ಅಥವಾ
(7) (3) (4) (0) (2) (0) (0) (0) (1) (2) (2) (2) (2) (0) ಅಂ (1) ಅಃ (1) (4) (2) (3) (1) (0) (0) (0) (2) (0) (0) (0) (0) (0) (0) (0) (6) (0) (2) (2) (7) (6) (0) (1) (6) (3) (0) (3) (0) (3) (14) (3) (1) (8) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವೇದಶ್ರುತಿಯಿಂದ ವಸ್ತುವನರಿತೆಹೆನೆಂದಡೆ ಆ ವೇದವೆ ಹಾದಿಯೆ ವಸ್ತುವ ಕಾಬುದಕ್ಕೆ ? ಆ ವೇದ ಸರ್ವವು ಬ್ರಹ್ಮವೆಂದಲ್ಲಿ ವಸ್ತು ಎಲ್ಲಿ ಉಳಿಯಿತ್ತು ? ಆ ತೆರನ ತಿಳಿದು ವೇದವಾರನರಸಿತ್ತು ? ಶ್ರುತಿ ಯಾರ ಭೇದಿಸಿತ್ತು ? ಆ ಗುಣ ನಾದಬಿಂದುಕಳೆಯೊಳಗಾದಲ್ಲಿ ವಸ್ತುತತ್ವರೂಪಾಯಿತ್ತು. ಆ ಸ್ವರೂಪದ ಭೇದದಿಂದ ಪಂಚಭೌತಿಕದ ಗುಣದಿಂದ ಪಂಚವಿಂಶತಿತತ್ವಂಗಳೆಲ್ಲವೂ ಗೊತ್ತಾದವು. ನಾಲ್ಕು ವೇದ, ಹದಿನಾರು ಶಾಸ್ತ್ರ, ಇಪ್ಪತ್ತೆಂಟು ದಿವ್ಯಪುರಾಣಂಗಳಲ್ಲಿ ವೇದ್ಥಿಸಿ ಭೇದಿಸಿ ಕಂಡೆನೆಂಬಲ್ಲಿ ನಿಂದಿತ್ತು ನಿಜ ಸಂದೇಹಕ್ಕೆ ಒಳಗಾದುದಾಗಿ. ತರ್ಕಂಗಳಿಂದ ತರ್ಕಿಸಿ ನೋಡಿ ಮಿಕ್ಕಾದ ತತ್ವಂಗಳಲ್ಲಿ ಲಕ್ಷಿಸಿ ಪ್ರಮಾಣಿಸಿದಲ್ಲಿ ವಸ್ತು ಹಲವು ಕುಲವೆಂದು ಕಲ್ಪಿಸಿ ನುಡಿವಲ್ಲಿ ವಿಭೇದ ಪಕ್ಷವಲ್ಲದೆ ವಸ್ತು ಏಕರೂಪು. ಜಲ ಬಹುನೆಲಂಗಳಲ್ಲಿ ನಿಂದು ಒಲವರವಿಲ್ಲದೆ ಸಸಿ ವೃಕ್ಷಂಗಳ ಸಲಹುವಂತೆ ಸರ್ವಗುಣಸಂಪನ್ನನಾದೆಯಲ್ಲಾ ಪರಮಪ್ರಕಾಶ ಪರಂಜ್ಯೋತಿ ಪಂಚಬ್ರಹ್ಮಸ್ವರೂಪನಾದೆಯಲ್ಲಾ ಎನಗೆ ನೀನಾದೆಹೆನೆಂದು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ.
