ಅಥವಾ
(17) (3) (0) (0) (3) (0) (0) (0) (7) (0) (0) (1) (0) (0) ಅಂ (4) ಅಃ (4) (4) (0) (2) (0) (0) (1) (0) (1) (0) (0) (0) (0) (0) (0) (0) (3) (0) (5) (0) (6) (2) (0) (4) (4) (5) (1) (1) (0) (3) (5) (9) (1) (4) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹೆಡಗೆಹಾರ ಮೊರಹಾರ ಗೆರಸಿಹಾರ ಮಡಕೆಹಾರ ದೆಸೆದೆಸೆಯಲ್ಲಿ ತಂದು ನೀಡುತ್ತಿರಲು, ಹೊಸಪರಿಯ ಆರೋಗಣೆಯನವಧರಿಸುತ್ತಿರ್ದನು. ಆವಾವ ದೆಸೆಯಲ್ಲಿ ತಂದು ನೀಡುತ್ತಿರ್ದಡೆ, ಆ ದೆಸೆದೆಸೆಗಳೆಲ್ಲಾ ಬಾಯಾಗಿ ಕೊಳುತಿರ್ದನು ! ಎತ್ತ ನೋಡಿದಡೆ ಅತ್ತತ್ತ ಮುಖ. ಅಗೆಯ ಹೊಯಿದಂತೆ ತೆರಹಿಲ್ಲ. ಒಂದು ನಿಮಿಷ ಎಡಹಿದಡೆ, ಅಕ್ಕಿಗಚ್ಚು ನುಚ್ಚು ತವುಡು ಮೊದಲಾಗಿ ಹೆಚ್ಚಿದವು ನಿಮಿಷದೊಳು. ಭಕ್ತಿಬಂಧುಗಳೆಲ್ಲಾ ತಮ್ಮ ತಮ್ಮ ಮಠದಲಾದ ಸಯಿದಾನವ ತಂದು, ಸಾರಗಟ್ಟಿ ನೀಡುತ್ತಿರ್ದಡೆ, ಅದ್ಭುತದಾರೋಗಣೆಯ ಕಂಡು, ಹರಿಹರಿದು ಪಾಕಯತ್ನವ ಮಾಡಿ ಎನ್ನುತ್ತ ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ, ಸಂತೋಷದೊಳೋಲಾಡುತ್ತಿರ್ದನು ಎನ್ನ ಪರಮಗುರು ಬಸವಣ್ಣನು.
--------------
ಸಂಗಮೇಶ್ವರದ ಅಪ್ಪಣ್ಣ
ಹಜ್ಜೆ ಇಲ್ಲದ ಪುರುಷ, ಆ ಸಜ್ಜನಸ್ತ್ರೀ, ಷಡುಪಂಚಮರುದ್ರ, ಕಾಳಾಂಧರ, ವಾರಿದ್ಥಿ, ಆತ್ಮಾನಾತ್ಮ ಇಂತಿವೇನೂ ಇಲ್ಲದಂದು, ಅತ್ತತ್ತಲಿರ್ದ ಬೆಳಗಿನ ಚಿನ್ಮೂರ್ತಿಯಲ್ಲಿ ಚಿದ್ವಿಭೂತಿ ಇದ್ದಿತ್ತು. ಆ ಚಿದ್ವಿಭೂತಿ ಚಿದ್ಘನಾತ್ಮಕ ರತ್ನವಾಯಿತ್ತು. ಆ ಚಿದ್ಘನಾತ್ಮಕ ರತ್ನವೆ ಚಿಚ್ಛಕ್ತಿಯಾಯಿತ್ತು. ಆ ಚಿಚ್ಛಕ್ತಿ ಸಕಲಚೈತನ್ಯಾತ್ಮಕ ಶರಣನಾಯಿತ್ತು. ಆ ಶರಣನೊಳಗೊಂದು ಕೋಳಿ ದ್ವಾದಶವರ್ಣದ ಸುನಾದವಾಗಿ ಕೂಗಿತ್ತು. ಆ ಸುನಾದಂಗಳ ಝೇಂಕಾರವು ಚತುರ್ದಶ ಸಾವಿರಕ್ಷರ ರೂಪಕವಾಗಿ, ಆ ಶರಣನ ಸಪ್ತಚಕ್ರದ ಕಮಲದೊಳಗೆ ಪ್ರವೇಷ್ಟಿಸಿ, ಗೋಪ್ಯವಾಗಿದವು. ಆ ಶರಣನಲ್ಲಿ ಷಡುಶಿವಮೂರ್ತಿಗಳುದಯಿಸಿದರು. ಆ ಮೂರ್ತಿಗಳಲ್ಲಿ ಷಡುಸ್ಥಲ ಸತ್ಕ್ರಿಯೆಗಳು ತೋರಿದವು. ಅವರೆಲ್ಲರಲ್ಲಿ ಅನಂತಕೋಟಿ ಮೂರ್ತಿಗಳ ಮೇಲೆ, ತೊಂಬತ್ತಾರುಸಾವಿರ ಶಿವಮೂರ್ತಿಗಳುದಯಿಸಿದರು. ಆ ಶರಣನ ನಾಡಿಗಳೊಳಗೆ ಚಿದ್ಮಣಿ, ಚಿದ್ಭಸ್ಮ, ಚಿಲ್ಲಿಂಗ ಇಂತಿವೆಲ್ಲ ತೋರಿದವು. ಇವನೆಲ್ಲವ, ಶಿವಗಣಂಗಳಲ್ಲಿ ಆ ಶರಣನು, ಉಪದೇಶಮಾರ್ಗದಿಂ ಧರಿಸಿಕೊಂಡು, ನೂರೊಂದರ ಮೇಲೆ ನಿಂದು, ದ್ವಾದಶ ಸಪ್ತವಿಂಶತಿ ಛತ್ತೀಸದ್ವಯವೆ ಎಪ್ಪತ್ತು ಶತಾಷ್ಟವೆಂಬ ಪಂಚಜಪಮಾಲೆಗಳಿಗೆ ಹನ್ನೆರಡು ಸಿಡಿಲ ಸುನಾದವನೊಡದು, ತ್ರಿ ಆರುವೇಳೆ ಕೂಡಿ, ನೂರೆಂಟಕ್ಕೆ ಸಂದಾನಿಸಿ ಜಪಿಸುತ್ತಿಪ್ಪ ಅನಂತ ಪ್ರಮಥರಂ, ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ ಕಂಡು ಸುಖಿಯಾದೆನು.
