ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುಲಿಂಗಜಂಗಮವೆಂಬ ತ್ರಿವಿಧಭೇದವನು ಏಕಾಗ್ರದಲ್ಲಿ ನೋಡಿ, ಪರಕೆಪರವನಾಚರಿಸಿ, ನಿರ್ಮುಕ್ತನಾದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗುರುಲಿಂಗಜಂಗಮದ ಪಾದೋದಕ ಪ್ರಸಾದವ ಸ್ವೀಕರಿಸುವವರಿಂಗೆ ಅಂತು ಇಂತು ಎಂದೊಡೆ ನಾಯಕನರಕದೊಳು ಬೀಳುವರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗಿರಿಯ ತುದಿಯ ಮೇಲೆ ಹಾರುವ ಹಂಸನ ಕಂಡೆನಯ್ಯ. ಆ ಹಂಸನು ಚಂದ್ರಸೂರ್ಯಾದಿಗಳ ಬೆಳಗನೊಳಕೊಂಡು ಪರಿಪೂರ್ಣವಾದ ಲಿಂಗಕ್ಕೆ ಹಾರಿಹೋದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗುರುವಿಡಿದು ಕಾಯದ ಕರ್ಮವ ಹರಿದೆನಯ್ಯ. ಲಿಂಗವಿಡಿದು ಜೀವದ ಕರ್ಮವ ಹರಿದೆನಯ್ಯ. ಜಂಗಮವಿಡಿದು ಪ್ರಾಣದ ಕರ್ಮವ ಹರಿದೆನಯ್ಯ. ಪ್ರಸಾದವ ಹಿಡಿದು ಸರ್ವಕರ್ಮವ ಹರಿದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗುರು ಲಿಂಗ ಜಂಗಮ ಪಾದೋದಕ ಪ್ರಸಾದವನರಿಯದ ಪಾತಕರ ಮುಖವ ನೋಡಲಾಗದಯ್ಯ. ಅಂತಪ್ಪ ಪಾತಕರ ಮಾತ ಕೇಳಲಾಗದು, ಹೇಳಲಾಗದು. ಅದೇನು ಕಾರಣವೆಂದರೆ; ಗುರುವಿಡಿದು ಕಾಯ ಪಾವನವಾಯಿತ್ತಯ್ಯ. ಲಿಂಗವಿಡಿದು ಜೀವ ಪಾವನವಾಯಿತ್ತಯ್ಯ. ಜಂಗಮವಿಡಿದು ಪ್ರಾಣ ಪಾವನವಾಯಿತ್ತಯ್ಯ. ಪಾದೋದಕ ಪ್ರಸಾದವಿಡಿದು ನಿರ್ವಿಕಲ್ಪ ನಿತ್ಯಾತ್ಮಕನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗುರುವಿನಲ್ಲಿ ಗುಣವನರಸಲಿಲ್ಲ, ಲಿಂಗದಲ್ಲಿ ರೂಪವನರಸಲಿಲ್ಲ, ಜಂಗಮದಲ್ಲಿ ಕುಲವನರಸಲಿಲ್ಲ, ಇದು ಕಾರಣ, ಬೇರುಪಡಿಸಿ ಗುರುವಿನಲ್ಲಿ ಗುಣವನರಸಿದೆನಾದೊಡೆ ಕರ್ಮಕೆ ಬೀಳುವೆನಯ್ಯ. ಲಿಂಗದಲ್ಲಿ ರೂಪವನರಸಿದೆನಾದೊಡೆ ಭವಕೆ ಬೀಳುವೆನಯ್ಯ. ಜಂಗಮದಲ್ಲಿಕುಲವನರಿಸಿದೆನಾದೊಡೆ ಅಘೋರ ನರಕದಲ್ಲಿಬೀಳುವೆನಯ್ಯ. ಇದಕ್ಕೆ ಸಾಕ್ಷಿ-ಅಗ್ನಿಯಲ್ಲಿ ಸಕಲ ತರುವಾದಿಗಳ ತಂದು ಸುಟ್ಟು, ಭಸ್ಮವ ಮಾಡಲೊಡನೆ ಆ ಭಸ್ಮವ ಕುರುಹು ಇಟ್ಟು ನುಡಿಯಲಾಗದಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗುಡ್ಡದೊಳಗೊಬ್ಬ ಮಡ್ಡ ಕುಳಿತು ಕಡ್ಡತನವ ಮಾಡುತಿಪ್ಪ ನೋಡಾ. ಇದು ಕಾರಣ, ಗುಡ್ಡದ ಕಸವ ತೆಗೆದು, ಮಡ್ಡನ ಹಿಡಿದು, ಕಡ್ಡತನವ ಕೆಡಿಸಿದಲ್ಲದೆ ದೊಡ್ಡ ಶರಣನಲ್ಲ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗುರುವು ಕಾಯಸುಖಿಯ ಮಾಡಿದನಯ್ಯ. ಲಿಂಗವು ಜೀವಸುಖಿಯ ಮಾಡಿದನಯ್ಯ. ಜಂಗಮವು ಪ್ರಾಣಸುಖಿಯ ಮಾಡಿದನಯ್ಯ. ಇಂತೀ ತ್ರಿವಿಧ ಭೇದವನರಿತು, ಜ್ಞಾನಶಕ್ತಿಯ ಸಂಗವ ಮಾಡಿ, ನಿತ್ಯವಾದ ಲಿಂಗದ ಗುಡಿಗೆ ಹೋಗಿ, ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿಕೊಂಡು ನಿರಪೇಕ್ಷಲಿಂಗದಲ್ಲಿ ಕೂಡಿ ನಿಃಪ್ರಿಯವಾದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗುರು ಲಿಂಗ ಜಂಗಮವಿಲ್ಲದಂದು, ಪಾದೋದಕ ಪ್ರಸಾದವಿಲ್ಲದಂದು, ವಿಭೂತಿ ರುದ್ರಾಕ್ಷಿಗಳಿಲ್ಲದಂದು, ಓಂ ನಮಃ ಶಿವಾಯವೆಂಬ ಮಂತ್ರಗಳಿಲ್ಲದಂದು, ಅತ್ತತ್ತಲೆ, ತಾನೇ ನಿಃಶೂನ್ಯನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