ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ರೂಪು ರುಚಿ ತೃಪ್ತಿಗಳು ಬೇಸರವಿಲ್ಲದೆ ಇರ್ಪ ಮರ್ಮವನರಿತು, ಒಡನೊಡನೆ ಒಡಲ ಗುಣಂಗಳನಳಿದು, ಆವಲಿಂಗನಿವೇದನದಿಂದ ವಿಧಲಿಂಗದಲ್ಲಿ ತೆರಹಿಲ್ಲದರ್ಪಿತ ಸಾವಧಾನ ಸನ್ನಹಿತ ಪ್ರಸಾದಿ, ಸೌರಾಷ್ಟ್ರ ಸೋಮೇಶ್ವರಲಿಂಗದ ಪ್ರಸಾದಿ.
--------------
ಆದಯ್ಯ
ರಸವನುಗುಳ್ದು ಕಸವನಗಿವವನಂತೆ, ಕೈಯ ಪಿಂಡವ ಬಿಟ್ಟು ಒಣಗೈಯ್ಯ ನೆಕ್ಕುವನಂತೆ, ತಾಯ ಮೊಲೆವಾಲನೊಲ್ಲದೆರೆವಾಲಿಂಗೆಳಸುವನಂತೆ, ಅಮೃತಾಹಾರ ಮುಂದಿಟ್ಟಿರಲು ಮನ ಹೇವರಿಕೆಯ ಬಿಡದವನಂತೆ, ದೀಪವ ಹಿಡಿದು ಮುಂದುಗಾಣದಿಹ ಪರಿಯ ನೋಡಾ ಅಯ್ಯಾ. ತನ್ನಲ್ಲಿ ಗುರುಲಿಂಗಜಂಗಮವಿರಲನ್ಯವಿಟ್ಟರಸುವ ಭಿನ್ನಜ್ಞಾನವ ನೋಡಾ. ಸೌರಾಷ್ಟ್ರ ಸೋಮೇಶ್ವರಲಿಂಗಸಂಗ ಹಿಂಗದಿರಲು ವೇಷಭೂಷಣಂಗಳಾಸೆಯ ನೋಡಾ.
--------------
ಆದಯ್ಯ
ರಸವುಂಡ ಅಂಗದಲ್ಲಿ ಆ ರಸ ಅಸಿಧಾರೆ, ಎಲ್ಲೆಲ್ಲಿ ಮುಟ್ಟಿದರಲ್ಲಲ್ಲಿಗೆ ಬಂದಾನುವಂತೆ, ಲಿಂಗಗ್ರಾಹಕನಾಗಿ ಮುಖಮುಖದಿಂದ್ರಿಯಂಗಳಲ್ಲಿ ಲಿಂಗವೇ ಸಕಲಸುಖವನಾಂತು ಭೋಗಿಪ್ಪುದಾಗಿ ಅರ್ಪಿಸಲಿಲ್ಲದ ಪ್ರಸಾದಿ, ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
--------------
ಆದಯ್ಯ
ರಾಗದ್ವೇಷರಹಿತನಾಗಿ ಮೋಹಕ್ಕೆ ಕಾರಣ ಶೋಕ, ಶೋಕಕ್ಕೆ ಕಾರಣ ಮೋಹನವೆಂದರಿದು ಸುಖ-ದುಃಖ ಶೋಕ-ಮೋಹಂಗಳ ಸಮಾನಂಗಂಡು, ಇದಕ್ಕೆ ಶ್ರುತಿ: `ತತ್ರ ಕೋ ಮೋಹಃ ಕಃ ಶೋಕಃ ಏಕತ್ವಮನುಪಶ್ಯತಃ |' ಎಂದುದಾಗಿ, ಸೌರಾಷ್ಟ್ರ ಸೋಮೇಶ್ವರನ ಶರಣರು ಷಡೂರ್ಮೆರಹಿತರು.
--------------
ಆದಯ್ಯ