ಅಥವಾ
(17) (3) (0) (0) (3) (0) (0) (0) (7) (0) (0) (1) (0) (0) ಅಂ (4) ಅಃ (4) (4) (0) (2) (0) (0) (1) (0) (1) (0) (0) (0) (0) (0) (0) (0) (3) (0) (5) (0) (6) (2) (0) (4) (4) (5) (1) (1) (0) (3) (5) (9) (1) (4) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತಿರಿದುಕೊಂಡು ಬಂದಾದರೆಯೂ ನಿಮ್ಮ ಭಕ್ತರಿಗೆ ಆನು ಬೆಸಕೆಯ್ವ ಭಾಗ್ಯವನು, ಮಾಡು ಕಂಡಯ್ಯಾ. ಮನ ವಚನ ಕಾಯದಲ್ಲಿ ನಿಮ್ಮ ಶರಣರಿಗೆ ಆನು ತೊತ್ತಾಗಿಪ್ಪುದು, ಮಾಡು ಕಂಡಯ್ಯಾ. ಹಲವು ಮಾತೇನು ಲಿಂಗಜಂಗಮಕ್ಕೆ ಈವುದನೆ ಮಾಡು ಕಂಡಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಾ.
--------------
ಸಂಗಮೇಶ್ವರದ ಅಪ್ಪಣ್ಣ
ತೊತ್ತಿನ ಸಂಗವ ಮಾಡಿದಡೆ ಸುರಾಪಾನವ ಕೊಂಡ ಸಮಾನ. ಸೂಳೆಯ ಸಂಗವ ಮಾಡಿದಡೆ ಮಾಂಸವ ತಿಂದ ಸಮಾನ. ಕನ್ಯೆಯ ಸಂಗವ ಮಾಡಿದಡೆ ಬಂಗಿಯ ತಿಂದ ಸಮಾನ. ಗಂಡ ಬಿಟ್ಟವಳ ಸಂಗವ ಮಾಡಿದಡೆ ಉದಾನವ ಕೊಂಡ ಸಮಾನ. ಮುಂಡೆಯ ಸಂಗವ ಮಾಡಿದಡೆ ಅಮೇಧ್ಯವ ತಿಂದ ಸಮಾನ. ಗಂಡನುಳ್ಳವಳ ಸಂಗವ ಮಾಡಿದಡೆ ಪಂಚಮಹಾಪಾತಕವ ಮಾಡಿದ ಸಮಾನ. ಅದೆಂತೆಂದಡೆ: ವಿಧವ್ಯಾ ಚ ಸ್ತ್ರೀಯ ಹಂತಿ ದಾಸಿಸೀಲೆ ಕುಲಂ ತಥಾ | ವೇಶ್ಯಾ ಮಾನಧನಂ ಹಂತಿ ಸರ್ವಂ ಹಂತಿ ಪರಾಂಗನಾ || ದಾಸಿ ಕನ್ಯಾ ಬಿಡಸ್ತ್ರೀಣಾಂ ವೇಶ್ಯಾವಿದೇ ಪರಸ್ತ್ರೀಯಾ | ಸತತಂ ಪಾತಕಶ್ಚೈವ ಬ್ರಹ್ಮಹತ್ಯಂ ದಿನೇ ದಿನೇ || ಎಂದುದಾಗಿ, ಈ ಆರುಪ್ರಕಾರದ ಸ್ತ್ರೀಯರನು ಮನ ವಚನ ಕಾಯದಲ್ಲಿ ನೆರೆದವಂಗೆ ರೌರವನರಕ ತಪ್ಪದಯ್ಯ. ಈ ಷಡ್ವಿಧ ಸತಿಯರುಗಳ ಮನ ವಚನ ಕಾಯದಲ್ಲಿ ಬಿಟ್ಟವಂಗೆ ಗುರುವುಂಟು ಲಿಂಗವುಂಟು ಜಂಗಮವುಂಟು ಪಾದೋದಕವುಂಟು ಪ್ರಸಾದವುಂಟು ವಿಭೂತಿ ರುದ್ರಾಕ್ಷಿ ಪ್ರಣಮ ಪಂಚಾಕ್ಷರವುಂಟು. ಇಂತೀ ಆರುಪ್ರಕಾರದ ಸ್ತ್ರೀಯರು ಮೊದಲಾದ ರಾಶಿಕೂಟದ ಸ್ತ್ರೀಯರುಗಳಿಗೆ ಮನ ಹೇಸದೆ ಅಂಗವಿಸುವ ಭಕ್ತರು ಭವಿಗಿಂದ ಕಷ್ಟ ನೋಡಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ತಿಥಿವಾರವೆಂದರಿಯೆನಯ್ಯಾ, ಲಗ್ನವಿಲಗ್ನವೆಂದರಿಯೆನಯ್ಯಾ. ಇದನರಿತು ಹದಿನಾರು ವಾರ, ಹದಿನೆಂಟು ಕುಲವೆಂದೆಂಬರು. ನಾವಿದನರಿಯೆವಯ್ಯಾ, ಇರುಳೊಂದು ವಾರ, ಹಗಲೊಂದು ವಾರ. ಭವಿಯೊಂದು ಕುಲ, ಭಕ್ತನೊಂದು ಕುಲ, ನಾವು ಬಲ್ಲುದು ಇದು ತಾನೆ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