ಅಥವಾ
(9) (5) (2) (1) (4) (0) (0) (0) (2) (0) (0) (0) (0) (0) ಅಂ (3) ಅಃ (3) (8) (0) (0) (0) (0) (0) (0) (3) (0) (0) (0) (0) (0) (0) (0) (9) (0) (2) (1) (2) (4) (0) (6) (5) (9) (0) (2) (0) (3) (1) (3) (1) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸತಿಯ ಗುಣವ ಪತಿ ನೋಡಬೇಕಲ್ಲದೆ ಪತಿಯ ಗುಣವ ಸತಿ ನೋಡಬಹುದೆ ಎಂಬರು. ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ? ಪತಿಯಿಂದ ಬಂದ ಸೋಂಕು ಸತಿಯ ಕೇಡಲ್ಲವೆ? ಒಂದಂಗದ ಕಣ್ಣು ಉಭಯದಲ್ಲಿ ಒಂದು ಹಿಂಗಲಿಕ್ಕೆ ಭಂಗವಾರಿಗೆಂಬುದ ತಿಳಿದಲ್ಲಿಯೆ ಕಾಲಾಂತಕ ಬ್ಥೀಮೇಶ್ವರಲಿಂಗಕ್ಕೆ ಸಲೆ ಸಂದಿತ್ತು.
--------------
ಡಕ್ಕೆಯ ಬೊಮ್ಮಣ್ಣ
ಸ್ಥೂಲ ಸೂಕ್ಷ ್ಮ ಕಾರಣಮಯಂಗಳಲ್ಲಿ, ಇಷ್ಟ ಪ್ರಾಣ ಭಾವಂಗಳಲ್ಲಿ, ಉಚಿತವನರಿದು ಕೂಡುವುದೆ ಯೋಗ. ಆ ಯೋಗವ ಪ್ರಯೋಗಿಸಿ ನಿಂದುದೆ ಕಾಲಾಂತಕ ಭೀಮೇಶ್ವರಲಿಂಗವು ಉಭಯವನಳಿದಭಾವ.
--------------
ಡಕ್ಕೆಯ ಬೊಮ್ಮಣ್ಣ
ಸಂಜೀವನದ ನೆಳಲಲ್ಲಿ ನಿಲಲಾಗಿ ಅಂಗದ ಆಪ್ಯಾಯನವರತಂತೆ ಸಿದ್ಧರಸದಲ್ಲಿ ಪ್ರಸಿದ್ಧರಸ ಕೂಡೆ ಅದ ಹೊದ್ದಿಹ ಗುಣವೆಲ್ಲವು ಹೇಮವಾದಂತೆ ಮಾಡುವ ಮಾಟ ನಿಜವಾಗಿ, ಪೂಜಿಸುವ ದೃಷ್ಟವಾಗಿ, ಸಂಗಂಧದ ಮಂದಿರದಲ್ಲಿ ಸಂಧಿಸಿದಂತೆ ಉಭಯ ಭಾವಕ್ಕೆ ಮಾಟಕೂಟಕ್ಕೆ ಚಿತ್ತಕ್ಕೆ ಭಿನ್ನವಿಲ್ಲದೆ ನಿಂದುದು ಕಾಲಾಂತಕ ಭೀಮೇಶ್ವರಲಿಂಗವ ಸಲೆ ಸಂದಿಲ್ಲದೆಅರಿದುದು.
--------------
ಡಕ್ಕೆಯ ಬೊಮ್ಮಣ್ಣ
ಸರವಿ ಮಚ್ಚಿದ ವಾಯಪೋಷನ ಇರವಿನಂತೆ, ಗುಮತಿಯಲ್ಲಿದ್ದ ಅಸಿಯ ಮರೆಯಂತೆ, ಬೇರಿನ ಮರೆಯಲ್ಲಿದ್ದ ವಿಷನಾಭಿಯಂತೆ, ನೋಡಿದಡೆ ಭಕ್ತನಾಗಿ, ಒಳಹೊಕ್ಕು ವಿಚಾರಿಸಿದಲ್ಲಿ ಭರಿಯಾಗಿ, ಸುಣ್ಣದ ಮಣ್ಣಿನಂತೆ, ಅಹಿ ಫಳದ ರೇಖೆಯಂತೆ, ಕಪಟಕ್ಕೊಳಗಾಗಿ ಇಪ್ಪುದು ಭಕ್ತಿಸ್ಥಲವೆ? ಮಧುರ ಚೂರ್ಣದಂತೆ ತನ್ಮಯವಾಗಿಪ್ಪುದೆ ಸದ್ಭಕ್ತನಿರವು, ಕಾಲಾಂತಕ ಭೀಮೇಶ್ವರಲಿಂಗದ ನಿಜ ತತ್ವವಾಸ.
--------------
ಡಕ್ಕೆಯ ಬೊಮ್ಮಣ್ಣ
ಸಕಲ ಸ್ಥಾವರ ಸಕಲ ಬುದ್ಬುದಂಗಳಲ್ಲಿ ಸಕಲ ಚರಾದಿಗಳಲ್ಲಿ, ಸಕಲ ಅಂಡಪಿಂಡಗಳಲ್ಲಿ ತೋರುವ ತೋರಿಕೆ, ಕಾಣದ ಅಚ್ಚರಿಯ ಕಂಡೆ ಕಾಣೆನೆಂಬುದ ಒಂದೆ ಭಾವ. ಆ ಭಾವದ ಭ್ರಮೆಯಡಗಿ ಇಷ್ಟಲಿಂಗದಲ್ಲಿ ಆರ್ಚನೆ ಪೂಜನೆ ಭಾವಲಿಂಗದಲ್ಲಿ ಭ್ರಮೆಯಡಗಿ ಉಭಯಕ್ಕೆ ಠಾವಿಲ್ಲದೆ ತಲೆದೋರದೆ ನಿಂದುದು ಕಾಲಾಂತಕ ಭೀಮೇಶ್ವರಲಿಂಗವೆಂಬುದಕ್ಕೆ ಪ್ರಮಾಣವಾಯಿತ್ತು.
--------------
ಡಕ್ಕೆಯ ಬೊಮ್ಮಣ್ಣ
ಸೌಭಾಗ್ಯದಿಂದ ಮಾಡುವರೆಲ್ಲರೂ ಸಂತೋಷಭಾವಿಗಳು. ಭಕ್ತಿಯಿಂದ ಮಾಡುವರೆಲ್ಲರೂ ತ್ರಿವಿಧಭಾವಿಗಳು. ಒಂದೆಂದು ಹಿಂಗಿ ಮಾಡುವನ್ನಬರ ರುದ್ರನ ಉರಿಗೊಡಲಾಯಿತ್ತು. ಬಂದುದ ನೇತಿಗಳೆಯದೆ ಬಾರದುದಕ್ಕೆ ದೋಟಿಯನಿಕ್ಕದೆ ಬಂದುದಕ್ಕೆ ಮನಮುಕ್ತನಾಗಿ ಸಂದುದು ಕಾಲಾಂತಕ ಭೀಮೇಶ್ವರಲಿಂಗಕ್ಕರ್ಪಿತವಾಯಿತ್ತು.
--------------
ಡಕ್ಕೆಯ ಬೊಮ್ಮಣ್ಣ