ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಪತಪ ನೇಮವಲ್ಲ, ಮಂತ್ರತಂತ್ರ ನೇಮವಲ್ಲ, ಧೂಪದೀಪಾರತಿ ನೇಮವಲ್ಲ, ಧನ, ಪರಸ್ತ್ರೀ, ಪರದೈವಂಗಳಿಗೆರಗದಿಪ್ಪುದೆ ನೇಮ. ಸೌರಾಷ್ಟ್ರ ಸೋಮೇಶ್ವರಲಿಂಗವಲ್ಲಿದ್ದ ಕಾರಣ ನಿತ್ಯನೇಮ.
--------------
ಆದಯ್ಯ
ಜಗತ್ಪ್ರಪಂಚ ಮಾಡಿ, ಆ ಜಗದಲ್ಲಿ ಜೀವರೂಪಿಂದ ಬಳಿಸಂದನೆಂದು ಹೇಳುವ ಶ್ರುತಿಯಂತಿರಲಿ, ಜೀವನೆ ಶಿವನಾದಡೆ ಶೋಕ ಮೋಹ ಋಣ ರೋಗ ಪುಣ್ಯ ಪಾಪ ಕಾಲ ಕಲ್ಪಿತ ಪ್ರಳಯ ಪ್ರಕೃತಿ ಸಂಸಾರಪಾಶಬದ್ಧವುಂಟೆ? ಇವೆಲ್ಲವೂ ಜೀವಂಗಲ್ಲದೆ ಶಿವಂಗಿಲ್ಲವಾಗಿ ತ್ರಿಗುಣರಹಿತ ಸೌರಾಷ್ಟ್ರ ಸೋಮೇಶ್ವರನು.
--------------
ಆದಯ್ಯ
ಜ್ಞಾತೃಸ್ವರೂಪದಿಂದರುಹಿಸುವ ಬುದ್ಧಿ, ಜ್ಞಾನಸ್ವರೂಪದಿಂದರಿವ ಚಕ್ಷುರಾದಿಂದ್ರಿಯ, [ಜ್ಞೇಯ] ಸ್ವರೂಪದಿಂದರುಹಿಸಿಕೊಂಬ ವಿಷಯಂಗಳಿಗೊಳಗಹುದೆ ಆ ಪರಬ್ರಹ್ಮವು. ಇಂತೀ ತ್ರಿಪುಟಿರಹಿತವಾದದರಿವನರಿತಲ್ಲದೆ ಸೌರಾಷ್ಟ್ರ ಸೋಮೇಶ್ವರಲಿಂಗವನರಿಯಬಾರದು.
--------------
ಆದಯ್ಯ
ಜಗಭರಿತಲಿಂಗ ಶರಣಭರಿತಲಿಂಗ ನಾಮರಹಿತಲಿಂಗ: ಜಗಭರಿತಲಿಂಗವೆಂದು, `ಸರ್ವಂ ಖಲ್ವಿದಂ ಬ್ರಹ್ಮ' ವೆಂಬ ವಿಶ್ವಬ್ರಹ್ಮ. ಶರಣಭರಿತಲಿಂಗವೆಂದು, `ಏಕ ಏವ ದೇವೋ ನ ದ್ವಿತೀಯಃ' ವೆಂಬ ತಾರಕಬ್ರಹ್ಮ. ನಾಮರಹಿತಲಿಂಗವೆಂದು, `ಚಕಿತಮಬ್ಥಿಧತ್ತೇ ಶ್ರುತಿರಪಿ' ಯೆಂಬ ಪರಬ್ರಹ್ಮ. ಇಂತೀ ತ್ರಿವಿಧಬ್ರಹ್ಮ ಏಕಬ್ರಹ್ಮ ನೀನೇ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಜ್ಞಾನಕಾಯಂಗೆ ಬಹುಕಾಯವಿಲ್ಲ, ಅರುಹಿನ ಮುಂದಣ ಕುರುಹು ಅರುವನಗ್ರಹಿಸಿ ಜ್ಞಾನ ನಿಃಪತ್ತಿಯಾಯಿತ್ತು. ಸೌರಾಷ್ಟ್ರ ಸೋಮೇಶ್ವರಲಿಂಗವೆಂಬ ಕುರುಹ ಮರೆದ ಕಾರಣ,
