ಅಥವಾ
(17) (3) (0) (0) (3) (0) (0) (0) (7) (0) (0) (1) (0) (0) ಅಂ (4) ಅಃ (4) (4) (0) (2) (0) (0) (1) (0) (1) (0) (0) (0) (0) (0) (0) (0) (3) (0) (5) (0) (6) (2) (0) (4) (4) (5) (1) (1) (0) (3) (5) (9) (1) (4) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಿವನ ಪ್ರಸಾದವಲ್ಲದೆ ಉಣಲಾಗದೆಂದುದು ವೇದ. ಶಿವನ ಪಾದೋಕವಲ್ಲದೆ ಕೊಳಲಾಗದೆಂದುದು ವೇದ. ಜಾಬಾಲ ಶಾಖಾಯಾಂ : ರುದ್ರೇಣಾತ್ತಮಶ್ನಂತಿ ರುದ್ರೇಣ ಪೀತಂ ಪಿಬಂತಿ ರುದ್ರೇಣ ಘ್ರಾತಂ ಜಿಘ್ನಂತಿ | ತಸ್ಮಾದ್ಬ್ರಾಹ್ಮಣಾಃ ಪ್ರಶಾಂತಮನಸಃ ನಿರ್ಮಾಲ್ಯಮೇವ ಭಕ್ಷಯಂತಿ ನಿರ್ಮಾಲ್ಯಮೇವಸ್ನಪತಿ || ಎಂದುದು, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಶಿವನಲ್ಲದೆ ಮತ್ತೆ ದೈವವಿಲ್ಲೆಂಬುದು ದಕ್ಷನ ಜನ್ಮವು ತಾನೆ ಹೇಳದೆ ಉಳ್ಳಡೆ? ಕ್ರತುವೇನು ಕಾಯಲಾಗದೆ ಉಳ್ಳಡೆ ? ತಮ್ಮ ಶಿರಂಗಳು ಹೋಗೊಡಲೇಕೆ ? ಈ ಕ್ರಮಂಗಳೆಲ್ಲ ಶಿವನೇ ಒಡೆನೆಂದುದು ಋಗ್ವೇದ. ಅವೋ ರಾಜಾನಮಸ್ಯ ರುದ್ರಂ ಹೋತಾರಂ ಮದ್ವಸತ್ಯಯಜುಗಂ | ರೋದಸ್ಯೋಃ ಅಗ್ನಿಂ ಪುರಾತನಯಿತೋರಚಿತಾದ್ವಿರಣ್ಯರೂಪಮವಸೇ ಯಜದ್ವಂ | ಎಂಬ ಶ್ರುತಿಯಿದೆ ಇದು ಕಾರಣ, ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲದಿಲ್ಲಾ.
--------------
ಸಂಗಮೇಶ್ವರದ ಅಪ್ಪಣ್ಣ
ಶಿವಂಗೆ ಅಜ ಹರಿ ಸುರರು ಸರಿಯೆಂದು ಮನದಲ್ಲಿದು ಹೊರವಂಟಡೆ, ಸ್ತುತಿಸಿದಡೆ, ಶಿವದ್ರೋಹಿ ಚಾಂಡಾಲ ಮಟ್ಟಲಾಗದೆಂದುದು ವೇದ. ಮಾತ್ವಾರುದ್ರಚುಕ್ರುಧಾ ಮಾನವಮೋಭಿರ್ಮಾ ದುಷ್ಟುತೀ ವೃಷಭ ಮಾಸ ಹೂತೀ | ಉನ್ನೋ ವೀರಾಂ ಅರ್ಪಯ ಭೇಷಜೇ ಭಿರ್ಭಿಷಿಕ್ತಮಂ ತ್ವಾಂ ಭಿಷಜಾಂ ಶೃಣೋಮಿ || ಎಂದುದಾ ಶ್ರುತಿ. ಇದನರಿದರಿದು ಸರಿಯೆಂದು ನರಕಕ್ಕಿಳಿವಡೆ, ಕಾರಣವಲ್ಲದು, ಬಸವಪ್ರಿಯ ಕೂಡಲಚೆನ್ನಸಂಗಮದೇವಯ್ಯಾ.
