ಅಥವಾ
(5) (4) (1) (0) (1) (3) (0) (0) (2) (0) (0) (1) (1) (0) ಅಂ (1) ಅಃ (1) (7) (0) (0) (0) (0) (1) (0) (0) (0) (0) (1) (0) (0) (0) (0) (2) (0) (0) (1) (6) (6) (0) (5) (1) (5) (0) (0) (0) (0) (4) (1) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಲಲ್ಲಿ ಕಟ್ಟಿದ ಸಡ್ಡೆಯ ಕೀಳುವರಿಲ್ಲ. ಕೈಯಲ್ಲಿ ಹಿಡಿದ ಮೊರನ ಬೇಡಾ ಎಂಬವರಿಲ್ಲ. ತಲೆಯಲ್ಲಿ ಹೊತ್ತ ಕೊಂಗವ ಇಳುಹುವರಿಲ್ಲ. ಸಡ್ಡೆಗೆ ಮೂರು ಕವೆ. ಒಂದೆ ಚಿತ್ತವಟ್ಟ. ಮೊರಕೆ ಮೂರು ಗೋಟು, ಮಾಡುವಾಕೆ ಒಬ್ಬಳೆ. ಕೊಂಗಕ್ಕೆ ಎರಡು ಗೋಟು, ತೂರುವರು ಮೂವರು. ರಾಶಿವೊಂದೆ, ಕೊಳಗ ಎರಡು, ಅಳೆವರು ಲೆಕ್ಕಕ್ಕೆ ಕಡೆಯಿಲ್ಲ. ಇದ ಕೇಳಿಹರೆಂದಂಜಿ, ಅಲೇಖನಾದ ಶೂನ್ಯ ಕಲ್ಲಿನೊಳಹೊಕ್ಕ.
--------------
ವಚನಭಂಡಾರಿ ಶಾಂತರಸ
ಕಾಯದ ಕರಸ್ಥಲದಲ್ಲಿ ಇಷ್ಟಲಿಂಗವನರಿವುದಕ್ಕೆ ಬಾಹ್ಯೇಂದ್ರಿಯ ನಷ್ಟವಾಗಿರಬೇಕು. ಪ್ರಾಣನ ಕರಸ್ಥಲದಲ್ಲಿ ಪ್ರಾಣಲಿಂಗವನರಿವುದಕ್ಕೆ ಅಂತರಿಂದ್ರಿಯವರತು ಮಂತ್ರಸಾಹಿತ್ಯವಾಗಿರಬೇಕು. ಭಾವದ ಕರಸ್ಥಲದಲ್ಲಿ ಭಾವಲಿಂಗವನರಿವುದಕ್ಕೆ ಭಾವದ ಭ್ರಮೆಯಳಿದು ನಿಜ ನೆಲೆಗೊಳ್ಳಬೇಕು. ಕಾಯ ತನ್ನಂತೆ ಹರಿದು, ಜೀವ ತನ್ನಂತೆ ನೆನೆದು, ಭಾವ ತನ್ನಂತೆ ಬೆರಸಿದಡೆ, ಸೂಳೆಯ ಕೂಟದಂತೆ ಕಾಣಾ, ಅಲೇಖನಾದ ಶೂನ್ಯ ಕಲ್ಲಿನ ಮರೆಯವನೆ
--------------
ವಚನಭಂಡಾರಿ ಶಾಂತರಸ
ಕಲ್ಲಿನ ಹೋಳ ಬೆಲ್ಲವೆಂದು ಮಕ್ಕಳ ಕೈಯಲ್ಲಿ ಕೊಟ್ಟಡೆ, ಹಲ್ಲಿನಲ್ಲಿ ಕಡಿದು, ನಾಲಗೆಯಲ್ಲಿ ನಂಜಿ, ಬೆಲ್ಲವಲ್ಲಾ ಎಂದು ಹಾಕಿ ಮನೆಯವರೆಲ್ಲರ ಕಾಡುವಂತೆ, ನಾನರಿಯದೆ ಕುರುಹ ಹಿಡಿದು, ಅದು ಎನ್ನ ಮರವೆಯ ಮನಕ್ಕೆ ತೆರಹಾಗದು. ನಾನರಿವಡೆ ಎನ್ನ ಒಡಗೂಡಿದ ತುಡುಗುಣಿ ಬೆನ್ನಬಿಡದು. ಒಡೆಯ ಸತುವಿಲ್ಲದೆ ಬಡವನ ಬಂಟನಾದ ಮತ್ತೆ ಬಾಯ ಹೊಡೆಯಿಸಿಕೊಂಬುದಕ್ಕೆ ಅಂಜಲೇಕೆ ? ಬಿಡು ಬಡವೊಡೆಯನ, ಬಿಡದಿದಡೆ ಕಲ್ಲೆದೆಯಾಗು. ಇವರೆಲ್ಲರ ವಿಧಿ ಎನಗಾಯಿತ್ತು, ಕೈಯಲ್ಲಿದ ಕಠಿಣವ ನಂಬಿ. ಇದರ ಬಲ್ಲತನವ ಹೇಳಾ, ಅಲೇಖನಾದ ಶೂನ್ಯ ಕಲ್ಲಿನ ಮರೆಯಾದವನೆ
--------------
ವಚನಭಂಡಾರಿ ಶಾಂತರಸ
ಕಾಳಾಡಿನ ಹಾಲ ಕಂಬಳಿಗುರಿ ಕುಡಿಯಿತ್ತು. ಕುಡಿದು ಮೂರುಲೋಕವೆಲ್ಲವೂ ಎನ್ನ ಕಂಬಳಿಯ ಗೊಪ್ಪೆಯಲ್ಲಿ ತುಂಬಿದೆನೆಂದು ಸಂಭ್ರಮ ಮಾಡುತ್ತಿದೆ. ಅದರ ಸಂಗಸುಖವ ಹೇಳಾ, ಅಲೇಖನಾದ ಶೂನ್ಯ ಕಲ್ಲಿನ ಮರೆ ಬೇಡ.
