ಅಥವಾ
(5) (4) (1) (0) (1) (3) (0) (0) (2) (0) (0) (1) (1) (0) ಅಂ (1) ಅಃ (1) (7) (0) (0) (0) (0) (1) (0) (0) (0) (0) (1) (0) (0) (0) (0) (2) (0) (0) (1) (6) (6) (0) (5) (1) (5) (0) (0) (0) (0) (4) (1) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಊಧ್ರ್ವ ಭೂಮಿಯ ವಿರಾಗದಲ್ಲಿ ಸಪ್ತಸಮುದ್ರಕ್ಕೆ ಭೂಮಿ ಒಂದೆ. ಭೂಮಿಯ ಮಧ್ಯದಲ್ಲಿ ಒಂದು ವಟವೃಕ್ಷ ಹುಟ್ಟಿತ್ತು. ಕೊಂಬು ಮೂರು, ಅದರ ಬೆಂಬಳಿಯಲ್ಲಿ ಹುಟ್ಟಿದ ಕವಲಿಗೆ ಲೆಕ್ಕವಿಲ್ಲ. ಆ ಆಲದ ಹಣ್ಣಿಂಗೆ ಮೋನದ ಹಕ್ಕಿ ಈರೇಳುಕೋಟಿ ಕೂಡಿ, ಎಂಬತ್ತುನಾಲ್ಕು ಲಕ್ಷ ಬೇಟೆಕಾರರ ಬಲೆಯೊಳಗಾಯಿತ್ತು. ಇದರ ಒಲವರವ ಕೇಳಿಹರೆಂದು, ಅಲೇಖಮಯನಾದ ಶೂನ್ಯ ಕಲ್ಲಿನ ನಿಳಯದೊಳಗಾದ.
--------------
ವಚನಭಂಡಾರಿ ಶಾಂತರಸ
ಊರಳಗಣ ಅರಳೆಯ ಮರದಲ್ಲಿ , ಮೂರುವರ್ಣದ ಗಿಣಿ ಮರಿಯನಿಕ್ಕಿತ್ತು. ರಟ್ಟೆ ಬಲಿದು ಹಾರಲಾರದು, ಕೊಕ್ಕು ಬಲಿದು ಕೆಂಪಾಗದು. ಬಾಯಿ ಬಲಿದು ಹಣ್ಣ ಮೆಲಲಾರದು, ಅದ ಓಡಿಸುವರಿಗೆ ಅಸಾಧ್ಯ. ಅಲೇಖನಾದ ಶೂನ್ಯ ಇದರ ಹೊಲಬ ಕೇಳಿಹರೆಂದು ಕಲ್ಲಿನೊಳಗಾದ.
--------------
ವಚನಭಂಡಾರಿ ಶಾಂತರಸ
ಊರ ಹೊರಗೊಂದು ಗಿಡುಮರ. ಅದರೊಳಗೆ ಅಡಗಿಪ್ಪರು ಐವರು ಕಳ್ಳರು : ಒಬ್ಬ ನರಿ ಬಲೆಯವ, ಒಬ್ಬ ಹುಲಿ ಬಲೆಯವ, ಒಬ್ಬ ಉಡುಬೇಂಟೆಕಾರ, ಒಬ್ಬ ಬಳ್ಳುವಿನ ಕಾಲುಕಣ್ಣಿಯ ಪುಳಿಂದ, ಒಬ್ಬ ನಾಲ್ವರ ಬೇಂಟೆಯ ನೋಡುವ ಉಡಿಗಳ್ಳ. ಬೇಟೆ ಬೆಂಬಳಿಯಾದುದಿಲ್ಲ, ಬೇಟೆಗೆ ಹೋದವರೆಲ್ಲರೂ ಕಾಟಕ್ಕೆ ಒಳಗಾದರು. ಇದರಾಟವ ಕೇಳಿಹರೆಂದಂಜಿ, ಅಲೇಖನಾದ ಶೂನ್ಯ ಕಲ್ಲಿನ ನೆಲೆಮನೆಯ ಹೊಕ್ಕೆಯಲ್ಲ.
--------------
ವಚನಭಂಡಾರಿ ಶಾಂತರಸ