ನರಸಿದ್ಧಿ ವಾಚಾಸಿದ್ಧಿ ಖೇಚರತ್ವ ಮಹೇಂದ್ರಜಾಲದೊಳಗಾದ Zõ್ಞಷಷ್ಟಿವಿದ್ಯಾಸಿದ್ಧಿ ಅಣಿಮಾದಿ ಮಹಿಮಾ ದಿ ಈಶಿತ್ವ ವಶಿತ್ವ ಪ್ರಾಪ್ತಿ ಪ್ರಾಕಾಮ್ಯವೆಂಬ ಅಷ್ಟೈಶ್ವರ್ಯಸಿದ್ಧಿ ವ್ಯಾಳಿ ಚರ್ಪಟಿ ಕೋರಾಂಟ ರತ್ನಘೋಷ ಭೂತನಾಥ ನಾಗಾರ್ಜುನ ಮಚ್ಚೇಂದ್ರ ಗೋರಕ್ಷ ಮಂಜಿನಾಥ ನವನಾಥ ಸಿದ್ಧರೊಳಗಾದ ಸಮಸ್ತ ಸಿದ್ಧಿಬುದ್ಧಿಗಳಿಂ ಲಿಂಗವನರಿಸಿ ಅಟ್ಟಿಮುಟ್ಟಿ ಹಿಡಿದೆಹೆನೆಂಬುದು ಸಿದ್ಧಯೋಗ. ಪಿಶಾಚತ್ವದಿಂ ತ್ರಿಭುವನಿಯಂ ಸೇವಿಸಿ ಅಮರಿಗಳಂ ಸೇವಿಸಿ ಅಮರೀ ಭ್ರಮರಾದೇವಿ ಅಮರೀ ತ್ರಿಪುರಾಂತಕೀ ಅಮರೀ ಕಾಲಸಂಹಾರೀ ಅಮರೀ ತ್ರೈಲೋಕ್ಯಸಾಧನೀ ಇಂತೆಂಬ ಶ್ರುತಿಗೇಳ್ದು, ವಜ್ರಿ ಅಮರಿಗಳನಂಗಲೇಪಂ ಮಾಡಿ ಶುಕ್ಲಮಂ ಸೇವಿಸಿ ಭೂತಸಂಕುಳಂಗಳೊಡನಾಡಿ ಅಜ್ಞಾನವಶದಿಂ ಲಿಂಗವನೇನೆಂದರಿಯದ ಕ್ಷೀಣವೃತ್ತಿಯ ಪಿಶಾಚತ್ವದಿಂದಿಪ್ಪುದು ಪಿಶಾಚಯೋಗ. ಹಿಂಸೆಯನುಳಿದ ±õ್ಞಚತ್ವದಿಂ ಬ್ರಹ್ಮಚರ್ಯದಿಂ ತತ್ವಂಗಳನಾಹ್ವಾನಿಸುತ್ತಿಪ್ಪುದು ಯಮಯೋಗ. ವಿವೇಕ ವಿಚಾರದಿಂ ತತ್ವಂಗಳನರಿತು ಆಚರಿಸಿ ಅಡಿುಟ್ಟು ನಡೆವುದು ನಿಯಮಯೋಗ. ಪದ್ಮಾಸನ ಸಿದ್ಧಾಸನ ಬದ್ಧಾಸನ ವಜ್ರಾಸನ ಮಯೂರಾಸನ ಕೂರ್ಮಾಸನ ಕಕ್ಕುಟಾಸನ ಅರ್ಧಾಸನ ವೀರಾಸನ ಶ್ಮಶಾನಾಸನ ಹಸ್ತಾಸನ ಮಸ್ತಕಾಸನ ಕುಠಾರಾಸನ ಸಿಂಹಾಸನ ಮಧ್ಯಲವಣಿ ಶಿರೋಲವಣಿಯೊಳಗಾದ ಆಸನಬಂಧಂಗಳಿಂದಾಚರಿಸುವುದಾಸನಯೋಗ. ತತ್ವ ಮೂವತ್ತಾರಕ್ಕೆ ಪ್ರಣವ ಮೂಲವೆಂದರಿತು ಷಡಾಧಾರಚಕ್ರಂಗಳ ಅಕ್ಷರವರ್ಣಂಗಳಿಂ ತಿಳಿದು ಮೇರಣ ಅಜನಾಳ ಬ್ರಹ್ಮಸ್ಥಾನ ತುರೀಯಾತೀತದ ಓಂಕಾರಮಪ್ಪ ಪ್ರಣವವನರಿವುದು ಪ್ರಾಣಾಯಾಮಯೋಗ. ಪ್ರತ್ಯಾಹಾರಯೋಗಕ್ರಮಗಳಿಂದ ಸತ್ಪ್ರಣವವನಾಹಾರಿಸುವುದು ಪ್ರತ್ಯಾಹಾರಯೋಗ. ಪ್ರಣವಕ್ಕೆ ಅತೀತವಾದ ಪರಶಿವಮೂರ್ತಿ ಮನದಲ್ಲಿ ಚಿಗುರ್ತು ಅಂತರಂಗದಲ್ಲಿ ಧ್ಯಾನಾರೂಢನಾಗಿ ಧ್ಯಾನಿಸುವುದು ಧ್ಯಾನಯೋಗ. ಆ ಪರಶಿವಮೂರ್ತಿಯೆ ಇಷ್ಟಲಿಂಗವೆಂಬ ಭಾವನೆಯಿಂದ ಅಷ್ಟವಿಧಾರ್ಚನೆ ಷೋಡಶೋಪಚರ್ಯಂಗಳಿಂದಿಷ್ಟಲಿಂಗಧಾರಣದಿಂದ ಇಪ್ಪುದು ಧಾರಣಯೋಗ. ಅಪ್ರಶಿಖಾಸ್ಥನದಿಂದುತ್ತರವಿಭಾಗೆಯ ಅಜಪೆಯಿಂದತ್ತಣ ಚಿತ್‍ಪ್ರಭೆಯಿಂದುಜ್ವಳತೇಜ ಸ್ವಯಂಪ್ರಕಾಶ ದಿವ್ಯತೇಜದಿಂದೊಪ್ಪಿಪ್ಪ ಮಹಾಘನ ಪರವಸ್ತುವನಿದಿರಿಟ್ಟೀಕ್ಷಿಸಿ ಆಮಹಾಪ್ರಕಾಶದಲ್ಲಿ ಒಡಗೂಡಿ ತಾನು ತಾನಾಗಿ ಜಗದ್ವಿಹರಣೀಯನೇನೆಂದರಿಯದ ಪರಮಕಾಷೆ*ಯ ಸಮಾಧಿಯಲ್ಲಿಪ್ಪುದು ಸಮಾಧಿಯೋಗ. ಇಂತಪ್ಪ ಅಷ್ಟಾಂಗವೊಳಗಾದ ಷಡುವಿಧಕರ್ಮಯೋಗಂಗಳಂ ಮೆಟ್ಟಿ ಚತುರ್ವಿಧಪದವಿಯಂ ಹೊದ್ದದೆ ಫಲಭೋಗಂಗಳಂ ಮುಟ್ಟದೆ ಖ್ಯಾತಿ ಲಾಭ ಪೂಜೆಯಂ ತಟ್ಟದೆ ಇಹಪರಂಗಳಂ ಸಾರದೆ, ಭವಬಂಧನಕ್ಕೆ ಬಾರದೆ ಗೆಲ್ಲ ಸೋಲಕ್ಕೆ ಹೋರದೆ, ತನುವಿನಿಚ್ಛೆಯಲ್ಲಿ ಸುಳಿಯದೆ ಮನದಿಚ್ಛೆಯಲ್ಲಿ ಹರಿಯದೆ, ಪ್ರಾಣನ ಸುಳುಹಿನಲ್ಲಿ ಸಿಕ್ಕದೆ ಪ್ರಕೃತಿವಶಕ್ಕೊಳಗಾಗದೆ, ಇಂದ್ರಿಯಂಗಳಿಗೆ ಮೈಯೊಡ್ಡದೆ ಸರ್ವಸಂದೇಹನಿವೃತ್ತಿಯಾಗಿ, ನಿಂದಲ್ಲಿ ನಿರಾಳ, ನಡೆದಲ್ಲಿ ನಿರ್ಗಮನಿ, ನುಡಿದಲ್ಲಿ ನಿಶ್ಶಬ್ದಿ, ಸುಳಿದಲ್ಲಿ ಒಡಲಿಲ್ಲದುಪಾಧಿಯರತು ಅಂಗವೆ ಲಿಂಗವಾಗಿ ಲಿಂಗವೆ ಪ್ರಾಣವಾಗಿ ಪ್ರಾಣವೆ ಪ್ರಸಾದವಾಗಿ, ಪ್ರಸಾದವೆ ಪರಿಪೂರ್ಣವಾಗಿ ನಿಜಲಿಂಗೈಕ್ಯವಾಗಿ ನಿಜಸುಖಸಂಬಂಧಿಯಾಗಿ ನಿಜಯೋಗ ಸನ್ನಿಹಿತವಾಗಿ ಕಾಯವಿದ್ದಂತೆ ಬಯಲಾಗಿಪ್ಪರಯ್ಯಾ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು.
--------------
ಆದಯ್ಯ
ಹೃದಯದೊಳಗಿಹನ್ನಕ್ಕ ಲಿಂಗಪ್ರಾಣಿ, ಹೃದಯದಿಂದ ಹೊರಯಕ್ಕೆ ಹೊರವೊಂಟರೆ ಭವಿ. ಆ ಭವಿಗೆ ಜೀವವೆಲ್ಲ ನಿರ್ಜೀವ, ಆ ಭವಿಗೆ ಉಪದೇಶವಿಲ್ಲ. ಉಪದೇಶವ ಮಾಡಬಾರದು, ಸತ್ತರೆ ಹೂಣಬಾರದು. ಹೂಣಿದಾತನ ಮನೆಯ ಹೊಕ್ಕು ಸುಯಿಧಾನವ ಕೊಂಡರೆ ಕುಂಭೀಪಾತಕ ನಾಯಕನರಕ ತಪ್ಪದಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಹಲವು ಕರಣಂಗಳೆಂಬ ಹಲವು ಬಣ್ಣದ ಚಿನ್ನವ ಗುರುಮುಖಾಗ್ನಿಯಿಂದ ಒಮ್ಮುಖಕ್ಕೆ ತಂದು ಜ್ಞಾನಾಗ್ನಿಯಿಂ ಪುಟವಿಟ್ಟು, ಕಾಲಕರ್ಮವೆಂಬ ಕಾಳಿಕೆಯಂ ಕಳೆದು, ವೃತ್ತಿ ಬಗೆಗಳೆಂಬ ಅವಲೋಹವಂ ಬಿಟ್ಟು, ಅಹಂಕಾರ ಮಮಕಾರಂಗಳೆಂಬ ತೂಕಗುಂದಿ ಅರಿವೆಂಬ ಮೂಸೆಯೊಳಿಟ್ಟು ಪರಮಜ್ಞಾನದಿಂ ಕರಗಿಸಿ ಸುಮನವೆಂಬ ನಿರ್ಮಲೋದಕದಲ್ಲಿ ಢಾಳಿಸಿದ ಶುದ್ಧಸುವರ್ಣ ಸ್ವಯಂಪ್ರಕಾಶ ನಿರಾಳದ ಬೆಳಗು ಸೌರಾಷ್ಟ್ರ ಸೋಮೇಶ್ವರನ ಶರಣರಲ್ಲಿ ಸ್ವಯವಾಯಿತ್ತು.
