ಅಥವಾ
(13) (3) (3) (0) (5) (0) (0) (0) (4) (0) (0) (2) (0) (0) ಅಂ (4) ಅಃ (4) (20) (0) (5) (0) (0) (2) (0) (1) (0) (0) (0) (0) (0) (0) (0) (3) (0) (2) (1) (12) (2) (0) (4) (2) (12) (0) (0) (0) (0) (6) (2) (0) (9) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತೊಗಲಬೊಕ್ಕಣದಲ್ಲಿ ಪಾಷಾಣವ ಕಟ್ಟುವರಲ್ಲದೆ ಪರುಷವ ಕಟ್ಟುವರೆ ? ಮಣ್ಣಹರವಿನಲ್ಲಿ ಸುರೆಯ ತುಂಬುವರಲ್ಲದೆ ರತ್ನವ ತುಂಬುವರೆ ? ಆದ್ಯರ ವಚನಂಗಳಿರ್ದುದ ಕಾಣಲರಿಯದೆ ನಾ ಘನ ತಾ ಘನವೆಂದು ಅಗಮ್ಯವ ಬೀರುವ ಅಜ್ಞಾನಿಗಳ ವಿರಕ್ತರೆಂಬೆನೆ ? ಅನುಭಾವಿಗಳೆಂಬೆನೆ ? ನಿಜವನರಿದ ಲಿಂಗೈಕ್ಯರೆಂಬೆನೆ ? ಅಮುಗೇಶ್ವರಲಿಂಗವನರಿಯದಜ್ಞಾನಿಗಳ ಆರೂಢರೆಂಬೆನೆ ?
--------------
ಅಮುಗೆ ರಾಯಮ್ಮ
ತೆತ್ತಿಗರು ಬಂದು ನಿತ್ಯನಾದೆಯಾ ಎಂದಡೆ, ಬಿಚ್ಚದಿರಬೇಕು ತನ್ನ ಶಿವಜ್ಞಾನವ. ತೆತ್ತಿಗರು ಕಂಡು ಮುಕ್ತನಾದೆಯಾ ಎಂದಡೆ, ಬಿಚ್ಚದಿರಬೇಕು ಅಮುಗೇಶ್ವರಲಿಂಗದ ಅರಿವ.
--------------
ಅಮುಗೆ ರಾಯಮ್ಮ
ತುಪ್ಪ ಬೋನವನುಂಡು, ನಚ್ಚುಮಚ್ಚಿನ ಮಾತ ನುಡಿದು, ರಚ್ಚೆಯಲ್ಲಿ ಕುಳಿತು ಇಷ್ಟಲಿಂಗವನಪ್ಪಿದವರ ನಿತ್ಯಜ್ಞಾನಿಗಳೆಂದಡೆ ಪ್ರತ್ಯಕ್ಷವಾಗಿ ಸುರಿಯವೆ ಬಾಯಲ್ಲಿ ಬಾಲಹುಳು ? ನಿತ್ಯರ ಕಂಡು ನಿಂದಿಸಿ ವಂದಿಸಿದಡೆ ಪ್ರತ್ಯಕ್ಷವಾಗಿ ಪರಶಿವನ ಶರಣರು ಹೊಟ್ಟೆಯ ಸೀಳದೆ ಮಾಣ್ಬರೆ ? ಅಮುಗೇಶ್ವರಲಿಂಗವನರಿಯದೆ ಬರಿಯ ಮಾತಿನಲ್ಲಿ ಅರಿವು ಸಂಬಂಧಿಗಳೆಂದಡೆ, ನೀವು ಸಾಕ್ಷಿಯಾಗಿ ಮಾರಿಗೆ ಹೊಯಿದ ಕೋಣನ ಕೊರಳ ಕೊಯಿದಂತೆ ಕೊಯ್ವರಯ್ಯಾ.
--------------
ಅಮುಗೆ ರಾಯಮ್ಮ