ಅಥವಾ
(17) (3) (0) (0) (3) (0) (0) (0) (7) (0) (0) (1) (0) (0) ಅಂ (4) ಅಃ (4) (4) (0) (2) (0) (0) (1) (0) (1) (0) (0) (0) (0) (0) (0) (0) (3) (0) (5) (0) (6) (2) (0) (4) (4) (5) (1) (1) (0) (3) (5) (9) (1) (4) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತರು ಮನೆಗೆ ಬಂದಡೆ, ತಮ್ಮ ಮನೆಯಲ್ಲಿ ತಾವಿಪ್ಪಂತಿರಬೇಕು. ಅಂಜದೆ ಅಳುಕದೆ ನಡುಗುತ್ತಿರದೆ, ತಮ್ಮ ಶುದ್ಧಿ ತಾವಿರಬೇಕು. ತಾವು ಆಳ್ವವರು ಅಲಿನಂತಿದ್ದಡೆ, ಬಸವಪ್ರಿಯ ಕೂಡಲಚೆನ್ನಸಂಗ ಹಲ್ಲ ಕಳೆವ.
--------------
ಸಂಗಮೇಶ್ವರದ ಅಪ್ಪಣ್ಣ
ಭಕ್ತರಿಗೆ ಮಾಡಿ ಕಣ್ಣುಕಾಲು ಕೈಗಳ ಪಡೆದರು, ಭಕ್ತರಿಗೆ ಮಾಡಿ ಅರಿದ ತಲೆಯ ಪಡೆದರು, ಭಕ್ತರಿಗೆ ಮಾಡಿ ನಿಲವೆರಸಿ ಹೋದರು. ಮುನ್ನ ಭಕ್ತರಲ್ಲದವರಿಗೆ ಮಾಡಿ ಹಡೆದವರುಂಟೆ ಹೇಳಾ ? ಭಕ್ತರಿಗೆ ಮಾಡಿ ಇವೆಲ್ಲವ ಹಡೆಯಿತ್ತ ಕಂಡು ನಂಬದೆನ್ನ ಬೆಂದ ಮನ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಭುವನಸ್ಯ ಪಿತರಂಗರ್ಭೇ ರಾಭೇ ರುದ್ರಂ ಧೀವಾರ್ದಯಾ ರುದ್ರವುವುಕಾರ ಬ್ರಹ್ಮಂ ತದೃಷ್ಟಮಜರಂ ಸುಷುಮ್ನ ದ್ರುಗ್ಯವೇಮಕಮಪಿವಾಸಃ|| ಎಂಬ ಶ್ರುತಿಯ ವಿಚಾರಿಸಲರಿಯದೆ, ಒಲಿದಂತೆ ನುಡಿವುತಿಪ್ಪರು ನೋಡಯ್ಯಾ. `ಮಾತೃದೇವೋ ಭವ, ಪಿತೃದೇವೋ ಭವ' ಎಂಬ ಶ್ರುತಿ, ದೇವಿ ದೇವನು ತಾಯಿತಂದೆಯೆಂದು ಹೇಳಿತ್ತು. `ಆಚಾರ್ಯದೇವೋ ಭವ' ಎಂಬ ಶ್ರುತಿ, ತನಗೆ ಶುದ್ಧಶೈವವನನುಗ್ರಹವ ಮಾಡಿದ ಗುರುವೇ ದೈವವೆಂದು ಹೇಳಿತ್ತು. `ಅತಿಥಿದೇವೋ ಭವ' ಎಂಬ ಶ್ರುತಿ, ತನ್ನ ಮನೆಗೆ ಬಂದ ಭಕ್ತನೇ ದೈವವೆಂದು ಹೇಳಿತ್ತು. ಇದಲ್ಲದೆ ಸಾವುತ್ತ, ಹುಟ್ಟುತ್ತಿಪ್ಪ ತಂದೆ ತಾಯಿ ದೈವವೆಂದ ಲಜ್ಜೆ ನಾಚಿಕೆ ಬೇಡ. ಚಂಡೇಶ್ವರಪಿಳ್ಳೆ ಶಿವನು ತಂದೆಯೆಂದರಿದು, ವಾಯದ ತಂದೆಯ ಕೊಂದುದನರಿಯಾ ? ಎಂದೆಂದಿಗೆ ಕೇಡಿಲ್ಲದ ತಾಯಿತಂದೆ ಬಸವಪ್ರಿಯ ಕೂಡಲಚೆನ್ನಸಂಗಮದೇವನೆಂದು ವೇದಂಗಳು ಸಾರುತ್ತವೆ.
--------------
ಸಂಗಮೇಶ್ವರದ ಅಪ್ಪಣ್ಣ
ಭವರೋಗ ಮೊದಲಾದ ಎಲ್ಲಾ ರೋಗಂಗಳಿಗೆಯೂ ಶಿವಲಿಂಗ ಪ್ರಸಾದವಲ್ಲದೆ ಮತ್ತೇನೂ ಇಲ್ಲವೆಂದುದು ವೇದ. ದ್ವಿಪಾದಿಗಳು ಚತುಃಪಾದಿಗಳು ಮೊದಲಾದ ಸಕಲಪ್ರಾಣಿಗಳೆಲ್ಲವಕ್ಕೆ ಇದೇ ಔಷಧಿಯೆಂದುದು ಯಜುರ್ವೇದ. ಗಾಮೇಸ್ವಾಯ ಪುರುಹಾಯ ಭೇಷಜಂ ಅಧೋಲಿಸ್ಮಭ್ಯಂ | ಭೇಷಜಂ ಸುಖೇಷಜಂ ಯದಿ ಸತಿ ಸುಗಮ್ಯೇಷ್ಯಾಂ | ಅವಾಂಬ ರುದ್ರಮದಿ ಮಹೀಯದ ದೇವಂ ತ್ರ್ಯಂಬಕ || ಎಂದುದು ಶ್ರುತಿ, ಬಸವಪ್ರಿಯ ಕೂಡಲಚೆನ್ನಸಂಗಾ.
--------------
ಸಂಗಮೇಶ್ವರದ ಅಪ್ಪಣ್ಣ