--------------
ಆದಯ್ಯ
ಜಗದಗಲದ ಬಲೆಯನಗಲಬಲ್ಲರ ಕಾಣೆ, ಮುಗಿಲುದ್ದದಂಬರವನುಗಿಯಬಲ್ಲರ ಕಾಣೆ, ಹಗಲಿರುಳ ಸೀಮೆಯ ಮಿಗೆ ಮೀರುವರ ಕಾಣೆ, ತೆಗೆದಿಪ್ಪ ಶುನಕನ ಬಗೆಯ ಬಲ್ಲವರ ಕಾಣೆ. ಅಗಡಾನೆ ಬಿಗಿದು ಬಲ್ಪಿಡಿಯಿತ್ತಲ್ಲಾ ಜಗವೆಲ್ಲವ. ಸೌರಾಷ್ಟ್ರ ಸೋಮೇಶ್ವರನ ನಿಜವನರಿಯದೆ ಮುಳುಗಿದರಲ್ಲಾ ಮುಪ್ಪುರದಲ್ಲಿ.
--------------
ಆದಯ್ಯ
ಜಿಹ್ವೆ ಗುಹ್ಯೇಂದ್ರಿಯದಿಚ್ಛೆಯುಳ್ಳನ್ನಕ್ಕ ಜಂಗಮವಲ್ಲ, ಪುತ್ರ ಮಿತ್ರ ಕಳತ್ರದಲ್ಲಿಯ ಮೋಹವುಳ್ಳನ್ನಕ್ಕ ಭಕ್ತನಲ್ಲ, ಮಾತಿನ ಮಾಲೆಯ ಹೆಚ್ಚು ಕುಂದಿನ ಹೋರಟೆಯುಳ್ಳನ್ನಕ್ಕ ಅದ್ವೈತಿಯಲ್ಲ, ಅಂಗ ಪ್ರಾಣದಾಶೆಯುಳ್ಳನ್ನಕ್ಕ ನಿಸ್ಪೃಹನಲ್ಲ. ಸೌರಾಷ್ಟ್ರ ಸೋಮೇಶ್ವರಲಿಂಗವನರಿಯದನ್ನಕ್ಕ ಸ್ವಯಾನುಭವಿಯಲ್ಲ.
--------------
ಆದಯ್ಯ
ಜೀವಭಾವದ ಹಂಸ ಜಪದಲ್ಲಿ ದ್ವಾದಶಾಂತ ಕೂಡಿ ಶಿವಜಪವಾಯಿತ್ತು. ಆ ಶಿವಜಪದಲ್ಲಿಯೇ ಪ್ರಣವವಡಕವಾಗಿಪ್ಪುದು. ಇದಕ್ಕೆ ಶ್ರುತಿ: `ತದ್ಯೋ ಹಂಸಃ ಸೋಹಂ ಯೋಸೌಸೋಹಂ' ಆ ಪ್ರಣವದ ನಿರಾಳದಾದಿಬಿಂದು, ಆ ಬಿಂದುವಿನ ಸ್ವಯಂಪ್ರಕಾಶಲಿಂಗವೇ ತಾವಾಗಿಪ್ಪರಯ್ಯಾ, ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು.
--------------
ಆದಯ್ಯ
ಜೀವಂಗೆ ಜೀವವಾದಾತನೆ ಪರಮಾತ್ಮನು, ಪರಬ್ರಹ್ಮವು. ಉಪಮೆಗೆ ಉಪಮಾತೀತ, ಭಾವಕ್ಕೆ ಭಾವಾತೀತ, ಅರಿವಿಂಗೆ ಅಗೋಚರ ಅತಕ್ರ್ಯನಗಣಿತನ ಪ್ರಮೇಯ ನಿತ್ಯನಿರಂಜನ ನೀನೇ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