ಅಥವಾ
(7) (3) (4) (0) (2) (0) (0) (0) (1) (2) (2) (2) (2) (0) ಅಂ (1) ಅಃ (1) (4) (2) (3) (1) (0) (0) (0) (2) (0) (0) (0) (0) (0) (0) (0) (6) (0) (2) (2) (7) (6) (0) (1) (6) (3) (0) (3) (0) (3) (14) (3) (1) (8) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉರಗನ ಸ್ವಪ್ನದಂತೆ, ಮಯೂರನ ಚಿತ್ತದಂತೆ ಬರುಹಿಯ ಸಂಪದದಂತೆ, ಎರಡಳಿದ ನಿಜನಿಶ್ಚಯದ ಭೇದ. ಚನ್ನಬಸವಣ್ಣಪ್ರಿಯಭೋಗಮಲ್ಲಿಕಾರ್ಜುನಲಿಂಗದ ಕೂಟ.
--------------
ಪ್ರಸಾದಿ ಭೋಗಣ್ಣ
ಉಚಿತವ ಕಂಡು, ತತ್ಕಾಲವನರಿತು ರಿತುಕಾಲಂಗಳಲ್ಲಿ ಭೇದಿಸಿ ವೇಧಿಸುವದು ಮರ್ಕಟ ವಿಹಂಗ ಪಿಪೀಲಕ ಭೇದ. ಕರ ಕಾಲು ಬಾಯಿಂದ ಕೊಲುವ ಜೀವದ ಹೊಲಬಿನಂತೆ ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡು ಅನುಮಾನದಲ್ಲಿ ಅರಿತು ನಡೆವುದು ಲಕ್ಷಣಜ್ಞನ ಯುಕ್ತಿ. ಆ ಯುಕ್ತಿಯಿಂದ ಭಕ್ತಿ ನೆಲೆಗೊಂಡು, ಆ ಭಕ್ತಿಯಿಂದ ಸತ್ಯ ನೆಲೆಗೊಂಡು ಸತ್ಯದೊಡಲು ಲಿಂಗದಂಗವಾಗಿ ಇಪ್ಪಾತನೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನಾಗಿ.
--------------
ಪ್ರಸಾದಿ ಭೋಗಣ್ಣ