ಅಥವಾ
(7) (3) (4) (0) (2) (0) (0) (0) (1) (2) (2) (2) (2) (0) ಅಂ (1) ಅಃ (1) (4) (2) (3) (1) (0) (0) (0) (2) (0) (0) (0) (0) (0) (0) (0) (6) (0) (2) (2) (7) (6) (0) (1) (6) (3) (0) (3) (0) (3) (14) (3) (1) (8) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶ್ರೀಪತಿ ಶಿವಲೆಂಕ ಪಂಡಿತಾರಾಧ್ಯ ಏಕಾಂತದರಾಮ ಇಂತೀ ಪ್ರಥಮದ ಆಚಾರ್ಯರು ಇಟ್ಟ ಮತಂಗಳಿಂದ ಗುರುಸ್ಥಲ ಲಿಂಗಸ್ಥಲ ಉಭಯಮಾರ್ಗ ಆಚಾರ್ಯಸ್ಥಲ ಷಡುಸ್ಥಲ ಒಳಗಾದ ನಾನಾಸ್ಥಲಜ್ಞರುಗಳಲ್ಲಿ ವರಪ್ರಸಾದಿ ಚನ್ನಬಸವಣ್ಣ ಅವರ ಕಾರುಣ್ಯಪ್ರಸಾದ ಎನಗಾಯಿತ್ತು. ಸಂಚಿತ ಪ್ರಾರಬ್ಧ ಆಗಾಮಿಗಳಲ್ಲಿ ಉಪಚಕ್ಷು ನೀನಾಗಿ ಸಲಹಿದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಶೈವವಾರು, ವೀರಶೈವ ಮೂರು, ಗುರುಸ್ಥಲವೈದು, ಆಚಾರ್ಯನಂಗ ನಾಲ್ಕು, ಆಚಾರಕ್ಕೆ ಅಂಗವಾರು. ಆತ್ಮಂಗೆ ಅರಿವು ಮೂರು. ಮತ್ತಿವರೊಳಗಾದ ಷಡ್ದರುಶನಭೇದ. ಆಚರಣೆ ಆಶ್ರಯಂಗಳು ವಿಶ್ವತೋಮುಖವಾಗಿಹವು. ಚೀರದ ಬಾಯಿದಾರದಂತೆ ಕಟ್ಟುವುದು ಒಂದೆ ಭೇದ, ಬಿಡುವುದು ಒಂದೆ ಭೇದ. ಇಂತೀ ಸ್ಥಳಕುಳಂಗಳಲ್ಲಿ ಭೇದಂಗಳನರಿವುದು ಆಚಾರ್ಯನಿರವು. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗ ವಿಭೇದವಾದಭೇದ.
--------------
ಪ್ರಸಾದಿ ಭೋಗಣ್ಣ
ಶಿವಾಧಿಕ್ಯಸಂಪನ್ನ ಶಿವಯೋಗಿಯಾದಲ್ಲಿ ಶಿವತತಿ ಶಿವಾಚಾರ ಶಿವಾಧಿಕ್ಯ ಪಂಚಮುದ್ರೆ ಪಂಚಾಚಾರ ಪ್ರಮಾಣು ಎಲ್ಲವು ಸರಿಯಲ್ಲದೆ ಬೇರೆ ಅಲ್ಲಿ ಅನ್ಯರು ಎಮ್ಮವರೆಂದುಂಟೆ? ಅರಿವು ಕರಿಗೊಂಡವ ತನ್ನವ. ಆಚಾರಕ್ಕೆ ಅನುಸರಣೆಯಿಲ್ಲದವ ತನ್ನವ. ಈ ಉಭಯಕ್ಕೆ ಹೊರಗಾದವ ಅನ್ಯನೆಂದು ಕಾಬುದು ವಿಚಾರಮತ, ಆಚಾರ್ಯಸ್ಥಲ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