ಅಥವಾ
(7) (3) (4) (0) (2) (0) (0) (0) (1) (2) (2) (2) (2) (0) ಅಂ (1) ಅಃ (1) (4) (2) (3) (1) (0) (0) (0) (2) (0) (0) (0) (0) (0) (0) (0) (6) (0) (2) (2) (7) (6) (0) (1) (6) (3) (0) (3) (0) (3) (14) (3) (1) (8) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸ್ಥಲಂಗಳ ಭೇದ ವಿವರ: ವೇಣು ವೀಣೆ ಮೌರಿ ವಾದ್ಯಂಗಳಲ್ಲಿ ವಾಯು ಅಂಗುಲಿಯ ಭೇದದಿಂದ ರಚನೆಗಳ ತೋರುವಂತೆ ಘಟದ ಸ್ಥೂಲ ಸೂಕ್ಷ್ಮಂಗಳಲ್ಲಿ ತ್ರಾಣ ತತ್ರಾಣವಾದಂತೆ ಅದು ಭಾವಜ್ಞಾನ ಷಟ್‍ಸ್ಥಲ ಕ್ರಿಯಾಭೇದದ ವಾಸ. ಇಂತೀ ಉಭಯದೃಷ್ಟ ನಾಶವಹನ್ನಕ್ಕ ಐಕ್ಯಲೇಪನಲ್ಲಿ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಸೃಷ್ಟಿಯೊಳಗಾದ ತೀರ್ಥಂಗಳ ಮೆಟ್ಟಿ ಬಂದಡೂ ದೃಷ್ಟಿಮತಿ, ನಿಮುಷಮತಿ, ಭೇದಮತಿ[ವೇ]ದ್ಯಮತಿ ಅಭೇದ್ಯಭೇದಕಮತಿ ಉಚಿತಮತಿ ಸಾಮಮತಿ ದಾನಮತಿ ದಂಡಮತಿ ಆತ್ಮಚಿಂತನಮತಿಗಳಲ್ಲಿ ನುಡಿದಡೂ ಪಂಡಿತನಪ್ಪನಲ್ಲದೆ ವಸ್ತುವ ಮುಟ್ಟ. ಇದಕ್ಕೆ ದೃಷ್ಟ ಮತ್ತರಿಗೆ ಹಾಕಿದ ಮುಂಡಿಗೆ. ವಸ್ತುವನರಿದುದಕ್ಕೆ ಲಕ್ಷಣವೇನೆಂದಡೆ: ತಥ್ಯಮಿಥ್ಯವಳಿದು ರಾಗದ್ವೇಷ ನಿಂದು ಆವಾವ ಗುಣದಲ್ಲಿಯೂ ನಿರ್ಭಾವಿತನಾಗಿ ಸರ್ವಗುಣಸಂಪನ್ನನಾಗಿ ತತ್ಪ್ರಾಣ ಸಾವಧಾನವನರಿತು ಬಂದ ಬಂದ ಮುಖದಲ್ಲಿ ಲಿಂಗಾರ್ಪಿತವ ಮಾಡಿ ನಿಂದುದೆ ನಿಜಲಿಂಗಾಂಗ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನೆ.
--------------
ಪ್ರಸಾದಿ ಭೋಗಣ್ಣ
ಸೂತ್ರ ಪ್ರಕರಣಗಳಿಂದ ಏಕಸಂಜ್ಞೆ ದ್ವಯಸಂಪರ್ಕ, ತ್ರಿವಿಧಭೇದ ಚತುರ್ಭಾಗ ಪಂಚವಿಂಶತಿ ಶಾಂಕರೀಯ ರಘುಪ್ರಕಾರ, ಮೀಮಾಂಸಕಾ ಸೂತ್ರ ವಿಷಮಸಂಧಿಭೇದಕಾ ಪ್ರಯೋಗ ಪ್ರಾತಃಕಾಲ ರಿತು ಉಚಿತತಮ ತತ್ಕಾಲ ನಾರಣೀಯ ಜೈಮಿನಿ ಭೇದ, ಪಾರಸೀಯ ಸಾಂಖ್ಯ ಕಾಪಾಲಿಕ ಬೌದ್ಧ ಶೈವ. ಇಂತೀ ಆಗಮ ಸೂತ್ರ ನಾನಾವಿಲಕ್ಷಣ ಲಕ್ಷಣಂಗಳಲ್ಲಿ ತಿಳಿದಡೂ ಕರ್ಮವಾರು ವರ್ಮ ಮೂರು ಸದ್ಧರ್ಮವೊಂದರಲ್ಲಿ ನಿರತನಾಗಿ ಸರ್ವಗುಣಸಂಪನ್ನನಾಗಿ ಲಿಂಗಪ್ರಾಣಿಯಾಗಿ ಪ್ರಾಣಲಿಂಗಿಯಾಗಿ ನಿಂದಾತಂಗೆ ಅಂಗ ಆತ್ಮನೆಂಬ ಉಭಯದ ಸಂದಿಲ್ಲ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನಾಗಿ.
