ಅಥವಾ
(7) (3) (4) (0) (2) (0) (0) (0) (1) (2) (2) (2) (2) (0) ಅಂ (1) ಅಃ (1) (4) (2) (3) (1) (0) (0) (0) (2) (0) (0) (0) (0) (0) (0) (0) (6) (0) (2) (2) (7) (6) (0) (1) (6) (3) (0) (3) (0) (3) (14) (3) (1) (8) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತಂಗೆ ಸ್ಪರ್ಶನ ವಿಷಯವಳಿದು ಮಾಹೇಶ್ವರಂಗೆ ಅಪ್ಪು ವಿಷಯವಳಿದು ಪ್ರಸಾದಿಗೆ ರುಚಿ ವಿಷಯವಳಿದು ಪ್ರಾಣಲಿಂಗಿಗೆ ಉಭಯದ ಭೇದ ವಿಷಯವಳಿದು ಶರಣಂಗೆ ಸುಖದುಃಖ ವಂದನೆ ನಿಂದೆ ಅಹಂಕಾರ ಭ್ರಮೆ ವಿಷಯವಳಿದು ಐಕ್ಯಂಗೆ ಇಂತೀ ಐದರ ಭೇದದಲ್ಲಿ ಹಿಂದಣ ಮುಟ್ಟು ಮುಂದಕ್ಕೆ ತಲೆದೋರದೆ ಮುಂದಣ ಹಿಂದಣ ಸಂದೇಹದ ವಿಷಯ ನಿಂದು ಕರ್ಪುರವುಳ್ಳನ್ನಕ್ಕ ಉರಿಯ ಭೇದ ಉರಿವುಳ್ಳನ್ನಕ್ಕ ಕರ್ಪುರದಂಗ. ಉಭಯ ನಿರಿಯಾಣವಾದಲ್ಲಿ ಐಕ್ಯಸ್ಥಲ ನಾಮನಿರ್ಲೇಪ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಭಕ್ತಿಸ್ಥಲ ವರ್ತುಳರೂಪಾಗಿಹುದು. ಮಾಹೇಶ್ವರಸ್ಥಲ ಖಂಡಿಕಾವರಣವಾಗಿಹುದು. ಪ್ರಸಾದಿಸ್ಥಲ ತ್ರಿರೇಖೆಯಾಗಿಹುದು. ಪ್ರಾಣಲಿಂಗಿಸ್ಥಲ ಶಕ್ತಿನಾಭಿಸ್ವರೂಪವಾಗಿಹುದು. ಶರಣಸ್ಥಲ ಪಂಚಸೂತ್ರಪ್ರಕಾರವ ಕೂಡಿಕೊಂಡು ಪೀಠಿಕಾಸಂಬಂಧವಾಗಿ, ಗೋಳಕಾಕಾರಮೂರ್ತಿಯಾಗಿಹುದು. ಐಕ್ಯಸ್ಥಲ ದಿಗ್ವಳಯಂಗಳಿಲ್ಲದೆ ಭೇದನಾಮಶೂನ್ಯವಾಗಿ ತಿಳಿವೆಡೆಯಲ್ಲಿ ಉಂಟಾಗಿ, ತಿಳಿದ ಮತ್ತೆ ಇದಿರೆಡೆಯಿಲ್ಲವಾಗಿ ಇಂತೀ ಪಂಚಬ್ರಹ್ಮಮೂರ್ತಿ ನೀವಾಗಿ ಲೀಲೆಗೆ ಉಮಾಪತಿಯಾಗಿ, ಲೀಲೆ ನಿಂದಲ್ಲಿ ಸ್ವಯಂಭುವಾಗಿ ಇಂತೀ ಐದರಲ್ಲಿ ಭೇದಿಸಿ ಆರರಲ್ಲಿ ವೇಧಿಸಿನಿಂದ ನಿಜಸಂಬಂಧಸೂತ್ರ ಆ ಭೇದನಿಂದಲ್ಲಿ ನಿರತಿಶಯ ಸ್ವಾನುಭಾವ. ಉಭಯದ ಭಾವ ನೀನಾದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ.
--------------
ಪ್ರಸಾದಿ ಭೋಗಣ್ಣ
ಭೇರಿಯ ಹೊಯ್ದಡೆ ಒಡಗೂಡಿ ನಾದ ಎಯ್ದುವಂತೆ ತ್ರಿವಿಧಭಕ್ತಿಯಲ್ಲಿ ಮುಟ್ಟುವ ಚಿತ್ತ ನಿಶ್ಚಯವಾಗಿ ನಿಂದುದು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ ವಿಶ್ವಾಸ ಕ್ರೀ ಜ್ಞಾನಭರಿತ ಸರ್ವಾಂಗಲಿಂಗಿಯ ಸ್ಥಲ.
