ಅಥವಾ
(5) (4) (1) (0) (1) (3) (0) (0) (2) (0) (0) (1) (1) (0) ಅಂ (1) ಅಃ (1) (7) (0) (0) (0) (0) (1) (0) (0) (0) (0) (1) (0) (0) (0) (0) (2) (0) (0) (1) (6) (6) (0) (5) (1) (5) (0) (0) (0) (0) (4) (1) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವಾಸನೆ ವೆಗ್ಗಳದ ಕುಸುಮವ, ಅದ ಲೇಸ ಕಂಡು ವಾಸಿಸಿದಡೆ ಸುಖವಲ್ಲದೆ, ಅದ ಘಾಸಿ ಎಸೆದಡೆ ಅದೇತರ ಗಂಧ ? ನಾತದ ಕೂಟ. ಭಕ್ತನ ಪೂಜೆಯ ಗುರುವಿನ ಯುಕ್ತಿ, ಇಷ್ಟನರಿತಡೆ ಆತನಿರವು, ತತ್ವದ ಬ್ಥಿತ್ತಿ, ಅಲೇಖನಾದ ಶೂನ್ಯ ಕಲ್ಲಿನ ಮೆಲ್ಲೆದೆಯಾಗದಿರಯ್ಯಾ.
--------------
ವಚನಭಂಡಾರಿ ಶಾಂತರಸ
ವೃಶ್ಚಿಕ ಬಾಲದಲ್ಲಿ, ಸರ್ಪ ಬಾಯಲ್ಲಿ, ಕಂಠೀರವ ದಂತದಲ್ಲಿ, ಇಂತಿವರ ಸಂಚವನರಿದಲ್ಲಿ ಸಂಕಲ್ಪವಿಲ್ಲ. ಚಿತ್ತದ ಹಿಂಚುಮುಂಚನರಿತಲ್ಲಿ, ಕರಣದ ಇಂದ್ರಿಯಂಗಳ ಗೊಂಚಲ ಮುರಿದು, ನಿಜತತ್ತ್ವದ ಶಾಂತಿಯನರಿಯೆಂಬ ಕುರುಹ ಕೇಳಿಹರೆಂದು, ಅಲೇಖಮಯನಾದ ಶೂನ್ಯ ಕಲ್ಲಿನ ಮರೆ ಬೇಡ, ಹೇಳೆನ್ನೊಳು.
--------------
ವಚನಭಂಡಾರಿ ಶಾಂತರಸ
ವೃಕ್ಷ ಬೀಜದೊಳಗಡಗಿ, ಬೀಜ ವೃಕ್ಷದೊಳಗಡಗಿ ಉಭಯವಿದು ಫಲವೇನು? ಆದಿ ಧರೆಯಿದಲ್ಲದೆ ಉಭಯನಾಮವಿಲ್ಲ. ಅರಿವಿನ ಅರಿಕೆ, ಕುರುಹಿನ ಪೂಜೆ ನೆರಿಗೆಯಾಗಬೇಕೆ ? ಅಲೇಖನಾದ ಶೂನ್ಯ ಬಲುಗಲ್ಲಿನ ನೆಲೆಯ ದಾಂಟಿದೆಯಲ್ಲಾ.
--------------
ವಚನಭಂಡಾರಿ ಶಾಂತರಸ
ವೇದದಲ್ಲಿ ಕಂಡುದಿಲ್ಲ, ಅದು ಮಾತಿನ ಮನೆಯಾಗಿ ಹೋಯಿತ್ತು. ಹೋಮದಲ್ಲಿ ಕಂಡುದಿಲ್ಲ, ತಿಲ ಘೃತ ಹೋತು ಮೊದಲಾದ ಕಾಷ* ತೃಣ ದಿಗ್ಬಲಿಗಳನಿಕ್ಕಿ ರೂಪಾದುದಿಲ್ಲ. ಶಾಸ್ತ್ರವ ಕೇಳಿ ಮನ ಸಂತೈಸುವುದಿಲ್ಲ, ಪುರಾಣವನೋದಿ ಪುಣ್ಯನಪುಣ್ಯನ ಕಂಡುದಿಲ್ಲ. ಈತ ಕೊಟ್ಟುದು ಕೈಯಲ್ಲಿ ಹಿಡಿದು, ಕಣ್ಣಿನಲ್ಲಿ ನೋಡಿ, ಮನವರಿಯದಿದೆ. ಇನ್ನೇವೆ ? ಇದರನ್ವಯವ ಹೇಳು, ಅಲೇಖನಾದ ಶೂನ್ಯ ಕಲ್ಲಿನೊಳಗಾದವನೆ.
--------------
ವಚನಭಂಡಾರಿ ಶಾಂತರಸ