ಅಥವಾ
(5) (4) (1) (0) (1) (3) (0) (0) (2) (0) (0) (1) (1) (0) ಅಂ (1) ಅಃ (1) (7) (0) (0) (0) (0) (1) (0) (0) (0) (0) (1) (0) (0) (0) (0) (2) (0) (0) (1) (6) (6) (0) (5) (1) (5) (0) (0) (0) (0) (4) (1) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪೃಥ್ವಿಯಲ್ಲಿದ್ದು ಪೃಥ್ವಿಯನರಿತು, ಅಪ್ಪುವಿನಲ್ಲಿದ್ದು ಅಪ್ಪುವನರಿತು, ತೇಜದಲ್ಲಿದ್ದು ತೇಜವನರಿತು, ವಾಯುವಿನಿಲ್ಲಿದ್ದು ವಾಯುವನರಿತು, ಆಕಾಶದಲ್ಲಿದ್ದು ಆಕಾಶವನರಿತು, ತನ್ನಲ್ಲಿದ್ದು ತನ್ನನರಿತು, ಕಣ್ಣಿನೊಳಗಣ ಕಣ್ಣ ಕಂಡು ಕಲ್ಲಿನೊಳಗಡಗಿ, ಅಲೇಖನಾದ ಶೂನ್ಯನ ಭೇದವನರಿತು, ಕಾಯವನರಿ
--------------
ವಚನಭಂಡಾರಿ ಶಾಂತರಸ
ಪೃಥ್ವಿ ನಿನ್ನ ಮುಖದಲ್ಲಿ, ಅಪ್ಪು ನಿನ್ನ ಮುಖದಲ್ಲಿ, ತೇಜ ನಿನ್ನ ಮುಖದಲ್ಲಿ, ವಾಯು ನಿನ್ನ ಮುಖದಲ್ಲಿ, ಆಕಾಶ ನಿನ್ನ ಮುಖದಲ್ಲಿ, ಪಂಚಭೂತಿಕನಾದೆ, ಸರ್ವಲೋಕ ಕುಕ್ಷಿ ಕರಂಡನಾದೆ, ನಾ ನಿನಗೆ ಹೊರಗೆ. ಅರಿವುಮಯ ನೀನಾಗಿ, ಕಲ್ಲಿನ ಮರೆ ಬೇಡ. ಮನದ ಶಿಲೆಯಲ್ಲಿ ಕುರುಹುಗೊಳ್ಳು. ಅಲೇಖನಾದ ಶೂನ್ಯ ಅವತಾರ ಶೂನ್ಯ ಎನಗೊಂದು ಹೇಳಾ.
--------------
ವಚನಭಂಡಾರಿ ಶಾಂತರಸ
ಪೂಜೆ ಪುಣ್ಯದ ಇರವು, ಮಾಟ ಸುಕೃತದ ಬೀಜ, ಸುಕೃತ ಭವದೊಡಲು. ಪೂಜೆಯ ಮೀರಿ ಕಾಬರಿವಿಲ್ಲ, ಮಾಟವ ಮೀರಿ ಮೂರರ ಕೂಟವನರಿವುದಿಲ್ಲ. ಉಭಯದ ಕೋಟಲೆಯ ಬಿಡಿಸು, ಅಲೇಖನಾದ ಶೂನ್ಯ ಕಲ್ಲಿನ ಒಲವರ ಬೇಡ.
--------------
ವಚನಭಂಡಾರಿ ಶಾಂತರಸ
ಪುಡಿಯ ದ್ರವಹೀನವಾಗಿ ಕೂಡಿ ಕುಂಭವನೊದಗಿಸುವವನಂತೆ, ಅರಿವುಹೀನವಾಗಿ ಕುರುಹ ಎಡೆಬಿಡುವಿಲ್ಲದೆ ತೊಳೆವವನಂತೆ, ಆಸೆ ಮುಂಚು, ಅರಿವು ಹಿಂಚಾಗಿ ಜಗದೀಶನ ಪೂಜೆ ಏತರದೆಂದೆ ? ಇದರ ಖ್ಯಾತವ ಹೇಳಾ, ಅಲೇಖನಾದ ಶೂನ್ಯ ಕಲ್ಲಿನ ಮರೆಯವನೆ.
--------------
ವಚನಭಂಡಾರಿ ಶಾಂತರಸ
ಪೃಥ್ವಿ ಆಕಾಶದ ಮಧ್ಯದಲ್ಲಿ ಖೇಚರ ಮಂಡಲ : ಆ ಮಂಡಲದರಸು ವಿಹಂಗರಾಜ, ಮರೀಚಿಕ ಪ್ರಧಾನ, ಮಹೀತಳ ತಳವಾರ, ಇಂತೀ ಮಂಡಲ ಸುರಕ್ಷದಲ್ಲಿ ಇರುತಿರಲಾಗಿ, ಗೋರಕ್ಷನೆಂಬ ಅರಸು ಮುತ್ತಿದ ಮಂಡಲವ. ಪಟ್ಟಣ ಕೋಳುಹೋಗದು, ಮುತ್ತಿದರಸು ಬಿಟ್ಟುಹೋಗ. ಇದ ಸಂತೈಸಲಂಜಿ, ಅಲೇಖಮಯನಾದ ಶೂನ್ಯ ಕಲ್ಲಿನೊಳಹೊಕ್ಕು, ಎಲ್ಲರ ಗೆದ್ದ.
--------------
ವಚನಭಂಡಾರಿ ಶಾಂತರಸ
ಪಾಡಿನ ಫಲವನಡೆದಡೆ ಫಳ ರಸವಲ್ಲದೆ ಹೂ ಮಿಡಿಯಲ್ಲಿ ಅಡೆದವರುಂಟೆ? ತನುರಸ ಆತ್ಮನ ಅಡಿಯಲ್ಲಿ ಅಡಗುವನ ಬಿಡುಮುಡಿಯ ಲತೆಯ ಸಾಗಿಸಿದ ಶಾಖೆಯಂತೆ, ಘಟದ ಅಸುವಿನ ಭೇದ. ಇದರ ಎಸಕವ ಕೇಳಿಹರೆಂದು, ಅಲೇಖನಾದ ಶೂನ್ಯ ಕಲ್ಲಿನ ಮೆರೆಯಾದೆಯಾ ?
--------------
ವಚನಭಂಡಾರಿ ಶಾಂತರಸ