--------------
ಸಂಗಮೇಶ್ವರದ ಅಪ್ಪಣ್ಣ
ಶ್ರೀವಿಭೂತಿಯ ಬಿಟ್ಟು ತಪಸ್ಸು ಮಾಡಿದಡೆ, ಆ ತಪಸ್ಸಿನ ಸಿದ್ಧಿ ಬಯಲು. ಶ್ರೀವಿಭೂತಿಯ ಬಿಟ್ಟು ದೀಕ್ಷೆಯ ಕೊಂಡಡೆ, ಆ ದೀಕ್ಷೆಯೆಲ್ಲ ಬಯಲು. ಶ್ರೀವಿಭೂತಿಯ ಬಿಟ್ಟು ಮಂತ್ರಂಗಳ ಸಾಧಿಸಿದೆಡೆ, ಆ ಮಂತ್ರಸಿದ್ಧಿಯು ಬಯಲು. ಶ್ರೀವಿಭೂತಿಯ ಬಿಟ್ಟು ಯಜ್ಞಂಗಳ ಸಾಧಿಸಿದಡೆ, ಆ ಯಜ್ಞಸಿದ್ಧಿಯು ಬಯಲು. ಶ್ರೀವಿಭೂತಿಯ ಬಿಟ್ಟು ದೇವತಾರ್ಚನೆಯ ಮಾಡಿದಡೆ, ಆ ದೇವತಾರ್ಚನಾಸಿದ್ಧಿಯೂ ಬಯಲು. ಶ್ರೀವಿಭೂತಿಯ ಬಿಟ್ಟು ವಿದ್ಯವ ಸಾಧಿಸಿದಡೆ, ಆ ವಿದ್ಯಾಸಿದ್ಧಿಯು ಬಯಲು. ಶ್ರೀವಿಭೂತಿಯ ಬಿಟ್ಟು ವೇದವ ಪಠಿಸಿದಡೆ, ಆ ವೇದಸಿದ್ಧಿಯು ಬಯಲು. ಅದೆಂತೆಂದಡೆ:ಲೈಂಗೇ- ನ ದೀಕ್ಷಾ ನ ತಪೋ ಮಂತ್ರಂ ನ ಯಜ್ಞೋ ದೇವತಾ ನ ಚ | ವಿದ್ಯಾ ನೈವಾಗಮಜ್ಞಾನಂ ಭಸ್ಮಮಾಹಾತ್ಮ್ಯವರ್ಜಿತಂ || ಎಂದುದಾಗಿ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ, ನಿಮ್ಮ ದಿವ್ಯಾಲಂಕಾರಮಪ್ಪ ದಿವ್ಯಭಸಿತವ ಬಿಟ್ಟ ಪಂಚಮಹಾಪಾತಕಂಗೆ ಆವ ಕಾರ್ಯವೂ ಸಿದ್ಧಿಯಿಲ್ಲ.
