ಅಥವಾ
(5) (4) (1) (0) (1) (3) (0) (0) (2) (0) (0) (1) (1) (0) ಅಂ (1) ಅಃ (1) (7) (0) (0) (0) (0) (1) (0) (0) (0) (0) (1) (0) (0) (0) (0) (2) (0) (0) (1) (6) (6) (0) (5) (1) (5) (0) (0) (0) (0) (4) (1) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಿನ್ನ ಭೇದವ ನಿನ್ನನರಿವರಲ್ಲಿ ಮನಸಿಜನಿಂದ ಕಡೆಯೆ ? ನಿನ್ನ ಭಾವ ಹಿರಣ್ಯನ ಪುತ್ರನ ಮಾರನ ಪಿತನ ಅವತಾರದ ವಜ್ರದ ಕಂಬದಲ್ಲಿ ತೋರಿದ ಕುರುಹಿಂಗೆ ಕಡೆಯೆ ? ಕಾರ್ಯಕ್ಕೆ ಮಾಡಿದ ಮರುಳಿನ ನಂಬುಗೆಯ ತೆರದಿಂದ ಕಡೆಯೆ ? ಎನಗೆ ನೀ ಮನಸಿಜನಾಗು, ಮನದಲ್ಲಿ ಹೆರಹಿಂಗದಿರು. ಅಲೇಖನಾದ ಶೂನ್ಯ ಶಿಲೆ ಮಂಥಣ ಬೇಡ, ಸಲಹೆನ್ನುವ.
--------------
ವಚನಭಂಡಾರಿ ಶಾಂತರಸ
ನನ್ನ ನಾನರಿವಡೆ, ಮೂರು ಹುಲಿಯ ಮಧ್ಯದಲ್ಲಿ ಸಿಲ್ಕಿದ ಶೃಂಗಿಯಂತೆ, ಮೊತ್ತದ ಸಕಲೇಂದ್ರಿಯದ ಹುತ್ತದ ಸರ್ಪನಿದ ಠಾವಿಂಗೆ ತಪ್ಪಿಹೋದ ಮೂಷಕನಂತೆ, ಎತ್ತಲೆಂದರಿಯೆ.ಅರ್ತಿಯಿಂದ ಕಟ್ಟಿದೆ ಇಷ್ಟವ. ವಸ್ತುವಿನ ಹುಟ್ಟ ಹೇಳಾ, ಅಲೇಖನಾದ ಶೂನ್ಯ ಕಲ್ಲಿನ ಮರೆ ಬೇಡ.
--------------
ವಚನಭಂಡಾರಿ ಶಾಂತರಸ
ನಾದ ಗುರುವಾದಲ್ಲಿ , ಬಿಂದು ಲಿಂಗವಾದಲ್ಲಿ, ಕಳೆ ಜಂಗಮವಾದಲ್ಲಿ, ಉತ್ಪತ್ಯಕ್ಕೆ ಹೊರಗು. ನಾದ ವಿಸರ್ಜನವಾದಲ್ಲಿ ಸ್ಥಿತಿಗೆ ಹೊರಗು. ಬಿಂದು ವಿಸರ್ಜನವಾದಲ್ಲಿ ಪ್ರಳಯಕ್ಕೆ ಹೊರಗು. ಸರ್ವಚೇತನಕ್ಕೆ ವಿಸರ್ಜನವಾದಲ್ಲಿ ಇಂತೀ ತ್ರಿವಿಧನಾಮ ನಷ್ಟ. ಅರಿದು ಅರುಹಿಸಿಕೊಂಬ ಉಭಯಲೇಪ ಏನೂ ಎನಲಿಲ್ಲ. ಅಲೇಖನಾದ ಶೂನ್ಯ ಕಲ್ಲಿನ ಮರೆ ಬೇಡ, ಇಲ್ಲಿಗೆ ಬಾರಯ್ಯಾ.
