ಅಥವಾ
(5) (4) (1) (0) (1) (3) (0) (0) (2) (0) (0) (1) (1) (0) ಅಂ (1) ಅಃ (1) (7) (0) (0) (0) (0) (1) (0) (0) (0) (0) (1) (0) (0) (0) (0) (2) (0) (0) (1) (6) (6) (0) (5) (1) (5) (0) (0) (0) (0) (4) (1) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಿವ ಶಿವಾ ! ಎಲ್ಲರೂ ಉಂಟಾದುದ ಹೇಳಿ, ಇಲ್ಲದ ಬಯಲಿಂಗೆ ಮನವನಿಕ್ಕಿದರು. ಎನಗಿನ್ನಾವುದು ಬಟ್ಟೆ ? ಬಸವಣ್ಣನ ಕರುಣೆಯಿಂದ ಕಟ್ಟಿದ ಲಿಂಗಕ್ಕೆ ಹುಟ್ಟುಮೆಟ್ಟನರಿಯೆ. ಕೊಟ್ಟಾತ ಹೇಳಿದುದಿಲ್ಲ, ಕಟ್ಟಿಕೋ ಎಂದಾತ, ಈ ಬಟ್ಟೆಯಲಿರು ಎಂದುದಿಲ್ಲ. ಕಡ್ಡಾಯಕ್ಕೆ ಕಟ್ಟಿದ ಈ ಒಡ್ಡಗಲ್ಲಿನ ಮುರಿಯೆ ಎನಗೊಂದು ಬುದ್ಧಿಯ ಹೇಳಾ. ಅಲೇಖನಾದ ಶೂನ್ಯ ಕಲ್ಲಿನೊಳಗೆ ಏಕಾದೆಯಯ್ಯಾ.
--------------
ವಚನಭಂಡಾರಿ ಶಾಂತರಸ