ಎನ್ನ ಅಂಗದಲ್ಲಿ ಅಗಮ್ಯವಾಗಿ ಬಂದಬಳಿಕ,
ನಿನ್ನ ನೆನೆವವನಲ್ಲ ನಾನು.
ಎನ್ನ ಮನದಲ್ಲಿ ಮನೋಮೂರ್ತಿಯಾಗಿಪ್ಪೆಯಾಗಿ
ಮನದಲ್ಲಿ ನೆನೆವವನಲ್ಲವಯ್ಯಾ ನಿನ್ನ.
ನೀನೆ ಪತಿಯಾಗಿ ನಾನೆ ಸತಿಯಾದ ಕಾರಣ
ನಿನ್ನ ನೆನೆವವನಲ್ಲ ನಾನು ; ನಿನ್ನ ಪೂಜಿಸುವವನಲ್ಲ ನಾನು ;
ನಿನ್ನ ರಚಿಸುವವನಲ್ಲ.
ಎನಗೆ ನಿನಗೆ ಸಂದಿಲ್ಲದೆ ಸಮರಸವಯ್ಯಾ.
ಎನ್ನ ಅರ್ಚನೆ ಪೂಜನೆ ನಷ್ಟವಾಯಿತ್ತು;
ಎನ್ನ ಕ್ರೀ ನಿಃಕ್ರೀಯ ಕೂಡಿತ್ತು.
ಸಂದಿಲ್ಲದ ಸಮರಸವಾಗಿ, ನಿಮ್ಮ ಸಂದೇಹವಿಲ್ಲದೆ ಕಂಡೆನು.
ಮಹಾಲಿಂಗ ಅಮುಗೇಶ್ವರಲಿಂಗವೆ, ನಿಮ್ಮ ಶರಣ ಪ್ರಭುದೇವರ ಘನವ
ನಾನೇನೆಂದುಪಮಿಸುವೆನಯ್ಯಾ.