ಅಥವಾ
(7) (3) (4) (0) (2) (0) (0) (0) (1) (2) (2) (2) (2) (0) ಅಂ (1) ಅಃ (1) (4) (2) (3) (1) (0) (0) (0) (2) (0) (0) (0) (0) (0) (0) (0) (6) (0) (2) (2) (7) (6) (0) (1) (6) (3) (0) (3) (0) (3) (14) (3) (1) (8) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪ್ರಥಮಾಂಗುಲದಲ್ಲಿ ಉಪದೃಷ್ಟ. ಉಭಯಾಂಗುಲದಲ್ಲಿ ಕರ್ಮಕ್ರೀ. [ತ್ರಿವಿ]ಧಾಂಗುಲದಲ್ಲಿ ಸಂ[ಶ]ಯಸಿದ್ಧಿ. ಚತುರ್ವಿಧ ಅಂಗುಲದಲ್ಲಿ ಚತುರ್ವಿಧ ಫಲಪದ. ಪಂಚಮಪಕ್ಷದಲ್ಲಿ ಸಂಚಿತ ಪ್ರಾರಬ್ಧ ಆಗಾಮಿಗಳೆಂಬ ಭವದ ಗೊಂಚಲ ಸಂಚಂಗಳಿಲ್ಲ. ಇದು ಪಂಚಾಕ್ಷರಿಯ ಪ್ರಣಮಮಂತ್ರದ ಕ್ರೀ ಆಚಾರ್ಯನಂಗ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಪವಳ ಪದ್ಮಾಕ್ಷಿ ಪುತ್ರಜೀವಿ ಮೌಕ್ತಿಕ ರುದ್ರಾಕ್ಷಿ ಇವು ಮುಂತಾದ ಪವಣಿಗೆಯಲ್ಲಿ ಸದ್ಯೋಜಾತಮುಖಕ್ಕೆ ಪವಳಮಾಲೆ ವಾಮದೇವಮುಖಕ್ಕೆ ಪದ್ಮಮಾಲೆ ಅಘೋರಮುಖಕ್ಕೆ ಪುತ್ರಿಕಮಾಲೆ ತತ್ಪುರುಷಮುಖಕ್ಕೆ ಮೌಕ್ತಿಕಮಾಲೆ ಈಶಾನಮುಖಕ್ಕೆ ರುದ್ರಾಕ್ಷಿ ನೂರೆಂಟರಲ್ಲಿ ಪುನರಪಿಯಾಗಿ ದ್ವಾದಶದಲ್ಲಿ ಶತಸಂಖ್ಯೆಯಲ್ಲಿ ಜಪಧ್ಯಾನದಲ್ಲಿ ಆಹ್ವಾನಿಸಲಿಕ್ಕೆ ನವಬ್ರಹ್ಮತ್ವ ದಶಾವತಾರಕ್ಕೆ ಮುಖ್ಯತ್ವ ಏಕಾದಶ ಶತರುದ್ರರಿಗೆ ಗಣಂಗಳ ಪದಕ್ಕೆ ಸಾಲೋಕ್ಯವಪ್ಪುದು ಈ ಪಂಚಾಕ್ಷರಿಯ ಪ್ರಣಮ. ಇದು ಮೂಲದಿವ್ಯಮಂತ್ರ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ ಪಂಚಾಕ್ಷರಿಯ ಭೇದ.
--------------
ಪ್ರಸಾದಿ ಭೋಗಣ್ಣ
ಪರುಷರಸ ಸೋಂಕಿದಲ್ಲಿ ಲೋಹಕ್ಕಿದಿರೆಡೆ ಉಂಟೆ ? ಸಿಂಧುವೊಳಕೊಂಡ ದ್ರವ್ಯಕ್ಕೆ ಋತುಕಾಲ ವೈಶಾಖಮಾಸಂಗಳಲ್ಲಿ ಜಲವಿಂಗಲು ಮತ್ತೆ ಕಂಡೆಹೆವೆನಲುಂಟೆ ? ಸರ್ವಸಂಗಪರಿತ್ಯಾಗವ ಮಾಡಿದ ಯೋಗಿ ತಂದೆ ತಾಯಿ ಸಹೋದರ ಬಂಧುಗಳೆಂದು ಪಕ್ಷವ ಅಂಗೀಕರಿಸಿದಡೆ ತ್ರಿಭಂಗಿಯ ಭುಂಜಿಸಿದವ ಮರವೆಯ ಸುರಾಪಾನವ ಅಂಗೀಕರಿಸಿದವ, ಆತ ಲಿಂಗಾಂಗಿಯಲ್ಲ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಕ್ಕೆ ಸಲ್ಲ.
