ಅಥವಾ
(7) (3) (4) (0) (2) (0) (0) (0) (1) (2) (2) (2) (2) (0) ಅಂ (1) ಅಃ (1) (4) (2) (3) (1) (0) (0) (0) (2) (0) (0) (0) (0) (0) (0) (0) (6) (0) (2) (2) (7) (6) (0) (1) (6) (3) (0) (3) (0) (3) (14) (3) (1) (8) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಏಕಮುಖದಲ್ಲಿ ನಿರವಯ ಜಪ. ದ್ವಿಮುಖದಲ್ಲಿ ಶಕ್ತಿಸಂಪರ್ಕಯೋಗ. ತ್ರಿಮುಖದಲ್ಲಿ ತ್ರಿವಿಧಾತ್ಮಭೇದ. ಚತುರ್ಮುಖದಲ್ಲಿ ಚತುಷ್ಟಯ ಇಷ್ಟಾರ್ಥಮತ. ಪಂಚಮಮುಖದಲ್ಲಿ ಪಂಚಭೂತಿಕ ಪಂಚಬ್ರಹ್ಮ ಮೂರ್ತಿಗಳಪ್ಪ ಸಂಚಿತದ ಭೇದ. ಇಂತೀ ಅಕ್ಷಮಾಲೆಯ ಲಕ್ಷಣಭೇದ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಏಕವಸ್ತು ಉಭಯಭೇದವಾಗಿ ತ್ರಿವಿಧಮಾರ್ಗವನಾಚರಿಸಿ ಚತುರ್ಭಾಗವಾಗಿ ಪಂಚವಕ್ತ್ರವ ಅವಧರಿಸಿದಲ್ಲಿ ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ ಸ್ವರೂಪವ ತಾಳಿದಲ್ಲಿ ಚರ್ಚೆಗೆ ಬಂದ ಎಕ್ಕ ಸೋಲವ ಬಿಟ್ಟು ಮಿಕ್ಕಾದ ಷಡ್ದರ್ಶನವುಂಟೆಂದು ಹೆಕ್ಕಳ ಗೆಲೆಯದೆ ಶಕ್ತಿಯ ಧರಿಸಿದ ಉಭಯರೂಪು, ಶಕ್ತಿನಿಶ್ಚಯವಾದಲ್ಲಿ ನಿಜಸ್ವರೂಪು. ಅದು ಬಚ್ಚಬಯಲು. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ ತೆರ.
--------------
ಪ್ರಸಾದಿ ಭೋಗಣ್ಣ