ಅಥವಾ
(9) (5) (2) (1) (4) (0) (0) (0) (2) (0) (0) (0) (0) (0) ಅಂ (3) ಅಃ (3) (8) (0) (0) (0) (0) (0) (0) (3) (0) (0) (0) (0) (0) (0) (0) (9) (0) (2) (1) (2) (4) (0) (6) (5) (9) (0) (2) (0) (3) (1) (3) (1) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಶನ ಹಸಿದು ಮನುಷ್ಯರ ನುಂಗುವಾಗ ಅಸು ಆರಿಗೆಂದು ಪ್ರಮಾಣಿಸಬಹುದೆ? ಉದಕದೊಳಗೆ ಮುಳುಗುತ್ತ ತಾ ಗತಿಗೆಡುತ್ತ ಆಸೆ ದೆಸೆಯನರಿಯದೆ ಲಘುವಿನ ಮೇಲೆ ಸಾಗುತಿರ್ಪ ಸಾಧನೆವಂತರ ಸಾಗಿಸಿ ಬದುಕು; ಕ್ರೀ ನಿಃಕ್ರೀಯೆಂಬುಭಯವ ಘಟಿಸಿ ಬದುಕು, ಕಾಲಾಂತಕ ಬ್ಥೀಮೇಶ್ವರಲಿಂಗ
--------------
ಡಕ್ಕೆಯ ಬೊಮ್ಮಣ್ಣ
ಆತ್ಮವುಳ್ಳನ್ನಕ್ಕ ಘಟ ವೈಭವವಾಗಿದ್ದಿತ್ತು. ವಸ್ತು ಕಳೆ ಉಳ್ಳನ್ನಕ್ಕ ಶಿಲಾಮೂರ್ತಿ ಲಿಂಗ ಕಳೆಯಾಯಿತ್ತು. ಗಂಧವಿಲ್ಲದಿರೆ ಚಂದನವೆಂಬ ನಾಮವಡಗಿ ಸ್ಥಾವರವೆಲ್ಲವು ಸರಿಯಾಯಿತ್ತು. ಕಳೆಯಿಲ್ಲದಿರೆ ಮಾಡಿದ ಗೂಡು ಸರಿ, ನಿಂದ ಶಿಲೆಯೂ ಸರಿಯಾಯಿತ್ತು. ವಿಶ್ವಾಸದೆರಕ ಕಳಾಮೂರ್ತಿಯ ಬೆಳಗು ಒಡಗೂಡಲಾಗಿ ಕಾಲಾಂತಕ ಭೀಮೇಶ್ವರಲಿಂಗವಾಯಿತ್ತು.
--------------
ಡಕ್ಕೆಯ ಬೊಮ್ಮಣ್ಣ
ಆರು ದರುಶನ ಹದಿನೆಂಟು ಜಾತಿವೊಳಗಾದ ಜೀವನಂಗಳಿಗೆ, ಕುಡಿವ ನೀರು, ಬೇಯಿಸುವ ಬೆಂಕಿ, ಅಡಗುವ ಧರೆ ಒಂದೆನಬಹುದೆ? ಸುಕ್ಷೇತ್ರ ವಾಸಂಗಳಲ್ಲಿ ಮೌಕ್ತಿಕರತ್ನ ಮಲಯಜ ಹಿಮಜಲ ಮುಂತಾದ ಅಚೇತನ ಚೇತನ ವಸ್ತು ಕುಂಭಿನಿಯಲ್ಲಿ ವಿಶೇಷ ವಾಸಂಗಳಲ್ಲಿ ಹುಟ್ಟಿದುದ ಕಂಡುಕೊಂಡು, ಮತ್ತೆ ಮನೆಮಾರಿ ಒಡೆಯಂಗೆ ಸರಿಯಿಲ್ಲಾ ಎಂದು ಅಕ್ಕನ ಕೊಂಡುಬಂದು ಡಕ್ಕೆಯ ಬಾರಿಸುತ್ತಿದ್ದೇನೆ, ಕಾಲಾಂತಕ ಭೀಮೇಶ್ವರಲಿಂಗವಲ್ಲದೆ ಇಲ್ಲಾ ಇಲ್ಲಾಎಂದು.
--------------
ಡಕ್ಕೆಯ ಬೊಮ್ಮಣ್ಣ
ಆವ ಸ್ವಕಾಯದಿಂದಾದಡು ಆಗಲಿ ಭಾವಶುದ್ಧವಾಗಿ ಮಾಡುವ ಜಂಗಮ ಪೂಜೆ, ಸೂರ ಹುಲ್ಲು ಚುಳುಕೋದಕ ನೇಮ ಕ್ರೀ ತಪ್ಪದೆ ಮಾಡುವುದೆದೇವಪೂಜೆ. ಆವ ಪ್ರಸಂಗ ಬಂದಡೆ ಖಂಡಸಿ ನುಡಿವುದೆ ಪಂಡಿತನಿರವು. ತ್ರಿವಿಧ ಬಂದು ಮುಂದಿರಲಿಕ್ಕೆ ಅದರಂದವ ನೋಡದಿಪ್ಪುದೆ ನಿಸ್ಸಂಗ ಸುಸಂಗಿಯ ಇರವು. ಇಂತೀ ವಿಚಾರವನರಿದಲ್ಲಿ ಡಕ್ಕೆಯ ದನಿ ಹೊರಗಾಯಿತ್ತು. ಕಾಲಾಂತಕ ಭೀಮೇಶ್ವರಲಿಂಗವು ಒಳಗಾಯಿತ್ತು.
--------------
ಡಕ್ಕೆಯ ಬೊಮ್ಮಣ್ಣ
ಆತ್ಮನಂಗ ಪೃಥ್ವಿಯಂತಿರ್ಪುದೊ? ಆತ್ಮನಂಗ ಅಪ್ಪುವಿನಂತಿರ್ಪುದೊ? ಆತ್ಮನಂಗ ವಾಯುವಿನಂತಿರ್ಪುದೊ? ಆತ್ಮನಂಗ ಆಕಾಶದಂತಿರ್ಪುದೊ? ಪಂಚಭೂತಿಕಂಗಳ ಮೀರಿ ಬೇರೊಂದು ನೆಲೆಯಾಗಿರ್ಪುದೊ? ತತ್ವಮನಿಯೆಂಬಲ್ಲಿ ಪಶುಪತಿ ನೀನಾದೆಯಲ್ಲಾ, ಕಾಲಾಂತಕ ಭೀಮೇಶ್ವರಲಿಂಗವೆ.
--------------
ಡಕ್ಕೆಯ ಬೊಮ್ಮಣ್ಣ