ಅಥವಾ
(7) (3) (4) (0) (2) (0) (0) (0) (1) (2) (2) (2) (2) (0) ಅಂ (1) ಅಃ (1) (4) (2) (3) (1) (0) (0) (0) (2) (0) (0) (0) (0) (0) (0) (0) (6) (0) (2) (2) (7) (6) (0) (1) (6) (3) (0) (3) (0) (3) (14) (3) (1) (8) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕೈವಲ್ಯ ವೈಕುಂಠ ಮೋಕ್ಷಗಾಮಿನಿಗಳಪ್ಪ ತೆರನ ತಿಳಿವುದಕ್ಕೆ ಶೈವ ವೈಷ್ಣವ ಅಧ್ಯಾತ್ಮ ತ್ರಿವಿಧಕರ್ಮಂಗಳಲ್ಲಿ ಷಡ್ದರ್ಶನ ಸಂಪದವಾಯಿತ್ತು. ಈ ಭೇದ ವಿಭೇದವಾದಲ್ಲಿ ಶಕ್ತಿರೂಪು ವೈಷ್ಣವ ಅಸ್ತಿಭೇದ ಶಿವಾಧಿಕ್ಯ, ಉಭಯಚೇತನ ವಸ್ತುವಾಗಿ ಘಟ ಬುಡಂಗಳಲ್ಲಿ ಚರಸ್ಥಾವರಂಗಳಲ್ಲಿ ಖಲ್ವಿದಂ ಬ್ರಹ್ಮ ವಸ್ತುಮೂರ್ತಿ ಅಳಿವು ಉಳುಮೆಗೆ ತೆರಪಿಲ್ಲದ ಸಂಗ ವೀರಶೈವ. ವಿ ಎಂಬ ಯುಕ್ತಿ, ರ ಎಂಬ ರಜಸ್ಸು, ವ ಎಂಬ ಬಿಂದುವಿನ ಶಾಖೆ ನಿಂದಲ್ಲಿ ಲೀಯಲ್ಪಟ್ಟುದು ಕೂಟಸ್ಥ ಗೋಳಕಾಕಾರ. ಅದು ಪಂಚಾಕ್ಷರೀ ಪ್ರಣಮ, ಷಡಕ್ಷರದ ಸದನ. ಏಕಾಕ್ಷರದ ಲೇಖನವಳಿದ ಅಲೇಖ. ಅಯಿವತ್ತೆರಡನೆಯ ಸರಹರಿದ ಸಂಬಂಧ. ಇದು ಸ್ವಯ ಚರ ಪರದ ಸುಮುದ್ರೆ. ಶ್ರುತಿಸ್ಮೃತಿತತ್ವದ ಶೋಧನೆ. ಆ ಗುಣ ಪ್ರಸನ್ನವಪ್ಪ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದ ಲೀಲಾಭಾವ.
--------------
ಪ್ರಸಾದಿ ಭೋಗಣ್ಣ
ಕಲ್ಲಿನಲ್ಲಿ ಹುಟ್ಟಿದ ಕಿಡಿ ಕಲ್ಲ ಸುಡಬಲ್ಲುದೆ ? ಬೆಲ್ಲದಲ್ಲಿ ಹುಟ್ಟಿದ ಸಾರವ ನಿಸ್ಸಾರ ಮೆಲ್ಲಬಲ್ಲುದೆ ? ಇಂತೀ ಬಲ್ಲತನವುಳ್ಳವರಲ್ಲಿಯ ವಾಚಕತ್ವ ಆಶೆಯ ಪಾಶವ ಕೊಲ್ಲಬಲ್ಲುದೆ ? ಮರೆಯ ಗ್ರಾಸವ ಕೊಂಬ ಮತ್ರ್ಯನಂತೆ ಈಷಣತ್ರಯಕ್ಕೆ ಮಚ್ಚಿ, ಮಾತಿನ ಮಾಲೆಯ ನೀತಿಯ ಹೇಳುವ ಈ ಯಾಚಕರುಗಳಿಗೆ ಏತರ ಬೋಧೆ ? ಇದು ನಿಹಿತದ ಉಭಯಸ್ಥಲ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಕಲ್ಲ ತೆಪ್ಪದಂತೆ ಆಗದೆ, ಮೃತ್ಪಿಂಡದಂತೆ ಜಲದಲ್ಲಿ ಇಳಿಯದೆ ಅಜಡ ಜಡವ ತಡಿಗೆ ಸಾಗಿಸುವಂತೆ ಕುಂಭದಲ್ಲಿ ಇರಿಸದೆ ಬೈಕೆಯ ಅಂಬುವಿಗೆ ಇಂಬುಗೊಡದೆ ಕೊಂಡು ಹೋದಂತೆ. ಇಂತೀ ಉಭಯಸ್ಥಲ ನಿರ್ವಾಹ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಕರ್ಪುರವ ಕರಂಡದಲ್ಲಿ ಹಾಕಿ ತೆಗೆದಡೆ ಗಂಧವಿಪ್ಪುದಲ್ಲದೆ ಮತ್ತಾ ಕರ್ಪುರವ ಕಿಚ್ಚಿನಲ್ಲಿ ಹಾಕಿ ಗಂಧದ ಲಕ್ಷಣವ ನೋಡಿಹೆನೆಂದಡೆ ಅದು ಅಪ್ರಮಾಣು ನೋಡಾ. ಇಂತೀ ಸ್ಥಲವನಾಚರಿಸುವಲ್ಲಿ ಕರಂಡ ಗಂಧಸ್ಥಲ ನಿಶ್ಚಯವಾದಲ್ಲಿ ಉರಿ ಗಂಧ ಸಂಗ. ಇಂತೀ ಜ್ಞಾತೃ ಜ್ಞೇಯ ಭೇದಕ್ರೀ ನಿರ್ವಾಹಕ್ಕೆ ಸ್ಥಲ. ಆರೋಪ ಲಕ್ಷಣ ಐಕ್ಯಲೇಪ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