--------------
ಸಂಗಮೇಶ್ವರದ ಅಪ್ಪಣ್ಣ
ಶಿವಲಿಂಗದೇವರ ಪೂಜಿಸದೆ ಉಂಬವರೆಲ್ಲರೂ ಹೆಣನ ಮಲವನು ಒಂದಾಗಿಯೆ ತಿಂಬರಯ್ಯಾ, ಅಲ್ಲಿ ಏನೂ ಸಂದೇಹವಿಲ್ಲಾಗಿ. ಶಿವಧರ್ಮ: ಯಸ್ತು ಲಿಂಗಾರ್ಚನಂ ತ್ವಕ್ತ್ವಾಭುಙ್ಞ್ತೀ ಕ್ರಿಮಿಕೀಟಮಾಂಸಾನ್ | ನರೋ ನರಕಗಾಮೀ ಸ್ಯಾತ್ಸರ್ವಲೋಕಬಹಿಷ್ಕøತಃ || ಅಕೃತ್ವಾ ಪೂಜನಂ ಶಂಭೋ ಯೋ ಭುಙÂ್ತೀ ಪಾಪಕೃದ್ವಿಜಃ | ಕುಣಪಂ ಚ ಮಲಂ ಚೈವ ಸಮಶ್ನಾತಿ ದಿನೇ ದಿನೇ || ಎಂದುದಾಗಿ, ಇದು ಕಾರಣ, ನಿಮ್ಮ ನಂಬಲರಿಯದ ಪಾಪಿಗಳಿಗೆ ಎಂದೆಂದಿಗೂ ನರಕ ತಪ್ಪದು, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಶ್ರೀಗುರುವಿನ ಕಾರುಣ್ಯದಿಂದ ಕರಸ್ಥಲಕ್ಕೆ ಪ್ರತ್ಯಕ್ಷವಾಗಿ, ಶಿವಲಿಂಗವ ಬಿಜಯಂಗೈಸಿ, ಸರ್ವಾಂಗವೆಲ್ಲವನು ಲಿಂಗಸ್ಪರುಶನವ ಮಾಡಿಕೊಟ್ಟ ಬಳಿಕ, ಲಿಂಗಾಂಗನೆಯರು ಹೊಲೆಗಂಡೆನೆಂದು ತೊಲಗಲಾಗದು. ಹೊಲತಿ ಲಿಂಗವ ಮುಟ್ಟಿ ಪೂಜಿಸಲಾಗದು. ಅದೆಂತೆಂದಡೆ: ಲಿಂಗಾರ್ಚನರತಾ ನಾರೀ ಸೂತಕಸ್ಯಾ ರಜಸ್ವಲಾ | ರವಿರಗ್ನಿರ್ಯಥಾ ವಾಯು ತಥಾ ಕೋಟಿಗುಣಃ ಶುಚಿ || ಮತ್ತಂ, ಪೂಜಲೋಪೋನ ಕರ್ತವ್ಯಃ ಸೂತಕೇ ಮೃತಕೇsಪಿsವಾ | ಜಲಬುದ್ಬುದವದ್ದೇಹಂ ತಸ್ಮಾಲ್ರ್ಲಿಂಗಂ ಸದಾsರ್ಚಯೇತ್ || ಎಂದುದಾಗಿ, ಇದು ಕಾರಣ, ಅಂಗದ ಮೇಲೆ ಲಿಂಗವುಳ್ಳ ಭಕ್ತಾಂಗನೆಯರಲ್ಲಿ ಹೊಲೆಸೂತಕವ ಕಲ್ಲಿಸುವ[ವ]ರಿಗೆ ಗುರುಲಿಂಗವಿಲ್ಲವಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಶ್ರುತ್ಯಾಗಮ ಶಾಸ್ತ್ರಾದಿಗಳು ದೈವವಲ್ಲದಿರಲಾ, ಸ್ವರ್ಗಮೋಕ್ಷಂಗಳಿಗೆ ಶ್ರುತ್ಯಾಗಮ ಶಾಸ್ತ್ರಪ್ರಮಾಣ ಸಾಧನವೆಂಬ ಕರ್ಮವಾದಿಗಳಿಗೆ ನಿರುತ್ತರೋತ್ತರವ ಕೇಳಿರೆ : || ಶ್ರುತಿ || `ಜ್ಯೋತಿಷೊ*ೀಮೇನ ಸ್ವರ್ಗಕಾಮೋ ಯಜಜೇತ' ಎಂಬ ವೇದವಾಕ್ಯದ ಬಲುಮೆವಿಡಿದು ನುಡಿವರೆ, ಯಜ್ಞದಿಂದ ಸ್ವರ್ಗಾಪೇಕ್ಷಿತನು ಅಗ್ನಿಯನೆ ಪೂಜಿಸುವಯೆಂದು, ಕ್ರಿಯಾಕರ್ಮವೆ ದೈವವೆಂದು, ತಾನು ಮಾಡಿದ ಕರ್ಮ ಫಲವು ತನಗೆ ಅನುಭವಿಸಲುಳ್ಳದೆಂದು, ಕರ್ಮಕ್ಕೆ ಕರ್ತೃತ್ವವನ್ನು ಕೆಲಬರು ಕರ್ಮವಾದಿಗಳು ಹೇಳುತ್ತಿಹರು. ಅಹಂಗಲ್ಲ, ಕರ್ಮವೆ ಶರೀರದಿಂದನುಭವಿಸಲುಳ್ಳರಾಗಿ ವರ್ತಿಸುತ್ತಿಹುದೊ, ಅಲ್ಲ, ಮತ್ತಾ ಶರೀರಕ್ಕೆ ಕರ್ಮವೆ ಅನಾದಿಯಹುದೊ, ಈ ಕರ್ಮಕ್ಕೆ ಕಾಯಂಗಳೆರಡು ಜೀವಾತ್ಮನನು ಒಂದೆಬಾರಿಯಯಿದಿದೊ. ಈಹಿಂಗೆಂದು ಕೆಲಬರು ತರ್ಕಿಸುವರು. ಅದು ಹಂಗಾಗದಿಹುದಲ್ಲದೆ, ಆ ಕರ್ಮವು ಕ್ಷಣಿಕವಾಗಿಯೂ ಅಚೇತನವಾಗಿಯೂ ನಿರ್ಗುಣವಾಗಿಯೂ ಕಾಣಲುಳ್ಳದಾಗಿ, ಅದು ಮಾಡುವಾತನನುಯೆ ಹಾಂಗೆಯಿಹುದು. ಆಕರ್ತನು ಆವನೊಬ್ಬನು ಅಪರಾಧವ ಮಾಡಿದವ, ಮಾಡಿದ ಪುರುಷನು ಆ ಅಪರಾಧಕ್ಕೆ ತಕ್ಕುದಾದ ಶಿಕ್ಷೆಯನು ತನಗೆ ತಾನೆ ಮಾಡಿದನೊಯೇನು ಅಲ್ಲ. ಮತ್ತೆ ಆ ಅಪರಾಧವೆ ಸಂಕಲಿಯಾಗಿ, ಆ ಅಪರಾಧಿಯ ಕಾಲ ಬಂದಿಸುಹವನು. ಮಾಡೊದೊಯೇನು ಅಲ್ಲ. ಮತ್ತೆ ಆ ಅಪರಾಧಿಗೆ ಕರ್ಮಿಗೆ ಆ ಕರ್ಮವನು ಸಂಘಟಿಸಲು, ಕರ್ಮಾಧೀನನಲ್ಲದಾತನಾಗಿ, ಸ್ವತಂತ್ರನಾಗಿ, ಸರ್ವೇಶ್ವರ ಎಲ್ಲದಕ್ಕೂ ಒಡೆಯನಾಗಿ, ಸರ್ವಗತನಾಗಿ ಸರ್ವಗತನಾದ ಶಿವನು ಉಂಟಾಗಿ ಕರ್ಮಕ್ಕೆವೂ ಕರ್ಮಿಗೆವೂ ಕರ್ತೃತ್ವವಾಗದು. ಈಹಿಂಗಾಂಗದಿಹುದೆ ಪೂರ್ವಮೀಮಾಂಸವನು