ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಏನೇನೂ ಇಲ್ಲದಲ್ಲಿ ಒಬ್ಬ ಪುರುಷ ನಿಂದಿರುವುದ ಕಂಡೆನಯ್ಯ. ಆ ಪುರುಷಂಗೆ ಒಬ್ಬ ಸತಿಯಳು ಹುಟ್ಟಿದಳು ನೋಡಾ. ಆ ಸತಿಯಳ ಅಂಗದಲ್ಲಿ ಮೂವರು ಮಕ್ಕಳು ಇರುವುದ ಕಂಡೆನಯ್ಯ. ಆ ಮಕ್ಕಳು ಒಂದೊಂದು ಎರಡೆರಡಾಗಿ, ಆರು ಕೇರಿಗಳಲ್ಲಿ ಸುಳಿದಾಡುತಿರ್ಪರು ನೋಡಾ. ಆ ಕೇರಿಗಳನಳಿದು, ಮೂರು ಮಕ್ಕಳ ಬಿಟ್ಟು ಆ ಸತಿಯಳ ಅಂಗವ ಕೂಡಿ, ಆ ಪುರುಷನಾಚರಿಸುತಿರ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಏನೂ ಇಲ್ಲದಲ್ಲಿ ಒಂದು ಮರನ ಕಂಡೆನಯ್ಯ. ಆ ಮರಕೆ ಬುಡವೊಂದು, ಕೊಲ್ಲೆ ಮೂರು, ಆರು ಕವಲು ಇರ್ಪವು ನೋಡಾ! ಆ ಮರದ ಭೇದವ ಬಲ್ಲರೆ ಆರಾದರೆ ಹೇಳಿರಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