ತ ಪದದಿಂದ ಪ್ರಾರಂಭವಾಗುವ ವಚನಗಳು:
ತೆರೆಯ ಮರೆಯ ಬಹು ರೂಪದಂತೆ, ಸೀರೆಯ ಮರೆಯ ಉಪಸ್ಥಳದಂತೆ,ಆ ಪೂರ್ವ ಕಟ್ಟಿದ ಮರೆಯಬಿಡುವನ್ನಕ್ಕ ಸೈರಿಸಲಾರದವನಂತೆಎನ್ನತಲ್ಲಣ.ನಿನ್ನಯ ಕಲ್ಲಿನ ಮರೆಯ ನನ್ನಿಯ ರೂಪ ತೋರು.ಎನ್ನಯ ಕಲ್ಲೆದೆಯಬಿಡಿಸು, ಮನೋವಲ್ಲಭ, ಅಲೇಖನಾದ ಶೂನ್ಯ,ಉರಿಗಲ್ಲಿನ ಖುಲ್ಲತನವ ಬಿಡು, ಬೇಡಿಕೊಂಬೆ ನಿನ್ನನು.
ತುಂಬಿದ ನಾಳಿ ಬಾಯ ಹಂಗಾದಂತೆ, ಬಾಯ ಬೆಣ್ಣೆಯ ಹಂಗಿಗನಾಗಿ,ನಳಿಗೆ ಬಾಯಿ ಬೆಣ್ಣೆಯೆರೆವಳ ಹಂಗು.ಮಂಡೆಯ ಶೂಲೆ ಇನ್ನೆಂದಿಗೆ ಹರಿಗು ?ಈ ಅಬ್ಥಿಸಂದ್ಥಿಯ ಹೇಳು, ಅಲೇಖನಾದ ಶೂನ್ಯ ಕಲ್ಲಿನ ಮರೆ ಬೇಡ