--------------
ವಚನಭಂಡಾರಿ ಶಾಂತರಸ
ಕುರುಹಿಂಗೆ ಆಚಾರದ ಪೂಜೆ. ಅರಿವಿಂಗೆ ಸಕಲ ವರ್ಮ ಪ್ರಕೃತಿ ಪಂಚೇಂದ್ರಿಯದೊಳಗಾದ ಸಂಚಿತಕರ್ಮಂಗಳ ಶಂಕೆಯ ಹರಿದು ಇಪ್ಪುದು, ತನುಭಕ್ತಿ. ಮನ ಮಹದೊಡಗೂಡಿ ಇರು. ಅಲೇಖನಾದ ಶೂನ್ಯ ಕಲ್ಲಿನೊಳಗೆ ಇದ್ದವನ ಮೆಲ್ಲನೆ ಅರಿ.
--------------
ವಚನಭಂಡಾರಿ ಶಾಂತರಸ
ಕಾಳಮೇಘಮಂದಿರದ ಜಾಳಾಂಧರದ ಮನೆಯಲ್ಲಿ ಒಬ್ಬ ಸೂಳೆಯ ಬಾಗಿಲಲ್ಲಿ ಎಂಬತ್ತನಾಲ್ಕು ಲಕ್ಷ ಮಿಂಡಗಾರರು. ಅವಳ ಸಂಗದಲ್ಲಿ ಇರಲಮ್ಮರು, ಅವಳು ತಾವೇ ಬರಲೆಂದು ಕರೆಯದಿಹಳು. ಅವಳಿಗೆ ಯೋನಿ ಹಿಂದು, ಅಂಡ ಮುಂದು, ಕಣ್ಣು ಅಂಗಾಲಿನಲ್ಲಿ, ತಲೆ ಮುಂಗಾಲಿನಲ್ಲಿ, ಕಿವಿ ಭುಜದಲ್ಲಿ, ಕೈ ಮಂಡೆಯ ಮೇಲೆ, ಮೂಗು ಹಣೆಯಲ್ಲಿ, ಮೂಗಿನ ದ್ವಾರ ಉಂಗುಷ*ದಲ್ಲಿ, ಬಸುರು ಬಾಯಲ್ಲಿ, ನಡೆವಳು ತಲೆ ಮುಂತಾಗಿ, ಕಾಲು ಮೇಲಾಗಿ. ಅವಳ ಕೂಡುವ ಪರಿಯ ಹೇಳಾ, ಅಲೇಖನಾದ ಶೂನ್ಯ ಗೆದ್ದೆಯಲ್ಲಾ, ಕಲ್ಲಿನ ಹೊಟ್ಟೆಯ ಮರೆಯಲ್ಲಿ.
--------------
ವಚನಭಂಡಾರಿ ಶಾಂತರಸ
ಕಂಬಳಿಯ ಕೌಪ ಕಟ್ಟಿದ ಮತ್ತೆ, ಅವರವರ ಬೆಂಬಳಿಯಲ್ಲಿ ಕಂಬಳಿಯ ಹೊದಿಹೆನೆಂಬ ಆಸೆಯೇಕೆ ? ಹೊದೆಯಲಿಲ್ಲದ ಕಂಬಳಿಯ ಉಡಿಗೆ ಕಟ್ಟಿದ ಮತ್ತೆ, ಈ ಕೈಯ ಗಡಿಗೆಯಣ್ಣಗಳ ಒಡಗೂಡಲೇಕೆ ? ಅವರ ತೊಡೆಯ ಸಂದಿಯಲ್ಲಿ ಕುಳಿತು, ಅವರುವ ಮಾತಿಗೆ ಅಡುಮೆಯಾಗಲೇಕೆ ? ಇಂತಿವನರಿದಹರೆಂದಡಗಿದ, ಅಲೇಖನಾದ ಶೂನ್ಯ ಕಲ್ಲಿನ ಮರೆಯಾದ
--------------
ವಚನಭಂಡಾರಿ ಶಾಂತರಸ