ಅಥವಾ
(13) (3) (3) (0) (5) (0) (0) (0) (4) (0) (0) (2) (0) (0) ಅಂ (4) ಅಃ (4) (20) (0) (5) (0) (0) (2) (0) (1) (0) (0) (0) (0) (0) (0) (0) (3) (0) (2) (1) (12) (2) (0) (4) (2) (12) (0) (0) (0) (0) (6) (2) (0) (9) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉತ್ತಮತೇಜಿಯಮರಿಗೆ ಸುಪ್ಪತ್ತಿಗೆಯಲ್ಲದೆ ಕತ್ತೆಯ ಮರಿಗೆ ಸುಪ್ಪತ್ತಿಗೆಯ ಹಾಸುವರೆ ? ಅಜ್ಞಾನಿಗಳ ಹೃದಯದಲ್ಲಿ ಪರಮಾಮೃತವ ಸುರಿದಡೆ ಪರರ ಕಾಡಿ ಬೇಡದೆ ಮಾಣ್ಬರೆ ? ಕುಂಜರನ ವೇಷವ ತೊಟ್ಟು ಹಂದಿಯಂತೆ ತಿರುಗುವ ಅಜ್ಞಾನಿಗಳನೇನೆಂಬೆ ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ಉತ್ತಮತೇಜಿಗೆ ಚಬುಕಿನಲ್ಲಿ ತೆಗೆವರುಂಟೆ ? ಪಟ್ಟಣಕ್ಕೆ ಒಡೆಯನಾದ ಬಳಿಕ, ಜಾತಿಗೋತ್ರವನರಸಲುಂಟೆ ? ಪರಮಸುಜ್ಞಾನಿಗೆ ಪ್ರಾಣದ ಹಂಗುಂಟೆ ? ಲಿಂಗವನಪ್ಪಿದ ಶರಣನ ಕಂಡಕಂಡವರು ಜರಿದಡೆ, ಸಂದೇಹವುಂಟೆ ? ಇಹಲೋಕದವರು ಜರಿದರೆಂದು ವಿಪರೀತಗೊಳಲೇಕೆ ? ಅಮುಗೇಶ್ವರಲಿಂಗವನರಿದ ಶರಣಂಗೆ ಆರು ಹರಸಿದಡೇನು, ಆರು ಹಳಿದಡೇನು ?
--------------
ಅಮುಗೆ ರಾಯಮ್ಮ
ಉತ್ತರಪಥಕ್ಕೆ ಹೋಗಿ ಮುಕ್ತಿಯನರಿದೆನೆಂಬವರು ಅರಿಯಲಾರರು ನೋಡಾ. ಭಕ್ತನಾದೆನೆಂಬವರೆಲ್ಲ ಭವಿಗಳಾದರು ನೋಡಾ. ಜಂಗಮವಾದೆನೆಂಬವರೆಲ್ಲ ಜಗಭಂಡರಾದರು ನೋಡಾ. ಲಿಂಗೈಕ್ಯನಾದೆನೆಂಬವರೆಲ್ಲ ಅಂಗವಿಕಾರಿಗಳಾದರು ನೋಡಾ. ಅಮುಗೇಶ್ವರಲಿಂಗವನರಿಯದಜ್ಞಾನಿಗಳ ಲಿಂಗೈಕ್ಯರೆಂದಡೆ ಅಘೋರನರಕ ತಪ್ಪದು.
--------------
ಅಮುಗೆ ರಾಯಮ್ಮ
ಉದರಪೋಷಣಕ್ಕೆ ಗಿಡುಗಿಡುದಪ್ಪದೆ ತಿರುಗುವ ಕುನ್ನಿ ಒಡೆಯನ ಗುರುತಬಲ್ಲುದೆ ? ಮಳೆಗಾಲದಲ್ಲಿ ಮೀನು ಮಿಡಿಚೆಯ ತಿಂಬ ನರಿ ಕತ್ತಲೆಯಬಲ್ಲುದೆ ? ಸತ್ತ ಹಂದಿಯ ತಿಂಬ ನಾಯಿ ಬೆಳುದಿಂಗಳಬಲ್ಲುದೆ ? ಕರ್ತನನರಿಯದ ವೇಷಧಾರಿಗಳು ನಿಮ್ಮನೆತ್ತ ಬಲ್ಲರು ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ಉಪಮಾತೀತನಾದ ಶರಣನ ಉಪಾಧಿಕನೆನ್ನಬಹುದೆ ? ತನ್ನ ತಾನರಿದ ಸಮ್ಯಗ್‍ಜ್ಞಾನಿಗೆ ನನ್ನವರು ತನ್ನವರೆಂಬ ಭಾವದ ಭ್ರಾಂತಿನಭ್ರಮೆ ಏತಕ್ಕೆ ? ಸಮ್ಯಜ್ಞಾನಿಯ ನಾನೇನೆಂಬೆನಯ್ಯಾ ಅಮುಗೇಶ್ವರಲಿಂಗವೆ. ?
--------------
ಅಮುಗೆ ರಾಯಮ್ಮ