ಅಥವಾ
(5) (4) (1) (0) (1) (3) (0) (0) (2) (0) (0) (1) (1) (0) ಅಂ (1) ಅಃ (1) (7) (0) (0) (0) (0) (1) (0) (0) (0) (0) (1) (0) (0) (0) (0) (2) (0) (0) (1) (6) (6) (0) (5) (1) (5) (0) (0) (0) (0) (4) (1) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹುಟ್ಟಿಸುವವ ಪೃಥ್ವಿಗೆ ಹಂಗಾದ, ಬೆಳೆಯಿಸುವವ ಅಪ್ಪುವಿಗೆ ಹಂಗಾದ. ಕೊಯಿಸುವವ ಕಾಲಗೆ ಹಂಗಾದ, ನಿನ್ನನರಿತೆಹೆನೆಂಬವ ಶಿಲೆಗೆ ಹಂಗಾದ. ಇವರೆಲ್ಲರ ಹಂಗಿಗೆ ಹರುಹ ಕೇಳಿಹರೆಂದಂಜಿ, ಅಲೇಖಮಯನಾದ ಶೂನ್ಯ ಕಲ್ಲಿನ ಮರೆಯಾದೆಯಾ ?
--------------
ವಚನಭಂಡಾರಿ ಶಾಂತರಸ
ಹುಟ್ಟದೆ ಬ್ರಹ್ಮನ ಹಂಗಿನಲ್ಲಿ, ಬೆಳೆಯದೆ ವಿಷ್ಣುವಿನ ಹಂಗಿನಲ್ಲಿ, ಸಾಯದೆ ರುದ್ರನ ಬೆಂಬಳಿಯಲ್ಲಿ , ಹರಿಯಿತ್ತು ಬ್ರಹ್ಮನ ಬಲೆ, ಗುರುವಿನ ಕರದಲ್ಲಿ. ಬಿಟ್ಟಿತ್ತು ವಿಷ್ಣುವಿನ ಸುಖ, ಲಿಂಗದ ಅರ್ಪಿತದಲ್ಲಿ. ಮರೆಯಿತ್ತು ರುದ್ರನ ಮರಣ, ವಸ್ತುವಿನ ಮೂರ್ತಿಯಲ್ಲಿ. ಮತ್ತೆ ನಾನಿನ್ನಾರ ಕೇಳಿಹೆ ? ಅಲೇಖನಾದ ಶೂನ್ಯ ಕಲ್ಲ ಬಿಟ್ಟ ತೆರನ ಕಂಡೆ.
--------------
ವಚನಭಂಡಾರಿ ಶಾಂತರಸ
ಹಲವು ಧಾನ್ಯವನುಂಡವರ ಸಲಗೆಡದಿದೆ ಅಸು. ಫಲ ರಸಸಾಳಿ ಸುಭಿಕ್ಷವ ಕೊಂಡು ಅಸು ಗೆಲದಿದೆ. ಇಂತೀ ಒಲವರವೇಕೆ ನಿನಗೆ, ಕೆಲವರ ಅಳಿಸಿ, ಕೆಲವರ ನಗಿಸಿ ? ಬಲವಂತತನವೆ ನಿನಗಿದು ? ಬಲುಹೇಕೆ ಭಕ್ತರೊಳು, ನಿನ್ನಯ ನೆರೆ ನಂಬುವ ಶರಣರೊಳು ? ಬಿಡು, ಕಲ್ಲಿನೊಳಗಣ ಮರೆಯ, ತೆರೆಯ ತೆಗೆ. ಅಲೇಖನಾದ ಶೂನ್ಯ, ಸಮಗಂಡಿರು ಎಲ್ಲರುವ.
--------------
ವಚನಭಂಡಾರಿ ಶಾಂತರಸ