ಅಥವಾ
(7) (3) (4) (0) (2) (0) (0) (0) (1) (2) (2) (2) (2) (0) ಅಂ (1) ಅಃ (1) (4) (2) (3) (1) (0) (0) (0) (2) (0) (0) (0) (0) (0) (0) (0) (6) (0) (2) (2) (7) (6) (0) (1) (6) (3) (0) (3) (0) (3) (14) (3) (1) (8) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ರಸ ಗಂಧ ರೂಪು ಶಬ್ದ ಸ್ಪರ್ಶ ಪಂಚೇಂದ್ರಿಯಂಗಳಲ್ಲಿ ಅರ್ಪಿಸುವನ್ನಕ್ಕ ಭಕ್ತ. ರೂಪು ರುಚಿಯ ಕಂಡರ್ಪಿಸುವನ್ನಕ್ಕ ಮಾಹೇಶ್ವರ. ಇಚ್ಫೆಯನರಿತು ಸಾಕು ಬೇಕೆಂಬನ್ನಕ್ಕ ಪ್ರಸಾದಿ. ಕಂಡಲ್ಲಿ ಮುಟ್ಟದೆ ಕಾಣಿಸಿಕೊಂಡು ಮುಟ್ಟಿಹೆನೆಂಬಲ್ಲಿ ಪ್ರಾಣಲಿಂಗಿ. ವಂದನೆ ನಿಂದೆಗೆ ಒಳಗಹನ್ನಕ್ಕ ಶರಣ. ಮುಟ್ಟುವ ತಟ್ಟುವ ತಾಗುವ ಸೋಂಕುವ ಸುಖವನರಿದು ಕೂಡಬೇಕೆಂಬನ್ನಕ್ಕ ಐಕ್ಯ. ಆ ಗುಣ ಪರುಷವ ಸೋಂಕಿದ ಲೋಹದಂತಾದುದು ಷಟ್‍ಸ್ಥಲ. ಇಂತೀ ಆರನವಗವಿಸಿ ಬೇರೊಂದು ತೋರದಿಪ್ಪುದು ಐಕ್ಯಸ್ಥಲಲೇಪಭೇದ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ರತ್ನದ ಪುಂಜವ ಬೆಗಡವನಿಕ್ಕುವಲ್ಲಿ ಮೊನೆ ಮುಂದೆ ಸವೆದ ಮತ್ತೆ ಪೂರ್ವಕ್ಕೆ ಉತ್ತರವಿಲ್ಲ. ನಿಶ್ಚೈಸಿ ಉತ್ತರ ಕಡೆಗಾಣಿಸಿದಲ್ಲಿ ಮುಟ್ಟಿ ಮುಂಚುವ ಅರ್ಪಿತ ಅಲ್ಲಿಯೆ ಉಪದೃಷ್ಟ ನಷ್ಟ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ರಿತು ರುತು ಪ್ರಾತಃಕಾಲ ಅಘ್ರ್ಯಂಗಳ ನ್ಯಾಸ ಅಂಗುಲವಾಸ ಪಚ್ಫಳ ಮಡಿ ಕಟಿಸೂತ್ರ ಗುಹ್ಯ ನಾಭಿ ಪಂಚಾಗ್ನಿ ಮಧ್ಯ ಬಾಹುಗಳ ಜಿಹ್ವೆ ನಾಸಿಕ ನಯನ ಕರ್ಣ ಲಲಾಟ ಮಸ್ತಕ ಕರ ಸಂಜ್ಞೆಗಳಲ್ಲಿ ನ್ಯಾಸಸೂತಕನಾಗಿ, ಜಪಗ್ರಹಿತನಾದಡೂ ಶಿವಧ್ಯಾನಮೂರ್ತಿಯಿಂದ ಪರಿಹರಿಸಬೇಕು, ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದಕ್ಕೆ ಕರ್ಮಕ್ರೀ.
--------------
ಪ್ರಸಾದಿ ಭೋಗಣ್ಣ