--------------
ಆದಯ್ಯ
ಹೀನಬುದ್ಧಿಯ ಕರ್ಮದ ಕ್ಷೀಣ ಬಣ್ಣವ ಬಿಟ್ಟು ಪ್ರಾಣಸಂಗತವಾದ ಧಾತು ಬಣ್ಣ ವೇಳಕ್ಕೆ ಜ್ಞಾತೃ ಬಣ್ಣದಾಣಿಯನಿಕ್ಕಿ ಕಳೆದು ಜ್ಞಾನ ಕರ್ಮದ ಬಣ್ಣ ಹತ್ತಕ್ಕೆ ಜ್ಞೇಯ ಬಣ್ಣವ ಶಕವನಿಕ್ಕಿ ಕಳೆದು ಕ್ರಿಯಾ ಬಣ್ಣದ ಹಲವು ಬಣ್ಣವ ಕೊಡದೆ ಶುದ್ಧಾಶುದ್ಧ ಬಣ್ಣಕ್ಕೆ ಮುಖ್ಯ ಬಣ್ಣದಲ್ಲಿ ಚಿದ್ಬಣ್ಣವ ಕೂಡಲು ಇದಾವ ಬಣ್ಣವೆಂದರಿಯಬಾರದೆ ವರ್ಣಾತೀತವಾಯಿತ್ತು. ಇದಕ್ಕೆ ಶ್ರುತಿ: ವರ್ಣಾತೀತಂ ಮನೋತೀತಂ ಭಾವಾತೀತಂ ತು ತತ್ಪದಂ ಜ್ಞಾನಾತೀತಂ ನಿರಂಜನಂ ತತ್ಕಲಾ ಸೂಕ್ಷ್ಮಭಾವತಃ ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರ ಲಿಂಗದ ಬಣ್ಣ ಅಂತರ್ಬಾಹ್ಯ ಗಮ್ಯಾಗಮ್ಯ ಭಾವಾಭಾವತೀತಾತೀತವಲ್ಲದೆ ನಿಂದಿತ್ತು.
--------------
ಆದಯ್ಯ
ಹೆಚ್ಚದು-ಕುಂದದು, ಮಚ್ಚದು-ಬೆಚ್ಚದು, ಬಾಡದು-ಬತ್ತದು, ಕಂದದು-ಕುಂದದು, ಕರಗದು-ಕೊರಗದೆನ್ನರಿವು ಸೌರಾಷ್ಟ್ರ ಸೋಮೇಶ್ವರಲಿಂಗದೊಡಗೂಡಿ ತಾನೆನ್ನದಿದಿರೆನ್ನದು.
--------------
ಆದಯ್ಯ
ಹಿಂದಣ ಕಥೆಯ ಮುಂದೆ ಪೇಳುವ ಕಾವ್ಯವಲ್ಲ. ಮುಂದಣ ಕಥೆಯನಿಂದು ಹೇಳುವ ನಾಟಕವಲ್ಲ. ಬಂದ ಶಬ್ದವ ಸಂದಿಲ್ಲದುಸುರುವೆನೆಂಬ ಅಭ್ಯಾಸಿಯಲ್ಲ. ಛಂದ ವಿಚ್ಛಂದಯೆಂಬ ಸಂದೇಹಿಯಲ್ಲ. ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರ ಸ್ವಯಾನುಭಾವದ ಪರಿ ಬೇರೆ.
--------------
ಆದಯ್ಯ
ಹೊಂಬಣ್ಣವ ಹಿಮ್ಮೆಟ್ಟದೆ ಕಂಡು, ಮುಂಬಣ್ಣವ ಮುಂದರಿತು ಕಂಡು, ನಿಂದ ಬಣ್ಣವ ನಿಂದಂದಿಗೆ ಕಂಡು, ಹಲವು ಬಣ್ಣದ ಬಳಕೆಯ ಹೊಲಬುದಪ್ಪಿ, ಸಂದ ಬಣ್ಣದಲ್ಲಿ ಸಂದಿಲ್ಲದೆ ನಿಂದ ನಿರಾಳ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು.