ಹೇಳುವ ಒಬ್ಬುಳಿಯ ಕರ್ಮಂಗಳು ಬೇರೆ ಬೇರೆ ಆರು ಕೆರಂಗಳಾಗುತಿಹವು. ಅವಾವೆನಲು, ಅಮಾವಾಸ್ಯೆ ಹುಣ್ಣಿಮೆಗಳಲಿ ಪಿತೃಕಾರ್ಯ ಮೊದಲಾದ ಕರ್ಮಂಗಳ ಮಾಡಬೇಕಾದುದರಿಂದ ಒಂದಾನೊಂದು ಸಂಸ್ಕಾರವನ್ನು ಸಂಘಟಿಸುತ್ತಿಹವು. ಆ ಸಂಸ್ಕಾರರೂಪಂಗಳಾದ ಆರು ಅಪೂರ್ವಂಗಳಾಗುತ್ತಿಹವು. ಅವು ಬೇರೊಂದು ಪ್ರಮಾಣದಿಂದ ಪೂರ್ವಮಾಗಿ ಉತ್ಕøಷ್ಟವಾದ ಅಪೂರ್ವವನ್ನು ಹುಟ್ಟಿಸುತ್ತಿಹವು. ಆ ಉತ್ಕøಷ್ಟವಾದ ಪೂರ್ವದಿಂದ ಮಾತಲುಳ್ಳ ಫಲದ ಕಡೆವು. ಅದೇ ದೈವವೆಂದು ಕಾಣಬಾರದೆಂದು, ಕರ್ಮವೆಂದು ನಾಮ ಮೂರಾರದವರಿಂದ ದೇಹಾಂತರ ಲೋಕಾಂತರ ದೇಶಾಂತರ ಕಾಲಾಂತರಗಳಲ್ಲಿ ಅದು ಆತಂಗೆ ಅನುಭವಿಸಬೇಕಾದ ಫಲಂಗಳನು ಕೊಡುತ್ತಿಹುದೆಂಬ ವಚನ ವ್ಯರ್ಥವು. ಅದು ಹೇಗೆಂದಡೆ, ಜಡಸ್ವರೂಪವಾದ ಕರ್ಮವು ದೇಹಾಂತರ ಮೊದಲಾದವರಲ್ಲಿ ಆ ಫಲವನು ಕೊಡಲು ಸಮರ್ಥವಲ್ಲದಿಹುದೆ. ಈಹಿಂಗಾಗಿ ಒಡೆಯನನು ತೊಲಗಿಸಿ, ಕರ್ಮಫಲವನು ಕೊಡವದಹುದೆ. ಅಹಂಗಾದಡೆ, ಜೈನ ಬೌದ್ಧ ಭಾಷಾದಿ (?) ಕರ್ಮವಾದಿಗಳ ಜಪತಪದಾನಧರ್ಮಫಲಂಗಳು ವ್ಯರ್ಥಂಗಳಾಗುತಿರಲು, ಅವು ಪುಷ್ಟಿವರ್ಧನಭೂತವಾದ ಭೋಜನಕ್ರಿಯೆಗಳಿಂದಯೆಹಾಹಂಗೆ ಮರಣವು ಆಯಿತ್ತು. ಅಹಂಗೆ ಒಂದೆ ಕರ್ಮವು ಫಲವು ಕೊಡಲು ಸಮರ್ಥವಲ್ಲ. ಅಹಂಗಾಗದಿಹುದೆ ಭೋಜನವ ಮಾಡಿದ ಮಾತ್ರವೆ ಪುಷ್ಟಿಯಾಗುತ್ತಿಹುದು ಮರಣವಿಲ್ಲದಿಹುದು. ಹಿಂಗಲ್ಲವೊ ಎಂದಡೆ, ಕೆಟ್ಟ ಕರ್ಮವುಯೆಯ್ದಿತ್ತು. ಉಂಡದರೊಳಗೆ ಸಿಲ್ಕಿದ ಅನ್ನವು ವಿಷವಹುದಲಾ. ಪುಷ್ಟಿಯ ತೊಲಗಿಸಿ ಮರಣವನು ಅಹಂಗೆ ಕೊಡುತ್ತಿರದು. ಇದು ಕಾರಣ, ಸರ್ವಗತನಾದ ಶಿವನು ಅರಿಕರ್ಮಕ್ಕೆ ತಕ್ಕ ಫಲವ ಕೊಡುವಾತನು. ಹಿಂಗಾಗಿರಲಿ, ಕರ್ಮಕ್ಕೆ ತಾನೆ ಕರ್ತೃತ್ವವಾಗುಹವು, ಆಗುತ್ತಿರದು. ಮತ್ತೆಯೂ ದೃಷ್ಟಾಂತರ ಸರಳು ಬಿಲ್ಲಕಾರನಿಲ್ಲದೆ ತಾನು ಗುರಿಯ ತಾಗೂದೆಯೇನು ? ಅಹಂಗೆ, ಕರ್ಮವು ಶಿವಪ್ರೇರಣೆಯಿಲ್ಲದೆ ಅಕರ್ಮಿಗೆ ಮೇಲುಕೀಳಾದ ಕರ್ಮಫಲವನು ತಾನೆ ಕೊಡಲು ಸಾಮಥ್ರ್ಯವಿಲ್ಲ, ತಪ್ಪದು. ವಾಯುವ್ಯದಲ್ಲಿ : ಅಜ್ಞೋ ಜಂತುರನೀಶೋಯಮಾತ್ಮನಃ ಸುಖದುಃಖಯೋಃ | ಈಶ್ವರಃ ಪ್ರೇರಿತೋ ಗಚ್ಛೇತ್ಸ್ವರ್ಗಂ ವಾ ಶ್ವಭ್ರಮೇವ ವಾ || ಅದು ಕಾರಣ, ಅರಿಯದವನಾಗಲಿ ಅಯಂ ಜಂತು-ಈ ಪ್ರಾಣಿ, ಆತ್ಮನಃ-ತನ್ನ, ಸುಖದುಃಖಯೋಃ-ಸುಖದುಃಖಂಗಳಿಗೆ, ಅನಿಶಃ-ಒಡೆಯನಲ್ಲ. ಈಶ್ವರ ಪ್ರೇರಿತ ಶಿವನು ಪ್ರೇರಿಸಲುಳ್ಳವನಾಗಿ, ಸ್ವರ್ಗವನಾದಡೂ ನರಕವನಾದಡೂ ಎಯ್ದುವನು. ನಾಭುಕ್ತ ಕ್ರಿಯತೇ ಕರ್ಮ ಕಲ್ಪಕೋಟಿಶತೈರಪಿ | ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ || ಇವು ಮೊದಲಾದ ವಚನ ಪ್ರಮಾಣದಿಂದ ಕರ್ಮವು ಕಲ್ಪಕೋಟಿ ಶತಂಗಳಿಂದಡಾ ಅನುಭವಿ.....ತಿರದು. ಮಾಡಲುಳ್ಳದಾಗಿ ಮೇಲು ಕೀಳಾದವು. ಏನ ಮಾಡಿಯೂ ಅನುಭವಿಸಬೇಕಾದುದು, ಈಹಿಂಗೆಂಬ ವಚನವು ವ್ಯರ್ಥ ಪೋಗುತ್ತಿಹುದು. ಅದು ಹೇಂಗೆಯಾಯೆಂದಡೆ :ವಾಯವ್ಯದಲ್ಲಿ- ಅಹೋವಿಪರ್ಯಾಸಶ್ಚೇ ಮೇದೋ ಯಾವದ್ವರಂ ಯಜಮಾನ ಸ್ವಯಂ ದಕ್ಷಃ | ಬ್ರಹ್ಮಪುತ್ರ ಪ್ರಜಾಪತಿಃ ಧರ್ಮಾದಯಃ ಸದಸ್ಯಾಶ್ಚ ರಕ್ಷಿತಾ ಗರುಡಧ್ವಜಃ ಭಾನಾಶ್ಯಪ್ರತಿಗ್ರುಣ್ವಂಕ್ತಿ ಸಾಕ್ಷಾದಿಂದ್ರಾದಯಸ್ವರಾಃ ತಥಾಪಿ ಯಜಮಾಸ್ಯದಕ್ಷಸ್ಯಾ ದಾಹಂರ್ತಿಜಃ ಸದ್ಯಯೇವ ಶಿರಶ್ಛೇದ ಸಾದುಸಂಪದ್ಯತೇ ಫಲಂ ಕೃತ್ವಾತು ಸಮಹತ್ಪುರಣ್ಯಾಮಿಷ್ಟ ಯಶಶತೈರಪಿ ನ ತತ್ಫಲಮವಾಪ್ನೋತಿ ಭಕ್ತಿಹೀನೋ ಯದೀಶ್ವರೇ | ಈ ಅರ್ಥದಲ್ಲಿ ಸತ್ಪುರುಷರ ವೇದದಿಂದರಿಯಲು, ತಕ್ಕುದಾದ ಆಚಾರವನು ಬಿಟ್ಟು ಒಡನೆ ಹುಟ್ಟಿದುದಾದ ತನ್ನವರೆಂಬ ಸ್ನೇಹದಲ್ಲಿ ಹುಟ್ಟಿದುದಾ[ದ] ಚರಣವನ್ನು ಬಿಟ್ಟು, ಅಪಾಯರಹಿತವಾಗಿ ಪ್ರಮಥಪದವಿಯನು ಎಯ್ದಿದನು. ಈಹಿಂಗಾಗಿಯೇ, ಬರಿಯ ಕರ್ಮಕ್ಕೆ ಕರ್ತೃತ್ವವುಂಟಾಗುತಿಹುದೆ ? ಚಂಡೇಶ್ವರನಿಂದ ತನ್ನ ತಂದೆಯಾದ ಬ್ರಾಹ್ಮಣನ ಕಾಲುಗಳ ತರಿದಲ್ಲಿ, ಆ ದೋಷಫಲವುಯಹಂಗೆ ಇಲ್ಲವಾಯಿತ್ತು. ಮಾಮನಾದೃತ್ಯ ಪುಣ್ಯಂ ವಸ್ಯಾಂತ್ಪ್ರತಿಪಾದಿನಃ | ಮನ್ನಿ ಮಿತ್ತಕೃತಂ ಪಾಪಂ ಪುಣ್ಯಂ ತದಪಿ ಜಾಯತೇ || ಇದು ಶಿವನ ನುಡಿ, ಮಾರಿಯೆನ್ನನು ಕೈಕೊಳ್ಳದ ಪುಣ್ಯವಾದಡೆಯು, ಮಾಡುವವಂಗೆ ಪಾಪವು ಅಹುದು. ನಾನು ನಿಮಿತ್ತ ಮಾಡಿದ ಪಾಪವಾಯಿತ್ತಾದಡೆಯು ಸುಕೃತವಾಗುತ್ತಿಹುದು. `ಉಪಕ್ರಮ್ಯ ಕರ್ಮಾದಿ ಪತಿತ್ವ ವಿರುಪಾಕ್ರೋಸ್ಥಿತಿ ಸರ್ವಕರ್ಮಾದಿ ಪತಿಃ' ಮತ್ತೆ ಉಪಕ್ರಮಿಸಿ ಕರ್ಮಂಗಳಿಗೊಡೆಯನು ಪರಮೇಶ್ವರನು ಉಂಟೆಂಬ ವೇದವು ಮೊದಲಾದ ವಾಕ್ಯಪ್ರಮಾಣದಿಂದ, ನಾನಾ ಪುರಾಣ ವಚನ ಪ್ರಮಾಣದಿಂದ ಸಮಸ್ತ ಕರ್ಮಂಗಳಿಗೊಡೆಯನು ಶಿವನು. ಆ ಶಿವನ ತೊಲಗಿಸಿ, ಬರಿಯ ಕರ್ಮಕ್ಕೆ ಕರ್ತನಾಗುಹವು ಇಲ್ಲದಿರುತ್ತಿಹುದು. ಇದನರಿದು, ಎಲೆ ಕರ್ಮವಾದಿಗಳಿರಾ, ಸಕಲಕರ್ಮಕ್ಕೆ ಶಿವನೆ ಕರ್ತುವೆಂದರಿದಿರಾದಡೆ, ಬಸವಪ್ರಿಯ ಕೂಡಲಚೆನ್ನಸಂಗ ನಿಮಗೆ ಸುಕರ್ಮ ಫಲವನು ಕೊಡುವ ಕಂಡಿರೆ.