--------------
ಪ್ರಸಾದಿ ಭೋಗಣ್ಣ
ವೇದದ ಉತ್ತರವ ವಿಚಾರಿಸಿ, ಶಾಸ್ತ್ರದ ಸಂದೇಹವ ನಿಬದ್ಧಿಸಿ ಪುರಾಣದ ಅಬ್ಥಿಸಂದ್ಥಿಯ ತಿಳಿದು ಇಂತಿವು ಮೊದಲಾದ ಆಗಮಂಗಳಲ್ಲಿ ಚಿಂತಿಸಿಯೆ ನೋಡಿ ಸಕಲಯುಕ್ತಿ ಶಬ್ದಸೂತ್ರಂಗಳಲ್ಲಿ ಪ್ರಮಾಣಿಸಿಯೆ ಕಂಡು ಮಾತುಗಂಟಿತನದಲ್ಲಿ ತರ್ಕಶಾಸ್ತ್ರಂಗಳಿಗೆ ಹೋಗದೆ ಪಂಚವಿಂಶತಿತತ್ವದೊಳಗಾದ ಆಧ್ಯಾತ್ಮ ಆದಿಭೌತಿಕವ ತಿಳಿದು ಪಂಚಭೂತಿಕದ ಸಂಚಿತ ಪ್ರಾರಬ್ಧ ಆಗಾಮಿಗಳ ಸಂಚಿನ ಸಂಕಲ್ಪವ ತಿಳಿದು ಪೃಥ್ವಿತತ್ವದ ಮಲ, ಅಪ್ಪುತತ್ವದ ಸಂಗ, ತೇಜತತ್ವದ ದಗ್ಧ, ವಾಯುತತ್ವದ ಸಂಚಲ, ಆಕಾಶತತ್ವದ ಬಹುವರ್ಣಕೃತಿ. ಇಂತೀ ಪಂಚಭೂತಿಕಂಗಳಲ್ಲಿ ತಿಳುವಳವಂ ಕಂಡು ಕರಂಡದಲ್ಲಿ ನಿಂದ ಗಂಧದಂತೆ ತನ್ನಂಗವಿಲ್ಲದೆ ಗಂಧ ತಲೆದೋರುವಂತೆ ವಸ್ತುಘಟಭೇದವಾದ ಸಂಬಂಧ. ಇಂತೀ ತೆರನ ತಿಳಿದು ವಾಗ್ವಾದಂಗಳಲ್ಲಿ ಹೋರಿಹೆನೆಂದಡೆ ಮಹಾನದಿಯ ವಾಳುಕದ ಮರೆಯ ನೀರಿನಂತೆ ಚೆಲ್ಲಿ ಕಂಡೆಹೆನೆಂದಡೆ ಆ ನದಿವುಳ್ಳನ್ನಕ್ಕ ಕಡೆಗಣಿಸಬಾರದು. ನಿಂದಲ್ಲಿ ಪ್ರಮಾಣುವಿಂದಲ್ಲದೆ ಮೀರಿ ತುಂಬದಾಗಿ ಇಂತೀ ಶ್ರುತ್ಯರ್ಥವಿಚಾರದಿಂದ ಹಾಕಿದ ಮುಂಡಿಗೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾಯೆಂದು.
--------------
ಪ್ರಸಾದಿ ಭೋಗಣ್ಣ
ವಿಹಂಗನ ತತ್ತಿಗೆ ಸ್ಪರ್ಶನದಿಂದ ಕೂರ್ಮನ ಶಿಶುವಿಂಗೆ ಕೂರ್ಮೆಯಿಂದ ಚತುಃಪಾದಿ ನರಕುಲಕ್ಕೆ ಕುಚಗಳಿಂದ ಮಿಕ್ಕಾದ ಜೀವಜಾತಿ ಲಕ್ಷಣಕ್ಕೆ ತಮ್ಮ ಸ್ಥಾನದಲ್ಲಿಯೆ ತೃಪ್ತಿ. ಆವ ಸ್ಥಲವ ನೆಮ್ಮಿದಲ್ಲಿಯೂ ಭಾವಶುದ್ಧವಾದಲ್ಲಿಯೆ ಮುಕ್ತಿ. ಉಭಯಕ್ಕೆ ಉಪಮಾತೀತನಾದಾಗಲೇ ನಿರ್ವೀಜ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ವೃಕ್ಷ ಎಲೆಗಳೆವುದಲ್ಲದೆ ತರುವಿನ ಸಲೆ ನೆಲೆ ಸಾರಗಳದು ಫಲಿಸುವುದುಂಟೆ ? ಅಂಗದಲ್ಲಿ ಸೋಂಕಿದ ಮರವೆಯ ಕಳೆಯಬಹುದಲ್ಲದೆ ಮನ ವಚನ ಕಾಯ ತ್ರಿಕರಣದಲ್ಲಿ ವೇಧಿಸಿದ ಮರವೆಯ ಹರಿವ ಪರಿಯಿನ್ನೆಂತೊ ? ಉರಿ ವೇಧಿಸಿದ ತರುವಿನಂತೆ ಅದಕ್ಕೆ ಪರಿಹರವಿಲ್ಲ. ಅರಿದು ಮಾಡುವ ದೋಷಕ್ಕೆ ಪಡಿಪುಚ್ಚವಿಲ್ಲ. ಆ ಭೇದವನರಿದು ಹರಿಯಬೇಕು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ವೇದೋತ್ತರ ಸಂಧಿ ಉಪಸನ್ನೆ ಸಂಜ್ಞೆ ಉತ್ತರ ಚಿಂತನೆ ಖಂಡನೆಗಳಲ್ಲಿ ಭೃಗು, ದಧೀಚಿ, ಕಾಶ್ಯಪ, ಸಾಂಖ್ಯ, ಅಗಸ್ತ್ಯ ಮೊದಲಾದ ಋಷಿವರ್ಗಂಗಳೆಲ್ಲರು ವೇದದ ಕಡೆ ಮೊದಲೆಂದು ಪಠಿಸಿ ವೇಧಿಸಿ ಆ ವೇದ ಚಿಂತನೆಗೆ ಸಂದುದಿಲ್ಲ. ಇಂತೀ ವೇದ ಮೊದಲು ಶಾಸ್ತ್ರ ಆಗಮ ಪುರಾಣಂಗಳಲ್ಲಿ ಸನ್ನಿಧಿ ಸಮನ ಗಮನ ಪರಿಪೂರ್ಣವಾದುದಿಲ್ಲ. ಒಂದು ವೇದ ನಾಮದ ಶಾಖೆವೊಂದಕ್ಕೆ ಉಪನಯನ ಭೇದ ಸಂಖ್ಯೆ ಶತಸಹಸ್ರ ಪುನರಪಿಯಾಗಿ ಬಪ್ಪಲ್ಲಿ ಒಂದು ಅಧ್ಯಾಯ ಸಂಬಂಧದಿಂದ. ಆ ಸಂಬಂಧ ಶಾಖೆ ಉಚಿತವಹಾಗ ವಿಷ್ಣುವಿಂಗೆ ಪರಮಾಯು, ಬ್ರಹ್ಮಂಗೆ ಉಪನಯನವಿಲ್ಲ ಋಷಿವರ್ಗಕ್ಕೆ ವೇದೋಪದೇಶವಿಲ್ಲ. ಇಂತೀ ಶಂಕೆಯ ಸಂಕಲ್ಪದಲ್ಲಿ ನೋಡಿ ಕಂಡೆಹೆನೆಂದಡೆ ಚಕ್ರದ ಅಂಗುಲದ ಬಳಸಿನ ಲೆಕ್ಕದಂತೆ ಇಂತೀ ವೇದದ ಹಾದಿಯಲ್ಲ, ಶಾಸ್ತ್ರದ ಸಂದೇಹವಲ್ಲ. ಆಗಮಂಗಳಲ್ಲಿ ಭೇದ ವಿಭೇದವ ಕಂಡು ತರ್ಕಂಗಳಲ್ಲಿ ಹೋರುವ ಕುತರ್ಕಿಯಲ್ಲ. ಇಂತಿವ ನೇತಿಗಳೆದ ಸರ್ವಾಂಗಲಿಂಗಸಂಬಂಧವಾದ ಶರಣನು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೇ ಅಂಗವಾದ ನಿರಂಗನು.
--------------
ಪ್ರಸಾದಿ ಭೋಗಣ್ಣ
ವೇದಕ್ಕೆ ಯಜ್ಞ, ಶಾಸ್ತ್ರಕ್ಕೆ ವಿಸ್ತರ ಪುರಾಣಕ್ಕೆ ಬೋಧೆ, ಆಗಮಕ್ಕೆ ಉಭಯ ನಿರುತ್ತರ. ಇಂತಿವು ಆಚರಣೆಯ ಕರ್ಮ. ಇಂತಿವು ಉತ್ತರಗತಿಯನರಿವುದಕ್ಕೆ ಪೂರ್ವಗತಿ ಪಥವಾಗಿ ಕುಂದಣಕ್ಕೆ ಗಂಧ ಕೂಡಿದಂತೆ ನುಡಿನಡೆ ಉಭಯವೊಂದಾದಲ್ಲಿ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನೆ.
