ಅಥವಾ
(13) (3) (3) (0) (5) (0) (0) (0) (4) (0) (0) (2) (0) (0) ಅಂ (4) ಅಃ (4) (20) (0) (5) (0) (0) (2) (0) (1) (0) (0) (0) (0) (0) (0) (0) (3) (0) (2) (1) (12) (2) (0) (4) (2) (12) (0) (0) (0) (0) (6) (2) (0) (9) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬೀಜವಿಲ್ಲದೆ ವೃಕ್ಷ ಬೆಳೆಯಬಲ್ಲುದೆ ? ಹೂವಿಲ್ಲದೆ ಹಣ್ಣಾಗಬಲ್ಲುದೆ ? ತೆಂಗಿನ ಮರನ ಬಿತ್ತಿದಡೆ ಅಂಬರಕ್ಕೆ ಹೋಯಿತ್ತು; ಕಾಯಿಲ್ಲದೆ, ನೀರು ಇಲ್ಲದೆ ಗಾಳಿಗೆ ಮರ ಮುರಿದಂತೆ ಆಯಿತ್ತು ಕಾಣಾ. ಅಮುಗೇಶ್ವರಲಿಂಗವನರಿಯದ ಅನಾಚಾರಿಗಳ ವಿರಕ್ತರೆಂಬೆನೆ ? ಎನಲಾಗದು.
--------------
ಅಮುಗೆ ರಾಯಮ್ಮ
ಬಾವಿಯ ಉದಕವ ಕುಡಿವರ ಕಂಡೆ; ಬಾನಿನಲ್ಲಿಪ್ಪ ಉದಕವ ತರುವರ ಕಾಣೆ. ಹರವಿಯ ಅಗ್ಘವಣಿಯ ಕುಡಿವವರನಲ್ಲದೆ ಅಮುಗೇಶ್ವರನೆಂಬ ಲಿಂಗವನರಿವವರ ಕಾಣೆ.
--------------
ಅಮುಗೆ ರಾಯಮ್ಮ
ಬಲ್ಲೆನೆಂಬ ವಿರಕ್ತರು ಬಾಯಿದೆರೆದು ಬಲ್ಲೆವೆಂದು ನುಡಿಯದಿರಿ. ಬಲ್ಲತನಕ್ಕೆ ಹೋರಿಯಾಡಲೇಕೆ ? ಮಹಾಜ್ಞಾನಿಗಳು ಬಂದು ಬಲ್ಲೆಯಾ ಎಂದಡೆ ಬಲುಗೈಯ ಅರಿಯೆನೆನ್ನಬೇಕು. ಇದಕೆ ತರ್ಕವೇಕೆ ಅಮುಗೇಶ್ವರಲಿಂಗವನರಿದವಂಗೆ.
--------------
ಅಮುಗೆ ರಾಯಮ್ಮ
ಬೆಟ್ಟದ ನೆಲ್ಲಿಯಕಾಯ ಪಟ್ಟಣಕ್ಕೆ ಹೊತ್ತುಕೊಂಡು ಹೋಗಿ ಹೊಟ್ಟೆಯ ಹೊರೆವವನಂತೆ, ಉತ್ತಮ ತೇಜಿಯ ಹೆಸರ ಕೇಳಿ ಕಡಲೆಯ ತಿಂಬ ಗಾವಲಿಗನಂತೆ, ಅತ್ತೆಯ ಹೆಸರ ಹೇಳಿ ಹೊಟ್ಟೆಯ ಹೊರೆವ ತೊತ್ತಿನಂತೆ, ಆದ್ಯರ ವಚನಂಗಳ ಅಲ್ಲಿಗಲ್ಲಿಗೆ ಉಸುರಿ ಅನ್ನ ಕೂಳಿಂಗೆ ಹರಿದಾಡುವ ಅಜ್ಞಾನಿಗಳ ಅನುಭಾವಿಗಳೆಂಬೆನೆ ? ಅಯ್ಯಾ, ವಿರಕ್ತರೆಂಬೆನೆ ? ವೇಷವ ಹೊತ್ತು ತಿರುಗುವ ಡೊಂಬನಂತೆ ಬಲ್ಲೆ ಬಲ್ಲೆನೆಂಬ ಅಹಂಕಾರವ ನುಡಿವ ಭವಿಗಳ ಅನುಭಾವಿಗಳೆಂಬೆನಲ್ಲದೆ ವಿರಕ್ತರೆಂಬೆನೆ ? ವಿಷಯವ ಮುಂದುಗೊಂಡು ತಿರುಗುವ ಅನುಭಾವಿಗಳನೆಂತು ವಿರಕ್ತರೆಂಬೆನಯ್ಯಾ ಅಮುಗೇಶ್ವರಲಿಂಗವೆ ?
--------------
ಅಮುಗೆ ರಾಯಮ್ಮ