--------------
ವಚನಭಂಡಾರಿ ಶಾಂತರಸ
ನಿನ್ನ ಸೋದಿಸುವಡೆ ಎನ್ನ ಕೈಯಲ್ಲಿ ಆಗದು. ಎಳ್ಳಿನೊಳಗಣ ಎಣ್ಣೆಯಂತೆ, ಹಣ್ಣಿನೊಳಗಣ ರುಚಿಯಂತೆ, ಹೂವಿನೊಳಗಣ ಸಂಜ್ಞೆಯಂತೆ, ತರುಧರ ಅಗ್ನಿಯ ಕೂಟದಂತೆ, ಕಂಡಡೆ ಕರಗಿ, ಕಾಣದಡೆ ಬಿರುಬಾಗಿ, ಇವರಂಗವ ಕಂಡು ಅಡಗಿದೆಯೆ ? ನಿನ್ನ ಸಂಗವನರಿವುದಕ್ಕೆ ಎನ್ನಂಗದ ಇರವಾವುದು ? ತನುವ ದಂಡಿಸುವುದಕ್ಕೆ ನೀ ಸರ್ವಮಯ, ನಿನ್ನ ಖಂಡಿಸುವದಕ್ಕೆ ನೀ ಪರಿಪೂರ್ಣ. ಎನ್ನ ಮರೆದು, ನಿನ್ನ ಕಾಬುದಕ್ಕೆ ಒಳಗಿಲ್ಲ. ನಿನ್ನ ಕಾಬುದಕ್ಕೆ ನೀ ಅಲೇಖಮಯ ಅನಂತಶೂನ್ಯ, ಕಲ್ಲಿನ ಮರೆಯಾದೆಯಲ್ಲಾ, ಎಲ್ಲರಿಗೆ ಅಂಜಿ.
--------------
ವಚನಭಂಡಾರಿ ಶಾಂತರಸ
ನಾಮದ ರೂಪಿನಲ್ಲಿ ಅಡಗಿ ಹೊಯ್ದಡೆ ತೋರಿ, ಮತ್ತಾ ಶೂನ್ಯನಾದದಲ್ಲಿ ಅಡಗುವ ತೆರ, ಶರೀರದ ಆತ್ಮನ ಭೇದ, ಹೊಯ್ದಡೆಯ್ದಿ ಮತ್ತೆ ಪುದಿದುದ ಮುಟ್ಟಿ, ಇಂತೀ ಶರೀರದ ಅನ್ವಯ ಸಂಚವ ಬಿಟ್ಟು, ಕಾಬ ಆಗಾವುದು, ಬಿಡದಿದ್ದಡೆ ಚೇಗೆ ಯಾವುದು ? ಈ ಕಡೆ ನಡು ಮೊದಲ ಕೇಳಿಹರೆಂದಡಗಿದೆಯಾ ? ಅಲೇಖನಾದ ಶೂನ್ಯ ಕಲ್ಲಿನ ಮರೆಯಾದೆಯಲ್ಲಾ !
--------------
ವಚನಭಂಡಾರಿ ಶಾಂತರಸ
ನಿನ್ನನರಿವುದಕ್ಕೆ ಅಲ್ಲಿ ಇಲ್ಲಿ ಗೆಲ್ಲ ಸೋಲವೇಕೆ ? ಎಲ್ಲರಲ್ಲಿ ಅಹುದು ಅಲ್ಲಾ ಎಂಬ ಕಲ್ಲೆದೆಯಾಗಿ ಹೋರಲೇಕೆ ? ಅಮೃತವ ಕೊಂಡು ಸವಿವುಂಟೆ ಎಂದು ಎಲ್ಲರ ಕೇಳುವನಂತೆ, ತಿಗರನೇರಿಸಿ ಕಲಿತನವ ಕೊಡೆಂಬವನಂತೆ, ಅಮೃತ ಘುಟಿಕೆಯಿದ್ದು, ಅಶನದ ಮುದ್ದೆಯ ಕೇಳಿ ಗಸಣಿಗೊಂಬವನಂತೆ, ಈ ಹುಸುಕರಿಗೆ ಅಂಜಬೇಡ, ಅಲೇಖನಾದ ಶೂನ್ಯ ಕಲ್ಲಿನ ಮನೆಯ ಬಿಟ್ಟು ನೆಲೆಗೊಳ್ಳೆನ್ನೊಳು, ಬೇಡ.
--------------
ವಚನಭಂಡಾರಿ ಶಾಂತರಸ