--------------
ಸಂಗಮೇಶ್ವರದ ಅಪ್ಪಣ್ಣ
ಹರಂಗೆ ಅಜ ಹರಿ ಮೊದಲಾದ ದೈವಂಗಳ ಸರಿಯೆಂಬ ನರಕಿಗಳ, ಗುರುವಿಂಗೆ ನರರ ಸರಿಯೆಂಬ ಕಡುಪಾಪಿಗಳ, ಪರಶಿವಧರ್ಮಕ್ಕೆ ವೇದಾಗಮಂಗಳ ಸರಿಯೆಂಬ ಪಾತಕರ, ಪರಶಕ್ತಿ ಜಗದಂಬೆ ಉಮಾದೇವಿಯರಿಗೆ ಉಳಿದಾದ ಶಕ್ತಿಗಳ ಸರಿಯೆಂಬ ಕರ್ಮಿಗಳ, ಇಂತಿವರ ಮುಖವ ನೋಡಿದವರಿಗೆ ನರಕವಲ್ಲದೆ ಮತ್ತೊಂದು ಗತಿಯಿಲ್ಲ. ಇಂತಿವರ ಹೊರೆಯಲ್ಲಿರಲಾಗದು, ಒಡನೆ ನುಡಿಯಲಾಗದು, ಒಂದಾಸನದಲ್ಲಿ ಕುಳ್ಳಿರಲಾಗದು. ಶಿವಂ ಬ್ರಹ್ಮಾದಿಭಿಃ ಸಾಮ್ಯಂ ಗುರುಃ ಪ್ರಾಕೃತೈಸ್ಸಮಂ | ಶಿವಂ ವಿದ್ಯಾ ಚ ವೇದಾದ್ಯೈರ್ಮನುತೇ ಯಸ್ತು ಮಾನವಃ || ಸ ಪಾಪೀ ದುರ್ಮತಿಃ ಕ್ರೂರಃ ಶ್ವಪಚಃ ಶ್ವಪಚಾಧಮಃ | ಶಿವಂ ಬ್ರಹ್ಮಾದಿಭಿಃ ಸಾಮ್ಯಂ ಶಿವಂ ಲಕ್ಷ್ಯಾದಿ ಶಕ್ತಿಭಿಃ || ಸ್ವಗುರುಂ ಪ್ರಾಕೃತೈಸ್ಸಾರ್ಧಂ ಯೇ ಸ್ಮರಂತಿ ವದಂತಿ ಚ | ತೇಷಾಂ ಪಾಪಾನಿ ನಶ್ಯಂತಿ ಶ್ರೀಮತ್ ಪಂಚನದಾಶ್ರಯಃ || ಇಂತೆಂದುದಾಗಿ, ಇದು ಕಾರಣ, ಇಂತೀ ಮರುಳು ದುರಾತ್ಮರನೆನಗೆ ತೋರಿಸದಿರಯ್ಯಾ. ಬಸವಪ್ರಿಯ ಕೂಡಲಚೆನ್ನಸಂಗಯ್ಯಾ, ಬೇಡುವೆ ನಿಮ್ಮದೊಂದೇ ವರವನು.
