ಅಥವಾ
(17) (3) (0) (0) (3) (0) (0) (0) (7) (0) (0) (1) (0) (0) ಅಂ (4) ಅಃ (4) (4) (0) (2) (0) (0) (1) (0) (1) (0) (0) (0) (0) (0) (0) (0) (3) (0) (5) (0) (6) (2) (0) (4) (4) (5) (1) (1) (0) (3) (5) (9) (1) (4) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಯಸಿದ ಬಯಕೆ ಕೈಸಾರುವಂತೆ, ನಿಧಿ ನಿಧಾನ ಮನೆಗೆ ಬಪ್ಪಂತೆ, ಪರಿಮಳವನರಿಸಿ ಬಪ್ಪ ಭ್ರಮರನಂತೆ, ಚಿಂತಾಮಣಿಯ ಪುತ್ಥಳಿ ನಡೆಗಲಿತಂತೆ, ಬಸವಪ್ರಿಯ ಕೂಡಲಚೆನ್ನಸಂಗನಲ್ಲಿ ಪ್ರಭುದೇವರ ಬರವು ಕಾಣಬರುತ್ತಿದೆ ನೋಡಾ ಸಂಗನಬಸವಣ್ಣಾ.
--------------
ಸಂಗಮೇಶ್ವರದ ಅಪ್ಪಣ್ಣ
ಬ್ರಾಹ್ಮಣ ದೇಹಿಕದೇವನಲ್ಲ, ಕ್ಷತ್ರಿಯ ದೇಹಿಕದೇವನಲ್ಲ. ಭಕ್ತ ದೇಹಿಕದೇವನೆಂದು ಕೇಳಿದ ಅರಿಯವೊ, ಶ್ವಪಚನಾದಡೇನು ಲಿಂಗಭಕ್ತನೆ ಕುಲಜನೆಂಬುದು. ಶ್ವಪಚೋಪಿ ಮುನಿಶ್ರೇಷ*ಃ ಭಕ್ತಿಹೀನಃ ಪಿತಾsಪಿ ವಾ | ಚತುರ್ವೇದಧರೋ ವಿಪ್ರ ಶೈವಭಕ್ತಿವಿವರ್ಜಿತಃ | ಇದು ಕಾರಣ, ಬಸವಪ್ರಿಯ ಕೂಡಲಚೆನ್ನಸಂಗ ಹಿತನೆಂದು ಅಂಜುವೆ ಮತ್ತೆ ಮರೆವೆ.
--------------
ಸಂಗಮೇಶ್ವರದ ಅಪ್ಪಣ್ಣ
ಬಿಡಿ ಬಿಡಿ ವಿಷ್ಣುವ, ನಿಮಗೆ ಗತಿಗೆ ಸಾಧನವಲ್ಲ, ಕಂಡಿರೆ ಎಲೆ ದ್ವಿಜರಿರಾ. ಬಿಡದೆ ಧ್ಯಾನಿಸಿ ಶಿವನ ಅಡಿದಾವರೆಯ, ಬಿಡದೆ ಪೂಜಿಸಿ ಶಿವನ ಶ್ರೀಪಾದಪದ್ಮಂಗಳ ನಿಮಗೆ ತಡೆಯಿಲ್ಲದ ಮುಕ್ತಿದೊರಕೊಂಬದು. ಅಥರ್ವಣವೇದ: `ಈಶಾನಃ ಶಿವ ಏಕೋಧ್ಯೇಯ' ಶಿವಂಕರತ್ಸರ್ವಮನ್ಯತ್ಪರಿತ್ಯಜ್ಯ ಇತಿ ಬ್ರಹ್ಮನೀತಿಯಲಿ: ಆತ್ಮ ಸರ್ವಂ ಪರಿತ್ಯಜ್ಯ ಶಿವಾದನ್ಯಂತು ದೈವತಂ ತಮೇವ ಶರಣಂ ಚೇತ್ಸದ್ಯೋಮುಕ್ತಿಂ ಸುಗಚ್ಛತಿ || ಕೆಡಬೇಡ, ಸಾರಿ ಡಂಗುರ ಹೋಯ್ಯಿತ್ತು , ಶ್ರುತಿಯ ನೋಡಯ್ಯ. ಬಸವಪ್ರಿಯ ಕೂಡಲ ಚೆನ್ನಸಂಗಯ್ಯನನೆ ಬಿಡದೆ ಧ್ಯಾನ ಪೂಜೆಯ ಮಾಡಲು ಕೊಡುವ ನಿಮಗೆ ಪರಮಪದವನು.
--------------
ಸಂಗಮೇಶ್ವರದ ಅಪ್ಪಣ್ಣ
ಬ್ರಹ್ಮವಿಷ್ಣ್ವಾದಿ ದೇವತೆಗಳಿಗೆ ಶಿವನೆ ಜನಕನೆಂಬ ಯಜುರ್ವೇದವ ಕೇಳಿರೆ ದ್ವಿಜರೆಲ್ಲರೂ. ಅದೆಂತೆಂದಡೆ: ಸೋಮಃ ಪವತೇ ಜನಿತಾ ಮತೀನಾಂ ಜನಿತಾ ದಿವೋ ಜನಿತಾಪೃಥಿವ್ಯಾ ಜನಿತಾಗ್ನಿರ್ಜನಿತಾ ಸೂರ್ಯಶ್ಚ ಜನಿತೇಂದ್ರೋ ಜನಿತಾಥ ವಿಷ್ಣೋಃ || ಮತ್ತಂ ಆದಿತ್ಯಪುರಾಣೇ: ಉಮಯಾ ಸಹಿತಃ ಸೋಮಃ ಸೋಮೇತುಚ್ಯ ಸ್ವಯೇವ ಕಾರಣಂ ನಾನ್ಯೋ ವಿಷ್ಣೋರಪಿ ಚ ವೈ ಶ್ರುತಿಃ || ಮತೀನಾಂ ಚ ದಿವಃ ಪೃಥ್ವ್ಯಾ ವಹ್ನೇಃ ಸೂರ್ಯಸ್ಯ ವಜ್ರಿಣಃ || ಸಾಕ್ಷಾದಪಿ ಚ ವಿಷ್ಣೋರ್ವೈ ಸೋವಿೂೀ ಜನಯಿತೇಶ್ವರ || ಎಂದುದಾಗಿ, ಮತ್ತೆ ದೈವವುಂಟೆಂಬ ಅಜ್ಞಾನಿ ಜಾತ್ಯಂಧರ ನಾನೇನೆಂಬೆ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