ಅಥವಾ
(13) (3) (3) (0) (5) (0) (0) (0) (4) (0) (0) (2) (0) (0) ಅಂ (4) ಅಃ (4) (20) (0) (5) (0) (0) (2) (0) (1) (0) (0) (0) (0) (0) (0) (0) (3) (0) (2) (1) (12) (2) (0) (4) (2) (12) (0) (0) (0) (0) (6) (2) (0) (9) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪೊಡವಿಯನಾಳುವರ ದೊರೆಗಳೆಂಬೆನೆ ? ಮೃಡನ ವೇಷವ ಧರಿಸಿದವರ ಕಡುಗಲಿಗಳೆಂಬೆನೆ ? ಅರಿವು ಆಚಾರವನರಿಯದವರ ಲಿಂಗೈಕ್ಯರೆಂಬೆನೆ ? ಎನ್ನೆನಯ್ಯಾ ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ಪಟ್ಟಣದ ಸೂಳೆಯ ಕೂಡೆ ಪರಬ್ರಹ್ಮವ ನುಡಿಯಲೇಕೆ ? ಸಂತೆಗೆ ಬಂದವರ ಕೂಡೆ ಸಹಜವ ನುಡಿಯಲೇಕೆ ? ಕತ್ತೆಯನೇರುವರ ಕೂಡೆ ನಿತ್ಯರೆಂದು ನುಡಿಯಲೇಕೆ ? ಹೊತ್ತುಹೋಕರ ಕೂಡೆ ಕರ್ತನ ಸುದ್ದಿಯ ನುಡಿಯಲೇಕೆ ? ಅಮುಗೇಶ್ವರಲಿಂಗವನರಿದ ಶರಣಂಗೆ ಹತ್ತುಸಾವಿರವನೋದಲೇಕೆ ? ಹತ್ತುಸಾವಿರವ ಕೇಳಲೇಕೆ ? ಭ್ರಷ್ಟರ ಕೂಡೆ ನುಡಿಯಲೇಕೆ ?
--------------
ಅಮುಗೆ ರಾಯಮ್ಮ