ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಧರೆಯ ಮೇಲೆ ಹರಡಿರುವ ಶಿಲೆಯ ತಂದು ಕಲ್ಲುಕುಟಿಕ ಕಟೆದು ಲಿಂಗವ ಮಾಡಿದರೆ ಅದೆಂತು ಲಿಂಗವೆಂಬೆನಯ್ಯ ? ಅದು ಶಿಲೆಯು. ಆ ಲಿಂಗವ ತಂದು, ಗುರುವಿನ ಕೈಯಲ್ಲಿ ಕೊಟ್ಟು ದೀಕ್ಷೆ ಉಪದೇಶವಂ ಮಾಡಿ, ಆ ಲಿಂಗವ ಧರಿಸಿಕೊಂಡು ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಸ್ವೀಕರಿಸಿ, ಶಿಲಾಲಿಖಿತವ ತೊಡೆದು ಕಲಾಭೇದವನರಿದು ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯಗಳನರಿದು ಇರಬಲ್ಲ ಶರಣರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಧರೆಯಾಕಾಶದ ಮೇಲೆ ಒಬ್ಬ ಪುರುಷ ನಿಂದು ಪರಕೆಪರವಾದ ಲಿಂಗವ ತೋರುತಿಪ್ಪ ನೋಡಾ. ಆ ಲಿಂಗದಲ್ಲಿ ನಿಶ್ಚಿಂತ ನಿರಾವಾಸಿಯಾಗಿದ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಧರೆಯಾಕಾಶದ ಮೇಲೆ ಒಬ್ಬ ಸೂಳೆ ನಿಂದು, ಪರಿಪರಿಯ ತೋರುತಿರ್ಪಳು ನೋಡಾ. ಆ ಸೂಳೆಯ ಗೃಹದಲ್ಲಿ ಸಾಸಿರಕೋಟಿ ಕಿರಣವ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಧರೆ ಆಕಾಶವೆಂಬ ಅಂಡವನು ಒಂದು ಇರುವೆ ನುಂಗಿ, ತನ್ನ ಸುಳುವ ತಾನೇ ತೋರುತಿಪ್ಪುದು ನೋಡಾ. ಆ ಸುಳುವಿನ ಭೇದವನರಿತು ಆಚರಿಸುವ ಹಿರಿಯರ ಎನಗೊಮ್ಮೆ ತೋರಿಸಯ್ಯ, ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಧರೆಯಾಕಾಶವೆಂಬ ಅಂಡವ ಒಂದು ಇರುವೆ ಕಚ್ಚಿ ಒಯ್ಯುವುದ ಕಂಡೆನಯ್ಯ ! ಆ ಇರುವೆ ಅಣೋರಣಿಯಾನ್ ಮಹತೋಮಹೀಯಾನ್‍ಯೆಂಬ ನಿರ್ವಯಲನೊಳಕೊಂಡು ನಿಃಶಬ್ದವಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಧರೆ ಆಕಾಶವಿಲ್ಲದಂದು, ಅಪ್ಪು ವಾಯುಗಳಿಲ್ಲದಂದು, ಅಗ್ನಿ ತಾಮಸವಿಲ್ಲದಂದು ಶೂನ್ಯನಳಿದು ನಿಃಶೂನ್ಯ ನಿರಾಕುಳ ನಿರ್ಭರಿತನಾಗಿರ್ದನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಧ್ಯಾನ ಮೌನವ ನುಂಗಿರ್ದುದ ಕಂಡೆನಯ್ಯ. ಮೌನ ಧ್ಯಾನವ ನುಂಗಿರ್ದುದ ಕಂಡೆನಯ್ಯ. ಧ್ಯಾನ ಮೌನಂಗಳು ಇಲ್ಲದೆ ತಾನು ತಾನೆ ನುಂಗಿರ್ದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಧರ್ಮವೆಂಬ ದಾರಿಯಲ್ಲಿ ಒಬ್ಬ ಸತಿಯಳು ನಿಂದು ವರ್ಮವ ಮಾಡುತಿರ್ಪಳು ನೋಡಾ ! ಆ ವರ್ಮವ ಈ ಲೋಕದವರು ಆರಾರು ಕೇಳಬಲ್ಲರೆ ಅಯ್ಯಾ ? ಬ್ರಹ್ಮ ವಿಷ್ಣು ರುದ್ರಾದಿಗಳಿಗೆ ಅಗೋಚರವೆನಿಸಿತ್ತು ಅಯ್ಯಾ ! ಇದು ಕಾರಣ ನಿದ್ರ್ವಂದ್ವವಾದ ಶರಣನು ಆ ವರ್ಮವ ಕೊಳಬಲ್ಲನಯ್ಯ. ಆ ವರ್ಮದ ದಾರಿಯ ನೆರೆ ಬಲ್ಲನಯ್ಯ ಆ ಸತಿಯಳ ಅಂಗವ ಕೂಡಬಲ್ಲನಯ್ಯ ನಿಷ್ಪತಿಲಿಂಗದಲ್ಲಿ ರಾಜಿಸಬಲ್ಲನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