--------------
ಆದಯ್ಯ
ಹರಣವಿರ್ದು ಹರಣವಿಲ್ಲ, ಹರಣ ಲಿಂಗದಲ್ಲಿ ನಿರ್ಯಾಣವಾಯಿತ್ತಾಗಿ. ಮನವಿರ್ದು ಮನವಿಲ್ಲ, ಮನವು ಮಹದಲ್ಲಿ ಲಯವಾಯಿತ್ತಾಗಿ. ಜೀವವಿರ್ದು ಜೀವವಿಲ್ಲ, ಜೀವ ಪರಮನಲ್ಲಿ ಐಕ್ಯವಾಯಿತ್ತಾಗಿ. ಭಾವವಿದ್ದು ಭಾವವಿಲ್ಲ, ಭಾವ ನಿರ್ಭಾವದಲ್ಲಿ ನಿಂದಿತ್ತಾಗಿ. ಕರಣಂಗಳಿದ್ದು ಕರಣಂಗಳಿಲ್ಲ, ಕರಣಂಗಳು ಲಿಂಗದ ಕಿರಣಂಗಳೆಯ್ದಿದವಾಗಿ. ಇಂತು ಸರ್ವವಿದ್ದು ಸರ್ವವಿಲ್ಲ. ಇದು ಕಾರಣ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು ಉಂಡು ಉಪವಾಸಿಗಳು, ಬಳಸಿ ಬ್ರಹ್ಮಚಾರಿಗಳು.
--------------
ಆದಯ್ಯ
ಹುರಿದು ಬಿತ್ತಿದ ಬೀಜ ಮೊಳೆದೋರದಂತೆ ಜ್ಞಾನಕಾಯಂಗೆ ಬನರುಫಕಾಯವಿಲ್ಲ. ಅರುವಿನ ಮುಂದಣ ಕುರುಹು ಅರಿವನವಗ್ರಹಿಸಿ ಜ್ಞಾನ ನಿಷ್ಪತ್ತಿಯಾಗಿತ್ತು. ಸೌರಾಷ್ಟ್ರ ಸೋಮೇಶ್ವರಲಿಂಗವೆಂಬ ಕುರುಹು ಮರೆದ ಕಾರಣ
--------------
ಆದಯ್ಯ
ಹುಟ್ಟು ಹೊಂದುಗೆಟ್ಟುದೇ ನಿರ್ವಾಣ. ಮಲ ಮಾಯಾ ಕರ್ಮಂಗಳಳಿದುದೇ ನಿರ್ವಾಣ. ಶೋಕ ಮೋಹ ಹಿಂಗಿದುದೇ ನಿರ್ವಾಣ. ಇಹ ಪರದಾಶೆ ಬಿಟ್ಟುದೇ ನಿರ್ವಾಣ. ಇಂತಪ್ಪ ನಿರ್ವಾಣ ಸದ್ಯೋನ್ಮುಕ್ತಿ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಹಾಲ ಹಿಡಿದು ಬೆಣ್ಣೆಯನರಸಲುಂಟೆ ? ಲಿಂಗವ ಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ ? ಲಿಂಗತೀರ್ಥಪ್ರಸಾದವ ಕೊಂಡು ಅನ್ಯಬೋಧೆ ಅನ್ಯಶಾಸ್ತ್ರಕ್ಕೆ ಹಾರೈಸಲೇಕೆ ? ಇಷ್ಟಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಶರಣೆಂದೆನಾದಡೆ, ತಡೆಯದೆ ಹುಟ್ಟಿಸುವ ಶ್ವಾನನ ಗರ್ಭದಲ್ಲಿ. ಅದೆಂತೆಂದಡೆ: ಇಷ್ಟಲಿಂಗಮವಿಶ್ವಸ್ಯ ತೀರ್ಥಲಿಂಗಂ ತು ಯೋ ಭಜೇತ್ ಶುನಾಂ ಯೋನಿಃ ಶತಂ ಗತ್ವಾ ಚಂಡಾಲಗೃಹಮಾವಿಶೇತ್ ಎಂದುದಾಗಿ, ಗುರು ಕೊಟ್ಟ ಲಿಂಗದಲ್ಲಿ ಎಲ್ಲಾ ತೀರ್ಥಂಗಳೂ ಎಲ್ಲಾ ಕ್ಷೇತ್ರಂಗಳೂ ಇದ್ದಾವೆಂದು ಭಾವಿಸಿ ಮುಕ್ತರಪ್ಪುದಯ್ಯಾ. ಇಂತಲ್ಲದೆ ಗುರು ಕೊಟ್ಟ ಲಿಂಗವ ಕಿರಿದುಮಾಡಿ, ತೀರ್ಥಲಿಂಗವ ಹಿರಿದುಮಾಡಿ ಹೋದವಂಗೆ ಅಘೋರನರಕ ತಪ್ಪದು ಕಾಣಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