ಅಥವಾ
(5) (4) (1) (0) (1) (3) (0) (0) (2) (0) (0) (1) (1) (0) ಅಂ (1) ಅಃ (1) (7) (0) (0) (0) (0) (1) (0) (0) (0) (0) (1) (0) (0) (0) (0) (2) (0) (0) (1) (6) (6) (0) (5) (1) (5) (0) (0) (0) (0) (4) (1) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಯ್ಯಾ ಗುರುವೆಂಬರ್ಚಕನು ತಂದು, ಎನಗಿಷ್ಟವ ಕಟ್ಟಲಿಕೆ, ಹಂಗನೂಲ ಕೊರಳಲ್ಲಿ ಹಾಕಿ ಕಟ್ಟಿಕೋ ಎಂದನು. ಅದು ಎನಗೊಡವೆಯಲ್ಲವೆಂದು ಕಂಠವ ಹಿಡಿದು, ಲಿಖಿತವ ಲೇಖನವ ಮಾಡಿ ಮಾಡಿ ದಣಿದು, ಹಂಗನೂಲ ಹರಿದು ಹಾಕಿದೆನು. ಇಷ್ಟವನಿಲ್ಲಿಯೇ ಇಟ್ಟೆನು. ಅಯ್ಯಾ ನಾ ಹಿಡಿದ ನೀಲಕಂಠನು ಶಕ್ತಿ ಸಮೇತವ ಬಿಟ್ಟನು, ಕಲ್ಯಾಣ ಹಾಳಾಯಿತ್ತು, ಭಂಡಾರ ಸೊರೆಹೋಯಿತ್ತು, ನಿರ್ವಚನವಾಯಿತ್ತು . ಶಾಂತ ಸಂತೋಷಿಯಾದ, ಅರಸರು ನಿರ್ಮಾಲ್ಯಕ್ಕೊಳಗಾದರು. ಅಲೇಖ ನಾಶವಾಯಿತ್ತು, ಪತ್ರ ಹರಿಯಿತ್ತು, ನಾದ ಶೂನ್ಯವಾಯಿತ್ತು ಒಡೆಯ ಕಲ್ಲಾದ ಕಾರಣ, ಎನ್ನೈವರು ಸ್ತ್ರೀಯರು ಉಳಲಾಟಗೊಂಡೇಳಲಾರದೆ ಹೋದರು ಕಾಣಾ, ಕಲ್ಲಿನಾಥಾ.
--------------
ವಚನಭಂಡಾರಿ ಶಾಂತರಸ
ಅಹಿ ಆಹಾರವ ಕೊಂಬಲ್ಲಿ, ತನ್ನಯ ನಂಜ ಮರೆಯಿಸಿಕೊಂಬುದಲ್ಲದೆ, ತಾನೊಂದರಲ್ಲಿ ಉದಯಿಸಿಹ ಬಿಂದುವಿನಲ್ಲಿ, ಭಕ್ತರ ಮಂದಿರದಲ್ಲಿ ಒಪ್ಪಿಹ, ಗುರುಜಂಗಮದಲ್ಲಿ ಇರವಿನ ಪರಿ. ಹರಿಹರಿ ಕೂಡಿದಂತೆ ಅಲೇಖನಾದ ಶೂನ್ಯ ಕಲ್ಲಿಂದ ಬಲ್ಲಿದನಾದೆ ಬಾ.
--------------
ವಚನಭಂಡಾರಿ ಶಾಂತರಸ
ಅಗೆಯದ ಬಾವಿಯಲ್ಲಿ ಸಲೆಯಿಲ್ಲದ ನೀರದೆ. ಸೇದುವುದಕ್ಕೆ ಉರಿಯಿಲ್ಲದ ಕಣ್ಣಿ , ತುಂಬುವುದಕ್ಕೆ ಬಾಯಿಲ್ಲದ ಕುಂಭ, ಸೇದುವಾತನ ಕಣ್ಣು ತಲೆಯ ಹಿಂದೆ ಅದೆ. ಕಣ್ಣಿಯ ತೆಗೆವ ಕೈಕಾಲಿಲ್ಲದೆ ಬಾವಿಯ ತಡಿ ತಡವಾಯಿತ್ತು , ಅಲೇಖನಾದ ಶೂನ್ಯ ಕಲ್ಲಿನೊಳಗಾದ ಕಾರಣ.
--------------
ವಚನಭಂಡಾರಿ ಶಾಂತರಸ
ಅಲ್ಲಿ ಇಲ್ಲಿ ಎಂಬುದಕ್ಕೆ ಎಲ್ಲಿಯೂ ನೀನೆ. ಬಳ್ಳಿ ಚಿಗಿತು ಮರನ ನೆಮ್ಮಿ ಎಲ್ಲವ ಮುಸುಕಿದಂತೆ, ಮೂಲದ ಇರವನರಿತು, ಸಲಹಿದಡೆಲ್ಲಕ್ಕೂ ಕಳೆ ಬಂದು ಬುಡವಾದಡೆ, ಆ ಬಳ್ಳಿಯ ಕೊಯಿದಡೆ, ಎಲ್ಲವೂ ಒಣಗುವಂತೆ ನಿನ್ನ ಕಳೆ. ಅನ್ಯಭಿನ್ನವಿಲ್ಲದೆ ಕಾಮ್ಯಾರ್ಥಕ್ಕೆ ಒಲವರವಾಗಿ ಎಲ್ಲಿಯೂ ನೀನೆ. ಅಲೇಖನಾದ ಶೂನ್ಯ ಕಲ್ಲಿಂದ ತೊಲಗು, ನಿನ್ನಯ ಇರವಿನ ಪರಿಯ ತೋರಾ.
--------------
ವಚನಭಂಡಾರಿ ಶಾಂತರಸ
ಅಂಗ ಕೋಟೆ, ಭುಜ ಆಳುವೇರಿ, ತಲೆ ತೆನೆ, ಕಣ್ಣು ಅಂಬುಗಂಡಿ, ಕಾದುವ ಅರಸು ಅಸುರಾಜ, ಕೂಟದ ಮನ್ನೆಯರು ಐದುಮಂದಿ. ಎಂಟು ಘಟೆಯಾನೆ, ಪಂಚವಿಂಶತಿ ಕುದುರೆ, ಆಳು ಪರಿವಾರ ಕರಣಂಗಳ ಮೊತ್ತ ಕೂಡಿ ಇರಿಯಿತ್ತು. ಅರಿರಾಜ ತಮವಿರೋಧಿಯೊಡನೆ ಮುರಿದ, ಅಸುರಾಜ, ಪಶುಪತಿಯ ಗೆದ್ದ. ಎನಗಾಯಿತ್ತು ಹೇಳಾ, ಅಲೇಖನಾದ ಶೂನ್ಯ ಕಲ್ಲಿನೊಳಗಾದನೆ.
--------------
ವಚನಭಂಡಾರಿ ಶಾಂತರಸ