--------------
ಪ್ರಸಾದಿ ಭೋಗಣ್ಣ
ಸದಾಶಿವ ವಸ್ತುವ ಭೇದವಂಶದಲ್ಲಿ ಆದ ಮಹಾ ಅಂಧಕಾರದಲ್ಲಿ ಬಲಭದ್ರ ವೀರರುದ್ರನ ಸಂಬಂಧದಿಂದ ಆದ ಉಭಯ ಯುಗಳದಿಂದ ಆದ ಜಾತಿ ಉದ್ಭವ ಲಕ್ಷಣ. ಜಿಹ್ವೆಯಲ್ಲಿ ವೇದ, ಭುಜದಲ್ಲಿ ಶಸ್ತ್ರ, ಉದರದಲ್ಲಿ ವ್ಯವಹಾರ, ಜಂಘೆಯಲ್ಲಿ ಕೃಷಿ. ಇಂತೀ ಶೂದ್ರ ವೈಶ್ಯ ಕ್ಷತ್ರಿಯ ದ್ವಿಜ ಇಂತೀ ಮತಭೇದಂಗಳಲ್ಲಿ ಗೋತ್ರ ಹಲವಾಗಿ ವಾಸಿವಟ್ಟಕ್ಕೆ ಒಳಗಾದವು. ಇಂತಿವರ ಒಳಗು ಹೊರಗಲ್ಲ ಸಂತತ ಶರಣ ಶಿವಯೋಗಿ. ಕರಂಡದ ಗಂಧದಂತೆ, ಮೃತ್ತಿಕೆಯ ಹೇಮದಂತೆ ಶುಕ್ತಿಯ ಅಪ್ಪುವಿನಂತೆ, ಶಿಲೆಕುಲದ ರತಿಯಂತೆ ಮತ್ರ್ಯದ ಮತ್ತರ ಹೊದ್ದದ ಸ್ವಯಿಚ್ಫಾಪರ ಭಕ್ತ ಶಿವಯೋಗಿಗೆ ಮತ್ರ್ಯ ಕೈಲಾಸವೆಂಬ ಗೊತ್ತಿಲ್ಲ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನು ತಾನೆ.
--------------
ಪ್ರಸಾದಿ ಭೋಗಣ್ಣ
ಸೂತಕಂಗಳಿಂದ ಜನನ, ಪ್ರಸೂತಕಂಗಳಿಂದ ಮರಣ. ಕ್ರೀಯಿಂದ ನಿಃಕ್ರೀಯ ಜನನ, ನಿಃಕ್ರೀಯಿಂದ ಕ್ರೀಗೆ ಜನನ. ಉಭಯದ ಪ್ರೇತಸೂತಕವಳಿದು ಆತ್ಮಂಗೆ ಅರಿವಾದಲ್ಲಿ ಮುಂದಣ ಕುರುಹು ನಿಃಪತಿಯಾಯಿತ್ತು. ಅದು ಆದಿಯ ವೃಕ್ಷ, ಅನಾದಿಯ ಬೀಜ. ವಿಭೇದವಿಲ್ಲದ ಭೂಮಿಯಲ್ಲಿ ನಷ್ಟವಾಯಿತ್ತು. ಇದ ಸಾಧಿಸಿದನಭೇದ್ಯ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ ತಾನಾದ ಕಾರಣ.