--------------
ಪ್ರಸಾದಿ ಭೋಗಣ್ಣ
ವಾಯುವಡಗಿದ ಮಹಾರ್ಣವದಂತೆ ನಾದವನೊಳಕೊಂಡ ತನ್ಮಯದಂತೆ ಶೂನ್ಯ ಸೋಂಕಿಲ್ಲದ ನಿಶ್ಚಯದಂತೆ ವಸ್ತುವಿನಲ್ಲಿ ಲೇಪವಾದ ಸುಚಿತ್ತನಂಗ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವ ಕೂಡಿದ ಕೂಟ.
--------------
ಪ್ರಸಾದಿ ಭೋಗಣ್ಣ
ವೇದವೆಂಬುದು ವಾದ, ವೈದಿಕತ್ವ ಮಾಯಾಭೇದ. ದೇವತಾ ದೇವತೆ ಕುಲ ಋಷಿ ಪ್ರಯೋಗಯಾಗಕ್ರಮ ದಿಗ್ವಳಯ ಬಂಧನ, ಗ್ರಹಸಂಬಂಧಯೋಗ. ಇಂತಿವು ಮೊದಲಾದ ಕರ್ಮಂಗಳಲ್ಲಿ ವ[ತಿರ್]ಸಿ ನಿಂದ ಸ್ವಯವಾವುದು ? ಧರ್ಮಶಾಸ್ತ್ರವ ತಿಳಿದು, ಶಿಲ್ಪ ವೈದಿಕ ಜೋಯಿಸ ಇವು ಮುಂತಾದ ನಾನಾ ಭೇದಂಗಳ ಹೇಳಿ ತನ್ನ ಅಳಿವು ಉಳಿವು ಕಂಡುದಿಲ್ಲ. ಪುರಾಣವನೋದಿ ಕೆಲರ್ಗೆ ಹೇಳಿ ಪೂರ್ವಯಥ್ಞಿಕಥನ ಮುಂತಾದ ರಾಮರಾವಣಾದಿಗಳು ಚಕ್ರವರ್ತಿಗಳು ಮುಂತಾದ ಧರ್ಮಕರ್ಮಂಗಳನೋದಿ ಬೋಧಿಸಿದಲ್ಲಿಯೂ ಸಫಲವಾದುದಿಲ್ಲ. ಇಂತಿವನ್ನೆಲ್ಲವನರಿತು, ಉಭಯಸಂಧಿಯ ಉಪೇಕ್ಷಿಸಿದಲ್ಲಿ ಬಿಡುಮುಡಿ ಉಭಯದ ಭೇದವ ತಾನರಿತು ಮಲತ್ರಯಕ್ಕೆ ದೂರಸ್ಥನಾಗಿ ತ್ರಿವಿಧಾತ್ಮಕ್ಕೆ ಅಳಿವು ಉಳಿವನರಿತು ಆರಾರ ಮನ ಧರ್ಮಂಗಳಲ್ಲಿ ಭೇದವಿಲ್ಲದೆ ನುಡಿದು ಅಭೇದ್ಯಮೂರ್ತಿಯ ತೋರಿ, ವಿಭೇದವ ಬಿಡಿಸಿ ತರಣಿಯ ಕಿರಣದಂತೆ, ವಾರಿಯ ಸಾರದಂತೆ 'ಖಲ್ವಿದಂ ಬ್ರಹ್ಮವಸ್ತು'ವೆಂದಲ್ಲಿ, ಏಕಮೇವನದ್ವಿತೀಯನೆಂದಲ್ಲಿ 'ಓಂ ಭರ್ಗೋ ದೇವಸ್ಯ ಧೀಮಹಿ' ಯೆಂದಲ್ಲಿ ಆದಿ ಪರಮೇಶ್ವರನೆಂದಲ್ಲಿ, ಆದಿ ಪುರುಷೋತ್ತಮನೆಂದಲ್ಲಿ ಆರಾರ ಭೇದಕ್ಕೆ ಭೇದ. ತ್ರಿಮೂರ್ತಿಗಳ ಜಗಹಿತಾರ್ಥವಾಗಿ ಸಂಶಯಸಿದ್ಧಿಯಿಂದ ತಿಳಿವುದು. ಸರ್ವಶಾಸ್ತ್ರದಿಂದ ಈ ಗುಣವಾಚಕರಿಗೆ ದೂಷಣದಿಂದ ನುಡಿವರಿಗೆ ಹಾಕಿದ ಮುಂಡಿಗೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾ ಎಂಬೆನು.
