ಅಥವಾ
(5) (4) (1) (0) (1) (3) (0) (0) (2) (0) (0) (1) (1) (0) ಅಂ (1) ಅಃ (1) (7) (0) (0) (0) (0) (1) (0) (0) (0) (0) (1) (0) (0) (0) (0) (2) (0) (0) (1) (6) (6) (0) (5) (1) (5) (0) (0) (0) (0) (4) (1) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬ್ರಹ್ಮಮೂರ್ತಿಗೂ ಶಿಲೆ ಒಂದೆ, ವಿಷ್ಣು ಮೂರ್ತಿಗೂ ಶಿಲೆ ಒಂದೆ, ರುದ್ರಮೂರ್ತಿಗೂ ಶಿಲೆ ಒಂದೆ, ರೂಪಿನ ಅವತಾರ ಬ್ಥಿನ್ನವಾಯಿತ್ತು, ಸ್ಥೂಲ ಸೂಕ್ಷ್ಮ ಕಾರಣದಂತೆ, ಕುಂಭ ಜಲ ಬಿಂಬದಂತೆ, ಇನ್ನಾರನಹುದೆಂಬೆ, ಇನ್ನಾರನಲ್ಲಾ ಎಂಬೆ ? ಬ್ರಹ್ಮ ಕಾಲು, ವಿಷ್ಣು ಕೈ, ರುದ್ರ ಕಣ್ಣು, ಈಶ್ವರ ತಲೆ, ಸದಾಶಿವ ಪ್ರಾಣವಾದಲ್ಲಿ ಇವು ಸಮಯ. ಈ ಪಂಚಕೋಶಕ್ಕೆ ಆಧಾರ ಪರಮಜ್ಞಾನ. ಅದ ಭೇದಿಸಲರಿಯದೆ ವಾದವ ಮಾಡಿದರೆಲ್ಲರು. ನಾದ ಬಿಂದು ಕಳೆ ಅತೀತನರಿ, ಅಲೇಖನಾದ ಶೂನ್ಯ ಕಲ್ಲಿನೊಳಗಾದವನ.
--------------
ವಚನಭಂಡಾರಿ ಶಾಂತರಸ
ಬಾಯಿಲ್ಲದ ಪಶು ಬತ್ತದ ಹೊಲನ ಹೊಕ್ಕು, ಹುಟ್ಟದ ಸಸಿಯ ಮೆಯ್ದು, ಒಡೆಯನಿಲ್ಲದ ಪರವ ತೊಂಡ ಕೂಡಿದ, ತೊಂಡಿನ ಹಟ್ಟಿಯ ಬಾಗಿಲೊಂದು, ಬೀಗ ಒಂಬತ್ತು. ಮೂರೆಸಳಿನ ಬೀಗ ಮೂರು, ಆರೆಸಳಿನ ಬೀಗ ಮೂರು, ಇಪ್ಪತ್ತೈದೆಸಳಿನ ಬೀಗ ಮೂರು ತೆಗೆವ ಕೈಗೆ ನಾಭಿಯಿಲ್ಲ, ಸಿಕ್ಕಿತ್ತು ಹಸು ಹಟ್ಟಿಯಲ್ಲಿ, ಇನ್ನಾರಿಗೆ ಹೇಳುವೆ ? ಅಲೇಖನಾದ ಶೂನ್ಯ ಕಲ್ಲಿನೊಳಗಾದವನ ಬಲ್ಲವರಾರೊ ?
--------------
ವಚನಭಂಡಾರಿ ಶಾಂತರಸ
ಬಾಯಲ್ಲಿ ಕಾಲು ಹುಟ್ಟಿ, ಕೈಯಲ್ಲಿ ಕಣ್ಣು ಹುಟ್ಟಿ, ನಾಸಿಕ ಕಿವಿಯಾಗಿತ್ತು. ಇಷ್ಟು ಹೇಳಲಾರದೆ, ಅಲೇಖನಾದ ಶೂನ್ಯ ಕಾಲಕ್ಕಂಜಿ ಕಲ್ಲಿನೊಳಗಾದ
--------------
ವಚನಭಂಡಾರಿ ಶಾಂತರಸ
ಬಾಯಿ ಉಂಡು, ನಾಸಿಕ ವಾಸಿಸಿ, ಕಣ್ಣು ಕಂಡು, ಕಿವಿ ಕೇಳಿ, ಕೈ ಮುಟ್ಟಿನೋಡಿ ಅರ್ಪಿಸುವಾಗ ನಿನಗಲ್ಲಿಯೇ ತೃಪ್ತಿಯೇ ? ನೀ ತತ್ತುಗೈಯ ಇಕ್ಕಿನ ಕೂಳವನೆ ? ಎಲ್ಲರ ಮನಸ್ಸು ಪರಕೈಯಿಂದ ಪರೀಕ್ಷಿಸಿಕೊಂಬವನೆ ? ಎಲ್ಲರಲ್ಲಿ ಅರಿಕೆ ತನ್ಮಯ ನೀನೆಂಬುದನರಿಯದೆ. ಕಾಲ ಮುಳ್ಳು ಕೈಯಿಂದ ಕಳೆವಂತೆ, ಅದಾರಿಗೆ ಲೇಸು ಹೇಳಾ ? ಇದರ ಆಗ ಕೇಳಿಹರೆಂದು, ಅಲೇಖನಾದ ಶೂನ್ಯ ಕಲ್ಲಿನೊಳಗಾದೆಯಲ್ಲಾ !
--------------
ವಚನಭಂಡಾರಿ ಶಾಂತರಸ
ಬಾಹ್ಯ ರಚನೆಯಿಂದಾದ ಭಕ್ತಿ ವಿರಕ್ತಿ ಸತ್ಪಥ ಮಾರ್ಗದಿರವು, ಮಾತಿನಲ್ಲಿಯೊ, ಚೈತನ್ಯಾತ್ಮಕ ಭಾವ ಮುಟ್ಟಿದಲ್ಲಿಯೊ ? ಉಭಯವನರಿದಲ್ಲಿ ಕಾಬವನ ಇರವು, ಮಠದ ದೀಪ ವಾಯುವಿನ ಸಂಗದ ಕೂಟ. ಪಾಷಾಣದಲೊದಗಿದ ಜ್ಯೋತಿಯ ಬೆಳಗು, ವಾಯುವ ನೀತಿಗೊದಗುವುದೆ ? ಕಪಟದ ನಿಃಕಪಟದ ದೀಪದ್ವಯ ಪರಿಯಂತೆ, ವಸ್ತು ನಿರ್ದೇಶದ ಸುಖ ಸಂಭಾಷಣ ದೃಷ್ಟ ಕೊಡು, ಅಲೇಖನಾದ ಶೂನ್ಯ ಕಲ್ಲಿನಲ್ಲಿದ್ದು, ಮೆಲ್ಲನೆ ಓ ಎನಲಾಗದೆ ?
--------------
ವಚನಭಂಡಾರಿ ಶಾಂತರಸ