--------------
ಸಂಗಮೇಶ್ವರದ ಅಪ್ಪಣ್ಣ
ಹವ್ಯಂ ವಹತಿ ದೇವಾವಾಂ ಕವ್ಯಂ ಕವ್ಯಾ ಶಿವಾಮಪಿ | ಪಾಕಾದ್ಯಂಶ ಕರೋತ್ಯಗ್ನಿ ಃ ಪರಮೇಶ್ವರಶಾಸನಾತ್ || ಸಂಜೀವನಾದ್ಯಂ ಸರ್ವಸ್ಯ ಕುರ್ವಂತ್ಯಾ ಸಸ್ತಥಾಜ್ಞಯಂ | ವಿಶ್ವಂ ವಿಶ್ವಂಭರಾ ನಿತ್ಯಂ ತಥಾ ವಿಶ್ವೇಶ್ವರಾಜ್ಞ ಯಾ | ತ್ರಿಭಿರೇತ್ಯರ್ಜಗದ್ಭಿಃ ಭೃತ್ಯೇಜೋಭರ್ವಿಶ್ಚಮಾರವೇದಿ | ವಿಸರ್ವಃ ಜಗಚ್ಚಕ್ಷುರ್ದೇವ ದೇವಸ್ಯ ಶಾಸನಾತ್ || ತೃಷ್ಣಾತ್ಯೋಷಧಿ ಜಾತಾನಿ ಭೂತಾನಿ ಹ್ಲಾದಯತ್ಯಪಿ ದೇವೈಶ್ಚ ಪೀಯತೇ ಚಂದ್ರಶ್ಚಂದ್ರಭೂಷಣ ಶಾಸನಾತ್ ತೇನಾಜ್ಞಾಂ ವಿನಾ ತೃಣಾಗ್ರಮಪಿ ನ ಚಲತಿ || ಇಂತೆಂದುದಾಗಿ, ಇದು ಕಾರಣ, ಬಸವಪ್ರಿಯ ಕೂಡಲ[ಚೆನ್ನ]ಸಂಗಯ್ಯನೆಂದರಿಯದವರೆಲ್ಲರೂ ಪಶುಗಳು ಪಾಶಬದ್ಧರೆಂಬುದ ತರ್ಜನಿಯವಿತ್ತಿಹೆನು, ಉತ್ತರ ಕೊಡುವರುಳ್ಳರೆ ನುಡಿಯಿರೊ, ಏಕಾತ್ಮವಾದಿಗಳಾ.
--------------
ಸಂಗಮೇಶ್ವರದ ಅಪ್ಪಣ್ಣ
ಹರಿದು ಹತ್ತಿ ಮುಟ್ಟಲಿಲ್ಲ, ಮುಟ್ಟಿ ಮರಳಿ ಇಳಿಯಲಿಲ್ಲ, ಬೆರಸಿಹೆನೆಂದು ನೆನೆಯಲಿಲ್ಲ. ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ ಶಬ್ದಕ್ಕೆ ಇಂಬಿಲ್ಲದಿರ್ದೆನು.
--------------
ಸಂಗಮೇಶ್ವರದ ಅಪ್ಪಣ್ಣ
ಹೊತ್ತಾರಿನ ಹೊತ್ತು ಮಲಮೂತ್ರ ವಿಸರ್ಜನಕ್ಕೆ ಹೋಯಿತ್ತು. ಮಧ್ಯಾಹ್ನದ ಹೊತ್ತು ಹಸಿವು ತೃಷೆಗೆ ಹೋಯಿತ್ತು. ಮೂರನೆಯ ಜಾವದ ಹೊತ್ತು ಹೊಟ್ಟೆತುಂಬಿದ ಬಳಿಕ, ಕಾಯದ ಕಳವಳವ ಕೈಕೊಂಬುದಯ್ಯಾ. ಇರುಳಾದ ಬಳಿಕ ನಿದ್ರೆಗೈದು, ಬೆಳಗಾಹನ್ನಬರ ಸತ್ತಂತಿಹೆನು ಹೆಣನಾಗಿ ಏನುವನರಿಯದೆ. ಅಯ್ಯಾ, ನಿಮ್ಮ ನೆನೆವವರ ಚರಣಕ್ಕೆ ಶರಣೆಂಬೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಹರನ ಕೈಯ ಕಪಾಲವಿ[ಡಿ]ದ ತೆರನನರಿಯದಲ್ಲಾ ಲೋಕ. ನರಜನ್ಮಕ್ಕಾಹುತಿಯ ಬಗೆದು, ಅರುವತ್ತುನಾಲ್ಕು ಭಾಗವ ಮಾಡಿ, ಚೌಷಷ್ಟಿವಿದ್ಯವು ನಿಮಗೆ ಕಾಯಕಪ್ಪರವೆಂದು ಕೈವರ್ತಿಸಿದನೀ ಜಗಕ್ಕೆ ಶಿವನು. ಇದು ಕಾರಣ, ಶಿವಭಕ್ತರು ಕರ್ಮಮೂಲ ಕಾಯಕವಿಡಿದು ಬಂದುವೆ ಲಿಂಗಕ್ಕರ್ಪಿತ. ಕಾಯಕ ಹೀನವೆಂದು ಬಿಟ್ಟು ಹಿಡಿದಡೆ ಭಕ್ತನಲ್ಲ. ಪಥಕ್ಕೆ ಸಲ್ಲ , ಪುರಾತನರೊಲ್ಲರು, ಲಿಂಗ ಮೆಚ್ಚಲ್ಲ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