--------------
ಪ್ರಸಾದಿ ಭೋಗಣ್ಣ
ವೇದ ಶಾಸ್ತ್ರ ಪುರಾಣ ಆಗಮಂಗಳಿಂದ ಸುಪಥದ ಹಾದಿಯನರಿತೆಹೆನೆಂದಡೆ ಸಂದೇಹದ ಸಂದು. ಇವ ಹಿಂಗಿ ಕಂಡೆಹೆನೆಂದಡೆ ನಡಹಿಲ್ಲದ ಬಟ್ಟೆ. ಒಂದ ಕಳೆದು ಒಂದರಲ್ಲಿ ನೋಡಿ ಅರಿತೆಹೆನೆಂದಡೆ ನೀರಿಲ್ಲದ ಏರಿ. ಏರಿಯಿಲ್ಲದ ನೀರು ನಿಲಲರಿಯದಾಗಿ ಇಂತೀ ವೇದದ ವಿಷಯ, ಶಾಸ್ತ್ರದ ಬಟ್ಟೆ ಪುರಾಣದ ಪುಣ್ಯ, ಆಗಮದ ಯುಕ್ತಿ. ಇಂತಿವ ತಿಳಿದು, ಖಂಡಿತರಿಗೆ ಉಭಯವಳಿದು ಸಂದೇಹಿಗಳಿಗೆ ಮಾಯಾವಾದ, ವೈದಿಕಕ್ಕೆ ತ್ರಿಗುಣಭೇದ. ಇಂತೀ ಏಕದಂಡ ದ್ವಿದಂಡ ತ್ರಿದಂಡ ಆಧ್ಯಾತ್ಮಭೇದ, ಶೈವಸಂಬಂಧ ಇಂತೀ ಆಚಾರ್ಯಮತ ಸಂಬಂಧಗಳಲ್ಲಿ ಭೇದವನಿಂಬುಗೊಟ್ಟು ವಿಭೇದಕ್ಕೆ ಒಳಗು ಹೊರಗಲ್ಲದೆ ನಿನ್ನನರಿವ ನಿಜಜ್ಞರುಗಳಲ್ಲಿ ನಿಂದ ನಿಜಸ್ವರೂಪ ನೀನೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ
--------------
ಪ್ರಸಾದಿ ಭೋಗಣ್ಣ
ವ್ಯತಿರಿಕ್ತವಾದ ಪರಿಪೂರ್ಣತ್ವ ಆದೆನೆಂದಲ್ಲಿ ಅಚಲಿತವಪ್ಪ ನಿಜಚಲಿತನಾಗಿ ಚಲಿಸದೆ ನಿಂದ ಪರಿಯಿನ್ನೆಂತೊ ? ರತ್ನದ ಘಟಗೂಡಿ ಮುಚ್ಚಿದಡೆ ದೀಪ್ತಿ ಅಲ್ಲಿಯೆ ಅಡಗುವುದಲ್ಲದೆ ಘಟ ಬೇರಿದ್ದು ಬೆಳಗ ಮುಚ್ಚಿಹೆನೆಂದಡೆ ಅಡಗಿದುದುಂಟೆ ಆ ಬೆಳಗು? ಅದು ಕಾರಣದಲ್ಲಿ ಪರಿಪೂರ್ಣತ್ವವಾದಲ್ಲಿಯೆ ಇದಿರೆಡೆಯಿಲ್ಲ. ಅರ್ಪಿತಕ್ಕೆ ಅಗ್ನಿ ಕೊಂಡ ಘೃತ ತಿಲ ಸಾರ ಮುಂತಾದವು ರೂಪಗೊಂಡವು. ಅಲ್ಲಿಯೆ ಅಡಗಿದಂತೆ ಐಕ್ಯನ ಅರ್ಪಿತಸ್ಥಲ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ವೇದ ವರ್ಣಕ, ಶಾಸ್ತ್ರ ಸಂದು, ಪುರಾಣ ಪುಚ್ಚವಿಲ್ಲದ ವೃಶ್ಚಿಕ ಆಗಮ ಆಗುbs್ಞೀಗೆಯನರಿಯದ ಹೋರಾಟ. ಇಂತಿವೆಲ್ಲವೂ ಐವತ್ತೆರಡಕ್ಷರದ ನಾಮಬೀಜ. ತವರಾಜಂಗೆ ಫಲ ಬಲಿಯಿತೆನಬಹುದೆ ? ದಿನನಾಯಕಂಗೆ ತಮ ರಮಿಸಿತೆನಬಹುದೆ ? ಸುರಭಿಗೆ ಗರ್ಭ ಉದಿಸಿತೆನಬಹುದೆ ? ಇಂತು ಸರ್ವಾಂಗ ಸಕಲಯುಕ್ತಿ ಸಂಪೂರ್ಣಂಗೆ ನುಡಿಯೆ ವೇದ, ನಡೆಯೆ ಆಗಮ. ಅಂಗಮಾರ್ಗಂಗಳಲ್ಲಿ ಸಂಬಂಧಿಸುವುದೆ ಶಾಸ್ತ್ರಸಂಪದ. ಇಂತೀ ಅಕ್ಷರಾತ್ಮಕ ತಾನಾಗಿ, ಭಕ್ತಿಕಾರಣದಿಂದ ಲಕ್ಷಿತನಾದ ಕಾರಣ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಆಚಾರ್ಯನಾದ ಭೇದ.