--------------
ಪ್ರಸಾದಿ ಭೋಗಣ್ಣ
ಪ್ರಜ್ವಲಿಸಿ ಪ್ರಕಾಶಿಸಿ ಆ ಬೆಳಗು ಹರಿವರಿಯಾಗಿ ಅವಗವಿಸುವ ಭೇದ, ಅದು ಉದಯಿಸಿದ ಘಟವುಳ್ಳನ್ನಕ್ಕ ಆ ಶಿಲೆಯನೊಡೆದು ಚೂರ್ಣಿಸಲಿಕ್ಕೆ ಆ ಚೂರ್ಣವ ಪಿಂಡವ ಮಾಡಿ ಆ ಗಂಭೀರದ ಬೆಳಗು ಶಿಥಿಲವಾಯಿತ್ತು. ಚೂರ್ಣದಲ್ಲಿ ಆ ಕಳೆಯ ಭೇದದಂತೆ ಐಕ್ಯನ ನಾಮನಷ್ಟ ಕೂಟಲೇಪ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಪಶು ಪಾಷಂಡಿ ಚಾರ್ವಾಕ ಮಾತುಗಂಟಿ ಎಷ್ಟನಾಡಿದಡÀೂ ಶಿವಯೋಗಸಂಬಂಧ ಸಂಪನ್ನನೊಪ್ಪುವನೆ ? ರಾಜ್ಯಭ್ರಷ್ಟಂಗೆ ತ್ಯಾಗಭೋಗವುಂಟೆ ? ನಪುಂಸಕಂಗೆ ಜಿತೇಂದ್ರಿಯತ್ವವುಂಟೆ ? ದರಿದ್ರಂಗೆ ನಿಸ್ಪೃಹತ್ವವುಂಟೆ ? ನಿಶ್ಚೈಸಿ ನಿಜವಸ್ತುವನರಿಯದವನು ಕರ್ತೃಭೃತ್ಯಸಂಬಂಧವನೆತ್ತ ಬಲ್ಲನೊ ? ಮೃತಘಟದ ವೈಭವದಂತೆ, ವಿಧವೆಯ ಗರ್ಭದಂತೆ ನಿನ್ನಲ್ಲಿಯೆ ನೀನರಿ ದ್ವೈತಾದ್ವೈತಂಗಳೆಂಬವ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಪೂರ್ವಾಂಗ ಪಕ್ಷ ದಹನ ಸಮಾಧಿಗಳೆಂಬಲ್ಲಿ ಭಸ್ಮ ಮೃತ್ತಿಕೆಗಳಿಂದ ಉಭಯನಾಮಭೇದವಾದ ತೆರನ ತಿಳಿಯಬೇಕು. ಶೈವ ವೈಷ್ಣವವೆಂಬಲ್ಲಿ ಪಂಚಭೂತಿಕಾತ್ಮಕ್ಕೆ ಪೃಥ್ವಿ ಅಪ್ಪು ತೇಜ ವಾಯು ಆಕಾಶಂಗಳೆಂಬಲ್ಲಿ ಶೈವ ಸಾಂಖ್ಯಮತಕ್ಕೆ ಬೇರೆ ಧರೆ ಜಲ ಅನಲ ಅನಿಲ ಈ ಚತುರ್ಗುಣ ಮುಂತಾದವಕ್ಕೆ ಭೇದನಾಮವ ಕಂಡಲ್ಲಿ ವಿಭೇದವುಂಟು ಉಂಟೆಂದಡೆ ತರ್ಕ. ಈ ಕುತರ್ಕಂಗಳಲ್ಲಿ ಲಕ್ಷಿತವಲ್ಲದೆ ಲೋಹವ ಲೋಹದ ಬಲಿಕೆಯಿಂದ ಖಂಡಿಸುವಂತೆ ನಿಃಸತ್ವವ ಸತ್ವದಿಂದ ಪರಿಹರಿಸುವಂತೆ ತೆಪ್ಪವ ನೀರದಪ್ಪದಿಂದ ಒತ್ತುವಂತೆ ಶಕ್ತಿಯ ಸಂಭವ ವಿರಕ್ತಿಯ ನಿಶ್ಚಯ ಉಭಯಚಕ್ಷುಗೂಡಿ ಇಷ್ಟವ ಏಕದೃಷ್ಟಿಯಿಂದ ಕಾಂಬಂತೆ ಇಲ್ಲ ಉಂಟೆಂಬುದು ನಿಜದಲ್ಲಿಯೆ ಅದೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿಯೆ.
--------------
ಪ್ರಸಾದಿ ಭೋಗಣ್ಣ