--------------
ಪ್ರಸಾದಿ ಭೋಗಣ್ಣ
ಭೇದ ಉತ್ತರಕಾವ್ಯ ಪೂರ್ವಾಂತರ ಜೈಮಿನಿ ಭುವನಕೋಶ ಕಾಲಚಕ್ರ ಭೂಚಕ್ರ ಷಡಾಧಾರ ಸನ್ಮತಚಕ್ರ ಆತ್ಮವಾಯು ಸಂಪರ್ಕ ಸಂಭವ ಚಕ್ರಂಗಳಲ್ಲಿ ಹೂಣೆಹೊಕ್ಕು ನೋಡಿದಡೂ ಕರ್ಮವಾರ ತಿಳಿದು ವರ್ಮ ಮೂರನರಿದು ಮಿಕ್ಕಾದ ದುಃಕರ್ಮದಲ್ಲಿ ಹೋಗದೆ ನಿಶ್ಚಿಂತನಾದ ನಿರತ ಸ್ವಯಾನುಭಾವಿಗೆ ಉಂಡಡೆ ಉಪವಾಸಿಯಾಗಿಪ್ಪ, ಬಳಸಿದಡೆ ಬ್ರಹ್ಮಚಾರಿಯಾಗಿಪ್ಪ. ಭಾಗೀರಥಿಯಂತೆ ಆವ ಜೀವದಿಂದ ನಿಂದಡೂ ಸಮಪ್ರಮಾಣ ಗರಳವ ಮೀರಿದಾಗ ವಾದಿಗೆ ವಾದವ ನುಡಿಯ, ಶಾಸ್ತ್ರದ ಸಂದಣಿಯ ಹೊಗ ಪುರಾಣದ ಪೂರ್ವವ ವಿಸ್ತರಿಸ. ವೇದವ ವಿಭೇದವೆಂದು, ಆಹ್ವಾನ ವಿಸರ್ಜನವಿಲ್ಲ. ಸರ್ವಗುಣದಲ್ಲಿ ಸಂಪೂರ್ಣನಾದ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನಾದ ಶರಣನು.
--------------
ಪ್ರಸಾದಿ ಭೋಗಣ್ಣ
ಭಕ್ತಿಯೆಂಬುದು ಬೇರು, ವಿರಕ್ತಿಯೆಂಬುದೆ ಮರ, ಫಲವೆಂಬುದೆ ಜ್ಞಾನ. ಪಕ್ವಕ್ಕೆ ಬಂದಿತ್ತೆಂಬಾಗಲೆ ಅವಧಿಜ್ಞಾನ. ತೊಟ್ಟು ಬಿಟ್ಟಲ್ಲಿಯೆ ಪರಮಜ್ಞಾನ. ಸವಿದಲ್ಲಿಯೆ ಅಂತರೀಯಜ್ಞಾನ. ಸುಖ ತನ್ಮಯವಾದಲ್ಲಿಯೆ ದಿವ್ಯಜ್ಞಾನ. ದಿವ್ಯ ತೇಜಸ್ಸು ಹಿಂಗದಲ್ಲಿಯೆ ಪರಿಪೂರ್ಣಜ್ಞಾನ. ಅದು ಮಹದೊಡಲೆಂಬುದಕ್ಕೆ ಎಡೆಯಿಲ್ಲ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಅಪ್ರಮಾಣಾದ ಕಾರಣ.
--------------
ಪ್ರಸಾದಿ ಭೋಗಣ್ಣ
ಭಕ್ತ ಬ್ರಹ್ಮತತ್ವ, ಮಾಹೇಶ್ವರ ವಿಷ್ಣುತತ್ವ ಪ್ರಸಾದಿ ರುದ್ರತತ್ವ, ಪ್ರಾಣಲಿಂಗಿ ಈಶ್ವರತತ್ವ ಶರಣ ಸದಾಶಿವತತ್ವ, ಐಕ್ಯ ಮಹಾಭೇದತತ್ವ. ಇಂತೀ ಷಡ್ಭಾವದ ಆದ್ಯಂತದಿಂದ ಭೇದವ ಹಂಚಿಹಾಕಿ ನೀನು ಅಸಾಧ್ಯನಾದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ.
--------------
ಪ್ರಸಾದಿ ಭೋಗಣ್ಣ