--------------
ಪ್ರಸಾದಿ ಭೋಗಣ್ಣ
ವಾದದ ಹೇಮ ಸ್ವಯ ಹೇಮವ ಕೂಡಿ ವೇಧಿಸಲಿಕ್ಕೆ ವಿಭೇದವಾದುದಿಲ್ಲ. ಶಾಸ್ತ್ರಂಗಳ ಶಬ್ದದ ಯುಕ್ತಿ, ತನ್ನ ಸ್ವಯದ ಸ್ವಾನುಭವದ ಕೂಟ. ಇಂತೀ ಉಭಯವೇಕವಾದಲ್ಲಿ ನಡೆನುಡಿ ಸಿದ್ಧಾಂತ ಆತ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನಾಗಿ.
--------------
ಪ್ರಸಾದಿ ಭೋಗಣ್ಣ
ವಿಶ್ವಾಸವನರಿತಲ್ಲಿ ಗುರುಭಕ್ತಿ. ಶ್ರದ್ಧೆ ಸನ್ಮಾರ್ಗಂಗಳಲ್ಲಿ ಪೂಜಿಸಿ ವೇಧಿಸುವುದು ಶಿವಲಿಂಗಭಕ್ತಿ. ಲಾಂಛನಕ್ಕೆ ನಮಸ್ಕಾರ, ಆಪ್ಯಾಯನಕ್ಕೆ ಅನ್ನ ಅರಿವಿನ ತೆರನನರಿತು ನೆರೆ ವಿಶ್ವಾಸ ಜಂಗಮಭಕ್ತಿ. ಇಂತೀ ಕ್ರೀಯಯಲ್ಲಿ ಮಾರ್ಗ, ಭಾವದಲ್ಲಿ ನೆಮ್ಮುಗೆ. ಇಂತೀ ಗುಣ ಕಾಯ ಜೀವದ ಭೇದ. ಕರ್ತೃಭೃತ್ಯಸಂಬಂಧ ಏಕವಾದುದು. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನಾದುದು.
--------------
ಪ್ರಸಾದಿ ಭೋಗಣ್ಣ
ವಾರಿ ವಾಯುವಿನ ಸಂಗದಿಂದ ಕಲ್ಲಾದ ಮತ್ತೆ ನೋಡ ನೋಡ ಕರಗಲೇತಕ್ಕೆ ? ವಸ್ತುವಿನ ಚಿತ್ತ ವೇಧಿಸಿದ ಮತ್ತೆ ಅರಿದು ಮರೆದೆನೆಂಬುದು ಅದೇತಕ್ಕೆ ? ಚಿಪ್ಪಿನಲ್ಲಿ ಅಪ್ಪು ನಿಂದು ಹೆಪ್ಪಳಿಯದೆ ದೃಷ್ಟವ ಕಂಡ ಮತ್ತೆ ಚಿತ್ತ ವಸ್ತುವಿನಲ್ಲಿ ಎಯ್ದಿದ ಮತ್ತೆ ದೃಷ್ಟ ಉಭಯದಂತಿರಬೇಕು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