--------------
ಸಂಗಮೇಶ್ವರದ ಅಪ್ಪಣ್ಣ
ಶ್ರವವೆತ್ತಿ ನಡೆವಾಗ ಸ್ಮಶಾನವೈರಾಗ್ಯವಹುದು. ಪುರಾಣಂಗಳ ಕೇಳುವಲ್ಲಿ ಪುಸ್ತಕವೈರಾಗ್ಯವಹುದು. ನೆಟ್ಟನೆ ಶರಣಚಾರಿತ್ರವ ಕೇಳುವಲ್ಲಿ ಮರ್ಕಟವೈರಾಗ್ಯವಹುದು. ಏನನೋದಿಯೂ ಏನ ಕೇಳಿಯೂ ಏನೂ ಫಲವಿಲ್ಲ. ಹಿಂದೆ ಸತ್ತುದ ಕೇಳುತ್ತಿದೇನೆ. ಮತ್ತೆಯೂ ಎನ್ನ ಅನ್ವಯದವರು ಅಲಿವುದ ಕಾಣುತ್ತಿದೇನೆ. ಶುನಕ ಬೂದಿಯೊಳು ಮಲಗಿರ್ದಲ್ಲಿ ತನ್ನಾದಿಯ ನೆನೆದು, ದೇಹದಿಚ್ಛೆಯ ಹಳಿದು, ಜನನ ಜಾಡ್ಯವ ಪರಿವೆನೆಂದು ಯೋಚಿಸುತ್ತಿರಲು, ಮೆಲ್ಲನೆ ನಿದ್ರೆ ತಿಳಿಯಲು, ಆಗ ತನ್ನಾದಿಯ ಮರೆದು, ಭ್ರಾಂತೆಡೆಗೊಂಡು, ಕಿವಿಯ ಕೊಡಹುತ್ತ ಹಡಿಕೆಗೆ ಹರಿವಂತೆ ಎನ್ನ ಮುಕ್ತಿ. ಇಂತಪ್ಪ ಅನುಕ್ತಿಯನಳಿದು, ದೇಹದಿಚ್ಛೆಯ ಹಳಿದು, ಪರಮವಿರಕ್ತಿಯನಿತ್ತು ರಕ್ಷಿಸಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಶಿವಂಗೆ ಬ್ರಹ್ಮವಿಷ್ಣುಗಳು ಸರಿಮಿಗಿಲೆನಲಾಗಿ, ಸುರಿಯವೆ ಬಾಯಲ್ಲಿ ಬಾಲಹುಳುಗಳು ? ಧರೆ ಚಂದ್ರ ರವಿವುಳ್ಳನ್ನ ಬರ, ಇರದೆ ಉರಿಯುತ್ತಿಪ್ಪರಯ್ಯಾ, ನರಕದ ಕಿಚ್ಚಿನಲ್ಲಿ. ರುದ್ರಸ್ಯ ಬ್ರಹ್ಮವಿಷ್ಣುಭ್ಯಾಂ ನಾಧಿಕಂ ಪ್ರವದಂತಿ ಯೇ | ತೇಷಾಂ ಪಾಪಸ್ಯ ಸಾಂಕರ್ಯಮಸ್ತೀತಿ ಮಮ ನಿಶ್ಚಯಃ || ಇದು ಕಾರಣ, ಹರಿಬ್ರಹ್ಮಾದಿ ಸುರರೆಲ್ಲರೂ ನಿಮ್ಮ ಡಿಂಗರಿಗರೆಂದರಿದವರಿಗೆ ಪರಮಪದವಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