--------------
ಪ್ರಸಾದಿ ಭೋಗಣ್ಣ
ಸದ್ಯೋಜಾತಮುಖ ಚನ್ನಮಲ್ಲಿಕಾರ್ಜುನಲಿಂಗವಾಯಿತ್ತು. ವಾಮದೇವಮುಖ ಭೋಗಮಲ್ಲಿಕಾರ್ಜುನಲಿಂಗವಾಯಿತ್ತು. ಅಘೋರಮುಖ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವಾಯಿತ್ತು. ತತ್ಪುರುಷಮುಖ ಶಾಂತಮಲ್ಲಿಕಾರ್ಜುನಲಿಂಗವಾಯಿತ್ತು. ಈಶಾನಮುಖ ಇಂತೀ ಚತುರ್ವಿಧ ಆಚಾರ್ಯಂಗೆ ಗುರುಮೂರ್ತಿಯಾದಲ್ಲಿ, ಇಷ್ಟಲಿಂಗನ ಕೊಡಬೇಕೆಂದು ತನ್ನ ದೃಷ್ಟಕ್ಕೆ ದೃಷ್ಟನಾದೆಹೆನೆಂದು ಬಂದುದನರಿತು ನಿಂದ ಮಾರ್ಗವೆ ಗುರುಸ್ಥಲ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದಕ್ಕೆ ಉಭಯಮಾರ್ಗ ಗುರುಸ್ಥಲ.
--------------
ಪ್ರಸಾದಿ ಭೋಗಣ್ಣ
ಸಾಕ್ಷಿಯನಿಟ್ಟು ನಿಕ್ಷೇಪವ ನಿಕ್ಷೇಪಿಸುವಂತೆ ದ್ವೈತವೆಂಬುದನರಿದು ಅದ್ವೈತವ ಕಾಣಬೇಕು. ಕಂಡೆಹೆನೆಂಬನ್ನಕ್ಕ ಅದ್ವೈತವಿಲ್ಲ. ವಿಕಾರದ ರೋಗಕ್ಕೆ ಸ್ವಪ್ನದ ಪಥ್ಯದಂತೆ ಪೃಥ್ವಿಯ ಪಟದಲ್ಲಿ ಪಂಕವ ಕಡೆಗಾಣಿಸಿಹೆನೆಂಬಂತೆ ಪಟ ಅಂಗಳವುಳ್ಳನ್ನಕ್ಕ ನೀರ ಸಂಗದಿಂದ ತೊಳೆದಹೆನೆಂದಡೆ ಪಂಕದ ಬೀಜ ಸಂದೇಹವುಳ್ಳನ್ನಕ್ಕ ನಿಜಲಿಂಗದ ಹೊಲಬು ಕಾಣಬೇಕು. ಇದರಲ್ಲಿಯೆ ಸ್ವಯವಚನ ವಿರುದ್ಧವ ತಿಳಿದು ನಿಜವ ಬಲ್ಲವನಾಗಬೇಕು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಸಕಲವೆಂದಲ್ಲಿ ನಿಃಕಲ, ನಿಃಕಲವೆಂದಲ್ಲಿ ಸಕಲ ದ್ವೈತ ಅದ್ವೈತವೆಂತೆಂದಂತೆಯೆಂಬುದು ಜಗದ ವಾಗ್ವಿಲಾಸ. ವಾಚಾರಚನೆಗಳಿಂದ ತ್ರಿಗುಣ ತ್ರಿವಿಧಮೂರ್ತಿಯ ಕಲ್ಪಿಸಿ ದಿವಾರಾತ್ರಿಯಂತೆ ಪುನರಪಿಯಾಗಿ ಅಳೆವುತ್ತಯಿಪ್ಪುದು ಉಮಾಪತಿಯ ಭೇದ. ಅದು ರುದ್ರನ ಲೀಲಾಭಾವ. ಆ ಗುಣವ bs್ಞೀದಿಸಿ ನಿಂದಲ್ಲಿ ಹದಿನೆಂಟುದೋಷಂಗಳಿಗೆ ಹೊರಗಾಗಿ ತ್ರಿವಿಧ ಅವತಾರಮೂರ್ತಿಗಳಿಗೆ ಒಳಗಲ್ಲದೆ ಎಂಬತ್ತನಾಲ್ಕುಲಕ್ಷ ಜೀವಂಗಳಲ್ಲಿ ಆತ್ಮನ ಬಂಧಿಸದೆ ಇಂತೀ ದೋಷಂಗಳಲ್ಲಿ ಸಂದಿಸದೆ ನಿಜಾತ್ಮನ ನೆಲೆಯ ಉಚಿತವನರಿದು ತ್ರಿವಿಧ ಬಂಧದಲ್ಲಿಯೆ ಅಲ್ಲಿ ಅಲ್ಲಿ ಇಂಬಿಟ್ಟು ಸ್ವಯವೇ ತಾನಾಗಿರ್ದುದು ಸ್ವಯಂಭು. ಇಂತೀ ಉಭಯಸ್ಥಲಭಾವ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